Monday, July 4, 2022

ಹೈಟಿಯನ್ ದೇಶದ ಅಧ್ಯಕ್ಷ ಜೊವೆನೆಲ್ ಮೋಯಿಸ್ ಕೊಲೆ

ಪೋರ್ಟ್ ಔ ಪ್ರಿನ್ಸ್(ಹೈಟಿ): ಹೈಟಿಯನ್ ಅಧ್ಯಕ್ಷ ಜೊವೆನೆಲ್ ಮೋಯಿಸ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ, ಕೊಲೆ ಮಾಡಿದ್ದು, ಈ ಕುರಿತು ಹಂಗಾಮಿ ಪ್ರಧಾನ ಮಂತ್ರಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಜೊವೆನೆಲ್ ಮೋಯಿಸ್ ಅವರ ಖಾಸಗಿ ನಿವಾಸದಲ್ಲಿ ಘಟನೆ ನಡೆಸಿದ್ದು, ಮೋಯಿಸ್ ಅವರ ಪತ್ನಿ ಮಾರ್ಟಿನ್ ಮೋಯಿಸ್ ಅವರಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಂಗಾಮಿ ಪ್ರಧಾನ ಮಂತ್ರಿ ಕ್ಲೌಡೆ ಜೋಸೆಫ್​ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ದ್ವೇಷಪೂರಿತ, ಅಮಾನವೀಯ ಮತ್ತು ಬರ್ಬರ ಕೃತ್ಯ ಎಂದಿದ್ದಾರೆ. ಹೈಟಿ ಪೊಲೀಸರು ರಾಷ್ಟ್ರಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದು, ದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲು-ಓರ್ವನ ರಕ್ಷಣೆ

ಬಂಟ್ವಾಳ: ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದರೆ, ಮತ್ತೋರ್ವ ಬಾಲಕ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಳ್ಳಾಲ ತಾಲೂಕಿನ ಸಜಿಪಪಡು...

ಮಂಗಳೂರು: ಹಾಲಿನ ಪುಡಿ ಪ್ಯಾಕೇಟ್‌ನಲ್ಲಿಟ್ಟು ಸಾಗಿಸುತ್ತಿದ್ದ ಅಕ್ರಮ ಚಿನ್ನ ವಶಕ್ಕೆ

ಮಂಗಳೂರು: ಹಾಲಿನ ಪುಡಿಯ ಪ್ಯಾಕೆಟ್ ನಲ್ಲಿಟ್ಟು ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜುಲೈ 1ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.ಕಾಸರಗೋಡಿನ ಪ್ರಯಾಣಿಕ ಪೇಸ್ಟ್ ರೂಪಕ್ಕೆ ಪರಿವರ್ತಿಸಿದ 31,31,440...

ಕಣಿವೆಗೆ ಉರುಳಿದ ಶಾಲಾ ಬಸ್‌: 16 ವಿದ್ಯಾರ್ಥಿಗಳು ಕೊನೆಯುಸಿರು

ಕುಲು: ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ ಕಣಿವೆಗೆ ಉರುಳಿ ಬಿದ್ದ ಪರಿಣಾಮ 16 ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.‘ಸಾಯಿಂಜ್‌ಗೆ ತೆರಳುತ್ತಿದ್ದ ಬಸ್ ಬೆಳಿಗ್ಗೆ 8.30ರ...