bangalore
ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೆ ಚೂರಿ ಇರಿದ ಪತಿ..!
ಬೆಂಗಳೂರು: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತಿಯು ತನ್ನ ಪತ್ನಿಗೆ ಚೂರಿ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತ್ನಿ ದಿವ್ಯಶ್ರೀ(26) ಚಾಕು ಇರಿತಕ್ಕೊಳಗಾದವಳು. ಪತಿ ಜಯಪ್ರಕಶ್ (32) ಚಾಕು ಇರಿದ ವ್ಯಕ್ತಿ. ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ಫೆ. 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಯಪ್ರಕಾಶ್ ಹಾಗೂ ದಿವ್ಯಶ್ರೀ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಇವರ ಮದುವೆಗೆ ಪೋಷಕರ ವಿರೋಧ ಇದ್ದ ಕಾರಣ ದಂಪತಿಗಳು ಬೆಂಗಳೂರಿನಲ್ಲಿ ನೆಲೆಯಾಗಿದ್ದರು. ಮನೆಯ ಖರ್ಚಿ ಎಲ್ಲಾ ಪತ್ನಿಯೇ ನೋಡಿಕೊಳ್ಳುತ್ತಿದ್ದದರು. ಇ ದಂಪತಿಗಳು ಮೊದಲು ಮೂಡಲಪಾಳ್ಯದಲ್ಲಿ ವಾಸವಿದ್ದರು. ಈ ಸಂದರ್ಭದಲ್ಲಿ ನಿನಗೆ ಅಕ್ರಮ ಸಂಬಂಧ ಇದೆ ಎಂದು ಪತ್ನಿಯ ಜೊತೆ ಪ್ರತಿದಿನ ಪತಿ ಗಲಾಟೆ ಮಾಡುತ್ತಿದ್ದನು. ಫೋನಿನಲ್ಲಿ ಯಾರದ್ದೊ ಜೊತೆಗೆ ಮಾತನಾಡುತ್ತೀಯಾ ಎಂದು ಹಲ್ಲೆ ಮಾಡುತ್ತಿದ್ದನು. ಈ ಗಲಾಟೆಯ ನಡುವೆಯೇ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇದೀಗ ತಂಗಿಯ ಎಂಗೆಜ್ಮೆಂಟ್‍ಗೆ ಬರ್ಲಿಲ್ಲ ಎಂದು ಜಯಪ್ರಕಾಶ್, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರೋಪಿ ಜಯಪ್ರಕಾಶ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
bangalore
ಏನಾಶ್ಚರ್ಯ! ನಿದ್ದೆ ಮಾಡಿ 9 ಲಕ್ಷ ಗೆದ್ದ ಬೆಂಗಳೂರಿನ ಯುವತಿ
ಮಂಗಳೂರು/ಬೆಂಗಳೂರು : ಬೆಂಗಳೂರು ಮೂಲದ ಇನ್ವೆಸ್ಟ್ಮೆಂಟ್ ಬ್ಯಾಂಕರ್ ಒಬ್ಬರು ಹೆಚ್ಚು ನಿದ್ದೆ ಮಾಡುವ ಕನಸನ್ನು ಲಾಭದಾಯಕವಾಗಿ ಪರಿವರ್ತಿಸಿಕೊಂಡು 9 ಲಕ್ಷ ರೂಪಾಯಿಗಳನ್ನು ಗೆದ್ದು, ಫುಲ್ ಫೇಮಸ್ ಆಗಿದ್ದಾರೆ. ‘ವೇಕ್ಫಿಟ್’ ಎಂಬ ಬೆಂಗಳೂರಿನ ಸ್ಮಾರ್ಟ್ಅಪ್ ಸಂಸ್ಥೆಯ ಸ್ಲೀಪ್ ಇಂಟರ್ನ್ಶಿಪ್ ಕಾರ್ಯಕ್ರಮದ ಮೂರನೇ ಸೀಸನಲ್ಲಿ ಸಾಯಿಶ್ವರಿ ಪಾಟೀಲ್ ‘ಸ್ಲೀಪ್ ಚಾಂಪಿಯನ್’ ಎಂಬ ಬಿರುದನ್ನು ಪಡೆದಿದ್ದಾರೆ.
ಏನಿದು ಸ್ಪರ್ಧೆ?
ಕಾರ್ಯಕ್ರಮದ ಇತರ 12 ಸ್ಲೀಪ್ ಇಂಟರ್ನ್ಗಳಲ್ಲಿ ಸಾಯಿಶ್ವರಿ ಪಾಟೀಲ್ ಕೂಡ ಒಬ್ಬರಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ರಾತ್ರಿ ಎಂಟರಿಂದ ಒಂಬತ್ತು ಗಂಟೆಗಳ ಕಾಲ ಸಂಪೂರ್ಣವಾಗಿ ನಿದ್ರೆ ಮಾಡಬೇಕಾಗಿತ್ತು.
ಪ್ರತಿಯೊಬ್ಬರಿಗೂ ತಮ್ಮ ನಿದ್ರೆಯ ಮಾದರಿಗಳನ್ನು ಮೇಲ್ವಿಚಾರಣೆ ಮಾಡಲು ಪ್ರೀಮಿಯಂ ಹಾಸಿಗೆ ಮತ್ತು ಕಾಂಟ್ಯಾಕ್ಟ್ಲೆಸ್ ಸ್ಲೀಪ್ ಟ್ರ್ಯಾಕರ್ಗಳನ್ನು ಒದಗಿಸಲಾಗಿತ್ತು. ಇಂಟರ್ನ್ಗಳು ತಮ್ಮ ನಿದ್ರೆಯ ಅಭ್ಯಾಸವನ್ನು ಹೆಚ್ಚಿಸಲು ಅನುಭವಿ ನಿದ್ರೆ ಮಾರ್ಗದರ್ಶಕರ ನೇತೃತ್ವದಲ್ಲಿ ಕಾರ್ಯಾಗಾರಗಳಿಗೆ ಹಾಜರಾಗಿದ್ದರು.
ಯಾಕೆ ಈ ಸ್ಪರ್ಧೆ?
ಜಡ ಜೀವನಶೈಲಿಯಿಂದಾಗಿ ಜನರು, ವಿಶೇಷವಾಗಿ ಯುವಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಿಗೆ ಒಡ್ಡಿಕೊಳ್ಳುವುದು, ಯಾವುದೇ ಪೌಷ್ಟಿಕ ಆಹಾರ ಮತ್ತು ನಿದ್ರೆಯ ತೀವ್ರ ಕೊರತೆಯು ಯುವ ವಯಸ್ಕರಲ್ಲಿ ಒಂದು ಪ್ರವೃತ್ತಿಯಾಗಿದ್ದು, ಇದು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇಂಟರ್ನ್ಗಳಿಗೆ ಸ್ಟೈಫಂಡ್ನೊಂದಿಗೆ ಪ್ರೋತ್ಸಾಹಿಸುವ ಮೂಲಕ ನಿದ್ರೆಯೊಂದಿಗೆ ಭಾರತದ ಸಂಬಂಧವನ್ನು ಪುನರುಜ್ಜೀವನಗೊಳಿಸಲು ವೇಕ್ಫಿಟ್ ಕಂಪನಿ ಸ್ಪರ್ಧೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
bangalore
ಹೆಸರು ಬದಲಿಸಿಕೊಂಡು ಬೆಂಗಳೂರಲ್ಲಿ ವಾಸವಿದ್ದ ಪಾಕಿಸ್ತಾನಿ ಕುಟುಂಬ ಅರೆಸ್ಟ್
ಮಂಗಳೂರು / ಬೆಂಗಳೂರು : ಪಾಕಿಸ್ತಾನದ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಆನೇಕಲ್ ಬಳಿಯ ಜಿಗಣಿಯಲ್ಲಿ ವಾಸವಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜಿಗಣಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇತ್ತೀಚೆಗಷ್ಟೇ ಎನ್ಐಎ ಅಧಿಕಾರಿಗಳು ಜಿಗಣಿಯಲ್ಲಿ ಒಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈಗ ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪಾಕಿಸ್ತಾನದ ವ್ಯಕ್ತಿ ವಾಸ್ತವ್ಯವಿದ್ದ ವಿಚಾರ ಗೊತ್ತಾಗಿದೆ. ಒಟ್ಟು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ರಷೀದ್ ಸಿದ್ದಿಕಿ ಅಲಿಯಾಸ್ ಶಂಕರ್ ಶರ್ಮಾ, ಆಯುಷಾ ಅನಿಫ್ ಅಲಿಯಾಸ್ ಆಶಾ ಶರ್ಮಾ, ಮೊಹಮ್ಮದ್ ಹನೀಫ್ ಅಲಿಯಾಸ್ ರಾಮ್ ಬಾಬಾ ಶರ್ಮಾ, ರುಬೀನಾ ಅಲಿಯಾಸ್ ರಾಣಿ ಶರ್ಮಾ ಬಂಧಿತರು. ಹೆಸರು ಬದಲಿಸಿಕೊಂಡು ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪಾಕ್ ನಿಂದ ಬಾಂಗ್ಲಾ, ಭಾರತದತ್ತ:
ಪಾಕಿಸ್ತಾನದಲ್ಲಿದ್ದಾಗ ಧರ್ಮದ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಈತ ಪಾಕಿಸ್ತಾನ ತೊರೆದಿದ್ದ. ಬಳಿಕ ಬಾಂಗ್ಲಾದೇಶದ ಢಾಕಾದಲ್ಲಿ ಕೆಲವು ಸಮಯದವರೆಗೆ ನೆಲೆಸಿದ್ದ. ಕೊನೆಗೆ ಅಲ್ಲಿಯೇ ಒಬ್ಬ ಮಹಿಳೆಯನ್ನು ಮದುವೆ ಮಾಡಿಕೊಂಡಿದ್ದ. ಇದಾದ ನಂತರ ಆತ ತನ್ನ ಹಾಗೂ ಮಕ್ಕಳೊಂದಿಗೆ ಮತ್ತೆ 2014ರಲ್ಲಿ ದೆಹಲಿಗೆ ಬಂದಿದ್ದ ಎನ್ನಲಾಗಿದೆ.
ಅಲ್ಲಿ ಕೆಲವರ ಸಹಾಯದಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮಾಡಿಸಿಕೊಂಡು, ಕುಟುಂಬದೊಂದಿಗೆ ಬೆಂಗಳೂರಿನ ಜಿಗಣಿಗೆ ಬಂದು ನೆಲೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಧರ್ಮದ ವಿಚಾರವಾಗಿಯೇ ರಷೀದ್‌ನನ್ನು ಪಾಕಿಸ್ತಾನದಿಂದ ಹೊರದಬ್ಬಲಾಗಿತ್ತು. ಬಳಿಕ ಬಾಂಗ್ಲಾದಿಂದ ನೇಪಾಳಕ್ಕೆ ಹೋಗಿದ್ದಾಗ ಅಲ್ಲಿನ ಧಾರ್ಮಿಕ ಸಂಸ್ಥೆಗೆ ಸೇರಿಕೊಂಡು, ಧರ್ಮ ಪ್ರಚಾರದಲ್ಲಿ ನಿರತನಾಗಿದ್ದ. ಅಲ್ಲಿನ ಧರ್ಮಗುರು ಸೂಚನೆ ಮೇರೆಗೆ ಧರ್ಮಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದ ಎನ್ನಲಾಗಿದೆ.
ಇದನ್ನೂ ಓದಿ : 500ರ ನೋಟಿನಲ್ಲಿ ಗಾಂಧಿ ಜಾಗದಲ್ಲಿ ನಟ ಅನುಪಮ್ ಖೇರ್..!?
ಬೆಂಗಳೂರಿಗೆ ಬಂದಿದ್ದ ರಷೀದ್ ಮೊದಲಿಗೆ ಇಬ್ಬರನ್ನು ಪರಿಚಯ ಮಾಡಿಕೊಂಡು ಅವರನ್ನೂ ಧರ್ಮ ಸಂಸ್ಥೆಗೆ ಸೇರ್ಪಡೆ ಮಾಡಿಕೊಂಡಿದ್ದ. ಅವರ ಸಹಕಾರದಿಂದಲೇ ಜಿಗಣಿಯಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಂಡಿದ್ದ. ಕೊನೆಗೆ ಜಿಗಣಿಯಲ್ಲಿ ಮನೆ ಮಾಡಿಕೊಂಡು ಡೆಲಿವರಿ ಬಾಯ್ ಕೆಲಸ ಕೂಡ ಮಾಡುತ್ತಿದ್ದ. ಬಿರಿಯಾನಿ ತಯಾರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಈತನ ಮೇಲೆ ಕಣ್ಣಿಟ್ಟು ಚಲನವಲನ ಗಮನಿಸುತ್ತಿತ್ತು. ಬಳಿಕ ಗುಪ್ತಚರ ಅಧಿಕಾರಿಗಳೇ ರಷೀದ್ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಜಿಗಣಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಕೊನೆಗೆ ಇಡೀ ಕುಟುಂಬವನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
bangalore
ಅಮಾನವೀಯ ಘಟನೆ : ಮಣ್ಣಿನಲ್ಲಿ ಜೀವಂತ ಹೂತಿದ್ದ ಗಂಡು ಮಗು ಪತ್ತೆ
ಮಂಗಳೂರು/ಬೆಂಗಳೂರು : ನಮ್ಮಲ್ಲಿ ಅದೆಷ್ಟೋ ಮಂದಿಗೆ ಮಕ್ಕಳಿಲ್ಲದ ಕೊರಗು ಇದೆ. ಮಗುವಿಗಾಗಿ ಅದೆಷ್ಟೋ ಹರಕೆ ಹೊರುತ್ತಾರೆ. ಆದರೆ, ಬೆಂಗಳೂರಿನಲ್ಲಿ ಅಮಾನವೀಯ ಕೃ*ತ್ಯ ನಡೆದಿದೆ. ಹುಟ್ಟಿದ ಒಂದೇ ದಿನಕ್ಕೆ ಹಸುಗೂಸನ್ನು ಜೀವಂ*ತವಾಗಿ ಮಣ್ಣಲ್ಲಿ ಹೂತಿಟ್ಟಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿನ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನೀಲಗಿರಿಯ ತೋಪಿನಲ್ಲಿ ನಿರ್ಜನ ಪ್ರದೇಶದಲ್ಲಿ ಮಗುವನ್ನು ಜೀವಂ*ತವಾಗಿ ಹೂತು ಹಾಕಲಾಗಿದೆ. ಇಂದು (ಸೆ. 30) ಆಟೋ ಚಾಲಕರು ಬಹಿರ್ದೆಸೆಗೆ ತೆರಳಿದ್ದ ವೇಳೆ ಮಗು ಅಳುವ ಶಬ್ದ ಕೇಳಿದ್ದರಿಂದ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಕೇಕ್ ನಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆ
ಕೂಡಲೇ ಮಗುವನ್ನು ರಕ್ಷಿಸಿದ ಸ್ಥಳೀಯರು, ಮಕ್ಕಳ ರಕ್ಷಣಾ ವೇದಿಕೆಗೆ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಗುವಿಗೆ ಸಣ್ಣ ಪುಟ್ಟ ಗಾ*ಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
- FILM5 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- LATEST NEWS5 days ago
ನ.8 ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ನಿವೃತ್ತಿ..! 15 ದಿನದಲ್ಲಿ 8 ಪ್ರಮುಖ ತೀರ್ಪು ಸಾಧ್ಯತೆ..!
- DAKSHINA KANNADA7 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು
- BIG BOSS7 days ago
ಇದೇ ಕಾರಣಕ್ಕೆ ಮೊದಲ ವಾರವೇ ಯಮುನಾ ಶ್ರೀ ನಿಧಿ ಬಿಗ್ಬಾಸ್ ಮನೆಯಿಂದ ಔಟ್ ಆದದ್ದು..!