Connect with us

  LATEST NEWS

  ಪ್ರೀತಿಯಿಂದ ಗಂಡ ಕೊಟ್ಟ ಮೊಬೈಲೇ ಮುಳುವಾಯಿತು: ಪರಪುರುಷನೊಂದಿಗೆ ಹೆಂಡ್ತಿ ಓಡಿಹೋದ್ಳು..!

  Published

  on

  ಬಳ್ಳಾರಿ: ಹೆಂಡ್ತಿ ಎಂದು ಪ್ರೀತಿಯಿಂದ ಕೊಡಿಸಿದ ಮೊಬೈಲ್‌ನಿಂದಲೇ ಪರಪುರುಷನೊಂದಿಗೆ ಸ್ನೇಹ ಬೆಳೆಸಿ, ಕೊನೆ ಅವನೊಂದಿಗೆ ಓಡಿಹೋದ ವಿಚಿತ್ರ ವಿದ್ಯಮಾನ ಬಳ್ಳಾರಿಯಲ್ಲಿ ನಡೆದಿದೆ.
  ಲಲಿತಾ ಅಲಿಯಾಸ್ ಅಜಿತ ಎಂಬ ಮಹಿಳೆ ಓಡಿ ಹೋದವಳು.

  7 ವರ್ಷದ ಹಿಂದೆ ಬಳ್ಳಾರಿ ಜಿಲ್ಲೆ ಸಂಡೂರಿನ ಬೊಮ್ಮಾಘಟ್ಟದ ಹುಲಗಪ್ಪ ಎಂಬುವವರನ್ನು ಲಲಿತಾಳನ್ನು ಮದುವೆಯಾಗಿದ್ದರು. ಇವರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳಿದ್ದರು. ಅತ್ತೆ ಮಾವ ಲಲಿತಾಳನ್ನ ಮಗಳಂತೆ ನೋಡ್ಕೊತ್ತಿದ್ದರು.

  ಮೈನಿಂಗ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಹುಲುಗಪ್ಪ ತಾನು ಕಷ್ಟಪಟ್ಟು ದುಡಿದ ಹಣದಿಂದ ಪತ್ನಿಗೆ ಹೊಸ ಮೊಬೈಲ್ ಕೊಡಿಸಿದ್ದರು. ಅದೇ ಮೊಬೈಲ್‌ ಮೂಲಕ ಅದೇ ಓಣಿಯಲ್ಲಿದ್ದ ಟ್ರ್ಯಾಕ್ಸಿ ಚಾಲಕ ಶಶಿಕುಮಾರ್ ಎಂಬಾತನ ಜೊತೆ ಲವ್ವಿಡವ್ವಿ ಶುರು ಮಾಡಿದ್ದಳು.

  ಇದೇ ಮುಂದುವರೆದು ಅಕ್ರಮ ಸಂಬಂಧಕ್ಕೂ ತಿರುಗಿತ್ತು.
  ಡಿ.29ರಂದು ಲಲಿತಾ ತನ್ನ ಮಗನನ್ನು ಕರೆದುಕೊಂಡು ಶಶಿಕುಮಾರ್ ಜೊತೆ ಎಸ್ಕೇಪ್ ಆಗಿದ್ದಾರೆ. ಸದ್ಯ, ಗಂಡ ಸಂಡೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನೇರವಾಗಿ ದೂರು ದಾಖಲಿಸಿದ್ದಾರೆ. ನನಗೆ ಪತ್ನಿ ಬೇಡ ಮಗ ಬೇಕು ಅಂತ ಕೇಳಿಕೊಳ್ಳುತ್ತಿದ್ದಾರೆ.

  DAKSHINA KANNADA

  ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಹೆಲ್ಪ್‌ ಲೈನ್

  Published

  on

  ಮಂಗಳೂರು: ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯ ಕರ್ನಾಟಕ ರಾಜ್ಯ ಘಟಕವು ಸಹಾಯವಾಣಿ ವ್ಯವಸ್ಥೆಯನ್ನು ಇಂದಿನಿಂದ ಕಾರ್ಯಾರಂಭಗೊಳಿಸಿದೆ.  ಮೇ.29ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್‌ ರವರು ಈ ಬಗ್ಗೆ ಮಾಹಿತಿ ನೀಡಿದರು.

  ಹಿಂದೂ ಯುವತಿಯರ ರಕ್ಷಣೆ ಈ ಸಹಾಯವಾಣಿ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕದ ಮಂಗಳೂರು, ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ- ಧಾರವಾಡ, ದಾವಣಗೆರೆ, ಬಾಗಲಕೋಟೆ ಎಂಬ 6 ಕಡೆ ಏಕಕಾಲದಲ್ಲಿ ಹೆಲ್ಪ್ ಲೈನ್‌ ಕಾರ್ಯಾರಂಭಗೊಂಡಿದೆ. ಹುಬ್ಬಳ್ಳಿಯಲ್ಲಿ ಈ ಸಹಾಯವಾಣಿಯ ಕೇದ್ರ ಇರುತ್ತದೆ ಎಂದು ತಿಳಿಸಿದರು.

  Read More..;ಕಾಂಗ್ರೆಸ್ ಅಭ್ಯರ್ಥಿಯ ಕರಪತ್ರದಲ್ಲಿ ಬಿಜೆಪಿ ನಾಯಕನ ಫೋಟೋ! ನಗೆಪಾಟಲಿಗೀಡಾದ ಕಾಂಗ್ರೆಸ್

  ಸಹಾಯವಾಣಿಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದಾಗಿದ್ದು, ಆಧಾರ ಸಹಿತವಾಗಿ ಕರೆ ಮಾಡಬೇಕು. ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುವುದು. ಲವ್‌ ಜಿಹಾದ್ ಕೆರಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಕರೆಗಳ ಸತ್ಯಾಸತ್ಯತೆ ತಿಳಿದು ಬಳಿಕ ಮುಂದಿನ ಹೆಜ್ಜೆ ಇರಿಸಲಾಗುವುದು. ಕಾನೂನು ಮೀರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿಯೇ ಹೆಲ್ಪ್ ಲೈನ್‌ ಕಾರ್ಯಾಚರಿಸಲಿದೆ. ಸಹಾಯವಾಣಿ ವ್ಯವಸ್ಥೆಯ ನಿರ್ವಹಣೆಯಲ್ಲಿ ವಕೀಲರ ತಂಡ, ಮಾಜಿ ಪೊಲೀಸ್ ಅಧಿಕಾರಿಗಳು, ಮಹಿಳೆಯರು ಇರುತ್ತಾರೆ. ಕಾನೂನು ಸಲಹೆಯನ್ನು ನೀಡಲಾಗುತ್ತದೆ ಎಂದರು. ಲವ್‌ ಜಿಹಾದ್ ಗೆ ಸಂಬಂಧಿಸಿ ಉತ್ತರ ಭಾರತದಲ್ಲಿ 2022- 23 ರಲ್ಲಿ 153 ಹಿಂದು ಯುವತಿಯರ ಕೊಲೆಯಾಗಿದೆ ಎಂದು ಮಾಹಿತಿ ನೀಡಿದರು.

  ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಮಂಗಳೂರು/ ಉಡುಪಿ ವಿಭಾಗದ ಅಧ್ಯಕ್ಷ ಮಧುಸೂದನ್‌ ಉರ್ವಸ್ಟೋರ್‌, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್‌ ಅಂಬೆಕಲ್ಲು, ಮಂಗಳೂರು ಕಾರ್ಯಾಧ್ಯಕ್ಷ ಅರುಣ್ ಕದ್ರಿ, ಸುದರ್ಶನ್‌ ಪೂಜಾರೆ, ಹೇಮಂತ ಜಾನಕೆರೆ ಅವರು ಉಪಸ್ಥಿತರಿದ್ದರು.

  ಈ ಸಹಾಯವಾಣಿಯ ನಂಬರ್‌ 9090443444 

   

  Continue Reading

  LATEST NEWS

  ಕಾಂಗ್ರೆಸ್ ಅಭ್ಯರ್ಥಿಯ ಕರಪತ್ರದಲ್ಲಿ ಬಿಜೆಪಿ ನಾಯಕನ ಫೋಟೋ! ನಗೆಪಾಟಲಿಗೀಡಾದ ಕಾಂಗ್ರೆಸ್

  Published

  on

  ಉಡುಪಿ : ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಕರಪತ್ರದಲ್ಲಿ ಬಿಜೆಪಿ ನಾಯಕನ ಫೋಟೋ ಅಳವಡಿಸುವ ಮೂಲಕ ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿದೆ. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಫೋಟೋ ಬಳಕೆ ಮಾಡಲಾಗಿದೆ.

  ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಡಾ. ಕೆ.ಕೆ ಮಂಜುನಾಥ ಕುಮಾರ್ ಅವರ ಪ್ರಚಾರದ ಕರಪತ್ರದಲ್ಲಿ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಫೋಟೋ ಮಿಸ್ ಆಗಿ ಬಂದಿದೆ.


  ಉಡುಪಿಯ ಎಲ್ಲಾ ಕಾಂಗ್ರೆಸ್ ನಾಯಕರಿರುವ ಪುಟದಲ್ಲಿ ಈ ಎಡವಟ್ಟು ಕಂಡು ಬಂದಿದೆ. ಬಿಜೆಪಿಯ ಉದಯ ಕುಮಾರ್ ಶೆಟ್ಟಿ ಫೋಟೋ ಬಳಕೆ ಮಾಡುವ ಮೂಲಕ ಕಾಂಗ್ರೆಸ್ ಪ್ರಚಾರ ಕರಪತ್ರ ರಚನಾ ಸಮಿತಿ ಎಡವಟ್ಟು ಮಾಡಿಕೊಂಡಿರುವುದು ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.

  ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ವೀಡಿಯೋ ಬಿಡುಗಡೆ ಮಾಡಿದ್ದು ಯಾವ ದೇಶದಿಂದ? ಎಸ್​ಐಟಿಗೆ ಸಿಕ್ತು ಸುಳಿವು

  Continue Reading

  LATEST NEWS

  ಟೀಂ ಇಂಡಿಯಾ ಕೋಚ್‌ ಹುದ್ದೆಗೆ ಮೋದಿ, ಶಾ, ಶಾರುಖ್, ಧೋನಿ, ಸಚಿನ್ ಅರ್ಜಿ..! ಅಸಲಿಯತ್ತೇನು?

  Published

  on

  ದೆಹಲಿ/ಮಂಗಳೂರು: ಟೀಂ ಇಂಡಿಯಾ ಮುಖ್ಯ ಕೋಚ್‌ ಹುದ್ದೆಯಲ್ಲಿರುವ ರಾಹುಲ್‌ ದ್ರಾವಿಡ್‌ ರವರ ಅಧಿಕಾರವಧಿ ಈ ಬಾರಿಯ ಟಿ20 ವಿಶ್ವಕಪ್‌ ಬಳಿಕ ಮುಕ್ತಾಯವಾಗಲಿದೆ.  ಹಾಗಾಗಿ ಕೋಚ್‌ ನೇಮಕಕ್ಕಾಗಿ ಬಿಸಿಸಿಐ ಮುಂದಾಗಿದ್ದು, ಹುದ್ದೆಗೆ ಅರ್ಜಿ ಆಹ್ವಾನ  ಮಾಡಿದೆ.

  ಮೇ.27ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಗಡುವು ಮುಗಿದ ಮೇಲೆ 3000 ಅಧಿಕ ಅರ್ಜಿಗಳು ಬಂದಿವೆ. ಇದರಲ್ಲಿ ಬಹತೇಕ ನಕಲಿ ಅರ್ಜಿಗಳು ಎಂದು ಬಿಸಿಸಿಐ ಹೇಳಿದೆ.

  ಐಪಿಎಲ್‌ಗೆ ಗುಡ್‌ ಬೈ ಹೇಳಿದ ದಿನೇಶ ಕಾರ್ತಿಕ್..! ಭಾವುಕರಾದ ಡಿ.ಕೆ ಗೆ ವಿರಾಟ್ ಕೊಹ್ಲಿ ಅಪ್ಪುಗೆಯ ಸಾಂತ್ವಾನ

  ಮೋದಿ, ಶಾ ಹೆಸರಲ್ಲಿ ಹುದ್ದೆಗೆ ಅರ್ಜಿ ಆಹ್ವಾನ..!

  ಇನ್ನು  ಕೋಚ್‌ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಅರ್ಜಿ ಬಂದಿದೆ. ಅಲ್ಲದೆ ಅವರ ಜೊತೆಯಲ್ಲಿ ಅಮಿತ್ ಶಾ, ಸಚಿನ್ ತೆಂಡುಲ್ಕರ್, ಎಂ.ಎಸ್ ಧೋನಿ, ನಟ ಶಾರುಖ್ ಖಾನ್‌ ಹೆಸರಲ್ಲೂ ಅರ್ಜಿಗಳು ಬಂದಿದೆ. ಅಸಲಿಗೆ ಇದು ಸತ್ಯ ವಲ್ಲ. ಇದು ನಕಲಿ ಅರ್ಜಿಗಳು. 2022ರಲ್ಲಿ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದ ವೇಳೆ 5000 ನಕಲಿ ಅರ್ಜಿಗಳೇ ಇದ್ದವು ಎಂದು ಹೇಲಾಗಿದೆ. ಈ ವೇಳೆ ನಕಲಿ ಅರ್ಜಿಗಳಲ್ಲಿ ಹರ್ಬಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಹೆಸರುಗಳು ಸೇರಿತ್ತು.

  ಗಂಭೀರ್ ಕೋಚ್ ಆಗಿ ಫೈನಲ್..!!

  ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಜಯಗಳಿಸಿದ್ದ ಕೊಲ್ಕತ್ತಾ ಟೀಮ್‌ ನ ಕೋಚ್‌ ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್‌ ಆಗಿ ಫೈನಲ್‌ ಆಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಐಪಿಎಲ್‌ ಪ್ರಾಂಚೈಸಿಯೊಂದರ ಪ್ರಭಾವಿ ಮಾಲಕರೊಬ್ಬರು ‘ಗಂಭೀರ್ ಈ ಬಾರಿಯ ಟೀಂ ಇಂಡಿಯಾ ಕೋಚ್‌ ಆಗಿ ಫೈನಲ್ ಆಗಿದ್ದಾರೆ. ಇನ್ನು ಅಧಿಕೃತವಾಗಿ ಘೋಷಣೆ ಮಾಡುವುದೊಂದು ಮಾತ್ರ ಉಳಿದಿದೆ’ ಎಂದಿದ್ದಾರೆ.

   

  Continue Reading

  LATEST NEWS

  Trending