LATEST NEWS
ಇವನೆಂಥಾ ಪಾಪಿ ಗಂಡ: ಡೈವೋರ್ಸ್ಗಾಗಿ ಪ್ರೆಗ್ನೆಂಟ್ ಪತ್ನಿಗೆ HIV ಸೋಂಕಿತ ಚುಚ್ಚುಮದ್ದು ನೀಡಿದ ಪತಿ..!
ಆಂಧ್ರಪ್ರದೇಶ: ವ್ಯಕ್ತಿಯೋರ್ವ ತನ್ನ ಗರ್ಭಿಣಿ ಪತ್ನಿಗೆ ವಿಚ್ಛೇದನ ನೀಡಲು ಎಚ್ಐವಿ ಸೋಂಕಿತ ರಕ್ತ ಇಂಜೆಕ್ಟ್ ಮಾಡಿದ ಅಮಾನವೀಯ ಘಟನೆ ಆಂಧ್ರಪ್ರದೇಶದ ತಾಡೆಪಲ್ಲಿಯಲ್ಲಿ ನಡೆದಿದೆ.
ಇತ್ತೀಚೆಗೆ ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮಹಿಳೆಗೆ ಎಚ್ಐವಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಪತಿ ಈ ಹಿಂದೆ ರಕ್ತ ಚುಚ್ಚುಮದ್ದು ನೀಡಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.
ತನಗೆ ಎಚ್ಐವಿ ಸೋಂಕು ತಗುಲಿದೆ ಎಂಬ ಕಾರಣಕ್ಕೆ ವಿಚ್ಛೇದನ ಪಡೆಯಲು ಪತಿ ಪಾರಂಪರಿಕ ನಾಟಿ ವೈದ್ಯರ ನೆರವಿನಿಂದ ರಕ್ತ ಚುಚ್ಚುಮದ್ದು ನೀಡಿದ್ದಾರೆ ಎಂದು ಗರ್ಭಿಣಿ ಮಹಿಳೆ ಆರೋಪಿಸಿದ್ದಾರೆ.
ಆಕೆ ಆರೋಗ್ಯ ತಪಾಸಣೆ ಮಾಡಿಸಿದಾಗ ಎಚ್ಐವಿ ಪಾಸಿಟಿವ್ ಎಂಬುದು ಗೊತ್ತಾಗಿದ್ದು, ಪೊಲೀಸರು ಚರಣ್ನ ಬಂಧಿಸಿದ್ದಾರೆ.
ಈಗಾಗಲೇ ಮಗಳು ಇದ್ದು, ಪತಿ ಗಂಡು ಮಗುವಿಗೆ ಪೀಡಿಸುತ್ತಿದ್ದ. ಜತೆಗೆ 21 ವರ್ಷದ ಯುವತಿಯೊಂದಿಗೆ ಅನೈತಿಕ ಸಂಬಂಧವಿದ್ದು, ಡೈವೋರ್ಸ್ಗೆ ಇಂಥಹ ಕೃತ್ಯ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ
LATEST NEWS
ರತನ್ ಟಾಟಾ ಆಸ್ಪತ್ರೆಗೆ ದಾಖಲು; ವದಂತಿಗಳ ಬಗ್ಗೆ ಉದ್ಯಮಿ ಕೊಟ್ರು ಉತ್ತರ.!
ಮುಂಬೈ: ಹಿರಿಯ ಕೈಗಾರಿಕೋದ್ಯಮಿ ಹಾಗೂ ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರಾಗಿದೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದು ಅವರ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಬಗ್ಗೆ ಸ್ವತಃ ರತನ್ ಟಾಟಾ ಪ್ರತಿಕ್ರಿಯೆ ನೀಡಿದ್ದಾರೆ.
ವಯೋ ಸಹಜ ಕಾರಣಗಳಿಂದಾಗಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದೆ, ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮುಂಬೈ ನ ಆಸ್ಪತ್ರೆಗೆ ರತನ್ ಟಾಟ ದಾಖಲಾಗಿದ್ದಾರೆ ಎಂಬ ವರದಿಗಳನ್ನು ಊಹಾಪೋಹ ಎಂದು ರತನ್ ಟಾಟಾ ತಮ್ಮ ಸಾಮಾಜಿಕ ಜಾಲತಾಣ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನನ್ನ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ನಾನು ಪ್ರಸ್ತುತ ತಪಾಸಣೆಗೆ ಒಳಗಾಗುತ್ತಿದ್ದೇನೆ ಎಂದಿದ್ದಾರೆ.
ಆತಂಕಕ್ಕೆ ಯಾವುದೇ ಕಾರಣವಿಲ್ಲ. ನಾನು ಉತ್ತಮ ಉತ್ಸಾಹದಲ್ಲಿ ಇರುತ್ತೇನೆ ಎಂದು ಅವರು ಹೇಳಿದ್ದು, ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ವಿನಂತಿಸಿ ಪೋಸ್ಟ್ ಮಾಡಿದ್ದಾರೆ.
FILM
ಶೀಘ್ರದಲ್ಲಿ ತೆರೆಗೆ ಬರಲಿದೆ ‘ದೃಶ್ಯಂ-3’..! ಕ್ಲೂ ಕೊಟ್ಟ ಚಿತ್ರ ತಂಡ..!
ಮಂಗಳೂರು : ಮುಂದೇನಾಗುತ್ತದೆ ಎಂದು ಚಿತ್ರ ಪ್ರೇಮಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸಿನೆಮಾ ತನ್ನ ಮೂರನೇ ಅಧ್ಯಾಯದಲ್ಲಿ ಉತ್ತರ ನೀಡಲು ಮುಂದಾಗಿದೆ. ಸಿನಿಮಾ ಇಂಡಸ್ಟ್ರೀಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ‘ದೃಶ್ಯಂ’ ಸಿನೆಮಾ ಈಗಾಗಲೇ ‘ದೃಶ್ಯಂ2’ ಮೂಲಕ ಕಥಾನಾಯಕನ ಕ್ರಿಮಿನಲ್ ಮೈಂಡ್ ಬಗ್ಗೆ ಚರ್ಚೆ ಹುಟ್ಟು ಹಾಕಿತ್ತು. ಇದೀಗ ‘ದೃಶ್ಯಂ3’ ಮೂಲಕ ಈ ಕಥೆಗೆ ಅಂತ್ಯ ಹಾಡಲು ಚಿತ್ರ ತಂಡ ಸಿದ್ಧವಾಗಿದೆ.
ಕೇವಲ ಮಲೆಯಾಳಂ ಮಾತ್ರವಲ್ಲದೆ ಇಡೀ ಸಿನೆಮಾ ಇಂಡಸ್ಟ್ರೀಯಲ್ಲೇ ಸಂಚಲನ ಮೂಡಿಸಿದ ಸಿನೆಮಾ ‘ದೃಶ್ಯಂ’. ಸಸ್ಪೆನ್ಸ್ ಥ್ರಿಲರ್ ಸಿನೆಮಾವಾಗಿ ಜನರಿಗೆ ಇಷ್ಟವಾಗಿದ್ದ ಈ ಸಿನೆಮಾ ‘ದೃಶ್ಯಂ2’ ಮೂಲಕ ಇಡೀ ಸಿನೆಮಾ ಇಂಡಸ್ಟ್ರೀಯನ್ನೇ ಅಲ್ಲಾಡಿಸಿತ್ತು. ಕಥೆಯನ್ನೂ ಹೀಗೂ ಬರೆಯಬಹುದು ಅನ್ನೋದನ್ನ ‘ದೃಶ್ಯಂ’ ಮತ್ತು ‘ದೃಶ್ಯಂ2’ ಮೂಲಕ ಜೀತು ಜೋಸೆಫ್ ತೋರಿಸಿಕೊಟ್ಟಿದ್ದರು.
ತನ್ನ ಕುಟುಂಬದ ರಕ್ಷಣೆಗಾಗಿ ಕಥಾನಾಯಕ ಯಾವ ರೀತಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯಶಸ್ವಿಯಾಗಿದ್ದ ಮತ್ತು ಮೃತ ದೇಹವನ್ನು ಹೇಗೆ ಅಡಗಿಸಿ ಇಟ್ಟಿದ್ದ ಅನ್ನೋದು ‘ದೃಶ್ಯಂ’ ಸಿನೆಮಾದ ಕಥಾವಸ್ತು. ಇನ್ನು ‘ದೃಶ್ಯಂ2’ ನಲ್ಲಿ ಕಥಾ ನಾಯಕನ ಪ್ಲ್ಯಾನ್ ಬಿ ಪ್ರಕಾರ ಮೆಡಿಕಲ್ ಕಾಲೇಜಿನಲ್ಲಿ ಮೃತದೇಹದ ಅಸ್ತಿಗಳನ್ನು ಬದಲಾಯಿಸಿ ತನ್ನ ಕುಟುಂಬವನ್ನು ಕಾಪಾಡುವುದು ಕಥಾವಸ್ತುವಾಗಿತ್ತು.
ಇದನ್ನೂ ಓದಿ : ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್ ಮಾಫಿಯಾ ಕಿಂಗ್ ಪಿನ್ ಅರೆಸ್ಟ್
ಕಥಾನಾಯಕನ ಈ ಕ್ರಿಮಿನಲ್ ಬುದ್ದಿಗೆ ಕೊನೆ ಇಲ್ಲವಾ ಎಂದು ‘ದೃಶ್ಯಂ2’ ನೋಡಿದ ಚಿತ್ರ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಇದೀಗ ‘ದೃಶ್ಯಂ3’ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸಸ್ಪೆನ್ಸ್ ಮೂಲಕ ಉತ್ತರ ನೀಡಲು ಮುಂದಾಗಿದೆ.
2025 ರ ಡಿಸೆಂಬರ್ನಲ್ಲಿ ಕ್ರಿಸ್ಮಸ್ ವೇಳೆ ಚಿತ್ರವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದೆ. ಸಿನೆಮಾದ ಚಿತ್ರೀಕರಣ ಆರಂಭವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಿದೆ. ಚಿತ್ರದ ಕಥೆ ಸಿದ್ದವಾಗಿದ್ದು, ‘ಕ್ಲಾಸಿಕ್ ಕ್ರಿಮಿನಲ್ ಈಸ್ ಬ್ಯಾಕ್’ ಎಂದು ಅಭಿಮಾನಿಗಳು ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ.
DAKSHINA KANNADA
ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್ ಮಾಫಿಯಾ ಕಿಂಗ್ ಪಿನ್ ಅರೆಸ್ಟ್
ಮಂಗಳೂರು : ಡ್ರ*ಗ್ಸ್ ಜಾಲದ ಬೆನ್ನು ಹತ್ತಿ ಬೇಟೆಯಾಡಿದ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆರು ಕೋಟಿ ರೂ. ಮೌಲ್ಯದ ಡ್ರ*ಗ್ಸ್ ವಶಪಡಿಸಿಕೊಂಡಿದ್ದಾರೆ. ಡ್ರ*ಗ್ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೈಗೊಂಡ ಕಟ್ಟು ನಿಟ್ಟಿನ ಕ್ರಮಕ್ಕೆ ಇದೊಂದು ದೊಡ್ಡ ಗೆಲುವಾಗಿದೆ. ಈ ಕಾರ್ಯಾಚರಣೆಯ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸೆಪ್ಟಂಬರ್ 29 ರಂದು ಪಂಪ್ವೆಲ್ ಬಳಿಯ ಲಾಡ್ಜ್ ಒಂದರಲ್ಲಿ ಹೈದರ್ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಡ್ರಗ್ ಸಮೇತ ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿಗೆ ಡ್ರ*ಗ್ ಪೂರೈಕೆ ಮಾಡುವ ಜಾಲದ ತನಿಖೆ ಆರಂಭಿಸಿದ್ದರು.
ಆರೋಪಿಯಿಂದ ಹಲವು ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿದ್ದ ನೈಜೇರಿಯಾ ಮೂಲದ ಪೀಟರ್ ಅಕೆಡಿ ಬೆಲನೋವು ಎಂಬಾತನ ಮನೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಒಟ್ಟು 6 ಕೋಟಿ ಮೌಲ್ಯದ 6 ಕೆಜಿ 310 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.
ಇದನ್ನೂ ಓದಿ : ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ; 5 ವರ್ಷದ ಮಗು ದಾರುಣ ಸಾ*ವು
ಈತ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಈ ಮಾ*ದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂಬ ವಿಚಾರ ಕೂಡ ತಿಳಿದು ಬಂದಿದೆ. ಈತನ ಮೇಲೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಾ*ದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಪ್ರಕರಣ ದಾಖಲಾಗಿದೆ.
- BIG BOSS4 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS7 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
- LATEST NEWS5 days ago
ಗರ್ಲ್ಫ್ರೆಂಡ್ ಜೊತೆ ಜಾಲಿ ರೈಡಿಂಗ್; ಹೆಂಡತಿ ಎದುರು ಬಂದ್ರೆ …!?
- LATEST NEWS6 days ago
ರಾಜ್ಯ ಹೆದ್ದಾರಿಯಲ್ಲೇ ಖ್ಯಾತ ಉದ್ಯಮಿ ಶ*ವ ಪತ್ತೆ