Monday, August 8, 2022

ಲಾಕ್ ಡೌನ್ ಸಂದರ್ಭದಲ್ಲಿ ಹಸಿವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ತಮ್ಮ ಊಟ ನೀಡಿ ಮಾನವೀಯತೆ ಮೆರೆದ ಪೊಲೀಸರು..!

ಮಂಗಳೂರು: ಲಾಕ್ಡೌನ್‍ನಿಂದ ಸಂಕಷ್ಟಕ್ಕೆ  ಒಳಗಾಗಿದ್ದ ವ್ಯಕ್ತಿಯೊಬ್ಬರಿಗೆ ಪೊಲೀಸರು ಸಹಾಯ ಹಸ್ತ ಚಾಚಿದ್ದು ಇದೀಗ ಪೊಲೀಸರ ಈ ಮಾನವೀಯ ಕಾರ್ಯ ಸಾರ್ವಜನಿಕ ವಲಯಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಮಡಿಕೇರಿಯ ರಾಣಿಪೇಟೆ ನಿವಾಸಿಯೊಬ್ಬರು ಕಳೆದ 5 ದಿನಗಳ ಹಿಂದೆ ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದರು.ಇದೇ ಸಂದರ್ಭದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಏಕಾ –ಏಕಿ ಲಾಕ್ ಡೌನ್ ಘೋಷಣೆ ಮಾಡಿತ್ತು.

ಇತ್ತ ಊರಿಗೆ ವಾಪಸ್ ಹೋಗುವುದಾಗಿ ಯೋಚನೆ ಮಾಡಿದ ವ್ಯಕ್ತಿಗೆ, ಬಸ್ಸಿನ ವ್ಯವಸ್ಥೆ ಕೂಡ ಇರಲಿಲ್ಲ. ಹೀಗಾಗಿ ಈ ವ್ಯಕ್ತಿ ಮಂಗಳೂರಿನಿಂದ ಮಡಿಕೇರಿಗೆ ನಡೆದುಕೊಂಡು ಹೋಗುತ್ತಿದ್ದರು.

ಹೊಟ್ಟೆ ಹಸಿವಿನಿಂದ ಬಳಲಿದ್ದ ವ್ಯಕ್ತಿ ಬಾವಲಿ, ಹಕ್ಕಿ, ಬಿದ್ದಂತಹ ಮಾವಿನ ಹಣ್ಣು ತಿನ್ನುತ್ತಿದ್ದರು.ಈ ವೇಳೆ ಪುತ್ತೂರು  ಗ್ರಾಮಾಂತರ ಠಾಣಾ ವ್ಯಾಪ್ತಿಯ ಪೊಲೀಸರು ವ್ಯಕ್ತಿಯ ಮಾಹಿತಿ ಪಡೆದುಕೊಂಡರು.

ಪೊಲೀಸ್ ಸಿಬ್ಬಂದಿಗಳಾದ  ದಯಾನಂದ ಹಾಗೂ ಕಿರಣ್ ರವರು ಕೂಡಲೇ ಸ್ಪಂದಿಸಿ, ತಮಗಾಗಿ ತಂದ ಊಟ ನೀಡಿ ಮಾನವೀಯತೆ ಮೆರೆದರು.

ನಂತರ ಒಂದು ವಾಹನದ ವ್ಯವಸ್ಥೆ ಮಾಡಿ ವ್ಯಕ್ತಿಯನ್ನು, ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ.ಲಾಕ್ ಡೌನ್‍ಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಪೊಲೀಸರ ಹೃದಯ ವೈಶ್ಯಾಲತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆ ಹರಿದು ಬರುತ್ತಿದೆ…

LEAVE A REPLY

Please enter your comment!
Please enter your name here

Hot Topics

ವಿಟ್ಲದಲ್ಲಿ ಸ್ಕೂಟಿ-ಜೀಪು ಢಿಕ್ಕಿ: ಸವಾರ ಗಂಭೀರ

ಬಂಟ್ವಾಳ: ಓವರ್‌ಟೇಕ್‌ ಮಾಡುವ ವೇಳೆ ಸ್ಕೂಟಿ ಎದುರಿನಿಂದ ಬಂದ ಜೀಪ್‌ಗೆ ಢಿಕ್ಕಿ ಹೊಡೆದು ಓರ್ವ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಉಕ್ಕುಡ ಬಳಿ ನಡೆದಿದೆ.ಗಾಯಗೊಂಡವನನ್ನು ದಿನೇಶ್‌ ಆಲಂಗಾರು ಎಂದು ಗುರುತಿಸಲಾಗಿದೆ.

ಉಡುಪಿ: ಮೇಯಲು ಹೋಗಿದ್ದ 4 ಜಾನುವಾರುಗಳಿಗೆ ವಿದ್ಯುತ್ ಶಾಕ್‌…

ಉಡುಪಿ: ಮೇಯಲು ಹೋದ ಜಾನುವಾರುಗಳಿಗೆ ವಿದ್ಯುತ್ ಶಾಕ್ ಆಗಿ ನಾಲ್ಕು ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯ ಬೈಂದೂರು ತಾಲೂಕು ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಕೂರು ಬಳಿ ನಡೆದಿದೆ.ಗಾಳಿ ಮಳೆ ಹಿನ್ನಲೆಯಲ್ಲಿ...

ದ.ಕ. ಜಿಲ್ಲಾ ಮಡಿವಾಳ ಸಂಘದಿಂದ ‘ಆಟಿದ ನೆಂಪು’ ಕಾರ್ಯಕ್ರಮ

ಮಂಗಳೂರು: ತುಳುನಾಡಿನಲ್ಲಿ ಇರುವಷ್ಟು ಆಚಾರ, ವಿಚಾರ, ಪರಂಪರೆ, ವೈಶಿಷ್ಟ್ಯತೆ ಇನ್ನೆಲ್ಲೂ ನಾವು ಕಾಣಲಾರೆವು. ಅತ್ಯುತ್ತಮ ಜೀವನ ಸಂದೇಶವನ್ನು ಹೊಂದಿರುವ ಇಲ್ಲಿನ ಆಚಾರ ವಿಚಾರಗಳನ್ನು ಕಾಪಾಡಿಕೊಂಡು ಬರುವುದಷ್ಟೇ ಅಲ್ಲದೇ, ಮುಂದಿನ ಜನಾಂಗಕ್ಕೂ ಅದನ್ನು ಪರಿಚಯಿಸುವ...