ಮೈಸೂರು ಜಿಲ್ಲೆಯಲ್ಲಿ 11 ವರ್ಷದ ಬಾಲಕನನ್ನು ಎಳೆದೊಯ್ದು ಬಲಿ ಪಡೆದ ನರ ಹಂತಕ ಚಿರತೆಯನ್ನು ಕೊನೆಗೂ ಇಂದು ಬೆಳಗ್ಗೆ ಯಶಸ್ವಿಯಾಗಿ ಸೆರೆ ಹಿಡಿದಿದ್ದು, ಕಳೆದ ಕೆಲ ಸಮಯದಿಂದ ಚಿರತೆ ದಾಳಿಯಿಂದ ಕಂಗಾಲಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಮೈಸೂರು : ಮೈಸೂರು ಜಿಲ್ಲೆಯಲ್ಲಿ 11 ವರ್ಷದ ಬಾಲಕನನ್ನು ಎಳೆದೊಯ್ದು ಬಲಿ ಪಡೆದ ನರ ಹಂತಕ ಚಿರತೆಯನ್ನು ಕೊನೆಗೂ ಇಂದು ಬೆಳಗ್ಗೆ ಯಶಸ್ವಿಯಾಗಿ ಸೆರೆ ಹಿಡಿದಿದ್ದು, ಕಳೆದ ಕೆಲ ಸಮಯದಿಂದ ಚಿರತೆ ದಾಳಿಯಿಂದ ಕಂಗಾಲಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇಂದು ಬೆಳಗ್ಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನ ಮೂಲಕ ಚಿರತೆ ಸೆರೆಯಾಗಿದೆ.
ಚಿರತೆ ಸೆರೆ ವಿಚಾರ ತಿಳಿದು, ತಂಡೋಪ ತಂಡವಾಗಿ ಬಂದ ಗ್ರಾಮಸ್ಥರು ಬಾಲಕನನ್ನು ಬಲಿ ಪಡೆದ ಚಿರತೆಯನ್ನು ಕೊಲ್ಲಬೇಕೆಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಸ್ಥರನ್ನು ಸಮಾಧಾನಪಡಿಸಿದರು.
ಚಿರತೆ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಧನ್ಯವಾದ ಹೇಳಿದ್ದಾರೆ.
ಮೈಸೂರು ಭಾಗದಲ್ಲಿ ಈ ವರ್ಷ 9 ಚಿರತೆಗಳನ್ನು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದ್ದು ಈ ಭಾಗದಲ್ಲಿ ಇನ್ನೂ ಅನೇಕ ಚಿರತೆಗಳಿದ್ದು ಅವುಗಳನ್ನು ಸೆರೆ ಹಿಡಿದು ದಟ್ಟ ಅರಣ್ಯಕ್ಕೆ ಬಿಡಬೇಕೆಂದು ಸ್ಥಳಿಯರು ಮನವಿ ಮಾಡಿದ್ದಾರೆ.