ಕಾಸರಗೋಡು: ಶಾಲೆಯೊಂದರಲ್ಲಿ ಏರ್ಪಡಿಸಿದ್ದ ‘ಶಾಲಾ ಕಲೋತ್ಸವ ‘ ಕಾರ್ಯಕ್ರಮದಲ್ಲಿ ಇದ್ದಕಿದ್ದಂತೆ ಚಪ್ಪರ ಕುಸಿದು ಹಲವಾರು ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಕೂಡಾ ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಳ ಸಮೀಪದ ಬೇಕೂರು ಶಾಲೆಯಲ್ಲಿ ನಡೆದಿದೆ.
ಮಂಜೇಶ್ವರ ಉಪ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಕಲೋತ್ಸವದಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ ಈ ದುರಂತ ನಡೆದಿದೆ.
ಈ ಸಂದರ್ಭ ಸುಮಾರು 200ಕ್ಕಿಂತಲೂ ಹೆಚ್ಚು ಶಾಲಾ ಮಕ್ಕಳು ಚಪ್ಪರದಡಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ. 40 ವಿದ್ಯಾರ್ಥಿಗಳಿಗೆ ಗಾಯವಾಗಿದೆ ಎಂಬ ಮಾಹಿತಿಯಿದೆ.
9ಶಾಲಾ ಮಕ್ಕಳು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹಾಗೂ ಉಳಿದ ಶಿಕ್ಷಕರನ್ನು ಮಂಗಳೂರಿನ ಉಳಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲೋತ್ಸವದಲ್ಲಿ ಏರ್ಪಡಿಸಿದ್ದ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಆಗಮಿಸಿದ್ದ ಶಿಕ್ಷಕರಿಗೂ ಕೂಡಾ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಕೇರಳ ಶಿಕ್ಷಣ ಸಚಿವರಾದ ವಿ. ಶಿವನ್‌ಕುಟ್ಟಿ ತನಿಖೆ ನಡೆಸಿ ವರದಿ ನೀಡಲು ಸ್ಥಳೀಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿದೆ ಆದೇಶ ನೀಡಿದ್ದಾರೆ.