ಕುವೈಟ್ :ಅನಿವಾಸಿ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಘಟಕದಿಂದ ಬೃಹತ್ ರಕ್ತದಾನ ಶಿಬಿರ !
ಕುವೈಟ್: ಹೊರದೇಶದಲ್ಲಿರುವ ಭಾರತೀಯರಿಗೆ ನೆರವಿನ ಹಸ್ತದ ಜೊತೆಗೆ ಸದಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನೆರವಾಗುವ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕ ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರ ಕುವೈಟ್ ನಲ್ಲಿ ನೆರವೇರಿತು.
ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಸಂದೇಶದೊಂದಿಗೆ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಹಾಗೂ ಬ್ಲಡ್ ಡೋನರ್ ಕೇರಳ ಕುವೈಟ್ ಅಧ್ಯಾಯ ಇವರ ಸಂಯೋಜನೆಯಲ್ಲಿ ನಡೆದ ಈ ರಕ್ತದಾನ ಶಿಬಿರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಿತು.
ಕೊರೋನ ಎಂಬ ಮಹಾಮಾರಿಯಿಂದ ತತ್ತರಿಸುತ್ತಿರುವ ಮಾನವ ಕುಲಕ್ಕೆ ಏನಾದರೂ ಒಳಿತು ಆಗಬೇಕೆಂಬ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಕುವೈಟ್ ನಲ್ಲಿ ನೆಲೆಸಿರುವ ಭಾರತದ ವಿವಿಧ ಭಾಗದ 120 ಕ್ಕೂ ಹೆಚ್ಚು ಜನರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು.