Connect with us

    DAKSHINA KANNADA

    ಹಾಲು ಉಕ್ಕಿ ಚೆಲ್ಲದಂತೆ ತಡೆಯುವುದೇಗೆ? ಈ ಟಿಪ್ಸ್ ಪಾಲಿಸಿ

    Published

    on

    ಮಂಗಳೂರು: ಹೆಚ್ಚಿನ ಮಹಿಳೆಯರು ಮನೆಯ ಅಡುಗೆ ಕೋಣೆಯಲ್ಲೇ ತಮ್ಮ ಸಮಯವನ್ನು ಕಳೆಯುತ್ತಾರೆ. ಆದ್ದರಿಂದ ಮಹಿಳೆಯರಿಗೆ ಅಡುಗೆ ಮನೆಯೇ ಪ್ರಪಂಚ. ಆದರೆ ಅಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳ ಕೆಲಸಗಳ ಮೇಲೆ ಇನ್ನೊಂದು ಕೆಲಸವನ್ನು ಕೊಡುತ್ತದೆ.

    ಕೆಲವೊಮ್ಮೆ ಗ್ಯಾಸ್ ಮೇಲೆ ಹಾಲು ಇಟ್ಟು ಇನ್ನೊಂದು ಕೆಲಸದಲ್ಲಿ ತೊಡಗಿರುತ್ತಾರೆ. ಹಾಲು ಉಕ್ಕಿ ಗ್ಯಾಸ್ ಸುತ್ತ ಬಿದ್ದರೂ ಅವರಿಗೆ ಅದರ ಜ್ಞಾನವೇ ಇರುವುದಿಲ್ಲ. ಕೆಲವೊಮ್ಮೆ ಹಾಲಿನ ಪಾತ್ರೆಯ ಮುಂದೆ ನಿಂತುಕೊಂಡಿದ್ದರೆ ಹಾಲು ಉಕ್ಕಿ ಮೇಲೆ ಬರುವುದೇ ಇಲ್ಲ. ಒಂದೆರಡು ನಿಮಿಷ ಗಮನವನ್ನು ಬೇರೆಡೆ ಹರಿಸಿಬಿಟ್ಟರೆ ಸ್ಟವ್ ಮೇಲೆಲ್ಲಾ ಹಾಲು ಚೆಲ್ಲಿರುತ್ತದೆ. ಈ ಗ್ಯಾಸ್‌ ಅನ್ನು ಶುಚಿ ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಹಾಲು ಕುದಿಸುವಾಗ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಉತ್ತಮ.

    •  ಹಾಲು ಕಾಯಿಸಲು ಬಳಸುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ, ಆ ಬಳಿಕ ಹಾಲನ್ನು ಹಾಕಿ ಬಿಸಿ ಮಾಡಿದರೆ ಹಾಲು ಉಕ್ಕಿ ಬರುವುದಿಲ್ಲ. ಅದಲ್ಲದೇ, ಹಾಲು ಕುದಿಸುವ ಪಾತ್ರೆಯು ಸ್ವಲ್ಪ ದೊಡ್ಡದಾಗಿರಲಿ.
    • ಹಾಲು ಕುದಿಸುವ ಪಾತ್ರೆಯ ಸುತ್ತಲೂ ಬೆಣ್ಣೆಯನ್ನು ಹಚ್ಚಿ, ಹಾಲು ಕುದಿಸಿದರೆ ಉಕ್ಕಿ ಹೊರಗೆ ಚೆಲ್ಲುವುದಿಲ್ಲ.
    • ಸಾಮಾನ್ಯವಾಗಿ ಹಾಲು ಉಕ್ಕಿ ಬರುವಾಗ ಹಾಲಿನ ಮೇಲೆ ನೊರೆ ಬರುತ್ತದೆ. ಈ ವೇಳೆಯಲ್ಲಿ ಸ್ವಲ್ಪ ನೀರನ್ನು ಚಿಮುಕಿಸಿದರೆ ಹಾಲು ಉಕ್ಕುವುದು ನಿಲ್ಲುತ್ತದೆ.
    • ಹಾಲು ಕುದಿಸುವಾಗ ಪಾತ್ರೆಯ ಮಧ್ಯದಲ್ಲಿ ಒಂದು ಮರದ ಚಮಚವನ್ನು ಇರಿಸಿದರೆ ಹಾಲು ಉಕ್ಕಿ ಬರುವುದಿಲ್ಲ.
    • ಹಾಲು ಉಕ್ಕುತ್ತಿದೆ ಎಂದ ತಕ್ಷಣವೇ ಪಾತ್ರೆಯನ್ನು ಮೇಲೆತ್ತಿ ಅಲುಗಾಡಿಸಿ ನಂತರ ಕುದಿಯಲು ಇಟ್ಟರೆ ಹಾಲು ಉಕ್ಕುವುದನ್ನು ತಕ್ಷಣವೇ ನಿಲ್ಲಿಸಬಹುದು.
    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಅತ್ತಾವರ: ಮಳೆಗೆ ಧರೆಗುರುಳಿದ ಬೃಹತ್ ಮರ

    Published

    on

    ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಅತ್ತಾವರ ಕಾಪ್ರಿಗುಡ್ಡದ ಬ್ರಿಟ್ಟೋಲೇನ್ ಬಳಿ ವಾಣಿಜ್ಯ ಸಂಕೀರ್ಣದ ತಳಪಾಯದ ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಮೇಲ್ಭಾಗದಲ್ಲಿದ್ದ ಬೃಹತ್ ಮರವೊಂದು ಬುಡ ಸಹಿತ ಉರುಳಿ ಬಿದ್ದಿದೆ.

    ಮಳೆಯ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕಾಮಗಾರಿ ನಿಲ್ಲಿಸಲಾಗಿದ್ದ ಕಾರಣ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    Continue Reading

    DAKSHINA KANNADA

    ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು?

    Published

    on

    ಮಂಗಳೂರು: ಪೋಷಕರು ಅಥವಾ ಮನೆಯವರು ಚಹಾ, ಕಾಫಿ ಕುಡಿಯುವುದು ನೋಡಿ ಮಕ್ಕಳು ತಮಗೂ ಕೊಡಿ ಎಂದು ಹಟ ಮಾಡುತ್ತಾರೆ. ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು ಎಂದು ಸಂದಿಗ್ಧತೆ ಪೋಷಕರಲ್ಲಿ ಇರುವುದು ಸಹಜ. ಮಕ್ಕಳಿಗೆ ಈ ಪಾನೀಯವನ್ನು ಕೊಡುವ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.

    ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ 12 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚಹಾ, ಕಾಫಿ ಕೊಡಬಾರದು ಹಾಗೂ ಎನರ್ಜಿ ಡ್ರಿಂಕ್ ಕೂಡ ನೀಡುವಂತಿಲ್ಲ. 12 ರಿಂದ 18 ವರ್ಷ ಮಕ್ಕಳು 100 ಮಿಲಿ ಗ್ರಾಂ ನಷ್ಟು ಕೆಫಿನ್ ಹೊಂದಬಹುದು.

    12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಅವರ ಹೃದಯ, ಮೆದುಳು, ಮೂತ್ರಪಿಂಡ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೆಫಿನ್ ಅಂಶ ಇರುವ ಚಹಾ ಮತ್ತು ಕಾಫಿ ಮಾತ್ರವಲ್ಲು ಚಾಕೊಲೇಟ್ ಪಾನೀಯಗಳು, ಬೇಕರಿ ಐಟಂಗಳು, ಕುಕ್ಕೀಸ್ ಇತ್ಯಾದಿಗಳು ಕೂಡ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊಡುವಂತಿಲ್ಲ.

    12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಇದು ಅವರ ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

    Continue Reading

    DAKSHINA KANNADA

    ಮುಳುಗಿದ ಪಡೀಲ್ ಅಂಡರ್ಪಾಸ್ – ಸಂಚಾರ ಸ್ಥಗಿತ

    Published

    on

    ಮಂಗಳೂರು: ಕರಾವಳಿಯಾದ್ಯಂತ ಸುರಿಯುತ್ತಿರುವ ಮಳೆ ಜನತೆಯನ್ನು ಚಂಡಿ ಹಿಡಿಸಿ ಬಿಟ್ಟಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಬಿರುಸು ಪಡೆದುಕೊಂಡಿದ್ದು ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

    ನಗರದ ಹಲವು ಕಡೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ಜನರು ಪರದಾಡುವಂತಾಗಿದೆ. ನಗರದ ಪಡೀಲ್ – ಬಜಾಲ್ ಸಂಪರ್ಕಿಸುವ ರಸ್ತೆಯ ಅಂಡರ್ಪಾಸ್‌ ನೀರಿನಿಂದ ತುಂಬಿ ಮುಳುಗಿ ಹೋಗಿದೆ. ಇಂದು ಬೆಳಿಗ್ಗೆ ಅಂಡರ್‌ಪಾಸ್‌ ಕೆಳಭಾಗದಲ್ಲಿ ನೀರು ತುಂಬಿಕೊಂಡಿದ್ದು ಜನ ಸಂಚರಿಸಲಾಗದೇ ತೊಂದರೆ ಅನುಭವಿಸಿದರು.

    ಕಾರೊಂದು ನೀರಿನಲ್ಲಿ ಬರಲಾಗದ ಸ್ಥಿತಿಯಲ್ಲಿದ್ದು ಬಳಿಕ ಸ್ಥಳೀಯರು ವಾಹನವನ್ನು ದೂಡಿಕೊಂಡು ಬಂದು ಮೇಲೆ ತಂದಿದ್ದಾರೆ. ಪಡೀಲ್‌ – ಬಜಾಲ್‌ ಸಂಪರ್ಕಿಸುವ ಈ ಅಂಡರ್ಪಾಸ್‌ ಪ್ರತೀ ಮಳೆಗಾಲದ ಸಂದರ್ಭದಲ್ಲೂ  ಜನ ಕಂಗೆಡುತ್ತಿದ್ದಾರೆ.

    Continue Reading

    LATEST NEWS

    Trending