Connect with us

  LATEST NEWS

  ಬೆತ್ತಲೆ ವಿಡಿಯೋ ಕಾಲ್‌ ಮಾಡಿ ಹನಿಟ್ರ್ಯಾಪ್ ಮಾಡುವ ಚೆಂದುಳ್ಳಿ ಚೆಲುವೆಯರು

  Published

  on

  ಬೆಳಗಾವಿ: ಗಣ್ಯ ವ್ಯಕ್ತಿಗಳು ಹಾಗೂ ಅಮಾಯಕ ಯುವಕರನ್ನೇ ಟಾರ್ಗೆಟ್ ಮಾಡಿ ಫೇಸ್​​​ಬುಕ್​ನಲ್ಲಿ ಬೆತ್ತಲಾಗುವ ಚೆಂದುಳ್ಳಿ ಚೆಲುವೆಯರು ಬಳಿಕ ಬ್ಲ್ಯಾಕ್‌ಮೇಲ್‌  ಮಾಡಿ ಹಣ ಕೀಳುತ್ತಿರುವ ಆನ್​ಲೈನ್​ ಹನಿಟ್ರ್ಯಾಪ್ ಗ್ಯಾಂಗ್ ಬೆಳಗಾವಿಯಲ್ಲಿ ಸಕ್ರಿಯವಾಗಿದೆ.


  ಈಗಾಗಲೇ ನಾಲ್ಕೈದು ಪ್ರಕರಣಗಳು ಬೆಳಗಾವಿಯಲ್ಲಿ ಬೆಳಕಿಗೆ ಬಂದಿವೆ. ಯಾಮಾರಿ ಸಾವಿರಾರು ರೂಪಾಯಿ ಕಳೆದುಕೊಂಡಿರುವವರ ಬಳಿ ಮತ್ತೆ ಹಣ ನೀಡುವಂತೆ ಈ ಗ್ಯಾಂಗ್​ ಸತಾಯಿಸುತ್ತಿದೆ. ಇದರಿಂದ ರೋಸಿ ಹೋಗಿರುವ ಸಂತ್ರಸ್ತರು ಬೆಳಗಾವಿಯ ಸಿಇಎನ್ ಠಾಣೆ ಮೆಟ್ಟಿಲೇರಿದ್ದಾರೆ. ಫೇಸ್ಬುಕ್​ನಲ್ಲಿ ಚೆಂದದ ಫೋಟೋಗಳನ್ನು ಹರಿಬಿಡುವ ಮೂಲಕ ಗಣ್ಯ ವ್ಯಕ್ತಿಗಳು ಹಾಗೂ ಯುವಕರನ್ನೇ ಈ ಚೆಲುವೆಯರ ಗ್ಯಾಂಗ್ ಟಾರ್ಗೆಟ್ ಮಾಡ್ತಿದೆ. ಫ್ರೆಂಡ್ ರಿಕ್ವೆಸ್ಟ್ ಕಳಿಸುವ ಚೆಂದುಳ್ಳಿಯರು ಅಕ್ಸೆಪ್ಟ್​ ಆಗ್ತಿದ್ದಂತೆ ಮೆಸೇಂಜರ್​ನಲ್ಲಿ ಚಾಟ್ ಶುರು ಹಚ್ಚಿಕೊಳ್ಳುತ್ತಾರೆ. ಕೆಲ ದಿನಗಳ ಕಾಲ ಚಾಟ್ ಮಾಡಿ ವಿಶ್ವಾಸಗಳಿಸುವ ಯುವತಿಯರು, ಬಳಿಕ ವಾಟ್ಸ್​​ಆ್ಯಪ್​ ನಂಬರ್ ಶೇರ್ ಆಗುವಂತೆ ನೋಡಿಕೊಳ್ಳುತ್ತಾರೆ.

  ಬಳಿಕ ವಿಡಿಯೋ ಕಾಲ್ ಮಾಡಿ ನಗ್ನವಾಗಿ ಕಾಣಿಸಿಕೊಳ್ಳುತ್ತಾರೆ. ಎದುರಿನವರನ್ನು ನಗ್ನವಾಗುವಂತೆ ಪ್ರಚೋದಿಸುತ್ತಾರೆ. ಆಗ ನಗ್ನವಾಗಿದ್ದುಕೊಂಡು ಸಂಭಾಷಣೆಯ ದೃಶ್ಯವನ್ನು ಸ್ಕ್ರೀನ್​ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾರೆ. ನಂತರ ತಮ್ಮ ಅಸಲಿ ಆಟ ಶುರು ಮಾಡುವ ಈ ನಾರಿಮಣಿಯರು ಮೊದಲು ಸಣ್ಣ ಪ್ರಮಾಣದ ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡಲು ನಿರಾಕರಿಸಿದರೆ ನಗ್ನ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಹಾಕುತ್ತಾರೆ. ಆಗ ಸಾಕಷ್ಟು ಜನರು ಮರ್ಯಾದೆಗೆ ಅಂಜಿ ಹಣ ನೀಡುತ್ತಾರೆ. ಇಷ್ಟಕ್ಕೆ ಸುಮ್ಮನಿರದ ಈ ಆನ್​​ಲೈನ್​ ಹನಿಟ್ರ್ಯಾಪ್ ಗ್ಯಾಂಗ್​ನವರು ಪದೇ ಪದೆ ಹಣ ನೀಡುವಂತೆ ಕಾಟ ನೀಡುತ್ತಾರೆ.

  ಫೇಸ್ಬುಕ್​ನಲ್ಲಿ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್​ ಮಾಡಿಕೊಳ್ಳದಂತೆ ಮಹಾನಗರ ಡಿಸಿಪಿ ಡಾ. ವಿಕ್ರಂ ಆಮಟೆ ಮನವಿ ಮಾಡಿದ್ದಾರೆ. ರಿಕ್ವೆಸ್ಟ್ ಸ್ವೀಕರಿಸಿದ್ರೂ ಮೆಸೇಂಜರ್​ನಲ್ಲಿ ಚಾಟ್ ಮಾಡಬಾರದು. ಆಗ ಮಾತ್ರ ಆನ್​ಲೈನ್​ ಹನಿಟ್ರ್ಯಾಪ್ ಗ್ಯಾಂಗ್​ನಿಂದ ಬಚಾವ್ ಆಗಲು ಸಾಧ್ಯ. ಇಲ್ಲವಾದರೆ ಹಣ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಯಾರಿಗಾದರೂ ಈ ರೀತಿಯ ವಂಚನೆ ಆಗ್ತಿದ್ದರೆ ದಯವಿಟ್ಟು ಪೊಲೀಸರಿಗೆ ದೂರು ನೀಡಬೇಕು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡುವುದಾಗಿ ತಿಳಿಸಿದ್ದಾರೆ.

  LATEST NEWS

  ಏರ್ ಪೋರ್ಟ್ ಗೆ ಪ್ರಿಯಕರ ಡ್ರಾಪ್ ಮಾಡಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿದ ಯುವತಿ!

  Published

  on

  ಮಂಗಳೂರು : ಇತ್ತೀಚೆಗಿನ ದಿನಗಳಲ್ಲಿ ಸಂಬಂಧಗಳು ಅರಳಲು ಹೆಚ್ಚು ಸಮಯ ಪಡೆಯುತ್ತಿಲ್ಲ. ಜೊತೆಗೆ ಮುರಿಯಲೂ ಕೂಡ. ಸಣ್ಣದೊಂದು ಮನಸ್ತಾಪ ಸಂಬಂಧವನ್ನು ದೂರ ಮಾಡುತ್ತದೆ. ಇತ್ತೀಚೆಗೆ ಇಂತಹುದೇ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ ಗೆಳತಿಯೊಬ್ಬಳು ತನ್ನ ಪ್ರಿಯಕರನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾಳೆ.


  ಫ್ಲೈಟ್ ಮಿಸ್​​ ಆಗಲು ಪ್ರಿಯಕರ ಕಾರಣ :

  ವರದಿಗಳ ಪ್ರಕಾರ, ಈ ಘಟನೆ ನಡೆದಿರುವುದು ನ್ಯೂಜಿಲೆಂಡ್ ನಲ್ಲಿ. ಪ್ರಿಯಕರ ತನ್ನನ್ನು ವಿಮಾನ ನಿಲ್ದಾಣಕ್ಕೆ ಬಿಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಯುವತಿಯೊಬ್ಬಳು ಪ್ರಕರಣ ದಾಖಲಿಸಿದ್ದಾಳೆ. ಆತನಿಂದಾಗಿ ತನ್ನ ಫ್ಲೈಟ್ ಮಿಸ್​​ ಆಯ್ತು, ಇದಲ್ಲದೇ ಮರುದಿನ ಬೇರೆ ಫ್ಲೈಟ್ ನಲ್ಲಿ ಹೋಗಲು ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗಿತ್ತು ಎಂಬುದು ಯುವತಿಯ ದೂರು.

  ಪ್ರಿಯಕರನ ಮೇಲೆ ತೀವ್ರ ಕೋಪಕೊಂಡಿದ್ದ ಯುವತಿ ಆರು ವರ್ಷಗಳ ತನ್ನ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಾಳೆ. ಅಲ್ಲದೆ, ವಿಮಾನಕ್ಕಾಗಿ ಪಾವತಿಸಿದ ಹಣವನ್ನು ಆತ ನೀಡುವಂತೆ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾಳೆ.

  ಇದನ್ನೂ ಓದಿ :  ನನ್ನದೂ ತಪ್ಪಿದೆ, ಯುವ ಹೇಳಿದ್ದಕ್ಕೆ ನಾನು ಮುಂದುವರೆದೆ…ಸಪ್ತಮಿ ಗೌಡ ಆಡಿಯೋ ವೈರಲ್!?

  ಕೋರ್ಟ್ ಸಲಹೆ ಏನು?

  ಯುವತಿಯ ವಾದವನ್ನು ಆಲಿಸಿದ ನ್ಯಾಯಾಧೀಶ ರೆಫ್ರಿ ಕ್ರಿಶ್ಯಾ ಕೌವಿ, ಯುವತಿ ಹೇಳಿದ ಅಪರಾಧಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಾಗ್ದಾನವನ್ನು ಉಲ್ಲಂಘಿಸಿದ್ದಕ್ಕಾಗಿ ಯಾರನ್ನೂ ಶಿಕ್ಷಿಸುವುದು ಅಸಾಧ್ಯ ಎಂದು ತೀರ್ಪು ನೀಡಿದ್ದಾರೆ.
  ಅಲ್ಲದೇ, ಇಂತಹ ಸಣ್ಣ ವಿಚಾರಗಳಿಗೆ ಸಂಬಂಧ ಕಡಿದುಕೊಳ್ಳುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.

  Continue Reading

  LATEST NEWS

  ಸೂರಜ್ ರೇವಣ್ಣ ಪರ ದೂರು ನೀಡಿದ್ದ ಶಿವಕುಮಾರ್ ನಾಪತ್ತೆ!

  Published

  on

  ಮಂಗಳೂರು/ಹಾಸನ : ಸೂರಜ್ ರೇವಣ್ಣ ಅವರನ್ನು ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜ*ನ್ಯ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಈ ಪ್ರಕರಣವನ್ನೂ ಸಿಐಡಿ ತನಿಖೆಗೂ ವಹಿಸಲಾಗಿದೆ.

  ಆದರೆ, ಇತ್ತ ಹೊಳೆನರಸೀಪುರದಲ್ಲಿ ಸಂತ್ರಸ್ತನ ವಿರುದ್ಧವೇ ದೂರು ದಾಖಲಾಗಿದ್ದು, ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎನ್ನುವಾತ ಸಂತ್ರಸ್ತನ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆದ್ರೆ, ಇದೀಗ ಸಂತ್ರಸ್ತನ ದೂರಿನ ಅನ್ವಯ ಸೂರಜ್​ನನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆಯೇ ಆಪ್ತ ಶಿವಕುಮಾರ್ ನಾಪತ್ತೆಯಾಗಿದ್ದಾನೆ.


  ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ ನಂತರ ಶಿವಕುಮಾರ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿವಕುಮಾರ್ ನಾಪತ್ತೆಯಾಗಿದ್ದಾನೆ.

  ಇದನ್ನೂ ಓದಿ : ನಾಳೆಯಿಂದ ಸಂಸತ್ ಅಧಿವೇಶನ..! ಎನ್‌ಡಿಎ ಮುಂದಿದೆ ಹಲವು ಸವಾಲು..!

  ಸಂತ್ರಸ್ತನ ವಿರುದ್ಧ ಶಿವಕುಮಾರ್​​ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಹೋಗಿಯೇ ಸೂರಜ್ ರೇವಣ್ಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ಈ ಪ್ರಕರಣ ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

  Continue Reading

  LATEST NEWS

  ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಿಬಿಐಗೆ ವಹಿಸಿದ ಕೇಂದ್ರ

  Published

  on

  ಮಂಗಳೂರು/ ನವದೆಹಲಿ : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ನಡೆದಿರುವ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ಒಪ್ಪಿಸಿದೆ.


  ಈ ಮಧ್ಯೆ ಭಾನುವಾರ ( ಜೂನ್ 23 ) ದಂದು ನೀಟ್ ಯುಜಿ ಪರೀಕ್ಷೆಯಲ್ಲಿ ಗ್ರೇಸ್ ಅಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ಆರಂಭವಾಗಬೇಕಾಗಿತ್ತಾದ್ರೂ ಇದೀಗ ಪರೀಕ್ಷೆಯನ್ನು ಮುಂದೂಡಿರುವುದಾಗಿ ತಿಳಿಸಿದೆ. ಇದರಿಂದ ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು(ಜೂ.23) ಪರೀಕ್ಷೆ ನಡೆಸಿ ಜೂನ್ 30 ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಲಾಗಿತ್ತಾದ್ರೂ, ಈಗ ಪರೀಕ್ಷೆಯನ್ನೇ ಏಕಾ ಏಕಿ ರದ್ದು ಮಾಡಿದ್ದು ಯಾಕೆ? ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.

  ಇದನ್ನೂ ಓದಿ : ಸಂಸದ ಹೆಚ್ ಡಿಕೆ ನಿರ್ಧಾರಕ್ಕೆ ಬ್ರೇಕ್; ದೇವದಾರಿ ಗಣಿಗಾರಿಕೆ ತಡೆಗೆ ರಾಜ್ಯ ಸರ್ಕಾರ ಸೂಚನೆ

  ಆದ್ರೆ ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

  Continue Reading

  LATEST NEWS

  Trending