Friday, July 1, 2022

ಹಿಂದೂ ಧರ್ಮೀಯರು ಹೆಚ್ಚು ಮಕ್ಕಳನ್ನು ಹೆರಬೇಕು: ಕಾಳಿಚರಣ್‌ ಸ್ವಾಮೀಜಿ

ಲಖನೌ: ಹಿಂದೂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕು. ಧರ್ಮದ ಆಧರಿತವಾಗಿಯೇ ಮತ ಚಲಾಯಿಸಬೇಕು. ನಾವೆಲ್ಲರೂ ಒಗ್ಗೂಡದಿದ್ದರೆ, ಹಿಂದೂ ಧರ್ಮ ಬೆಂಬಲಿಸದಿದ್ದರೆ ನಮ್ಮ ಮಹಿಳೆಯರಿಗೆ ಸುರಕ್ಷತೆ ಇರುವುದಿಲ್ಲ ಎಂದು ಕಾಳಿಚರಣ್‌ ಮಹಾರಾಜ್ ಸ್ವಾಮೀಜಿ ಹೇಳಿದ್ದಾರೆ.


ಉತ್ತರ ಪ್ರದೇಶದ ಅಲಿಗಡ ಪಟ್ಟಣದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇರುವುದು ಒಂದೇ ಧರ್ಮ, ಅದೂ ಸನಾತನ ಧರ್ಮ.

ಹಿಂದೂಗಳು ಧರ್ಮದ ಆಧಾರದ ಮೇಲೆ ಒಗ್ಗೂಡಿ ಮತ ಚಲಾಯಿಸಬೇಕು.

ಭಾರತವನ್ನು ಹಿಂದೂ ರಾಷ್ಟ್ರವಾಗಿಸಬೇಕು. ದೇಶವು ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಗಬಾರದು ಮತ್ತು ಮುಸ್ಲಿಮರು ಪ್ರಧಾನಿಯಾಗಬಾರದು. ಅದಕ್ಕಾಗಿ ಹಿಂದೂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕು. ಧರ್ಮದ ಆಧರಿತವಾಗಿಯೇ ಮತ ಚಲಾಯಿಸಬೇಕು’ ಎಂದರು.

ನಾವೆಲ್ಲರೂ ಒಗ್ಗೂಡದಿದ್ದರೆ, ಹಿಂದೂ ಧರ್ಮ ಬೆಂಬಲಿಸದಿದ್ದರೆ ನಮ್ಮ ಮಹಿಳೆಯರಿಗೆ ಸುರಕ್ಷತೆ ಇರುವುದಿಲ್ಲ. ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೇ ಇದೇ ಕಾಳಿಚರಣ್‌ ಸ್ವಾಮೀಜಿ ಗೋಡ್ಸೆ ಬಗ್ಗೆ ಹೇಳಿಕೆ ನೀಡಿ ಜೈಲು ಪಾಲಾಗಿದ್ದರು.

LEAVE A REPLY

Please enter your comment!
Please enter your name here

Hot Topics

ಮಂಗಳೂರಿನಲ್ಲಿ ಅಗ್ನಿವೀರ್ ಪ್ರವೇಶ ಪರೀಕ್ಷೆ: ಅವಿವಾಹಿತ ಪುರುಷರಿಂದ ಅರ್ಜಿ ಆಹ್ವಾನ

ಮಂಗಳೂರು: ಭಾರತೀಯ ವಾಯುಪಡೆಯಿಂದ ಅಗ್ನಿಪತ್ ಯೋಜನೆಯಡಿ ಅಗ್ನಿವೀರ್ ವಾಯು ಪ್ರವೇಶ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಶೇ.50ರಷ್ಟು ಅಂಕ ಮತ್ತು...

ಮಂಗಳೂರು: ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೊಗ್ಲಿಂಗ್ ಸ್ಮರಣೆ

ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮ ಇಂದು ಮಂಗಳೂರು ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಯಿತು.ಕನ್ನಡದ ಪ್ರಥಮ ಪತ್ರಿಕೆ...

ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ: ನಟಿ ಪವಿತ್ರ ಲೋಕೇಶ್‌

ಬೆಂಗಳೂರು: ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ. ಮದುವೆಯೇ ಆಗದಿದ್ದರೆ ನಾನು ಯಾಕೆ ಡಿವೋರ್ಸ್‌ ಕೊಡಬೇಕು ಎಂದು ಕನ್ನಡ ಚಿತ್ರನಟಿ ಪವಿತ್ರ ಲೋಕೇಶ್‌ ಹೇಳಿಕೆ ನೀಡಿದ್ದಾರೆ.ಕೆಲದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ...