Connect with us

    LATEST NEWS

    ಅನ್ಯ ಕೋಮಿನ ಜೋಡಿ ಪ್ರಯಾಣ ಶಂಕೆ: ಬಸ್‌ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆ

    Published

    on

    ಮಂಗಳೂರು: ಹಿಂದೂ ಮಹಿಳೆ ಜೊತೆ ಅನ್ಯ ಕೋಮಿನ ಯುವಕ ಪ್ರಯಾಣಿಸುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಮಂಗಳೂರು ಹೊರವಲಯದ ಗುರುಪುರ ಬಳಿ ಬಸ್ ತಡೆದು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ನಡೆದಿದೆ.


    ಖಾಸಗಿ ಬಸ್ಸಿನಲ್ಲಿ ಮೂಡುಬಿದರೆಯಿಂದ ಮಂಗಳೂರಿನತ್ತ ಯುವಕ ಮತ್ತು ವಿವಾಹಿತ ಮಹಿಳೆ ಜತೆಯಾಗಿ ಪ್ರಯಾಣ ಮಾಡುತ್ತಿದ್ದರು.

    ಬಸ್‌ನಲ್ಲಿ ಇವರ ಅನುಮಾನಾಸ್ಪದ ನಡವಳಿಕೆ ಹಿನ್ನೆಲೆಯಲ್ಲಿ ಗುರುಪುರದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಬಸ್‌ನ್ನು ತಡೆದಿದ್ದಾರೆ. ಬಳಿಕ ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಇವರಿಬ್ಬರೂ ಹಿಂದೂಗಳೇ ಎಂದು ಗೊತ್ತಾಗಿದೆ.

    ಯುವತಿ ಮಂಗಳೂರು ತಾಲೂಕಿನ ಮಿಜಾರು ಗ್ರಾಮದಳಾಗಿದ್ದು, ಮುಂಬೈನಲ್ಲಿದ್ದಾಗ ಬಿಹಾರದ ಯುವಕನೊಂದಿಗೆ ಪ್ರೇಮ ಉಂಟಾಗಿತ್ತು. ಸದ್ಯ ಈಕೆಗೆ ಬೆಂಗಳೂರು ಮೂಲದ ಯುವಕನ ಜತೆ ವಿವಾಹ ಆಗಿತ್ತು.

    ಆದರೂ ಬಿಹಾರ ಮೂಲದ ಯುವಕನ ಜತೆ ಪ್ರೇಮ ಸಂಬಂಧ ಮುಂದುವರಿದಿತ್ತು. ಹೀಗಾಗಿ ಬಿಹಾರದಿಂದ ಆಗಮಿಸಿದ ಯುವಕ ಯುವತಿ ಜೊತೆ ಬಸ್ಸಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದ. ಮೂಡುಬಿದಿರೆಯಿ೦ದ ಮ೦ಗಳೂರಿಗೆ ಸುತ್ತಾಡಲು ಈ ಜೋಡಿ ಬಸ್ಸಿನಲ್ಲಿ ಬರುತ್ತಿದ್ದರು. ಬಜಪೆ ಪೊಲೀಸರು ಮುಚ್ಚಳಿಕೆ ಬರೆಸಿ ಬುದ್ಧಿಹೇಳಿ ಕಳುಹಿಸಿದ್ದಾರೆ.

    LATEST NEWS

    ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್‌ ಉಚ್ಚಾಟನೆ..!

    Published

    on

    ಉಡುಪಿ: ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಪಾಟೀಲ್‌ ಆದೇಶಿಸಿದ್ದಾರೆ.


    ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು (6) ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನು ಓದಿ: ಹರೀಶ್ ಪೂಂಜಾ ಪ್ರಕರಣ : ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? : ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

    Continue Reading

    LATEST NEWS

    ಗೂಗಲ್ ಮ್ಯಾಪ್ ನಂಬಿ ಸಂಕಷ್ಟ; ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿದ ಕಾರು!

    Published

    on

    ಮಂಗಳೂರು/ ಕೊಟ್ಟಾಯಂ : ಗೂಗಲ್ ಮ್ಯಾಪ್ ನಿಂದ ಜನರಿಗೆ ಬಹಳಷ್ಟು ಉಪಯೋಗ ಆಗುತ್ತದೆ. ಜನರು ಗೂಗಲ್ ಆ್ಯಪ್ ನಂಬಿ ಪ್ರಯಾಣ ಬೆಳೆಸುವುದಿದೆ. ಆದರೆ, ಇದರಿಂದ ಎಡವಟ್ಟು ಕೂಡಾ ಆಗಿದ್ದಿದೆ. ಗೂಗಲ್ ಮ್ಯಾಪ್ ನಂಬಿ ಪ್ರಾ*ಣಕ್ಕೆ ಕು*ತ್ತು ಬಂದ ಘಟನೆ ಕೇರಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.


    ಹೈದರಾಬಾದ್‌ನ ಪ್ರವಾಸಿಗರ ತಂಡವೊಂದು ಕೇರಳಕ್ಕೆ ಪ್ರವಾಸಕ್ಕೆಂದು ಕಾರಿನಲ್ಲಿ ಹೊರಟಿತ್ತು. ಶುಕ್ರವಾರ ತಡರಾತ್ರಿ ಮಹಿಳೆ ಸೇರಿದಂತೆ ನಾಲ್ವರ ಗುಂಪು ಅಲಪ್ಪುಳ ಕಡೆಗೆ ಹೋಗುತ್ತಿದ್ದರು. ಇವರು ಗೂಗಲ್ ಮ್ಯಾಪ್ ನಂಬಿದ್ದರು. ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗಿ ಸೀದಾ ಕಾರನ್ನು ಹಳ್ಳದೊಳಗೆ ಇಳಿಸಿದ್ದಾರೆ. ಪರಿಣಾಮ ಕಾರು ಸಂಪೂರ್ಣವಾಗಿ ಮುಳುಗಿ ಹೋಗಿದೆ. ಅದೃಷ್ಟವಶಾತ್ ಸ್ಥಳೀಯ ನಿವಾಸಿಗಳು ಕಾರಿನಲ್ಲಿದ್ದ ನೆರವಿಗೆ ಧಾವಿಸಿದ್ದು, ನಾಲ್ವರು ಪ್ರಾಣಾ*ಪಾಯದಿಂದ ಪಾರಾಗಿದ್ದಾರೆ.

    ಇದನ್ನೂ ಓದಿ : ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಡೆ*ತ್ ನೋಟ್ ನಲ್ಲಿತ್ತು ಸ್ಫೋಟಕ ಮಾಹಿತಿ

    ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯು ಭಾರಿ ಮಳೆಯಿಂದಾಗಿ ಹೊಳೆಯಿಂದ ತುಂಬಿ ಹರಿದು ನೀರಿನಿಂದ ಆವೃತವಾಗಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿಲ್ಲದ ಕಾರಣ, ಅವರು ಗೂಗಲ್ ಮ್ಯಾಪ್ ನಂಬಿ ಡ್ರೈವಿಂಗ್ ಮಾಡಿದ್ದಾರೆ. ಪರಿಣಾಮ ಕಾರು ನೇರವಾಗಿ ತುಂಬಿ ಹರಿಯುತ್ತಿದ್ದ ಹಳ್ಳದೊಳಗೆ ಮುಳುಗಿದೆ.

    ಮುಳುಗುತ್ತಿದ್ದ ಪ್ರವಾಸಿಗರ ಕೂಗು ಕೇಳುತ್ತಿದ್ದಂತೆ ಸ್ಥಳೀಯರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಕೇರಳದಲ್ಲಿ ಇಂತಹ ಘಟನೆ ಈ ಹಿಂದೆಯೂ ನಡೆದಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಇಬ್ಬರು ವೈದ್ಯರು ಗೂಗಲ್ ಮ್ಯಾಪ್ ನಂಬಿ ಪ್ರಯಾಣ ಮಾಡಿದ ಪರಿಣಾಮ ಕಾರು ಸಮೇತ ನದಿಗೆ ಬಿದ್ದು ಪ್ರಾ*ಣ ಕಳೆದುಕೊಂಡಿದ್ದರು.

     

    ವಿಡಿಯೋ ನೋಡಿ:

    Continue Reading

    FILM

    ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಡೆ*ತ್ ನೋಟ್ ನಲ್ಲಿತ್ತು ಸ್ಫೋಟಕ ಮಾಹಿತಿ

    Published

    on

    ಬೆಂಗಳೂರು : ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣ ಇಡೀ ಸಿನಿಮಾರಂಗವನ್ನೇ ಬೆಚ್ಚಿ ಬೀಳಿಸಿತ್ತು. ನಿರ್ಮಾಪಕನಾಗಿ ಭಾರಿ ಯಶಸ್ಸನ್ನು ಬಾಚಿಕೊಂಡಿದ್ದ ಸೌಂದರ್ಯ ಜಗದೀಶ್ ಸಾವು ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ. ಯಾಕೆ ಸೌಂದರ್ಯ ಜಗದೀಶ್ ಇಂತಹ ನಿರ್ಧಾರ ಕೈಗೊಂಡ್ರು ಅನ್ನೋ ಪ್ರಶ್ನೆಯೊಂದು ಹುಟ್ಟುಕೊಂಡಿತ್ತು. ಇದೀಗ ಡೆ*ತ್ ನೋಟ್ ಸಿಕ್ಕಿರುವ ಬಗ್ಗೆ ಸೌಂದರ್ಯ ಜಗದೀಶ್ ಪತ್ನಿ ರೇಖಾ ತಿಳಿಸಿದ್ದಾರೆ. ಈ ಡೆ*ತ್ ನೋಟ್ ಮೂಲಕ ಕೆಲವೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ.


    ತಮ್ಮ ಪತಿಯ ನಿಧ*ನಕ್ಕೆ ಅವರ ಬಿಸ್ ನೆಸ್ ಪಾರ್ಟ್ನರ್ ಗಳಾಗಿದ್ದ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಅವರೇ ಕಾರಣ ಎಂದು ರೇಖಾ ಆರೋಪಿಸಿದ್ದಾರೆ.
    ಸೌಂದರ್ಯ ಜಗದೀಶ್ ಇಹಲೋಕ ತ್ಯಜಿಸಿದ ಕಾರಣ ಸೌಂದರ್ಯ ಜಗದೀಶ್ ಅವರಿಗೆ ಆದ ನಷ್ಟ ಹಾಗೂ ಮೋಸ ಎಂಬುದಾಗಿ ರೇಖಾ ಹೇಳಿದ್ದಾರೆ.

    ಡೆ*ತ್ ನೋಟ್ ನಲ್ಲಿ ಏನಿತ್ತು? ರೇಖಾ ಆಪಾದನೆ ಏನು?

    ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯಲು ವಾರ್ಡ್ ರೋಬ್ ತೆಗೆದಾಗ ಡೆ*ತ್ ನೋಟ್ ಸಿಕ್ಕಿದೆ ಎಂದಿದ್ದಾರೆ.

    ಸುರೇಶ್‌ ಹಾಗೂ ಹೊಂಬಣ್ಣ ಮತ್ತು ಸೌಂದರ್ಯ ಜಗದೀಶ್ ಸೇರಿಕೊಂಡು ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಈ ವೇಳೆ ಕಂಪನಿಯು ಲಾಭದಲ್ಲಿದ್ದರೂ ನಷ್ಟದಲ್ಲಿದೆ ಎಂದು ಸುಳ್ಳು ಹೇಳಿ ತಮ್ಮ ಪತಿ ಜಗದೀಶ್‌ ಅವರಿಂದ ಹಣವನ್ನು ಹೂಡಿಕೆ ಮಾಡಿಸಿದ್ದರು. ಇಷ್ಟೇ ಅಲ್ಲದೇ, ಸುಳ್ಳು ಹೇಳಿ ಕುಟುಂಬದ ಆಸ್ತಿಗಳನ್ನು ಬ್ಯಾಂಕ್‌ ನಲ್ಲಿ ಅಡಮಾನ ಇರಿಸಿದ್ದಾರೆ. ಅದರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
    ತಮಗೆ ತುಂಬ ಕಾಟ, ಕಿರುಕುಳ ಕೊಡುತ್ತಾರೆ ಅಂತ ಈ ಮೊದಲು ಒಮ್ಮೆ ನನ್ನ ಬಳಿ ಹೇಳಿದ್ದರು. ಆದರೆ ಈ ಮಟ್ಟಕ್ಕೆ ಆಗುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಏನೇ ಇದ್ದರೂ ನಮ್ಮ ಜೊತೆ ಹಂಚಿಕೊಳ್ಳಿ ಅಂತ ಧೈರ್ಯ ತುಂಬಿದ್ದೆವು ಎಂದಿದ್ದಾರೆ.

    ನಮಗೂ ಬೆದರಿಕೆ ಇದೆ ಎಂದ ರೇಖಾ

    ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ ಎಂದಿರುವ ಅವರು, ಹುಲಿ ರೀತಿ ಇದ್ದ ಅವರನ್ನೇ ಕೊನೆ ಕೊನೆಗೆ ಇಷ್ಟು ಸೈಲೆಂಟ್​ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವರು. ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾರೋ ಗೊತ್ತಿಲ್ಲ. ನನಗೆ ಆ ಭಯ ಇದೆ.
    ಪತಿ ಸೌಂದರ್ಯ ಜಗದೀಶ್‌ ಆತ್ಮಹ*ತ್ಯೆ ಮಾಡಿಕೊಳ್ಳುವ ಮುಂಚೆ ಒಂದು ವಾರದ ಹಿಂದೆ ಸುರೇಶ್‌ ಹಾಗೂ ಹೊಂಬಣ್ಣ ನಿರಂತರವಾಗಿ ಫೋನ್‌ ಮಾಡಿದ್ದರು. ಅವರ ಕರೆ ಬಂದಾಗ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಇದರಿಂದ ಮನನೊಂದು ಡೆ*ತ್‌ನೋಟ್‌ ಬರೆದಿಟ್ಟು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಜಗದೀಶ್‌ ಪತ್ನಿ ರೇಖಾ ಆರೋಪಿಸಿದ್ದಾರೆ.

    ಇದನ್ನೂ ಓದಿ : ತುಳುನಾಡನ್ನು ಹಾಡಿ ಹೊಗಳಿದ ಸುನಿಲ್ ಶೆಟ್ಟಿ.. ಮಾವನ ಪೋಸ್ಟನ್ನು ರಿ ಪೋಸ್ಟ್‌ ಮಾಡಿ ಗಮನ ಸೆಳೆದ ಕೆ.ಎಲ್ ರಾಹುಲ್

    ಸದ್ಯಕ್ಕೆ ರೇಖಾ ಜಗದೀಶ್ ಅವರು ನೀಡಿದ ಡೆ*ತ್ ನೋಟ್ ಆಧರಿಸಿ ಸೌಂದರ್ಯ ಜಗದೀಶ್ ಅವರ ಪಾರ್ಟ್ನರ್ಸ್ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಮೇಲೆ ಎಫ್ ಐ ಆರ್ ದಾಖಲಾಗಿದೆ.

    ಏ.14ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನಲ್ಲಿರುವ ನಿವಾಸದಲ್ಲಿ ಸೌಂದರ್ಯ ಜಗದೀಶ್ ಜೀವಾಂತ್ಯಗೊಳಿಸಿದ್ದರು. ಇದರಿಂದ ಇಡೀ ಚಿತ್ರರಂಗ ಶಾಕ್ ಗೆ ಒಳಗಾಗಿತ್ತು. ಇದಾದ ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ಅವರ ಇಚ್ಛೆಯಂತೆ ಚನ್ನರಾಯಪಟ್ಟಣದ ಹಿರಿಸಾವೆ ಗ್ರಾಮದಲ್ಲಿ ಅಂತ್ಯಕ್ರಿ*ಯೆ ನೆರವೇರಿಸಲಾಗಿತ್ತು.

    Continue Reading

    LATEST NEWS

    Trending