Connect with us

DAKSHINA KANNADA

‘ಹಿಂದೂಗಳಿಗೆ ಮಾತ್ರ ಪಾರ್ಕಿಂಗ್‌ ಅವಕಾಶ’ ವಿವಾದ ಸೃಷ್ಟಿಸಿದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಫ್ಲೆಕ್ಸ್‌

Published

on

ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಗದ್ದೆಯಲ್ಲಿ ಇನ್ನುಮುಂದೆ ಹಿಂದೂ ಭಕ್ತರಿಗೆ ಮಾತ್ರ ಪಾರ್ಕಿಂಗ್ ಮಾಡುವುದಕ್ಕೆ ಮಾತ್ರ ಅವಕಾಶ ಎಂದು ಆದೇಶದ ಫ್ಲೆಕ್ಸ್ ಹಾಕಲಾಗಿದೆ. ಸದ್ಯ ಈ ಆದೇಶ ವಿವಾದ ಸೃಷ್ಟಿ ಮಾಡಿದೆ.


ಈ ಕುರಿತಂತೆ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯು ಪ್ರಕಟಣೆ ಹೊರಡಿಸಿದೆ.

ದೇವಾಲಯ ಮುಂಭಾಗದ ವಿಶಾಲವಾದ ದೇವರಮಾರು ಗದ್ದೆಯಲ್ಲಿ ಮುಂದಿನ ದಿನಗಳಲ್ಲಿ ಹಿಂಧೂ ಭಕ್ತರಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಹಿಂದೂ ಭಕ್ತಾಧಿಗಳ ಹೊರತಾಗಿ ಇತರರು ವಾಹನ ಪಾರ್ಕಿಂಗ್ ಮಾಡಿ ಹೋಗುವಂತಿಲ್ಲ. ಇದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಪಾರ್ಕಿಂಗ್ ಮಾಡಿ ಹೋದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದೆ.

ಹಿಂದೂ ಧಾರ್ಮಿಕ ದತ್ತಿ ಕಾಯಿದೆಯಡಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಕಾರ್ಯನಿರ್ವಹಿಸುತ್ತಿದ್ದು, ಹಿಂದೂಗಳಿಗೆ ಮೊದಲ ಪ್ರಾಶಸ್ತ್ಯ ವನ್ನು ನೀಡಬೇಕು. ಮತ್ತು ಅನ್ಯಧರ್ಮದವರಿಗೆ ದೇವಳಕ್ಕೆ ಸೇರಿದ ಜಾಗದಲ್ಲಿ ಅವಕಾಶ ನೀಡಬಾರದಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿತ್ತು.

ಈ ಹಿಂದೆಯೂ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ದೇವಸ್ಥಾನದ ಜಾತ್ರೆಯ ಸಂಧರ್ಭದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿತ್ತು .ಹಿಂದೂ ಸಂಘಟನೆಗಳ ಮನವಿ ಯಂತೆ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಷೇಧ ಮಾಡಿತ್ತು. ಇದಾದ ಬಳಿಕ ಈಗ ಅನ್ಯಧರ್ಮದವರಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆ ಯನ್ನೂ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ನಿಷೇಧಿಸಿದೆ.

ಶಕುಂತಲಾ ಶೆಟ್ಟಿ ವಿರೋಧ

ಹಿರಿಯ ಕಾಂಗ್ರೆಸ್​ ನಾಯಕಿ ಮತ್ತು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ದೇವಾಲಯದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರ ತಪ್ಪು. ಜನರು ವಿವಿಧ ಕಡೆಗಳಿಂದ ಮಹಾಲಿಂಗೇಶ್ವರ ದೇವಾಲಯಕ್ಕೆ ಬರುತ್ತಾರೆ. ಈ ರೀತಿಯ ಕ್ರಮದ ಅಗತ್ಯವಿರಲಿಲ್ಲ. ನಗರದಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳವಿಲ್ಲ. ಹೀಗಾಗಿ ಬ್ಯಾಂಕ್, ಮಾರ್ಕೆಟ್ ಹಾಗೂ ಇನ್ನಿತರೆ ಸ್ಥಳಗಳಿಗೆ ಹೋಗುವ ಜನರು ಈ ಜಾಗದಲ್ಲೇ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಹೋಗುತ್ತಾರೆ ಎಂದರು.

ಈ ಆದೇಶ ಫಲಕ ಹಾಕುತ್ತಿದ್ದಂತೆ ಪರ ವಿರೋಧಗಳ ಚರ್ಚೆ ನಡೆಯುತ್ತಿದೆ.

DAKSHINA KANNADA

ಕಾಮಿಡಿ ಕಿಲಾಡಿಗಳು ಸೀಸಲ್-7ರಲ್ಲಿ ಮಿಂಚಲಿದ್ದಾರೆ ಪುತ್ತೂರಿನ ಪ್ರತಿಭೆಗಳು .!!

Published

on

ಮಂಗಳೂರು:  ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು  ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್‌ ಆರಂಭಗೊಂಡಿದ್ದು ಈ ಬಾರಿ ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿದೆ. ಈ ಶೋನಲ್ಲಿ ನಟ ಜಗ್ಗೇಶ್ ಮಹಾ ತೀರ್ಪುಗಾರರಾಗಿದ್ದರೆ, ಐದು ಸ್ಟಾರ್  ನಿರೂಪಕರುಗಳಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ರವರು ಜಡ್ಜಸ್‌ಗಳಾಗಿದ್ದಾರೆ. ರಾಜ್ಯದ 20 ಪ್ರತಿಭೆಗಳಿಂದ ಪ್ರೇಕ್ಷಕರಿಗೆ ಕಾಮಿಡಿಯ ರಸದೌಣ ನೀಡಲು ತಯಾರುಗುತ್ತಿದೆ.  ಇನ್ನು ಕಿಲಾಡಿ ಪ್ಲೇಯರ್‌ಗಳಲ್ಲಿ ಪುತ್ತೂರಿನ ಪ್ರತಿಭೆ ಪವಿತ್ರಾ ಹೆಗ್ಡೆ ಹಾಗೂ ಗಣರಾಜ್ ಭಂಡಾರಿ ಆಯ್ಕೆಯಾಗಿದ್ದಾರೆ.

comedy kiladi

ಮಂಗಳೂರಿನ 150 ಸ್ಪರ್ಧಿಗಳ ಪೈಕಿ ಪವಿತ್ರಾ ಹೆಗ್ಡೆ ಹಾಗೂ ಗಣರಾಜ್ ಭಂಡಾರಿಯವರು ಆಯ್ಕೆಯಾಗಿದ್ದಾರೆ. ಕರ್ನಾಟಕದ 2,500ಕ್ಕು ಮಿಕ್ಕಿ ಸ್ಪರ್ಧಿಗಳ ಮೂರು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ 10 ನಟರಲ್ಲಿ ಇವರಿಬ್ಬರು ಆಯ್ಕೆಯಾಗಿದ್ದಾರೆ.

ಮುಂದೆ ಓದಿ..; ಹೊಸ ಅವತಾರದಲ್ಲಿ ZEE ಕನ್ನಡ ‘ಕಾಮಿಡಿ ಕಿಲಾಡಿಗಳು’… ಸ್ಟಾರ್ ನಿರೂಪಕರು ಈಗ ಜಡ್ಜಸ್? ಏನಿದು ಟ್ವಿಸ್ಟ್?

ಪುತ್ತೂರಿನ ಪವಿತ್ರ ಹೆಗ್ಡೆ  ಆಯ್ಕೆ:

ಪವಿತ್ರ ಹೆಗ್ಡೆ ಕಳೆದ 10 ವರ್ಷಗಳಿಂದ ಮಂಗಳೂರಿನಲ್ಲಿ ಕಿಶೋರ್ ಡಿ ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ತಂಡದಲ್ಲಿ ಹಾಸ್ಯ ಕಲಾವಿದೆಯಾಗಿ ಅಭಿನಯಿಸುತ್ತಿದ್ದಾರೆ. ಹಲವಾರು ನಾಟಕ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲೇ ಕಲಾ ಕ್ಷೇತ್ರಕ್ಕೆ ಧುಮುಕಿದ ಇವರು 6ನೇ ತರಗತಿಯಿಂದ ನಾಟಕ ಅಭಿನಯ, 2012ರಿಂದ ಮಂಗಳೂರಿನ ತಂಡವಾದ ಮಾನಸ ಕಲಾವಿದರು ತಂಡದಲ್ಲಿ 3 ವರ್ಷ ಅಭಿನಯ, ಹೀಗೆ ಹಲವಾರು ತಂಡಳದಲ್ಲಿ ತಮ್ಮ ಅಭಿನಯ ಪಾತ್ರ ಮಾಡಿದ್ದಾರೆ. ತುಳು ಸಿನೆಮಾ ಮತ್ತು ತುಳು ಮತ್ತು ಕನ್ನಡ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ. ನಮ್ಮ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಬಲೆತಲಿಪಾಲೆ’ ಸೀಸನ್ 7ರಲ್ಲಿ ರನ್ನರ್ ಅಪ್ ಆಗಿದ್ದಾರೆ. ವಿ4 ನ್ಯೂಸ್‌ನಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2ನಲ್ಲಿ ಮತ್ತು ಸೀಸನ್ 3ಯಲ್ಲಿ ಅಭಿನಯಿಸಿ ಬೆಸ್ಟ್ ಫರ್ಫಾಮೆನ್ಸ್ ಅವಾರ್ಡ್ ಪಡೆದಿದ್ದಾರೆ. ವಿದೇಶದಲ್ಲೂ ನಾಟಕ ಪ್ರದರ್ಶನ ನೀಡಿದ್ದಾರೆ. ಕನ್ನಡ ಕಸ್ತೂರಿ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕಂಜೂಸ್ ಕಮಂಗಿರಾಯ, ಪುತ್ತೂರು ಚಾನೆಲ್ ದ ಚಾನಲ್ 9ನಲ್ಲಿ ಪುಸಾರವಾಗುತ್ತಿದ್ದ ಕುಡ ತೆಲಿಪುಗ, ಡಾಯಿಜಿ ವರ್ಲ್ಡ್‌ನಲ್ಲಿ ಪ್ರಸಾರವಾಗುತ್ತಿದ್ದ ಬಾಬಣ್ಣ ಬೂಬಣ್ಣ, ಕಿರುಚಿತ್ರವಾದ ಕಲ್ಕುಡ ಕಲ್ಲುರ್ಟಿ, ವಾತ್ಸಲ್ಯ, ನೋ ಬಾಲ್, ಕೊಕೊನಾಟ್ ಸಹಿತ ಹಲವು ಚಲನಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದರು. ಇವರಿಗೆ ಹಲವಾರು ಸನ್ಮಾನ ಪತ್ರಗಳು ಲಭಿಸಿದೆ. ಇವರು ಪುತ್ತೂರು ಚಂದ್ರಶೇಖ‌ರ್ ಹೆಗ್ಡೆ ಮತ್ತು ಮಯಾದೇವಿ ಅವರ ಪುತ್ರಿಯಾಗಿದ್ದು ಪುಜ್ವಲ್ ಹೆಗ್ಡೆಯವರ ಪತ್ನಿಯಾಗಿದ್ದಾರೆ.

ವೈರಲ್ ಸ್ಟಾರ್ ಗಣರಾಜ್ ಭಂಡಾರಿ:

ಪುತ್ತೂರಿನ ಸಂಸಾರ ಕಲಾವಿದೆರ್ ತಂಡದ ವೈರಲ್ ಸ್ಮಾರ್ ಖ್ಯಾತಿಯ ಗಣರಾಜ್ ಭಂಡಾರಿ ಕಾಮಿಡಿ ಕಿಲಾಡಿಗಳು ಶೋಗೆ ಆಯ್ಕೆಯಾಗಿದ್ದಾರೆ. ನಾಗೇಶ್ ಬಲ್ನಾಡು ನಿರ್ದೇಶನದ ಸೂಪರ್ ಹಿಟ್ ನಾಟಕ “ಮಲ್ಲಕ್ಕನ ಇಲ್ಲೊಕ್ಕೆಲ್” ಮೂಲಕ ರಂಗಪ್ರವೇಶ ಮಾಡಿದ ಇವರು ಬದ್‌ರೆ ಕಲ್ಪಿ, ಊರುಗೊರಿ ವಿಶ್ವನಾಥ, ಮಗೆ ಮಲ್ಲಯೆ, ಒವುಲಾ ಒರಿಯುಜಿ, ಸತ್ಯನಾ ಭಕ್ತಿ, ತಪ್ಪು ಎನ್ನೊಡ್ಡಿ, ಭಾಗ್ಯ ಬೋಡು ಅಲ್ಲದೆ ಈ ವರ್ಷದ ಸೂಪರ್ ಹಿಟ್ ಯಶಸ್ವಿ ನಾಟಕ ನಂಬಿಕೆದಾಯೆ ನಾಟಕಗಳಲ್ಲಿ ಪ್ರಮುಖ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.  ಪುತ್ತೂರಿನ ಕೋರ್ಟ್ ರಸ್ತೆಯ ಶ್ರೀನಿಧಿ ಸೆಲೂನ್’ನಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದಾರೆ. ಇವರು ತನ್ನ ಸ್ವಂತ ರೀಲ್ಸ್ ಪೇಜ್’ನಲ್ಲಿ 25 ಸಾವಿರ ಕ್ಕು ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

 

Continue Reading

DAKSHINA KANNADA

ದೇವರಿಗೆ ತುಪ್ಪದಲ್ಲಿ ದೀಪ ಹಚ್ಚುವುದು ಶುಭವೇ..?

Published

on

ಮಂಗಳೂರು: ಮನೆಯ ದೇವರ ಕೊಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪ, ಎಣ್ಣೆ, ಸಾಸಿವೆ, ಎಳ್ಳು ಅಥವಾ ಮಲ್ಲಿಗೆಯ ಎಣ್ಣೆಯ ದೀಪವನ್ನು ಹಚ್ಚುವ ಪದ್ಧತಿ ಇದೆ. ಈ ರೀತಿಯಾಗಿ ಪ್ರತಿಯೊಂದು ಎಣ್ಣೆಯ ದೀಪವನ್ನು ಸುಡುವುದು ವಿಭಿನ್ನ ಮಹತ್ವವನ್ನು ಹೊಂದಿದೆ. ತುಪ್ಪದ ದೀಪವನ್ನು ಹಚ್ಚುವುದು ದುಬಾರಿಯಾದ ಕಾರಣ ಜನರು ಎಣ್ಣೆಯ ದೀಪಗಳನ್ನು ಹೆಚ್ಚು ಹಚ್ಚುತ್ತಾರೆ. ಎಣ್ಣೆ ಅಥವಾ ತುಪ್ಪದ ದೀಪಕ್ಕಿಂತ ಯಾವುದರ ದೀಪ ಹಚ್ಚುವುದು ಹೆಚ್ಚು ಮಂಗಳಕರ ಎಂಬುದನ್ನು ತಿಳಿದುಕೊಳ್ಳೋಣ.

ಯಾವ ದೀಪವನ್ನು ಬೆಳಗಬೇಕು?

ತುಪ್ಪದ ದೀಪವನ್ನು ಯಾವಾಗಲೂ ಹೂವಿನಾಕಾರದ ದೀಪದಲ್ಲಿ ಬಿಳಿ ಎಂಬ ಬೆಳಕಿನಿಂದ ಬೆಳಗಿಸಲಾಗುತ್ತದೆ ಮತ್ತು ಎಣ್ಣೆ ದೀಪವನ್ನು ಉದ್ದವಾದ ದೀಪದಿಂದ ಬೆಳಗಿಸಲಾಗುತ್ತದೆ. ಆದರೆ, ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚಿದರೆ ಅದರಲ್ಲಿ ಕೆಂಪು ಅಥವಾ ಹಳದಿ ದೀಪವನ್ನು ಬಳಸಬೇಕು.

ಯಾವ ದೀಪ ಸೂಕ್ತ?

ತುಪ್ಪದ ದೀಪವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಆದರೆ ಇಷ್ಟಾರ್ಥಗಳ ಈಡೇರಿಕೆಗಾಗಿ ಎಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಹೊಂದಲು ತುಪ್ಪದ ದೀಪವನ್ನು ಹಚ್ಚುವುದು ಹೆಚ್ಚು ಪ್ರಯೋಜನಕಾರಿ. ಇದರಿಂದ ದೇವರುಗಳು ಮತ್ತು ದೇವತೆಗಳು ಸಂತೋಷಪಡುತ್ತಾರೆ.

ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಮಂಗಳಕರ

ಮನೆ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಎಲ್ಲಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಜೊತೆಗೆ ಮನೆಯ ವಾಸ್ತು ದೋಷಗಳು ಸಹ ನಿವಾರಣೆಯಾಗುತ್ತದೆ. ಇದು ಎಲ್ಲಾ ರೀತಿಯ ನೋವನ್ನು ನಾಶಪಡಿಸುತ್ತದೆ. ಶಿವ ಪುರಾಣದ ಪ್ರಕಾರ ಪ್ರತಿದಿನ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ಹೇಳಲಾಗಿದೆ.

ತುಪ್ಪದ ದೀಪವನ್ನು ಹಚ್ಚಿದರೆ ಗಾಳಿಯು ಶುದ್ಧವಾಗುತ್ತದೆ ಮತ್ತು ಗಾಳಿಯಲ್ಲಿರುವ ರೋಗಾಣುಗಳು ನಾಶವಾಗುತ್ತದೆ. ಇದರ ಸುವಾಸನೆಯು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ. ತುಪ್ಪವು ಚರ್ಮದ ರಕ್ತ ಕಣಗಳನ್ನು ಸಕ್ರಿಯಗೊಳಿಸುವ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ಇದರಿಂದಾಗಿ ಯಾವುದೇ ಚರ್ಮ ರೋಗಗಳು ಬರುವುದಿಲ್ಲ.

Continue Reading

DAKSHINA KANNADA

ಆಂಬುಲೆನ್ಸ್ – ಕಾರು ನಡುವೆ ಭೀಕರ ಅ*ಪಘಾತ..! ಮೂವರ ದುರ್ಮ*ರಣ.!

Published

on

ಕಾಸರಗೋಡು: ಆ್ಯಂಬುಲೆನ್ಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಇಂದು ನಡೆದಿದೆ.

accident

ಕಾರಿನಲ್ಲಿದ್ದ ತ್ರಿಶೂರು ಗುರುವಾಯೂರು ನಿವಾಸಿಗಳಾದ ಶ್ರೀನಾಥ್, ಶರತ್ ಮೆನೋನ್ ಎಂಬವರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ನಲ್ಲಿದ್ದ ರೋಗಿಯೂ ಗಾಯಗೊಂಡಿದ್ದಾರೆ. ಕಾಸರಗೋಡಿನಿಂದ ಮಂಗಳೂರು ಕಡೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಮತ್ತು ಮಂಗಳೂರು ಕಡೆಯಿಂದ ಮಂಜೇಶ್ವರದತ್ತ ಬರುತ್ತಿದ್ದ ಕಾರು ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆ್ಯಂಬುಲೆನ್ಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ.

 ಮುಂದೆ ಓದಿ..; ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

accident

 

Continue Reading

LATEST NEWS

Trending