ಹಿಂದೂ ಕಾರ್ಯಕರ್ತ ದೀಪಕ್ ಚೂರಿ ಇರಿತ ಪ್ರಕರಣ : ಇನ್ನೂ ಪತ್ತೆಯಾಗಿಲ್ಲ ಆರೋಪಿಗಳು ಯಾಕೆ ಗೊತ್ತಾ..!!?
ಮಂಗಳೂರು : ನಗರದ ಲಾಲ್ ಬಾಗ್ ಸಮೀಪ ಹಿಂದೂ ಪರ ಸಂಘಟನೆಯ ಯುವಕ ದೀಪಕ್ ಮೇಲೆ ನಡೆದ ಆರೋಪಿಗಳ ಇನ್ನು ಕೂಡ ಪತ್ತೆಯಾಗಿಲ್ಲ.
ಆರು ಮಂದಿ ದುಷ್ಕರ್ಮಿಗಳಿಂದ ಈ ಕೃತ್ಯ ನಿನ್ನೆ ರಾತ್ರಿ ನಡೆದಿದ್ದು ಶಿವಾಜಿ ಸ್ಟಿಕರ್ ಹಾಕಿದ್ದ ದೀಪಕ್ ನನ್ನು ಅಡ್ಡಗಟ್ಟಿ ಚೂರಿಯಿಂದ ಇರಿದು ಅರೋಪಿಗಳು ಪರಾರಿಯಾಗಿದ್ದರು.
ಘಟನೆಯ ನಂತರ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಆದರೆ ಘಟನೆ ನಡೆದ ಆಸುಪಾಸಿನ ಪ್ರಮುಖ ಸಿಸಿ ಕೆಮರಾಗಳು ಕೆಟ್ಟು ಹೋದ ಕಾರಣ ದುಷ್ಕರ್ಮಿಗಳ ಗುರುತು ಪತ್ತೆ ಹಚ್ಚಲು ಇನ್ನೂ ಸಾದ್ಯವಾಗಿಲ್ಲ ಎನ್ನಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ನಿನ್ನೆ ರಾತ್ರಿ ಸ್ವತಃ ಫೀಳ್ಡಿಗೆ ಇಳಿದಿದ್ದಾರೆ.
ಘಟನೆ ನಡೆದ ಪಬ್ಬಸ್ ಸಮೀಪ, ಲೇಡಿ ಹಿಲ್, ಲಾಲ್ ಭಾಗ್ ನಲ್ಲಿನ ಪೊಲೀಸ್ ಇಲಾಖೆ ಸುರಕ್ಷತೆಗಾಗಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳು ಕಾರ್ಯಾ ನಿರ್ವಹಿಸದೇ ಕೆಟ್ಟು ಹೋಗಿರುವುದು ಕಂಡು ಬಂದಿದೆ.
ಇದರಿಂದ ಆರೋಪಿಗಳ ತುರ್ತು ಪತ್ತೆಗೆ ಹಿನ್ನಡೆಯಾಗಿದ್ದು ಅಧಿಕಾರಿಗಳನ್ನು ತರಾಟೆಗೆ ತಗೊಂಡಿದ್ದಾರೆ.
ಸಾಮಾನ್ಯವಾಗಿ ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದರೆ ಫೊಟೊ ತೆಗೆದು ಕಳಿಸುವ ಪೊಲೀಸರಿಗೆ ಅಪರಾಧ ತಡೆಗಟ್ಟಲು ಅಗತ್ಯವಿರುವ ಸಿಸಿಟಿವಿಗಳನ್ನು ದುರಸ್ಥಿ ಸನ್ನದ್ದ ಸ್ಥಿತಿಯಲ್ಲಿಡಲು ವಿಫಲರಾಗಿದ್ದು ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.