Connect with us

    LATEST NEWS

    ಸ್ಕಾರ್ಫ್-ಕೇಸರಿ ವಿವಾದ: ಡ್ರೆಸ್‌ಕೋಡ್‌ ಪಾಲಿಸಲು ಸೂಚನೆ, ಪ್ರಕರಣ ಸುಖಾಂತ್ಯ

    Published

    on

    ಮೂಲ್ಕಿ: ಕಿನ್ನಿಗೋಳಿ ಸಮೀಪದ ಪೊಂಪೈಯ ಖಾಸಗಿ ಕಾಲೇಜಿನಲ್ಲಿ ಆರಂಭಗೊಂಡಿದ್ದ ಸ್ಕಾರ್ಫ್ ಮತ್ತು ಕೇಸರಿ ಶಾಲು ಧರಿಸಿದ ವಿವಾದ ನಿನ್ನೆ ಸುದ್ದಿಯಾಗಿತ್ತು. ಇದೀಗ ಎರಡೂ ಧರ್ಮದವರ ನಡುವೆ ಸೌಹಾರ್ದತೆ ಸಭೆಯ ಮೂಲಕ ಬಗೆಹರಿದಿದೆ.


    ಕಿನ್ನಿಗೋಳಿ ಸಮೀಪದ ಐಕಳ ಪಂಚಾಯಿತಿ ವ್ಯಾಪ್ತಿಯ ದಾಮಸ್‌ಕಟ್ಟೆ ಬಳಿಯ ಪೊಂಪೈ ಕಾಲೇಜಿನಲ್ಲಿ ಮಂಗಳವಾರ ಸ್ಕಾರ್ಫ್ ವಿವಾದ ಪ್ರಾರಂಭವಾಗಿತ್ತು.

    ಒಂದು ಕೋಮಿಗೆ ಸೇರಿದ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾದ ಕಾರಣ ಬುಧವಾರ ಇನ್ನೊಂದು ಕೋಮಿಗೆ ಸೇರಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿ ತರಗತಿ ಹಾಜರಾಗಿ ಗೊಂದಲದ ವಾತಾವರಣ ಸೃಷ್ಠಿಯಾಗಿ ಬುಧವಾರ ಮಧ್ಯಾಹ್ನದ ಬಳಿಕ ಶಾಲೆಗೆ ರಜೆ ನೀಡಲಾಗಿತ್ತು.

    ಗುರುವಾರ ಕೂಡ ಎರಡು ಕೋಮಿನವರು ಶಾಲು ಮತ್ತು ಸ್ಕಾರ್ಫ್ ಧರಿಸಿ ಕಾಲೇಜಿಗೆ ಹಾಜರಾಗಿದ್ದರು. ಗುರುವಾರ ಸಂಜೆ ಕಾಲೇಜಿನಲ್ಲಿ ಜರುಗಿದ ಕಾಲೇಜಿನ ಆಡಳಿತ ಮಂಡಳಿ, ಊರಿನ ಪ್ರಮುಖರು,

    ಪೊಲೀಸ್ ಇಲಾಖೆ ಮತ್ತು ಎರಡು ಧರ್ಮದ ಮುಖಂಡರ ಸಭೆಯಲ್ಲಿ ಕಾಲೇಜಿಗೆ ಸೇರುವಾಗ ವಿದ್ಯಾರ್ಥಿಗಳು ಒಪ್ಪಿಕೊಂಡ ನಿಯಮದಂತೆ ಡ್ರೆಸ್ ಕೋಡ್ ಪಾಲಿಸಬೇಕು.

    ಇದನ್ನು ಮೀರುವ ಹಾಗೆ ಇಲ್ಲ ಎಂಬ ನಿರ್ಧಾರದ ಬಗ್ಗೆ ಎರಡು ಧರ್ಮದವರು ಒಪ್ಪಿಕೊಂಡ ಬಳಿಕ ವಿವಾದ ಸೌರ್ಹದಯುತವಾಗಿ ಬಗೆಯದಿದೆ.
    ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದೀಗ ವಿವಾದ ಸುಖಾಂತಗೊಂಡಿದೆ. ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ್ ಕೆ.ಎ.,

    ದಾಮಸ್‌ಕಟ್ಟೆ ಕಿರೆಂ ಚರ್ಚ್‌ನ ಧರ್ಮಗುರು, ಟಿ.ಎಚ್. ಮಯ್ಯದ್ವಿ, ಈಶ್ವರ್ ಕಟೀಲು, ಕೆ.ಭುವನಾಭಿರಾಮ ಉಡುಪ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತಿತರ ಗಣ್ಯರು ಇದ್ದರು.

    DAKSHINA KANNADA

    ದ.ಕ: ಮುಂದುವರಿದ ಮುಂಗಾರು ಪೂರ್ವ ಮಳೆ; ನೆರೆ ಹಾವಳಿ ಸಂಭವಿಸುವ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಮುಂದುವರಿದಿದ್ದು, ಇನ್ನೆರಡು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲಾಧಿಕಾರಿ  ಮುಲ್ಲೈ ಮುಗಿಲನ್ ಅವರು ಮಳೆಯಿಂದ ನೆರೆ ಹಾವಳಿ ಸಂಭವಿಸುವ ಮಂಗಳೂರು ನಗರದ ಕೊಟ್ಟಾರ ಚೌಕಿ ಹಾಗೂ ಕೂಳೂರು ಪ್ರದೇಶಕ್ಕೆ ನಿನ್ನೆ(ಮೇ.22) ಸಂಜೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕೊಟ್ಟಾರ ಚೌಕಿಯಲ್ಲಿ ಸಾಮಾನ್ಯವಾಗಿ ಪ್ರತೀ ಮಳೆಗಾಲದಲ್ಲಿ ನೆರೆ ಬರುತ್ತದೆ. ಈ ಬಾರಿ ನೆರೆ ಬಂದರೆ ಆಸ್ತಿ ಪಾಸ್ತಿಗಳಿಗೆ ಹಾನಿ ಆಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ಈ ಸಂದರ್ಭದಲ್ಲಿ ತಿಳಿಸಿದರು. ಕೂಳೂರು ಜಂಕ್ಷನ್‌ ಮತ್ತು ಕೂಳೂರು ಸೇತುವೆ ನಿರ್ಮಾಣ ಕಾಮಗಾರಿಯನ್ನೂ ಪರಿಶೀಲಿಸಿದ ಜಿಲ್ಲಾಧಿಕಾರಿ, ಸೇತುವೆ ನಿರ್ಮಾಣ ಪ್ರದೇಶದಲ್ಲಿ ಮಳೆ ಸಂದರ್ಭ ಹಾನಿ ಸಂಭವಿಸದಂತೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮತ್ತು ಸೇತುವೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಸೂಚಿಸಿದರು.

    ಗುಡುಗು ಸಹಿತ ಧಾರಾಕಾರ ಮಳೆ:

    ಈ ನಡುವೆ ಬುಧವಾರ ರಾತ್ರಿ ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ಮತ್ತಿತರ ಕಡೆಗಳಲ್ಲಿ ಗುಡುಗು ಮಿಂಚು, ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಸಿಡಿಲು ಮತ್ತು ಗಾಳಿಯಿಂದಾಗಿ ಜಿಲ್ಲಾದ್ಯಂತ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕೆಲವು ಪ್ರದೇಶಗಳಳ್ಲಿ ರಾತ್ರಿ ವೇಳೆ ಕರೆಂಟ್‌ ಇಲ್ಲದೆ ಜನರು ಸಮಸ್ಯೆ ಅನುಭವಿಸಿದರು. ಸಿಡಿಲಿನಿಂದಾಗಿ ಹಲವು ಮನೆಗಳಲ್ಲಿ ಇನ್‌ವರ್ಟರ್‌, ಫ್ರಿಜ್‌ ಇತ್ಯಾದಿ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಗುರುವಾರ ಬೆಳಗ್ಗೆ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಕಂಡು ಬಂದಿದೆ.

     

    Continue Reading

    LATEST NEWS

    ತಾಯಿಯನ್ನು ಮನೆಯಿಂದ ಹೊರಹಾಕಿದ್ದ ಮಗ-ಸೊಸೆ..! ತಹಶೀಲ್ದಾರ್ ನೆರವಿನಿಂದ ತಾಯಿ ಮರಳಿ ಮನೆಗೆ..!

    Published

    on

    ಸುಳ್ಯ: ಮಗ ಹಾಗೂ ಸೊಸೆ ಮನೆಯಿಂದ ಹೊರಹಾಕಿದ್ದ ತಾಯಿಯನ್ನು ತಹಶೀಲ್ದಾರ್ ಮಾತುಕತೆಯಲ್ಲಿ ಮತ್ತೆ ಮನೆಗೆ ಸೇರಿಸಿದ ಘಟನೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ನಡೆದಿದೆ.

    thahashildar

    ಶೇಷಮ್ಮ ಎಂಬ ವೃದ್ಧೆ ತಹಶೀಲ್ದಾರ್ ನೆರವಿನಿಂದ ಮತ್ತೆ ಮಗನ ಮನೆ ಸೇರಿದ್ದಾರೆ. ಶೇಷಮ್ಮ ಅವರ ಪತಿ ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದು, ಹೆಣ್ಣುಮಕ್ಕಳಿಗೆ ಹಾಗೂ ಏಕೈಕ ಪುತ್ರನಿಗೂ ಮದುವೆ ಮಾಡಿಸಿದ್ದರು. ಆದ್ರೆ ಮಗನಿಗೆ ಮದುವೆ ಮಾಡಿಸಿದ ಬಳಿಕ ಅತ್ತೆ ಸೊಸೆ ನಡುವೆ ಸರಿ ಹೊಂದದ ಕಾರಣ ಮಗ ತಾಯಿಯನ್ನು ಸಹೋದರಿಯ ಮನೆಯಲ್ಲಿ ಬಿಟ್ಟಿದ್ದ. ಇದೀಗ ನನಗೆ ಮನೆಗೆ ಹೋಗಬೇಕು ಎಂದು ಹಠ ಹಿಡಿದಿದ್ದ ಶೇಷಮ್ಮ ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮನವಿ ಮಾಡಿ ನನ್ನನ್ನು ನನ್ನ ಮನೆಗೆ ಸೇರಿಸಿ ಎಂದಿದ್ದರು.

    Read More..;  ಚಾಕೊಲೇಟ್ ಗ್ಯಾಂಗ್ ಆಯ್ತು ಈಗ ದರೋಡೆಗಿಳಿದಿದೆ ಜ್ಯೂಸ್ ಗ್ಯಾಂಗ್!

    ಈ ಕಾರಣದಿಂದ ತಹಶೀಲ್ದಾರ್ ತಮ್ಮ ಅಧಿಕಾರಿಗಳ ತಂಡದ ಜೊತೆ ತೆರಳಿ ಪಂಚಾಯತಿ ನಡೆಸಿ ಮಗ ಹಾಗೂ ಸೊಸೆಗೆ ಬುದ್ದಿವಾದ ಹೇಳಿದ್ದಾರೆ. ಬಳಿಕ ಶೇಷಮ್ಮ ಅವರಿಗೂ ಸೊಸೆ ಜೊತೆ ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿ ಮಗನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    Continue Reading

    DAKSHINA KANNADA

    ಕೊನೆಗೂ ಕಾನೂನಿಗೆ ತಲೆ ಬಾಗಿ ಠಾಣೆಗೆ ಹಾಜರಾದ ಶಾಸಕ, ಜಾಮೀನು

    Published

    on

    ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಶಾಸಕ ಹರೀಶ್ ಪೂಂಜರ ವಿರುದ್ಧ, ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ, ಆರೋಪಿ ಹರೀಶ್ ಪೂಂಜರನ್ನು, ವಿಚಾರಣೆಗಾಗಿ ಠಾಣೆಗೆ ಕರೆತರಲು, ಬೆಳ್ತಂಗಡಿ ಠಾಣಾ ಪೊಲೀಸರು ಪೂಂಜಾ ಅವರ ಮನೆಗೆ ತೆರಳಿದ್ದ ವೇಳೆ ನಿನ್ನೆ ಉದ್ವಿಗ್ನ ಸ್ಥಿತಿ ನಿರ್ಮಾಣ ವಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳೀನ್ ಕುಮಾರ್ ಕಟೀಲ್ ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿದ ಹಿನ್ನೆಲೆಯಲ್ಲಿ ಬಳಿಕ ಹರೀಶ್ ಪೂಂಜಾರನ್ನು ಪೊಲೀಸರೊಂದಿಗೆ ಠಾಣೆ ಕರೆದುಕೊಂಡು ಬಂದಿದ್ದು, ಠಾಣೆಯಲ್ಲಿ ವಿಚಾರಣೆ ಮಾಡಲಾಗಿದೆ.

    harish poonja

    ಬೆಳ್ತಂಗಡಿ ಠಾಣಾ  58/2024 , ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ  ಪ್ರಕರಣಕ್ಕೆ ಸಂಬಂಧಿಸಿದಂತೆ,  ಆರೋಪಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರನ್ನು, ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.  ಮುಂಜಾನೆಯಿಂದ  ಶಾಸಕ ಹರೀಶ್ ಪೂಂಜಾ ಮನೆ ಮುಂದೆ ಹೈಡ್ರಾಮ ನಡೆದು ರಾತ್ರಿ ವೇಳೆ ಪೊಲೀಸರು ವಾಪಾಸಾಗಿದ್ದರು. ಬಿಜೆಪಿ ಶಾಸಕರು, ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಶಾಸಕರ ಬಂಧನ ವಿರೋಧಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅವರನ್ನು ಬಂಧಿಸಿದರೆ ಜಿಲ್ಲೆ ಬಂದ್ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.

    Read More..; ಶಾಸಕನ ಬಂಧನಕ್ಕೆ ಮುಂದಾದ ಪೊಲೀಸರು…! ಎಚ್ಚರಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ…!

    ಇದೇ ವೇಳೆ ಘಟನೆಯ ವಿಚಾರವಾಗಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಹರಿಹಾಯ್ದು ಡಿಜಿಪಿ ಶಂಕರ್ ಬಿದರಿಯ ಕಾಲರ್ ಪಟ್ಟಿಯನ್ನು ಹಿಡಿದ ವಿಚಾರ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ನಾನು ವಿನಾ ಕಾರಣ ಪ್ರಕರಣದಲ್ಲಿ ಸಿಲುಕಿಸಿದ ನಮ್ಮ ಪಕ್ಷದ ಮೋರ್ಚಾದ ಅಧ್ಯಕ್ಷನ ಪರವಾಗಿ ಮಾತನಾಡಲು ಹೋಗಿದ್ದೆ ಹೊರತು ಯಾರದೇ ಕಾಲರ್ ಪಟ್ಟಿ ಹಿಡಿದಿಲ್ಲ ಎಂದು ತಮ್ಮ ಪ್ರತಿಭಟನೆಯನ್ನು  ಸಮರ್ಥಿಸಿಕೊಂಡಿದ್ದಾರೆ.

    ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಕ ಪ್ರಕರಣದಲ್ಲಿ  ಬಿಜೆಪಿ ಯುವಮೋರ್ಚ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧಿತನಾಗಿದ್ದಾನೆ. ಆತನ ಪರ ಪ್ರತಿಭಟನೆ ಮಾಡಿ ಶಾಸಕ ಹರೀಶ್ ಪೂಂಜಾ ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅರೆಸ್ಟ್ ನಿಂದ ತಪ್ಪಿಸಿಕೊಂಡು ಬಿಜೆಪಿ ಪ್ರಮುಖರ ಜೊತೆಯಲ್ಲಿ ಪೊಲೀಸ್ ಠಾಣೆಗೆ ಬಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದು, ಸ್ಟೇಷನ್‌ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.

    Continue Reading

    LATEST NEWS

    Trending