LATEST NEWS
ಮಂಗಳೂರಿನಲ್ಲಿ ಹಿಜಾಬ್-ಕೇಸರಿ ಗಲಾಟೆ: ‘ಸುಳ್ಳು ಸುದ್ದಿ’ ಎಂದ ಕಮೀಷನರ್
Published
3 years agoon
By
Adminಮಂಗಳೂರು: ನಗರದ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದು, ಇದು ಫೇಕ್ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಆಡಿಯೋ ಮೂಲಕ ಸ್ಪಷ್ಪಪಡಿಸಿರುವ ಕಮೀಷನರ್, ಸಂತ ಅಲೋಷಿಯಸ್ ಕಾಲೇಜು ಹಾಗೂ ನಗರದ ಇತರ ಕಾಲೇಜುಗಳಲ್ಲಿ ನಡೆದಿರುವ ಘಟನೆ ಎಂಬುವುದಾಗಿ ಹಳೆಯ ವೀಡಿಯೋ ಜೊತೆಗೆ ಬೇರೆ ಕಡೆ ನಡೆದಿರುವ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ.
ಇದೊಂದು ಸುಳ್ಳು ಅಥವಾ ಫೇಕ್ ಸುದ್ದಿ ಹರಡುತ್ತಿದ್ದಾರೆ. ಸುಳ್ಳು ವದಂತಿಗೆ ಕಿವಿ ಕೊಡದಂತೆ ಮನವಿ ಮಾಡಿದ್ದಾರೆ.
FILM
ಉಡುಪಿ: ಕಾಲಿವುಡ್ ಸ್ಟಾರ್ ನಟ ಸೂರ್ಯ ದಂಪತಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ
Published
11 minutes agoon
26/11/2024By
NEWS DESK2ಉಡುಪಿ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕೇವಲ ಸಾಮಾನ್ಯರು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಕೂಡ ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ. ಕಾಲಿವುಡ್ ನ ಸ್ಟಾರ್ ನಟ ಸೂರ್ಯ ದಂಪತಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ದೇವಾಲಯದಲ್ಲಿ ನಡೆದ ಚಂಡಿಕಾಯಾಗದಲ್ಲಿ ಪತ್ನಿ ನಟಿ ಜ್ಯೋತಿಕಾ ಜೊತೆ ಭಾಗಿಯಾದರು. ನಿನ್ನೆ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಕಾಲಿವುಡ್ ದಂಪತಿ ಇಂದು ಪೂರ್ಣಾಹುತಿಯಲ್ಲಿ ಭಾಗಿಯಾದರು.
ನಟ ಸೂರ್ಯ ಹಾಗೂ ಜ್ಯೋತಿಕಾ ಸೆಲೆಬ್ರಿಟಿ ದಂಪತಿಯನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಕರ್ನಾಟಕದಲ್ಲೂ ಸಹ ಸೂರ್ಯ ಹಾಗೂ ಜ್ಯೋತಿಕಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
BELTHANGADY
ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ
Published
28 minutes agoon
26/11/2024By
NEWS DESK2ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ಇಂದಿನಿಂದ ಆರಂಭಗೊಳ್ಳಲಿದೆ. ಬೆಳಿಗ್ಗೆ 10.30 ಗಂಟೆಗೆ ಎಸ್ ಪಿ ಯತೀಶ್ ಎನ್. ಧರ್ಮಸ್ಥಳ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಧರ್ಮಸ್ಥಳದಲ್ಲಿ ನ. 26ರಂದು ಹೊಸ ಕಟ್ಟೆ ಉತ್ಸವ, 27ರಂದು ಕೆರೆಕಟ್ಟೆ ಉತ್ಸವ, 28ರಂದು ಲಲಿತೋದ್ಯಾನ ಉತ್ಸವ, 29ರಂದು ಕಂಚಿ ಮಾರುಕಟ್ಟೆ ಉತ್ಸವ, 30ರಂದು ಗೌರಿ ಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ) ನಡೆಯಲಿದೆ.
ಡಿ.1ರಂದು ಸಂಜೆ 6.30ಕ್ಕೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣಪೂಜೆ ನಡೆಯಲಿದೆ. ನ. 28 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5:30 ರಿಂದ ನಾಗಸ್ವರ ವಾದನ, 7 ಗಂಟೆಯಿಂದ ಸಾತ್ವಿಕ ಸಂಗೀತ, ನೃತ್ಯಾರ್ಚನೆ, ನೃತ್ಯ ರೂಪಕ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ.
ಸರ್ವಧರ್ಮ ಸಮ್ಮೇಳನ
ಅಮೃತವರ್ಷಿಣಿ ಸಭಾಭವನದಲ್ಲಿ ನ. 29ರಂದು ಸಂಜೆ 5ಗಂಟೆಯಿಂದ ಸರ್ವ ಧರ್ಮ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಉದ್ಘಾಟಿಸುವರು. ಬೆಂಗಳೂರು ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮ ಮಹಾ ಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಂಶೋಧಕ ಡಾ. ಜಿ. ಬಿ. ಹರೀಶ, ಡಾಕ್ಟರ್ ಜೋಸೆಫ್ ಎನ್ ಎಂ, ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಅವರಿಂದ ಉಪನ್ಯಾಸ ಬಳಿಕ ಭರತನಾಟ್ಯ ಕಾರ್ಯಕ್ರಮ ಇರಲಿದೆ.
ಸಾಹಿತ್ಯ ಸಮ್ಮೇಳನ
ನ. 30ರಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು, ಬೆಂಗಳೂರು ಬಹುಶ್ರುತ ವಿದ್ವಾಂಸ ಶತಾವಧಾನಿ ಡಾ.ರಾ. ಗಣೇಶ ಉದ್ಘಾಟಿಸುವರು. ಲೇಖಕ ಸಂಶೋಧಕ ಡಾ. ಪಾದೆಕಲ್ಲು ವಿಷ್ಣುಭಟ್ಟ ಅಧ್ಯಕ್ಷತೆ ವಹಿಸುವರು. ಬಳಿಕ ಡಾ. ಪ್ರಮೀಳಾ ಮಾಧವ, ಡಾ.ಬಿ.ವಿ. ವಸಂತ ಕುಮಾರ್ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30 ರಿಂದ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವಿದೆ. ಪ್ರತಿದಿನ ಸಂಜೆ 6:30 ರಿಂದ ರಾತ್ರಿ 11 ಗಂಟೆವರೆಗೆ ವಸ್ತು ಪ್ರದರ್ಶನ ಮಂಟಪ ಹಾಗೂ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಂಸ್ಕೃತಿಕ, ಸಂಗೀತ ಹಬ್ಬ ನಡೆಯಲಿದೆ.
LATEST NEWS
ಏಲಿಯನ್‌ಗಳು ನಿಜಕ್ಕೂ ಇದೆಯಾ? ಡಾ.ಸೋಮನಾಥ್‌ರಿಂದ ಅಚ್ಚರಿಯ ಮಾಹಿತಿ !!
Published
34 minutes agoon
26/11/2024ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಈಗಾಗಲೇ ಏಲಿಯನ್ಸ್ ಬಗ್ಗೆ ಮಾಹಿತಿ ಇತ್ತು. ಆದರೆ ಏಲಿಯನ್ಗಳ ಮಾಹಿತಿಗಳನ್ನು ಅಮರಿಕ ಮರೆಮಾಚುತ್ತಿದೆ ಎಂಬ ಗಂಭೀರ ಆರೋಪಗಳಿವೆ. ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರೊಂದಿಗಿನ ಸಂದರ್ಶನದಲ್ಲಿ ಸೋಮನಾಥ್ ಕೆಲವು ಕೌತುಕ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ನಂಬಲು ಅಸಾಧ್ಯವಾಗಿರುವ ಮಾಹಿತಿಗಳನ್ನು ನೀಡಿದ್ದಾರೆ.
ಏಲಿಯನ್‌ಗಳು ಕಲ್ಪನೆಯೇ ಕುತೂಹಲವಾದದ್ದು.
ಮನುಷ್ಯನ ಊಹೆಗೂ ನಿಲುಕದ ಅದೆಷ್ಟೋ ಪ್ರಕೃತಿ ವಿಸ್ಮಯಗಳು ನಡೆದಿರುತ್ತವೆ. ವಿಜ್ಞಾನ – ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಕೆಲವು ವಿಷಯಗಳು ಎಲ್ಲವನ್ನೂ ಮೀರಿದ್ದೇ ಆಗಿವೆ. ಅಂಥದ್ದರಲ್ಲಿ ಒಂದು ಈ ಏಲಿಯನ್. ಏಲಿಯನ್ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಇಂದು ನಿನ್ನೆಯದ್ದಲ್ಲ. ಎಷ್ಟೋ ದಶಕಗಳಿಂದ ಈ ಬಗ್ಗೆ ಅಧ್ಯಯನ ನಡೆಯುತ್ತಲೇ ಇದ್ದು ಪರ-ವಿರೋಧಗಳ ಚರ್ಚೆಗಳೂ ಆಗುತ್ತಿವೆ.
“ಭೂಮಿಯ ಹೊರತಾಗಿಯೂ ಸಾವಿರ ವರ್ಷಗಳಷ್ಟು ಮುಂದಿರುವ ಯಾವುದಾದರೂ ನಾಗರಿಕತೆಯ ಗ್ರಹದ ಜೀವಿಗಳು, ಅಭಿವೃದ್ಧಿ ಹಾಗೂ ತಂತ್ರಜ್ಞಾನದಲ್ಲಿ ಮುಂದಿದ್ದು, ವಿಶ್ವದ ಯಾವುದಾದರೂ ಒಂದು ಮೂಲೆಯಿಂದ ಎಲ್ಲ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ನೋಡುತ್ತಿರುವ ಎಲ್ಲಾ ಸಾಧ್ಯತೆಗಳು ಇವೆ” ಎನ್ನುವುದು ಡಾ.ಸೋಮನಾಥ್ ಅವರ ಮಾತು. “ಬ್ರಹ್ಮಾಂಡವು ಶತಕೋಟಿ ಆಕಾಶಕಾಯಗಳು, ನಕ್ಷತ್ರಗಳು ಮತ್ತು ಗ್ರಹಗಳಿಂದ ಹೋಗಿರುವಂಥದ್ದು. ಆದರೆ ಈ ವಿಶಾಲ ಜಗತ್ತಿನಲ್ಲಿ ಜೀವಿಗಳಿಗೆ ಆಶ್ರಯ ನೀಡುವ ಅಥವಾ ನಿಡಬಲ್ಲ ಏಕೈಕ ಗ್ರಹವೆಂದರೆ ಭೂಮಿ. ಮುಂದಿನ 1000 ವರ್ಷಗಳಲ್ಲಿ ತಂತ್ರಜ್ಞಾನವು ಜಾಗತಿಕವಾಗಿ ಹೆಚ್ಚಾಗುತ್ತದೆ ಎನ್ನುವುದು ನಿಜವಾದರೂ, ಭೂಮಿಯ ಹೊರತಾಗಿಯೂ ಬೇರೆ ಯಾವುದೋ ಗ್ರಹವು ಸಾವಿರಾರು ವರ್ಷಗಳಷ್ಟು ಮುಂದುವರಿದಿರಬಹುದು ಇಲ್ಲವೇ 200 ವರ್ಷಗಳಷ್ಟು ಹಿಂದಕ್ಕೆ ಇದ್ದಿರಲೂಬಹುದು. ಆದ್ದರಿಂದ ಯಾವುದೇ ಅನ್ಯಜೀವಿಯ ಅಸ್ತಿತ್ವದಲ್ಲಿ ಇಲ್ಲ ಎನ್ನಲು ಸಾಧ್ಯವಿಲ್ಲ” ಎಂದು ಅವರು ವಿಶ್ಲೇಷಿಸಿದ್ದಾರೆ.
“ಈಗ ಶತಮಾನದಷ್ಟು ಹಿಂದಕ್ಕೆ ಹೋಗಿ ನೋಡುವುದಾದರೆ, ಆಗಿನ ತಂತ್ರಜ್ಞಾನಕ್ಕೆ ಹೋಲಿಸಿದರೆ ಭೂಮಿಯ ಮೇಲಿನ ತಂತ್ರಜ್ಞಾನ ಇಂದಿಗೆ ಅಗಾಧವಾಗಿ ಬೆಳೆದಿದೆ. ಈ ಕ್ಷಿಪ್ರ ಬೆಳವಣಿಗೆಯ ಜೊತೆಗೆ, ಅನ್ಯಗ್ರಹ ಜೀವಿಗಳ ಅಸ್ತಿತ್ವವೂ ಇದ್ದಿರುವ ಎಲ್ಲಾ ಸಾಧ್ಯತೆಗಳೂ ಇವೆ. ಏಕೆಂದರೆ, ಮನುಷ್ಯರು ಸೇರಿದಂತೆ ವಿಶ್ವದಲ್ಲಿರುವ ಎಲ್ಲಾ ಜೀವಿಗಳು ಕಳೆದ ನೂರು ವರ್ಷಗಳಲ್ಲಿ ವಿಕಸನಗೊಳ್ಳುತ್ತಲೇ ಬಂದಿವೆ. ಕೆಲವು ಜಾತಿಗಳು ತಂತ್ರಜ್ಞಾನದಲ್ಲಿ ಮನುಷ್ಯರಿಗಿಂತ ಮುಂದಿರಬಹುದು. ಇತರರು ಹಿಂದೆ ಇದ್ದಾರೆ. ಆದ್ದರಿಂದ ಭೂಮಿಯನ್ನಷ್ಟೇ ಅಲ್ಲದೇ, ಅನ್ಯಗ್ರಹಗಳ ಇರುವಿಕೆಯನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಅದು ಭೂಮಿಗಿಂತಲೂ ಸಾವಿರಾರು ವರ್ಷ ಮುಂದುವರಿದಿರಬಹುದು” ಎನ್ನುವ ಮಾತು ಇಸ್ರೋ ಅಧ್ಯಕ್ಷರದ್ದು.
ಇದೇ ವೇಳೆ ಸೋಮನಾಥ್ ಅವರು,”ಒಂದು ವೇಳೆ ಏಲಿಯನ್ಸ್ ಅಥವಾ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದು ಬಿಟ್ಟರೆ ಏನೆಲ್ಲಾ ಅಪಾಯ ಆಗಬಹುದು” ಎನ್ನುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. “ಅನ್ಯಗ್ರಹ ಜೀವಿಗಳು ಮತ್ತು ಭೂಮಿಯ ಮೇಲಿನ ಜೀವಿಗಳ ಜೀವನ ಕ್ರಮದಲ್ಲಿ ಸಂಪೂರ್ಣ ವ್ಯತ್ಯಾಸವಿದೆ. ಎರಡೂ ಜೀವನಶೈಲಿ ಸಂಪೂರ್ಣ ಭಿನ್ನವಾದಂಥದ್ದು. ಅನ್ಯಜೀವಿಗಳ ದೇಹವು ಬಹುಶಃ ಜೀನೋಮಿಕ್ ಮತ್ತು ಪ್ರೊಟೀನ್ ಆಧರಿತವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಅವು ಏನಾದರೂ ಭೂಮಿಯ ಮೇಲೆ ಬಂದರೆ, ಮನುಷ್ಯ ಮತ್ತು ಅವುಗಳ ನಡುವೆ ಸಂಘರ್ಷ ನಡೆಯುವ ಸಾಧ್ಯತೆ ಇದೆ. ಇದು ತುಂಬಾ ಅಪಾಯಕಾರಿ ಮಟ್ಟವನ್ನೂ ತಲುಪಬಹುದು” ಎಂದಿದ್ದಾರೆ.
LATEST NEWS
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ: ಮುಂದಿನ ಸಿಎಂ ಇವರೇ ?
ಮಧ್ಯಪ್ರದೇಶದಲ್ಲಿ ಸ್ಫೋಟ – 3 ಮನೆಗಳು ಕುಸಿದು ಇಬ್ಬರು ಸಾ*ವು
BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್
14 ಬಾರಿಯ ಒಲಿಂಪಿಕ್ ಪದಕ ವಿಜೇತೆ ವಿದಾಯ !
ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ನ್ಯೂಸ್..!
Trending
- LATEST NEWS6 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru4 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION5 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS3 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!