Connect with us

    LATEST NEWS

    ವಿದ್ಯಾರ್ಥಿನಿಯರಿಗೆ ಗುಪ್ತ ಸ್ಥಳದಲ್ಲಿ ತರಬೇತಿ- ತನಿಖೆ ನಡೆಸುವಂತೆ ಗೃಹಸಚಿವರಿಗೆ ಶಾಸಕರ ಪತ್ರ

    Published

    on

    ಉಡುಪಿ: ಕೆಲ ಇಸ್ಲಾಂ ಸಂಘಟನೆಗಳು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಗುಪ್ತ ಸ್ಥಳದಲ್ಲಿ ತರಬೇತಿ ನೀಡುತ್ತಿದ್ದಾರೆ. ಈ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ನಡೆಸುವಂತೆ ಶಾಸಕ ರಘಪತಿ ಭಟ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.


    ಹಿಜಾಬ್-ಕೇಸರಿ ಶಾಲು ವಿವಾದದಿಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ.

    ಅಲ್ಲದೆ 12 ಮುಸ್ಲಿಂ ವಿದ್ಯಾರ್ಥಿನಿಯರನ್ನು ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಕೋಮು ಗಲಭೆ ಮತ್ತು ಮತೀಯಾವಾದ ಸೃಷ್ಟಿಸಿ,

    ಅ ಶಾಂತಿ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ನಿಟ್ಟಿನಲ್ಲಿ, ಇಸ್ಲಾಂ ಸಂಘಟನೆಗಳಾದ ಎಸ್‌.ಡಿ.ಪಿ.ಐ. ಮತ್ತು ಸಿ.ಎಫ್.ಐ. ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.


    ಇಸ್ಲಾಂ ಸಂಘಟನೆಗಳ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ, ಉನ್ನತ ಮಟ್ಟದಲ್ಲಿ ತನಿಖೆ ನಡೆಸುವಂತೆ ಶಾಸಕ ರಘಪತಿ ಭಟ್‌ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಗೆ ಪತ್ರದ ಮೂಲಕ ಒತ್ತಾಯ ಮಾಡಿದ್ದಾರೆ.

    DAKSHINA KANNADA

    ವೈರಲ್‌ ಆಯ್ತು ತಂದೂರಿ ಐಸ್‌ಕ್ರೀಮ್‌!

    Published

    on

    ಐಸ್‌ಕ್ರೀಮ್‌ ಅನ್ನು ಇಷ್ಟಪಡದವರು ಯಾರೂ ಇಲ್ಲ. ಇದನ್ನು ಕೋನ್, ಸ್ಕೂಪ್, ಬಾರ್ ರೀತಿಯಲ್ಲಿ ಸವಿಯಬಹುದು. ಇನ್ನು ವೆನಿಲಾ ಐಸ್‌ಕ್ರೀಮ್, ಸ್ಟ್ರಾಬೆರಿ, ಚಾಕೋಲೆಟ್, ಪಿಸ್ತಾ ಹೇಳುತ್ತಾ ಹೋದರೆ ವೆರೈಟಿ ವೈರೆಟಿ ಐಸ್‌ಕ್ರೀಮ್‌ಗಳ ದೊಡ್ಡ ಪಟ್ಟಿಯೇ ಇದೆ. ಬಗೆಬಗೆಯ ಐಸ್‌ಕ್ರೀಮ್‌ಗಳು ಒಂದು ಕಡೆಯಾದರೆ, ಇಲ್ಲೊಂದು ವಿಶೇಷ ಬಗೆಯ ಐಸ್‌ಕ್ರೀಮ್‌ ಇದೆ.

    ವೈರಲ್ ಆಯ್ತು ತಂದೂರಿ ಐಸ್‌ಕ್ರೀಮ್:

    ಹೌದು… ಈ ಐಸ್‌ಕ್ರೀಮ್‌ನ ಹೆಸರು ತಂದೂರಿ ಐಸ್‌ಕ್ರೀಮ್. ಇತ್ತೀಚಿನ ದಿನಗಳಲ್ಲಿ ಫುಡ್ ಮೇಲಿನ ಪ್ರಯೋಗಗಳು ಹೆಚ್ಚಾಗುತ್ತಿವೆ. ಐಸ್‌ಕ್ರೀಮ್ ಮತ್ತು ಚಾಕಲೇಟ್ ದೋಸೆ, ಜಾಮೂನ್‌ ದೋಸೆ, ದಹಿ ಮ್ಯಾಗಿ, ಓರಿಯೊ ಪಕೋಡಾ, ಚಾಕೊಲೇಟ್ ರೈಸ್ ಬೌಲ್, ಡ್ರೈ ಫ್ರೂಟ್ ಆಮ್ಲೆಟ್, ವೋಡ್ಕಾ ಆಲೂ ಪರಾಠ, ಡಿಸೇಲ್ ಪರೋಟ ಹೀಗೆ ವಿಚಿತ್ರ ಕಾಂಬಿನೇಷನ್‌ನ ಆಹಾರಗಳು, ಖಾದ್ಯ ತಿಂಡಿಗಳಲ್ಲಾಗುವ ಹೊಸ ಪ್ರಯೋಗಗಳ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. ಇಂಟರ್‌ನೆಟ್‌ನಲ್ಲಿ ಇಂತಹ ಹೊಸ ಪ್ರಯೋಗಗಳು ಕಾಣ ಸಿಗುತ್ತಲೇ ಇರುತ್ತವೆ. ಈಗ ಸದ್ಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವುದು ಹಾಟ್‌ ಹಾಟ್‌ ತಂದೂರಿ ಐಸ್‌ಕ್ರೀಮ್‌.

    ಗ್ರಿಲ್‌ ಮೇಲೆ ಬೇಯುತ್ತಿದೆ ಐಸ್‌ಕ್ರೀಮ್‌:

    ಬಿಸಿಲಿನ ಬೇಗೆ ತಣಿಸಿಕೊಳ್ಳಲು, ತಂಪಾಗಿರಲು ಐಸ್‌ಕ್ರೀಮ್‌ ತಿನ್ನೋದು ಸರಿ. ಆದರೆ ಈ ಐಸ್‌ಕ್ರೀಮ್‌ ನೋಡಿದರೆ ಬೇಸಿಗೆಯಲ್ಲಿ ತಿನ್ನೋದೆ ಕಷ್ಟ ಎನಿಸಿದೆ. ಗ್ರಿಲ್‌ ಮೇಲೆ ಬೇಯುತ್ತಿರುವ ಐಸ್‌ಕ್ರೀಮ್‌ ಈಗ ವೈರಲ್‌ ಆಗಿದೆ.

    ಈ ತಂದೂರಿ ಐಸ್‌ಕ್ರೀಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೆಯಾಗಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ನಾಲ್ಕು ಐಸ್ ಕ್ರೀಮ್ ಬಾರ್‌ಗಳನ್ನು ತೆಗೆದುಕೊಂಡಿದ್ದಾನೆ. ಅದರಲ್ಲಿ ಎರಡು ಚಾಕೊಲೇಟ್ ಫ್ಲೇವರ್‌ಗಳು ಮತ್ತು ಇತರ ಎರಡು ವೆನಿಲ್ಲಾ ಫ್ಲೇವರ್‌ಗಳು.

    ಈ ನಾಲ್ಕು ಐಸ್‌ಕ್ರೀಮ್‌ ಬಾರ್‌ಗಳನ್ನು ಆ ವ್ಯಕ್ತಿ ಸೀದಾ ಬಿಸಿ ಬಿಸಿ ಕೆಂಡದಲ್ಲಿ ಉಗಿ ಹಾಯುತ್ತಿರುವ ಗ್ರಿಲ್‌ ಮೇಲೆ ಇರಿಸುತ್ತಾನೆ. ಆಮೇಲೆ ಸ್ವಲ್ಪ ಹೊತ್ತಿನ ಬಳಿಕ ಆ ಐಸ್‌ಕ್ರೀಮ್‌ ಮೇಲೆ ಕಲರ್‌ಫುಲ್‌ ಆಗಿರುವ ಒಂದಿಷ್ಟು ಸಿಂಪರಣೆಗಳನ್ನು ಹಾಕಿ ಆ ಐಸ್‌ಕ್ರೀಮ್‌ ಬಾರ್‌ಗಳನ್ನು ಅಲಂಕರಿಸುತ್ತಾನೆ.

    ಫುಡ್‌ಬಿ..ಯುಎನ್‌ಕೆ ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋಗೆ “ತಂದೂರಿ ಚಾಕೊ-ಬಾರ್” ಎಂದು ಕ್ಯಾಪ್ಷನ್‌ ನೀಡಲಾಗಿದೆ.

    Continue Reading

    International news

    ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಕೋಲ್ಕತ್ತಾದಲ್ಲಿ ಶ*ವವಾಗಿ ಪತ್ತೆ!

    Published

    on

    ಕೋಲ್ಕತ್ತಾ : ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಶ*ವವಾಗಿ ಪತ್ತೆಯಾಗಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸೀನಾ ಅವರ ಪಕ್ಷದ ಸದಸ್ಯರಾಗಿದ್ದ ಅನಾರ್ ಮೇ 12ರಂದು ಕೋಲ್ಕತ್ತಾಗೆ ಬಂದಿದ್ದರು. ಬಳಿಕ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಬುಧವಾರ(ಮೇ 22) ಬೆಳಿಗ್ಗೆ ಕೋಲ್ಕತ್ತಾದ ನ್ಯೂಟೌನ್ ನಲ್ಲಿ ಅವರ ಶ*ವ ಪತ್ತೆಯಾಗಿದೆ.

    ಸಂಸದರು ಚಿನ್ನದ ಆಮದು ಹಾಗೂ ರಫ್ತು ವ್ಯವಹಾರವನ್ನು ಹೊಂದಿದ್ದರು.  ಕೋಲ್ಕತ್ತಾದ ನ್ಯೂಟೌನ್ ನಲ್ಲಿನ ಸಂಜೀವ ಗಾರ್ಡನ್ ಪ್ಲ್ಯಾಟ್ ನಲ್ಲಿ ಅವರ ಶ*ವ ಸಿಕ್ಕಿದ್ದು, ಕೊ*ಲೆ ಶಂಕೆ ವ್ಯಕ್ತವಾಗಿದೆ.  ಈಗಾಗಲೇ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

    ಇದನ್ನೂ ಓದಿ : ಮಲಗಿದ್ದಲ್ಲೇ ಸಾವು ಕಂಡ ಕುಮಾರಸ್ವಾಮಿ ಮತ್ತು ಕುಟುಂಬ..! ಅನಿಲ ಸೋರಿಕೆ ಶಂಕೆ

    ನಾಪತ್ತೆಯಾಗಿದ್ದ ಸಂಸದ :

    ಚಿಕಿತ್ಸೆಗಾಗಿ ಕೋಲ್ಕತ್ತಾಕ್ಕೆ ಅನ್ವರುಲ್ ಆಗಮಿಸಿದ್ದು, ಬಾರಾನಗರದಲ್ಲಿರುವ ಸ್ನೇಹಿತ ಗೋಪಾಲ್​ ಬಿಸ್ವಾಸ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಮೇ 13 ರಂದು ಯಾರನ್ನೋ ಭೇಟಿಯಾಗಲು ಹೋಗುತ್ತಿದ್ದೇನೆಂದು ಹೊರಟವರು ಹಿಂದಿರುಗಿ ಬಂದಿರಲಿಲ್ಲ ಎಂದು ಹೇಳಲಾಗಿದೆ.
    ಮೇ 13 ರ ಮಧ್ಯಾಹ್ನ 1.40 ರ ಸುಮಾರಿಗೆ ವೈದ್ಯರ ಭೇಟಿಗಾಗಿ ಅನ್ವರುಲ್, ಗೋಪಾಲ್ ಮನೆಯಿಂದ ತೆರಳಿದ್ದರು. ಸಂಜೆ ವಾಪಾಸಾಗುವುದಾಗಿಯೂ ತಿಳಿಸಿದ್ದರು ಎನ್ನಲಾಗಿದೆ. ಆದರೆ, ಆ ಬಳಿಕ ಅವರು ವಾಪಾಸಾಗದೆ ನಾಪತ್ತೆಯಾಗಿದ್ದು, ಇದೀಗ ಶ*ವವಾಗಿ ಪತ್ತೆಯಾಗಿದ್ದಾರೆ.

    Continue Reading

    LATEST NEWS

    ಆರ್‌ಸಿಬಿ ಅಭ್ಯಾಸ ಪಂದ್ಯ ರದ್ದು..! ನಾಲ್ವರು ಉಗ್ರರ ಅರೆಸ್ಟ್

    Published

    on

    ಬೆಂಗಳೂರು: ಇಂದು(ಮೇ.22) ರಾಜಸ್ಥಾನ್ ರಾಯಲ್ಸ್ ಹಾಗೂ ಬೆಂಗಳೂರು ಚಾಲೆಂಜರ್ಸ್ ನಡುವೆ ಇಂದು ಎಲಿಮಿನೇಟೆಡ್ ಪಂದ್ಯ ನಡೆಯಲಿದೆ. ಹಾಗಾಗಿ ನಿನ್ನೆ ಆರ್‌ಸಿಬಿ ಅಭ್ಯಾಸ ಪಂದ್ಯವನ್ನು ಆಡಬೇಕಿತ್ತು. ಆದರೆ ಅದು ರದ್ದಾಗಿದ್ದು ಇದಕ್ಕೆ ಮೂಲ ಕಾರಣ ಈಗ ಹೊರ ಬಿದ್ದಿದೆ.

    virat kohli

    ಆರ್​ಸಿಬಿ ಸುದ್ದಿಗೋಷ್ಠಿಯನ್ನ ರದ್ದುಗೊಳಿಸಿದೆ ಎಂಬ ಮಾತುಗಳು ಕೇಳಿಬಂದಿದೆ. ಜೊತೆಗೆ ಆರ್​ಸಿಬಿ ಅಭ್ಯಾಸವನ್ನು ರದ್ದು ಗೊಳಿಸಿದೆ ಎನ್ನಲಾಗುತ್ತಿದೆ. ಮಂಗಳವಾರ ಆರ್‌ಸಿಬಿ ಗುಜರಾಜ್ ಮೈದಾನದಲ್ಲಿ ಅಭ್ಯಾಸ ನಡೆಸಬೇಕಿತ್ತು. ಆದರೆ ಯಾವುದೇ ಕಾರಣವನ್ನು ಬಿಚ್ಚಿಡದೆ ಆರ್​ಸಿಬಿ ಅಭ್ಯಾಸವನ್ನು ರದ್ದುಗೊಳಿಸಿತು. ಇನ್ನು ರಾಜಸ್ಥಾನ್​ ತಂಡ ಅಭ್ಯಾಸವನ್ನು ನಡೆಸಿದೆ. ಇದಕ್ಕೆ ಮೂಲ ಕಾರಣ ವಿರಾಟ್​ ಕೊಹ್ಲಿಗೆ ಬಂದಿದ್ದ ಭದ್ರತಾ ಬೆದರಿಕೆ. ವಿರಾಟ್‌ ಕೊಹ್ಲಿಗೆ ಭದ್ರತಾ ಬೆದರಿಕೆ ಇರುವ ಕಾರಣ ಆರ್​ಸಿಬಿ ಸುದ್ದಿಗೋಷ್ಟಿ ನಡೆಸಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

    ನಾಲ್ವರು ಉಗ್ರರ ಬಂಧನ..!

    ಗುಜರಾತ್​ ಪೊಲೀಸರು ಸೋಮವಾರದಂದು ಭಯೋತ್ಪಾದಕರು ಎಂಬ ಶಂಕೆ ಮೇಲೆ ನಾಲ್ವರನ್ನು ಅರೆಸ್ಟ್​ ಮಾಡಿದ್ದರು. ಗುಜರಾತ್​​ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿದರು. ವಿಚಾರಣೆ ನಡೆಸಿದ ಬಳಿಕ ಬಂಧಿತರ ಅಡುಗು ತಾಣವನ್ನು ಪತ್ತೆಹಚ್ಚಿದ್ದಾರೆ. ಈ ವೇಳೆ ವಿಡಿಯೋಗಳು, ಪಠ್ಯ ಸಂದೇಶಗಳು ಹಾಗೂ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಂಡಿದ್ದಾರೆ.

    Read More..; ಪೆನ್ ಡ್ರೈವ್ ಪ್ರಕರಣ : ಪುತ್ರ ಪ್ರಜ್ವಲ್ ಬಗ್ಗೆ ಹಾಸನದಲ್ಲಿ ರೇವಣ್ಣ ಪ್ರತಿಕ್ರಿಯೆ

    ಈ ವಿಚಾರವನ್ನು ರಾಜಸ್ಥಾನ ರಾಯಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ತಿಳಿಸಲಾಗಿತ್ತು. ಅಹಮದಾಬಾದ್‌ಗೆ ವಿರಾಟ್‌ ಕೊಹ್ಲಿ ಬಂದ ನಂತರ ಈ ವಿಚಾರವನ್ನು ತಿಳಿಸಲಾಗಿದೆ. ವಿರಾಟ್‌ ಕೊಹ್ಲಿ ದೇಶದ ಸಂಪತ್ತು ಮತ್ತು ಅವರ ಭದ್ರತೆ ನಮ್ಮ ಅತ್ಯಂತ ಆದ್ಯತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ಹೇಳಿದರು.

    Continue Reading

    LATEST NEWS

    Trending