Connect with us

LATEST NEWS

ಮಂಗಳೂರು ಹೈಟೆಕ್‌ ವೇಶ್ಯಾವಾಟಿಕೆ: ಬಂಧಿತರ ಸಂಖ್ಯೆ 10ಕ್ಕೇರಿಕೆ-ಮಕ್ಕಳ ನಿಗಾಕ್ಕೆ ಪೊಲೀಸ್‌ ಮನವಿ

Published

on

ಮಂಗಳೂರು: ಕೆಲ ದಿನಗಳ ಹಿಂದೆ ಮಂಗಳೂರು ಪೊಲೀಸರು ಭೇದಿಸಿದ್ದ ನಗರದ ಹೈಟೆಕ್ ವೇಶ್ಯಾವಾಟಿಕೆ ಸಂಬಂಧಿಸಿದಂತೆ ಇನ್ನು 10 ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ದಂಧೆಗೆ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಯುವತಿಯರನ್ನು ಬಳಸಿಕೊಳ್ಳುತ್ತಿದ್ದ ಪ್ರಕರಣವನ್ನು ಮಂಗಳೂರು ಪೊಲೀಸ್ ಆಯುಕ್ತರು ಗಂಭೀರವಾಗಿ ತಗೊಂಡು ಕಾರ್ಯಾಚರಣೆ ನಡೆಸಲು ಆದೇಶಿಸಿದ್ದರು.

ಈವರೆಗೆ ಒಟ್ಟು 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ದಾಳಿಯ ವೇಳೆ ಮೂವರು ಆರೋಪಿಗಳನ್ನು ಐಟಿಪಿ ಹಾಗೂ ಪೋಕ್ಸೊ ಕಾಯ್ದೆಯನ್ವಯ ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು.

ಇದೀಗ ಮೂವರು ಗ್ರಾಹಕರು ಹಾಗೂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರು ಸೇರಿ ಏಳು ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

3 ತಿಂಗಳಲ್ಲಿ 6 ಬಾರಿ ಲೈಂಗಿಕ ಕ್ರಿಯೆಗೆ ಬಳಸಿದ್ದ ಧೂರ್ತರು
ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯೋರ್ವಳು ಈ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಕೊಂಡಿರುವುದು ಆಕೆಯ ಕಾಲೇಜಿನ ಮುಖ್ಯಸ್ಥೆಗೆ ತಿಳಿದ ಬಳಿಕ ಈ ಪ್ರಕರಣ ಬಹಿರಂಗಗೊಂಡಿತ್ತು.

ಆರೋಪಿಗಳು ಈಕೆಗೆ ಬೆದರಿಕೆ, ಆಮಿಷಗಳನ್ನೊಡ್ಡಿ ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡಿದ್ದರು. ಆರೋಪಿಗಳು ಈಕೆಯನ್ನು 3 ತಿಂಗಳಲ್ಲಿ ಸುಮಾರು 6 ಬಾರಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾರೆಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಈಗಾಗಲೇ ಈಕೆಯ ಮೇಲೆ ಕೃತ್ಯ ಎಸಗಿರುವ ಪ್ರಕರಣದಲ್ಲಿ ಆರೋಪಿಗಳ ಮೇಲೆ ಪೋಕ್ಸೊ ಹಾಗೂ ಐಟಿಪಿ ಆ್ಯಕ್ಟ್ ಮೇಲೆ ಪ್ರಕರಣ ದಾಖಲಾಗಿತ್ತು.

ಇದೀಗ ಮತ್ತೆ ಹೆಚ್ಚುವರಿ ನಾಲ್ಕು ಪೋಕ್ಸೊ ಪ್ರಕರಣ ದಾಖಲಾಗಿದೆ. ಈವರೆಗೆ ಪ್ರಕರಣದಲ್ಲಿ ವ್ಯವಸ್ಥಿತವಾಗಿ ದಂಧೆ ನಡೆಸುತ್ತಿದ್ದ ಏಳು ಮಂದಿ ಸೇರಿ ಮೂವರು ಗ್ರಾಹಕರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹೈಟೆಕ್ ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ ಆರೋಪಿಗಳು ನಾಲ್ವರು ಯುವತಿಯರನ್ನು ಬಳಸಿಕೊಂಡಿದ್ದರು. ಇನ್ನೂ ಕೆಲ ಅಪ್ರಾಪ್ತ ಯುವತಿಯರು ಈ ದಂಧೆಯಲ್ಲಿ ಸಿಲುಕಿಕೊಂಡಿರುವ ಮಾಹಿತಿಯಿದೆ.

ಇದೀಗ ಈ ಪ್ರಕರಣ ಡಿಸಿಪಿ ಹರಿರಾಂ ಶಂಕರ್ ಮೇಲುಸ್ತುವಾರಿಯಲ್ಲಿ ಸಿಸಿಬಿಗೆ ವರ್ಗಾವಣೆಯಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಅಪ್ರಾಪ್ತೆಯರೇ ಇವರ ಟಾರ್ಗೆಟ್‌
ಮಹಿಳೆಯರೇ ನಡೆಸುತ್ತಿದ್ದ ಈ ಹೈಟೆಕ್ ವೇಶ್ಯವಾಟಿಕೆ ದಂಧೆಗೆ ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಯರೇ ಟಾರ್ಗೆಟ್ ಎನ್ನಲಾಗಿದೆ.

ಆನ್​ಲೈನ್ ಕ್ಲಾಸ್ ಶುರುವಾದ ಬಳಿಕ ಅಪ್ರಾಪ್ತೆಯರನ್ನು ಈ ದಂಧೆಗೆ ಸೇರಿಸುವ ಪ್ರಕ್ರಿಯೆ ಹೆಚ್ಚಾಗಿದೆ.

ಫೋಟೋ, ವಿಡಿಯೋ ಇಟ್ಕೊಂಡು ಮೊಬೈಲ್ ಮೂಲಕ ಅಪ್ರಾಪ್ತೆಯರನ್ನು ದಂಧೆಯ ಪ್ರಮುಖರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ವಿದ್ಯಾರ್ಥಿನಿಯೊಬ್ಬಳ ಬ್ಯಾಂಕ್ ಅಕೌಂಟ್​ಗೆ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ಬಯಲಾಗಿದೆ.

ಮಕ್ಕಳ ಚಲನಾವಲನಗಳ ಮೇಲೆ ಪೋಷಕರು ಹೆಚ್ಚಿನ ಗಮನ ಹರಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

LATEST NEWS

ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ

Published

on

ಮಂಗಳೂರು (ಕೇರಳ) : ಸುಡು ಬಿಸಿಲಿನ ಬೇಗೆಯ ನಡುವೆ ಜನರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆಯ ವೇಳೆ ಕರ್ತವ್ಯದಲ್ಲಿದ್ದ ಸಹಾಯಕ ರಿಟರ್ನಿಂಗ್ ಆಫೀಸರ್ ಒಬ್ಬರು ಹೃದಯಾಘಾ*ತದಿಂದ ಅಸುನೀಗಿದ್ದಾರೆ. ಆದರೆ, ಕೇರಳದಲ್ಲಿ ಚುನಾವಣೆಯಲ್ಲಿ ಮತದಾನ ಮಾಡಿದ ಆರು ಜನ ಮೃ*ತ ಪಟ್ಟಿದ್ದಾರೆ. ಬಿಸಿಲಿನ ತಾಪಕ್ಕೆ ಆರು ಜನ ಸಾ*ವನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯ ವಿವರ :

ಪಾಲಕ್ಕಾಡಿನ ಒಟ್ಟಪಾಲಂ ಚುನಂಗಾಡ್ ಎಂಬಲ್ಲಿ ಮತದಾನ ಮಾಡಿ ಮನೆಗೆ ವಾಪಾಸಾಗಿದ್ದ ವಾಣಿವಿಲಾಸಿನಿ ಮಾಡೆಲ್ ಕಟ್ಟಿಲ್ ಚಂದ್ರು ಎಂಬವರು ಅಸು ನೀಗಿದ್ದಾರೆ. ಇನ್ನು ತೆಂಕುರಿಸ್ಸಿ ವಡಕ್ಕೆತ್ತಾರ ಜೆಎಲ್‌ಪಿ ಶಾಲೆಯಲ್ಲಿ ಮತ ಚಲಾಯಿಸಿದ ವಾಪಾಸಾದ ಮಡಕ್ಕೆತ್ತರ ಮೂಲದ 35 ವರ್ಷದ ಶಬರಿ ಎಂಬವರು ಕೂಡಾ ಇದೇ ರೀತಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇನ್ನು ಪಾಲಕ್ಕಾಡ್ ವಲಯೋಡಿಯಲ್ಲಿ ಮತದಾನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಪುದುಶೇರಿಯ ಕಂದನ್ ಎಂಬವರಿಗೂ ಹೃದಯಾಘಾ*ತವಾಗಿದೆ.


ಇನ್ನು ನಿರಾಮರತ್ತೂರು ಮೂಲದ ಅಲುಕನಕತ್ ಸಿದ್ದಿಕ್ ಮೌಲ್ವಿ ಎಂಬವರು ಮಲಪ್ಪುರಂನ ತಿರೂರಿನಲ್ಲಿ ಮತದಾನ ಮಾಡಿ ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಅವರಿಗೂ ಹೃದಯಾಘಾ*ತವಾಗಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ಕೋಝಿಕ್ಕೋಡ್‌ನ ಕಚ್ಚರಾ ಶಾಲೆಯಲ್ಲಿ ಸಿಪಿಎಂ ಬೂತ್ ಏಜೆಂಟ್ ಆಗಿದ್ದ ನಿವೃತ್ತ ಕೆಸ್‌ಇಬಿ ಇಂಜಿನಿಯರ್ ಅನೀಸ್ ಅಹಮ್ಮದ್ ಎಂಬವರು ಅಲಪ್ಪುಳ ಕಾಕಜಾಮನ್‌ನಲ್ಲಿ ಮತ ಚಲಾಯಿಸಿದ್ದರು. ಅವರಿಗೂ ಹೃದಯಾಘಾ*ತ ಉಂಟಾಗಿ ಸಾ*ವನ್ನಪ್ಪಿದ್ದಾರೆ. ಇನ್ನು, ಸೋಮರಾಜನ್ ಎಂಬ 82 ವರ್ಷದ ಪ್ರಾಯದ ವಯೋ ವೃದ್ಧರೊಬ್ಬರು ಕುಡಾ ಮತ ಚಲಾಯಿಸಿದ ಬಳಿಕ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ : ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

ಆರು ಜನರ ಈ ಹೃದಯಾಘಾ*ತಕ್ಕೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದ್ರೆ ಬಿಸಿಲಿನ ತಾಪಕ್ಕೆ ಇವರು ಮೃ*ತ ಪಟ್ಟಿದ್ದಾರೆ ಎಂದು ಅನುಮಾನಿಸಲಾಗಿದೆ. ಒಟ್ಟಾರೆ ಬಿಸಿಲಿನ ನಡುವೆಯೂ ಬಂದು ತಮ್ಮ ಹಕ್ಕು ಚಲಾಯಿಸಿದ ಇವರು ಇಹಲೋಕ ತಜ್ಯಸಿರುವುದು ನಿಜಕ್ಕೂ ವಿಷಾದನೀಯ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

Published

on

ಚಿತ್ರದುರ್ಗ : ಮತ ಕೇಂದ್ರದಲ್ಲಿ ಚುನಾವಣಾ ಕರ್ತವ್ಯ ನಿರತ ಶಿಕ್ಷಕಿಯೊಬ್ಬರು ಕುಸಿದು ಬಿದ್ದು ಸಾ*ವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ. ಚಳ್ಳಕೆರೆ ನಗರದ ವಿಠಲನಗರದ ನಿವಾಸಿ ಯಶೋದಮ್ಮ ( 55) ಅವರು ಮೃ*ತ ಶಿಕ್ಷಕಿ.


ಯಶೋದಮ್ಮ ಹೊಟ್ಲೆಪನಹಳ್ಳಿ 202 ಮತ ಕೇಂದ್ರದಲ್ಲಿ ಚುನಾವಣಾ ಕರ್ತವ್ಯ ನಿರತರಾಗಿದ್ದರು. ಈ ಸಂದರ್ಭ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತರುವ ವೇಳೆ ದಾರಿ‌ಮಧ್ಯದಲ್ಲಿ ಸಾ*ವನಪ್ಪಿದ್ದಾರೆ. ಮೃ*ತ ಶಿಕ್ಷಕಿ ಯಶೋಧ ಅವರು ಬೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಚುನಾವಣಾ ಕರ್ತವ್ಯ ನಿಮಿತ್ತ ಯಶೋದಮ್ಮ ಹೊಟ್ಲೆಪನಹಳ್ಳಿ ಮತಗಟ್ಟೆಗೆ ಬಂದಿದ್ದರು. ಸಹಾಯಕ ಪೋಲಿಂಗ್‌ ರಿಟರ್ನಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮತದಾನ ಆರಂಭವಾದಾಗ ಆರೋಗ್ಯವಾಗಿದ್ದ ಯಶೋದಮ್ಮ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ರಿಟರ್ನಿಂಗ್ ಆಫೀಸರ್ ಗಮನಕ್ಕೆ ತಂದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆ ತಲುಪುವ ಮೊದಲೇ ಯಶೋದಮ್ಮ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಇವಿಎಂನಲ್ಲಿ ಪ್ರಧಾನಿ ಮೋದಿ ಚಿತ್ರ ಕಾಣದೆ ಕಂಗಾಲಾದ ಮಹಿಳೆ; ಅಧಿಕಾರಿಗಳೊಂದಿಗೆ ಜಗಳ!

ಘಟನೆಯ ಮಾಹಿತಿ ಪಡೆದ ಶಾಸಕ ಟಿ.ರಘುಮೂರ್ತಿ ಹಾಗೂ ಚುನಾವಣಾ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮೃ*ತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Continue Reading

LATEST NEWS

Trending