Connect with us

    LATEST NEWS

    ಎಫರ್ಡೇಬಲ್ ದರದಲ್ಲಿ ಭಾರ್ಗವಿ ಬಿಲ್ಡರ್ಸ್ ನ ‘ಹೈ ಲಿವಿಂಗ್ ಲಕ್ಷುರಿ ಹೋಮ್ಸ್ ಕೈಲಾಸ್ ವಸತಿ ಸಮುಚ್ಛಯದ ಫ್ಲ್ಯಾಟ್ ಗಳು.

    Published

    on

    ಎಫರ್ಡೇಬಲ್ ದರದಲ್ಲಿ ಭಾರ್ಗವಿ ಬಿಲ್ಡರ್ಸ್ ನ ‘ಹೈ ಲಿವಿಂಗ್ ಲಕ್ಷುರಿ ಹೋಮ್ಸ್ ಕೈಲಾಸ್ ವಸತಿ ಸಮುಚ್ಛಯದ ಫ್ಲ್ಯಾಟ್ ಗಳು..!

    High Living Luxury Homes by Bhargavi Builders at Affordable Rates..

    ಮಂಗಳೂರು:  ಕೊಟ್ಟಾರದಲ್ಲಿ ಭಾರ್ಗವಿ ಬಿಲ್ಡರ್ಸ್ ಹಾಗೂ ನಿರ್ಮಾಣ್ ಹೋಮ್ಸ್ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳಲಿರುವ ಬಹು ನಿರೀಕ್ಷೆಯ ಕೈಲಾಸ್ ವಸತಿ ಸಮುಚ್ಚಯಕ್ಕೆ ಫೆ.14ರಂದು ಶಿಲಾನ್ಯಾಸ ನೆರವೇರಲಿದೆ ಎಂದು ನಿರ್ಮಾಣ್ ಹೋಮ್ಸ್‌ನ ಪಾಲುದಾರ ಗುರುದತ್ತ್ ಶೆಣೈ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಿರ್ಮಾಣ್ ಹೋಮ್ ಸಂಸ್ಥೆಯು ‘ಎಫರ್ಡೇಬಲ್ ಲಕ್ಷುರಿ’ ಹಾಗೂ ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯು ‘ಹೈ ಲಿವಿಂಗ್ ಲಕ್ಷುರಿ ಹೋಮ್ಸ್’ ಎಂಬ ಧ್ಯೇಯದೊಂದಿಗೆ ಅತ್ಯಂತ ಸುಸಜ್ಜಿತ ಅಪಾರ್ಟ್‌ಮೆಂಟ್‌ಗಳನ್ನು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ನೀಡಲಿದೆ ಎಂದರು.

    ಕಟ್ಟಡದ ತಾರಸಿಯಲ್ಲಿ ಅತ್ಯಂತ ಸುಸಜ್ಜಿತ ಈಜುಕೊಳವನ್ನು ಸಕಲ ಸುರಕ್ಷಾ ವ್ಯವಸ್ಥೆಗಳೊಂದಿಗೆ ನಿರ್ಮಾಣ ಮಾಡಲಾಗುವುದು. ಇದು ಈ ವಸತಿ ಸಂಕೀರ್ಣದ ಪ್ರಮುಖ ಆಕರ್ಷಣೆಯಾಗಿ ಮೂಡಿಬರಲಿದೆ.

    ಅಪಾರ್ಟ್ ಮೆಂಟ್ 15 ಅಂತಸ್ತುಗಳನ್ನು ಹೊಂದಲಿದ್ದು, 131 ಅಪಾರ್ಟ್‌ಮೆಂಟ್‌ಗಳನ್ನು ವಾಸ್ತು ಪ್ರಕಾರದಲ್ಲಿ ನಿರ್ಮಾಣ ಮಾಡಲಾಗುವುದು.

    ಪ್ರೀ ಲಾಂಚ್ ಆಫರ್ ಆಗಿ 2 ಬಿಎಚ್‌ಕೆ ಫ್ಲಾಟ್ ಕೇವಲ 50 ಲಕ್ಷ ರೂ.ಗೆ ಎಲ್ಲಾ ರೀತಿಯ ಸೌಕರ್ಯಗಳೊಂದಿಗೆ ಲಭ್ಯವಾಗಲಿದೆ ಎಂದು ಅವರು ಹೇಳಿದರು.

    ಶಿಲಾನ್ಯಾಸ ಸಮಾರಂಭದಂದು ಬೆಳಗ್ಗೆ 6:15ಕ್ಕೆ ಭೂಮಿ ಪೂಜೆ ನಡೆಯಲಿದ್ದು, 9 ಗಂಟೆಗೆ ಬ್ರೋಶರ್ ಅನಾವರಣಗೊಳ್ಳಲಿದೆ. ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ರವೀಂದ್ರ ಪೈ ಶಿಲಾನ್ಯಾಸ ನೆರವೇರಿಸಲಿದ್ದಾರೆ.

    ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ದೇರೆಬೈಲ್ ದಕ್ಷಿಣದ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಶಶಿಧರ ಹೆಗ್ಡೆ, ದೇರೆಬೈಲ್ ಪೂರ್ವದ ಕಾರ್ಪೊರೇಟರ್ ರಂಜಿನಿ ಎಲ್. ಕೋಟ್ಯಾನ್, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ, ಕೈಲಾಶ್ ವಸತಿ ಸಮುಚ್ಚಯದ ಬ್ರಾಂಡ್ ಅಂಬಾಸಿಡರ್ ಹಾಗೂ ತುಳು ಚಿತ್ರರಂಗದ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಭಾಗವಹಿಸಲಿದ್ದಾರೆ ಎಂದು ಭಾರ್ಗವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ನ ಭಾಸ್ಕರ್ ಗಡಿಯಾರ್ ಮಾಹಿತಿ ನೀಡಿದರು.

    ಒಂದು ಎಕರೆ 9 ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗುವ ಕೈಲಾಶ್ ವಸತಿ ಸಮುಚ್ಚಯದಲ್ಲಿ ಉನ್ನತ ಜೀವನ ಶೈಲಿಗೆ ಪೂರಕವಾದ ಲಕ್ಷುರಿ ಅಪಾರ್ಟ್‌ಮೆಂಟ್‌ಗಳು 36 ತಿಂಗಳಲ್ಲಿ ನಿರ್ಮಾಣಗೊಂಡು ಡಿಸೆಂಬರ್ 2023ರ ವೇಳೆಗೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಭೂ ಮಾಲಕರು ಹಾಗೂ ಯೋಜನೆಯ ಸಹ ಪ್ರಾಯೋಜಕ ಶ್ರೀವಸ್ತ ಕೊಜಪಾಡಿ ಮಾಹಿತಿ ನೀಡಿದರು.

    ಈವರೆಗೆ ಐದು ವಸತಿ ಯೋಜನೆಗಳು ಮತ್ತು ವಾಣಿಜ್ಯ ಯೋಜನೆಯನ್ನು ಕ್ಲಪ್ತ ಸಮಯಕ್ಕೆ ಪೂರ್ಣಗೊಳಿಸಿರುವ ಸಂಸ್ಥೆಯು ಸದ್ಯ ನಾಲ್ಕು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಕೈಲಾಶ್ ಅಪಾರ್ಟ್‌ಮೆಂಟ್‌ನ ಬುಕ್ಕಿಂಗ್ ಗಾಗಿ ಗ್ರಾಹಕರು ನಗರದ ಕಾಪಿಕಾಡ್‌ನ ಸುಪ್ರಭಾತ್ ಬಿಲ್ಡಿಂಗ್‌ನಲ್ಲಿರುವ ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು.

    ಹೆಚ್ಚಿನ ಮಾಹಿತಿಗಾಗಿ .www.nirmaanhomes.com</a>ಗೆ ಲಾಗಾನ್ ಮಾಡಬಹುದು ಅಥವಾ 9611730555/7090933900 ಗೆ ಕರೆ ಮಾಡಬಹುದು.

    Baindooru

    ಪತಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನು ಕೊಂ*ದ ಪಾಪಿ ತಾಯಿ!

    Published

    on

    ಮಂಗಳೂರು/ಬೆಂಗಳೂರು : ರಾಜ್ಯವೇ ಬೆಚ್ಚಿ ಬೀಳುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಕ್ರೂ*ರಿ ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮಗಳನ್ನು ಕೊಂ*ದಿರುವ ಅಮಾನವೀಯ ಘಟನೆ ನಡೆದಿದೆ. ಅಲ್ಲದೇ ಬಳಿಕ ಆಕೆ ಆತ್ಮಹ*ತ್ಯೆಗೂ ಯತ್ನಿಸಿದ್ದಾಳೆ .

    ಎಲ್ಲವೂ ಚೆನ್ನಾಗಿತ್ತು…ಅನುಮಾನ ಶುರುವಾಯ್ತು :

    ಆ ಕುಟುಂಬ ಕಳೆದ ತಿಂಗಳಷ್ಟೇ ಜಾರ್ಖಂಡ್ ನಿಂದ ಬಂದು ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ವಾಸವಾಗಿತ್ತು.  ಪತಿ ಸುನೀಲ್ ಸಾಹೋ, ಪತ್ನಿ ಮಮತಾ ಸಾಹೋ, ಮಕ್ಕಳಾದ ಶಂಭು ಸಾಹೋ, ಶಿಯಾ ಸಾಹೋ…ಪುಟ್ಟ ಸಂಸಾರ…ಸಣ್ಣದೊಂದು ಬಾಡಿಗೆ ಮನೆಯಲ್ಲಿ ವಾಸ…ಆಟೋ ಚಾಲಕನಾಗಿ ದುಡಿಯುತ್ತಿದ್ದ ಸುನೀಲ್ ಸಾಹೋ..ಹೀಗೆ ಸಂಸಾರ ಸಾಗುತ್ತಿತ್ತು. ಎಲ್ಲವೂ ಸರಿಯಾಗಿತ್ತು. ಅದ್ಯಾವಾಗ ಗಂಡನ ಬಗ್ಗೆ ಅ*ನೈತಿಕ ಸಂಬಂಧದ ಅನುಮಾನ ಹುಟ್ಟಿಕೊಂತೋ ಎಲ್ಲವೂ ಎಕ್ಕುಟ್ಹೋಗಿತ್ತು. ಪತಿ ಬೇರೊಂದು ಯುವತಿಯೊಂದಿಗೆ ಮಾತಾಡುತ್ತಿರುವುದನ್ನು ಮಮತಾ ಕೇಳಿಸಿಕೊಂಡಿದ್ದಳಂತೆ. ಇದೇ ದಂಪತಿ ನಡುವೆ ನಿತ್ಯ ಜಗಳಕ್ಕೆ ಬುನಾದಿ ಹಾಕಿತ್ತಂತೆ. ನಿನ್ನೆಯೂ(ನ.21) ಜಗಳ ಮುಂದುವರಿದಾಗ ಸುನೀಲ್ ಆಟೋ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.

    ಗಂಡ ಹೊರಹೋದ ಮೇಲೆ ಬಾಗಿಲು ಹಾಕಿ, ಇತ್ತ ಮಕ್ಕಳಿಬ್ಬರನ್ನೂ ಕತ್ತು ಹಿಸುಕಿ ಮಮತಾ ಕೊಂ*ದಿದ್ದಾಳೆ. ಬಳಿಕ ತಾನೂ ಚಾ*ಕುವಿನಿಂದ ಕತ್ತು ಕೊ*ಯ್ದುಕೊಂಡಿದ್ದಾಳೆ. ಎಲ್ಲ ಆದ ಮೇಲೆ ತಪ್ಪಿನ ಅರಿವಾಗಿ ಪತಿಗೆ ಸೆಲ್ಫಿ ಫೋಟೋ ಕಳುಹಿಸಿದ್ದಾಳೆ. ಅಷ್ಟೇ ಅಲ್ಲ,  ‘ಗಲತ್ ಹೋಗಯಾ…ಮಾಫ್ ಕರೋ’ ಅಂತ ಮೆಸೇಜ್ ಬೇರೆ ಹಾಕಿದ್ದಾಳೆ.

    ಇದನ್ನೂ ಓದಿ : ತಮಾಷೆಗಾಗಿ ಕ*ಪಾಳಮೋಕ್ಷ; ಸೋದರ ಮಾವನಿಂದ 3 ವರ್ಷದ ಮಗುವಿನ ಜೀ*ವಾಂತ್ಯ

    ಮೆಸೇಜ್ ನೋಡಿದ ತಕ್ಷಣ ಮನೆಯತ್ತ ದೌಡಾಯಿಸಿದ ಪತಿ ಬಾಗಿಲು ಒಡೆದು ಒಳ ಹೋಗಿ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದಾನೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಮಮತಾ ಸಾಹೋ ಪ್ರಾ*ಣಾ*ಪಾಯದಿಂದ ಪಾರಾಗಿದ್ದಾಳೆ. ಆದರೆ, ಏನೂ ಅರಿಯದ ಕಂದಮ್ಮಗಳು ಪತಿ – ಪತ್ನಿ ಜಗಳಕ್ಕೆ ಬ*ಲಿಯಾಗಿವೆ.

    Continue Reading

    LATEST NEWS

    ನೀರಸ ಪ್ರದರ್ಶನ ಮುಂದುವರಿಸಿದ ಭಾರತ: ವಿವದಾತ್ಮಕ ತೀರ್ಪಿಗೆ ರಾಹುಲ್ ಬಲಿ !

    Published

    on

    ಮಂಗಳೂರು/ಆಸ್ಟ್ರೇಲಿಯಾ: ಪರ್ತ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ನಲ್ಲಿ ಪ್ರವಾಸಿ ಭಾರತ ತಂಡ ತನ್ನ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದೆ.


    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಕೆ ಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ ಸ್ವಲ್ಪ ಹೊತ್ತು ಕ್ರೀಸ್ ನಲ್ಲಿ ನಿಂತಿದ್ದು ಬಿಟ್ಟರೆ, ಉಳಿದವರಿಂದ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ನೀಡಿದ್ದ ಅದೇ ನೀರಸ ಪ್ರದರ್ಶನ ಮುಂದುವರಿಯಿತು.
    ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಜೊತೆಯಾಟ ಮುಂದುವರಿಸಲು ಸಾಧ್ಯವಾಗಲಿಲ್ಲ. 5 ರನ್ ಅಷ್ಟೇ ಜೊತೆಯಾಟವಾಡಿದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಜೋಡಿ, ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರ ಮೂಲಕ ಆರಂಭಿಕ ನಿರಾಸೆ ಮೂಡಿಸಿದರು. ನಂತರ ಬಂದ ದೇವದತ್ ಪಡಿಕ್ಕಲ್, ಜೋಶ್ ಹೇಜಲ್ ವುಡ್ ಮಾರಕ ದಾಳಿಗೆ ಖಾತೆ ತೆರೆಯಲು ಕೂಡ ಸಾಧ್ಯವಾಗದೇ ಪೆವಿಲಿಯನ್ ಗೆ ಮರಳಿದರು.

    ಇದನ್ನೂ ಓದಿ:ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್‌..! 6 ಕೋಟಿ ಮೌಲ್ಯದ ಡ್ರ*ಗ್ಸ್‌ ಜಪ್ತಿ..!
    ಅಪಾರ ನಿರೀಕ್ಷೆಗಳ ಸಾಗರವೇ ಹೊತ್ತು ಬ್ಯಾಟಿಂಗ್ ಗೆ ಇಳಿದಿದ್ದ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದ್ದಾರೆ, ಕೇವಲ 5 ರನ್ ಗಳಸಿ ಔಟಾದರು. ನಂತರ ಬಂದ ಪಂತ್ ಆಟ ಲಯಕ್ಕೆ ತಂದರಾದರೂ ಇವರಿಗೆ ಯಾರೂ ಕೂಡ ಜೋಡಿಯಾಗಿ ನಿಲ್ಲಲೇ ಇಲ್ಲ. ಧ್ರುವ್ ಜುರೆಲ್ 11 ರನ್ ಗಳಿಗೆ ಔಟಾದರೆ, ವಾಷಿಂಗ್ಟನ್ ಸುಂದರ್ ಕೂಡ ನಾಲ್ಕು ರನ್ ಗೆ ಸುಸ್ತಾದರು. ಆದರೆ 7 ನೇ ವಿಕೆಟ್ ಗೆ ಪಂತ್‌ ಮತ್ತು ನಿತೀಶ್ 48 ರನ್ ಗಳ ಜೊತೆಯಾಟ ನೀಡಿದರು.
    ನಂತರ ಬಂದ ಹರ್ಷಿತ್ ರಾಣಾ 7 ರನ್ ಗಳಿಸಿ ಔಟಾದರು. ಇನ್ನೂ ಬುಮ್ರಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿಯಿತು.

    ಅಂಪೈರ್ ತೀರ್ಪು ವಿರುದ್ದ ರಾಹುಲ್ ಅಸಮಾಧಾನ:

    ಮಿಚೆಲ್ ಸ್ಟಾರ್ಕ್ ಎಸೆತವನ್ನು ರಾಹುಲ್ ಹೊಡೆಯಲು ಮುಂದಾದಾಗ, ಅದು ರಾಹುಲ್ ಅವರ ಬ್ಯಾಟ್ ನ ಸಮೀಪ ಹಾದು ಹೋಗಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕ್ಯಾಚ್ ಹಿಡಿದರು. ತಕ್ಷಣವೇ ಫೀಲ್ಡ್ ಅಂಪೈರ್ ಬಳಿ ಮನವಿ ಮಾಡಿದರು. ನಂತರ ಆಸೀಸ್ ತಂಡ ಥರ್ಡ್ ಅಂಪೈರ್ ಮೊರೆ ಹೋದರು. ಇದನ್ನು ಪುರಸ್ಕರಿಸಿದ ಮೂರನೇ ಅಂಪೈರ್ ರಾಹುಲ್ ಔಟ್ ಎಂದು ಘೋಷಿಸಿದರು.
    ಸ್ಟಾರ್ಕ್ ಎಸೆದ ಚೆಂಡು ರಾಹುಲ್ ಬ್ಯಾಟ್ ತಾಗಿದೆಯೇ ಅಥವಾ ಪ್ಯಾಡ್ ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ. ರೀಪ್ಲೇಯಲ್ಲಿ ವಿವಿಧ ಆಯಾಮಗಳಿಂದ ಪರಿಶೀಲಿಸಿದ ನಂತರ, ಸ್ನಿಕ್ಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ನೀಡಲಾಯಿತು. ಇದರಿಂದ ರಾಹುಲ್ ಅಸಮಾಧಾನದಿಂದಲೇ ಹೊರ ನಡೆದರು.

    Continue Reading

    Baindooru

    ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್‌..! 6 ಕೋಟಿ ಮೌಲ್ಯದ ಡ್ರ*ಗ್ಸ್‌ ಜಪ್ತಿ..!

    Published

    on

    ಬೆಂಗಳೂರು : ಮಾದಕ ವಸ್ತು ಮಾರಾಟ, ಸಾಗಾಟ ಜಾಲದ ಮೇಲೆ ಕಣ್ಣಿಟ್ಟಿರುವ ಸಿಸಿಬಿ ಅಧಿಕಾರಿಗಳು ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಮಾ*ದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಹಾಗೂ ಸಿಸಿಬಿ  ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ  ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಹೊಸ ವರ್ಷಕ್ಕೆ ಗಾಂ*ಜಾ ಸಪ್ಲೈ :
    ಹೊಸ ವರ್ಷಾಚರಣೆಯ ಸಲುವಾಗಿ ಕ್ವಿಂಟಾಲ್ ಗಟ್ಟಲೆ ಗಾಂ*ಜಾ ಸಪ್ಲೈ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಪೆಡ್ಲರ್ ಅಚ್ಚು ಹಾಗೂ ಜಮೀರ್, ರೇಷ್ಮಾ ದಂಪತಿ ಬಂಧಿತರು. ಆರೋಪಿಗಳಿಂದ 3.25 ಕೋಟಿ ರೂಪಾಯಿ ಮೌಲ್ಯದ 318 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

    ಮೂವರು ಆರೋಪಿಗಳು ಒಡಿಶಾ ಮತ್ತು ಆಂಧ್ರದಲ್ಲಿ ಗಾಂ*ಜಾ ಸಂಗ್ರಹಿಸಿದ್ದರು. ಹೊಸ ವರ್ಷಾಚರಣೆ ವೇಳೆ ಬೆಂಗಳೂರು, ಕೇರಳದಲ್ಲಿ ಮಾರಾಟ ಮಾಡಲು ಯೋಜಿಸಿದ್ದರು. ಜಮೀರ್ ಮತ್ತು ರೇಷ್ಮಾ ದಂಪತಿ ಬೆಂಗಳೂರಿನಲ್ಲಿ, ಪೆಡ್ಲರ್ ಅಚ್ಚು ಕೇರಳದಲ್ಲಿ ಗಾಂ*ಜಾ ಮಾರಲು ನಿರ್ಧರಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

    ಬೆಂಗಳೂರು ಮತ್ತು ಕೇರಳಕ್ಕೆ ಸಾಗಿಸಲು ಆರೋಪಿಗಳು ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆಗೆ ಪಡೆದಿದ್ದರು. ಬಳಿಕ ಬೆಡ್ ಶೀಟ್ ನಲ್ಲಿ ಗಾಂಜಾ ತುಂಬಿ ಕಾರಿನಲ್ಲಿ ಬೆಂಗಳೂರಿಗೆ ತರುತ್ತಿದ್ದರು . ಗಾಂಜಾ ತರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಠಾಣೆ ಪೊಲೀಸರು ಹೆಚ್ ಬಿ ಆರ್ ಲೇಔಟ್ ಬಳಿ ಕಾರನ್ನು ಅಡ್ಡ ಹಾಕಿದ್ದಾರೆ. ಪೊಲೀಸರು ಪರಿಶೀಲನೆ ನಡೆಸುವಾಗ ಕಾರಿನಲ್ಲಿ 3 ಕೋಟಿ ರೂ. ಮೌಲ್ಯದ ಗಾಂ*ಜಾ ಪತ್ತೆಯಾಗಿದೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ ಪೆಡ್ಲರ್ ಅಚ್ಚು ಕೇರಳ ಪೊಲೀಸರಿಗೆ ಬೇಕಾದ ಮೋಸ್ಟ್ ವಾಂಟೆಡ್  ಆರೋಪಿ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಆತನ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

    ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ :

    ಬೆಂಗಳೂರಿನಲ್ಲಿ ವಿದೇಶಿ ಡ್ರ*ಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಬಂಧಿತರ ಬಳಿಯಿದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಡ್ರಗ್ಸ್ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾ*ಳಿ ನಡೆಸಿದ ಸಿಸಿಬಿ ಅಧಿಕಾರಿಗಳು,  1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ : ಏನಾಶ್ಚರ್ಯ ? ಈ ಡಯಟ್​ನಿಂದ ಪತ್ನಿಯ 4ನೇ ಸ್ಟೇಜ್ ಸ್ತನ ಕ್ಯಾನ್ಸರ್ ಮಾಯ !!
    ಆರೋಪಿಗಳು ಮುಂಬೈನಿಂದ ಬೆಂಗಳೂರಿಗೆ ಡ್ರ*ಗ್ಸ್ ತರಿಸುತ್ತಿದ್ದರು. ಹೊಸ ವರ್ಷಾಚರಣೆಯಂದು ಬೆಂಗಳೂರಿನಲ್ಲಿ ಮಾರಲು ಸಜ್ಜಾಗಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ, ಈ ವಿದೇಶಿ ಪೆಡ್ಲರ್ ಗಳು ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದರು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.

    Continue Reading

    LATEST NEWS

    Trending