Connect with us

    LATEST NEWS

    ಹೆಲಿಕಾಪ್ಟರ್‌ ದುರಂತದಲ್ಲಿ ಬದುಕುಳಿದಿದ್ದ ಕ್ಯಾ. ವರುಣ್‌ ಸಿಂಗ್‌ ಕೊನೆಯುಸಿರು

    Published

    on

    ನವದೆಹಲಿ: ಹೆಲಿಕಾಪ್ಟರ್‌ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂ‍ಪ್ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.


    ‘ಡಿಸೆಂಬರ್‌ 8ರ ಹೆಲಿಕಾಪ್ಟರ್‌ ದುರಂತದಲ್ಲಿ ಗಾಯಗೊಂಡು ಬದುಕುಳಿದಿದ್ದ ಶೌರ್ಯವಂತ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರು ನಮ್ಮನ್ನು ಅಗಲಿದ್ದಾರೆ.

    ಇಂದು ಬೆಳಿಗ್ಗೆ ಅವರು ನಿಧನರಾದರು… ‘ ಎಂದು ಭಾರತೀಯ ವಾಯು ಪಡೆ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ.

    ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್‌ ದುರಂತದಲ್ಲಿ ವರುಣ್ ಸಿಂಗ್‌ ಗಂಭೀರವಾಗಿ ಗಾಯಗೊಂಡಿದ್ದರು.

    ಕಳೆದ ಗುರುವಾರ ತಮಿಳುನಾಡಿನ ವೆಲ್ಲಿಂಗ್ಟನ್‌ ಮಿಲಿಟರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವರುಣ್‌ ಅವರನ್ನು ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ಕರೆತರಲಾಗಿತ್ತು.

    ಹೆಲಿಕಾಪ್ಟರ್‌ ಅವಘಡದಲ್ಲಿ ಸಿಡಿಎಸ್‌ ಮುಖ್ಯಸ್ಥ ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ಸೇರಿ 13 ಮಂದಿ ಮೃತಪಟ್ಟಿದ್ದರು.

    LATEST NEWS

    ಖತರ್ನಾಕ್‌ ಕಿಲಾಡಿ ದಂಪತಿ ಸೆರೆ.. ನಿಟ್ಟುಸಿರು ಬಿಟ್ಟ ಪೊಲೀಸರು..! ಅಷ್ಟಕ್ಕೂ ದಂಪತಿ ಮಾಡಿದ್ದಾದರೂ ಏನು?

    Published

    on

    ದೆಹಲಿ/ಮಂಗಳೂರು: ಹನ್ನೊಂದು ವರ್ಷಗಳಿಂದ ಪೊಲೀಸರು ಹಾಗೂ ಸಿಬಿಐ ತಂಡಗಳ ಬೆವರಿಳಿಸಿದ ಖತರ್ನಾಕ್‌ ದಂಪತಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ದಂಪತಿ ವಿರುದ್ಧ ಸಿಬಿಐ ಸೇರಿದಂತೆ ದೆಹಲಿ, ಹರಿಯಾಣ ಮತ್ತು ರಾಜಸ್ಥಾನದ ವಿವಿಧ ಪೊಲೀಸ್‌ ಠಾಣೆಯಲ್ಲಿ 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು.

    criminals

    ಹನ್ನೊಂದು ವರ್ಷದಿಂದ ಬ್ಯಾಂಕ್‌ಗಳಿಂದ, ವಾಹನ ಸಾಲ , ಗೃಹ ಸಾಲ ಹಾಗೂ ಇತರ ಸಾಲಗಳ ರೂಪದಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದರು. ಆದ್ರೆ ಪೊಲೀಸರ ಕೈಗೆ ಸಿಗದಂತೆ ಮೂರು ರಾಜ್ಯಗಳಲ್ಲಿ ಓಡಾಡಿಕೊಂಡು ತಲೆಮರೆಸಿಕೊಂಡಿದ್ದರು. ಹೀಗಾಗಿ ಆರೋಪಿಗಳ ಪತ್ತೆ ಕಾರ್ಯವನ್ನು ಸಿಬಿಐಗೂ ಒಪ್ಪಿಸಲಾಗಿತ್ತು. ಆರೋಪಿಗಳಾದ ದೀಪಕ್‌ ಗೋಯಲ್‌ ಹಾಗೂ ಆತನ ಪತ್ನಿ ಚಂಚಲ್‌ ಗೋಯಲ್‌ ಸದ್ಯ ದೆಹಲಿ ಉತ್ತರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಎರಡು ವರ್ಷಗಳ ಹಿಂದೆ ದೆಹಲಿಯ ತಿಮಾರ್‌ಪುರ ಪೊಲೀಸ್ ಠಾಣೆಯಲ್ಲಿ ಇವರ ಕೃತ್ಯದ ಬಗ್ಗೆ ದೂರು ದಾಖಲಾಗಿತ್ತು. ಇವರ ವಿರುದ್ಧ ಸಿಬಿಐನಲ್ಲಿ ಒಂದು ಪ್ರಕರಣ ಮತ್ತು ದೆಹಲಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ.

    ನಕಲಿ ದಾಖಲೆಗಳ ಮೇಲೆ ಬ್ಯಾಂಕ್‌ನಿಂದ ಮೂರು ಕಾರುಗಳ ಸಾಲ ಪಡೆದಿದ್ದಾರೆ. ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ವಾಹನ ಸಾಲ ಹಾಗೂ ಗೃಹ ಸಾಲ ಪಡೆದುಕೊಂಡು ದಂಪತಿ ವಂಚಿಸುತ್ತಿದ್ದರು. ಬ್ಯಾಂಕ್‌ ಖಾತೆ ತೆರೆಯುವಾಗಲೂ ನಕಲಿ ದಾಖಲೆ ನೀಡಿದ್ದ ಕಾರಣ ಬ್ಯಾಂಕ್‌ಗಳಲ್ಲೂ ಇವರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ಆದ್ರೆ ಆರೋಪಿಗಳು ಎರಡು ವರ್ಷದ ಹಿಂದೆ ಮಾಡಿದ್ದ ವಂಚನೆ ಪ್ರಕರಣದ ಬೆನ್ನು ಬಿದ್ದ ದೆಹಲಿ ಪೊಲೀಸರು ಖತರ್ನಾಕ್ ದಂಪತಿಯನ್ನು ಬಂಧಿಸಿದೆ.

    Read More..; “ಕಸ ಎಸೆದವರ ತಿಥಿ ಮಾಡಲಾಗುವುದು”..! ವೈರಲ್ ಆಯ್ತು ತುಳು ಬ್ಯಾನರ್‌..!

    crminals

    2022 ರಲ್ಲಿ ದೆಹಲಿಯಲ್ಲಿ ಈ ಖತರ್ನಾಕ್‌ ದಂಪತಿ 18.25 ಲಕ್ಷ ಮೌಲ್ಯದ ಕಾರು ಖರೀದಿ ಮಾಡಿದ್ದರು. ಇಲ್ಲೂ ವಂಚನೆ ಮಾಡಲಾಗಿತ್ತಾದ್ರೂ ಆರೋಪಿಗಳ ಬೆನ್ನು ಬಿದ್ದ ಸಿಬಿಐ ಹಾಗೂ ಪೊಲೀಸರು ಹಣ ವರ್ಗಾವಣೆಯ ಡಿಟೈಲ್‌ ಪಡೆದುಕೊಂಡು ಆರೋಪಿಗಳನ್ನು ಬಂಧಿಸಿದೆ. ಈ ಖತರ್ನಾಕ್ ಕಿಲಾಡಿ ದಂಪತಿಯ ಬಂಧನದಿಂದ ಇದೀಗ ಸಿಬಿಐ ಹಾಗೂ ಮೂರು ರಾಜ್ಯಗಳ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

    Continue Reading

    BELTHANGADY

    ಶಿರಾಡಿಘಾಟ್‌ನಲ್ಲಿ ಭೀಕರ ರಸ್ತೆ ಅಪ*ಘಾತ..! ತಾಯಿ ಮಗ ದಾರುಣ ಸಾ*ವು

    Published

    on

    ಬೆಳ್ತಂಗಡಿ:  ಶಿರಾಡಿಘಾಟ್‌ನಲ್ಲಿ ಇನೋವಾ ಕಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ತಾಯಿ ಮಗ ದಾರಣವಾಗಿ ಸಾವಿಗೀಡಾದ ದುರ್ಘಟನೆ ಮೇ.21ರಂದು ಬೆಳಿಗ್ಗೆ ನಡೆದಿದೆ.

    charmadi

    ಕಾರು ಅಪಘಾತದಲ್ಲಿ ಬಂಟ್ವಾಳ ಮೂಲದ ತಾಯಿ ಹಾಗೂ ಮಗ ಸ್ಥಳದಲ್ಲೇ ಅಸುನೀಗಿದ್ದಾರೆ. ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರಿನಲ್ಲಿ ಒಂದೇ ಮನೆಯವರು ಪ್ರಯಾಣ ಮಾಡುತ್ತಿದ್ದರು. ಸಕಲೇಶಪುರ ವ್ಯಾಪ್ತಿಯಲ್ಲಿ ಘಾಟ್‌ನ ತಿರುವಿನಲ್ಲಿ ವಾಹನ ಚಲಾಯಿಸುತ್ತಿದ್ದ ಮೊಹಮ್ಮದ್ ಶಫೀಕ್‌ ಅವರಿಗೆ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ.

    Read More..; ಟಿಸಿ ಕೊಟ್ಟಿಲ್ಲ ಎಂದು ಬೇಸರಗೊಂಡು ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿ ಆತ್ಮಹ*ತ್ಯೆ

    20 ವರ್ಷ ಪ್ರಾಯದ ಮೊಹಮ್ಮದ್ ಶಫೀಕ್ ಹಾಗೂ 50 ವರ್ಷ ಪ್ರಾಯದ ಆವರ ತಾಯಿ ಸಪೀಯಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂಜಾವಿನಲ್ಲಿ ಈ ಅಪಘಾತ ನಡೆದಿದ್ದು, ತಕ್ಷಣ ಹಿಂಬದಿ ವಾಹನಗಳಲ್ಲಿ ಬಂದವರು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರಿಬ್ಬರೂ ಬಂಟ್ವಾಳ ತಾಲೂಕಿನ ಬೊಂಡಾಲದ ನಿವಾಸಿಗಳಾಗಿದ್ದು, ಶಬ್ಬಿರ್ ಎಂಬರ ಪತ್ನಿ ಹಾಗೂ ಮಗ ಮೃತಪಟ್ಟವರೆಂದು ತಿಳಿದು ಬಂದಿದೆ. ಸಕಲೇಶಪುರದ ಮಾರನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    “ಕಸ ಎಸೆದವರ ತಿಥಿ ಮಾಡಲಾಗುವುದು”..! ವೈರಲ್ ಆಯ್ತು ತುಳು ಬ್ಯಾನರ್‌..!

    Published

    on

    ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರಿಗೆ ಹಾಕಿದ ಬ್ಯಾನರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    kasa banner

    Read More..; ಕದ್ದ ಫೋನ್ ಸ್ವಿಚ್ ಆಫ್ ಆಗಿದ್ರೂ ಸುಲಭದಲ್ಲಿ ಕಂಡುಹಿಡಿಯಬಹುದು.. ಹೇಗೆ ಗೊತ್ತಾ?

    ತುಳುವಿನಲ್ಲಿ ಬರೆದಿರುವ ಈ ಬ್ಯಾನರ್ ಕಸ ಹಾಕುವವರು ಹಿಂದೆ ಮುಂದೆ ನೋಡುವಂತೆ ಮಾಡಿದ್ದು, ಬಹುತೇಕರ ಇಲ್ಲಿ ಕಸ ಎಸೆಯೋದನ್ನೆ ನಿಲ್ಲಿಸಿದ್ದಾರೆ. ಬ್ಯಾನರ್ ನಲ್ಲಿ ನಿನ್ನನ್ನು ಸುಡಲು ಇನ್ನಷ್ಟು ಕಸ ಬೇಕಾಗಿದೆ, ಇನ್ನಷ್ಟು ಕಸ ತಂದು ಹಾಕು ಇಲ್ಲೇ ಕಸದೊಂದಿಗೆ ನಿನ್ನ ಪಿಂಡ ಪ್ರದಾನ ಮಾಡುತ್ತೇವೆ ಅಂತ ತುಳು ಭಾಷೆಯಲ್ಲಿ ಬರೆಯಲಾಗಿದೆ. ಇದು ಎಲ್ಲಿ ಯಾರು ಬರೆದಿದ್ದಾರೆ ಅನ್ನೋದು ಗೊತ್ತಿಲ್ಲ ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಇದನ್ನ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ಇನ್ನು ಈ ರೀಲ್ಸ್ ಅನ್ನು 33 ಸಾವಿರಕ್ಕಿಂತಲೂ ಅಧಿಕ ಮಂದಿ ನೋಡಿ ತಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿದ್ದಾರೆ. ಇನ್ನೂ ಒಂದು ವಿಶೇಷ ಅಂದರೆ ಈ ಬ್ಯಾನರನ್ನು ಕಸ ಬಿಸಾಡುವ ದಿವ್ಯ ಆತ್ಮಗಳಿಗೆ ಅರ್ಪಣೆ ಮಾಡಲಾಗಿದೆ.

    Continue Reading

    LATEST NEWS

    Trending