Connect with us

    LATEST NEWS

    ಹೇ*ಯ ಕೃ*ತ್ಯ : ಗೆಳೆಯನ ಮೇಲೆ ಹ*ಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕ ಅ*ತ್ಯಾಚಾರ

    Published

    on

    ಮಂಗಳೂರು/ಪುಣೆ : ಇತ್ತೀಚೆಗೆ ದೇಶದಲ್ಲಿ ಅ*ತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಮತ್ತೊಂದು ಹೇ*ಯ ಕೃ*ತ್ಯ ವರದಿಯಾಗಿದೆ.


    ಯುವತಿಯ ಸ್ನೇಹಿತನನ್ನು ಥಳಿಸಿ ಆಕೆಯ ಮೇಲೆ ಮೂವರು ಸಾಮೂಹಿಕ ಅತ್ಯಾ*ಚಾರವೆಸಗಿದ ಘಟನೆ ಪುಣೆಯ ಹೊರವಲಯದಲ್ಲಿ ನಡೆದಿದೆ. ಗುರುವಾರ(ಸೆ.3) ರಾತ್ರಿ 11 ಗಂಟೆ ಸುಮಾರಿಗೆ ಬೋಪದೇವ್ ಘರ್ ಪ್ರದೇಶದಲ್ಲಿ ಈ ದುಷ್ಕೃ*ತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
    ಬೋಪ್ದೇವ್ ಗಢ ಪ್ರದೇಶಕ್ಕೆ ಈ ಜೋಡಿ ಹೋಗಿದ್ದರು. ಅಲ್ಲಿ ಮೂವರು ಅಪರಿಚಿತರು ಯುವಕನ ಮೇಲೆ ಹ*ಲ್ಲೆ ನಡೆಸಿ, ಆಕೆಯ ಮೇಲೆ ಅ*ತ್ಯಾಚಾರವೆಸಗಿದ್ದಾರೆ. ಸಾಮೂಹಿಕ ಅ*ತ್ಯಾಚಾರ ಆರೋಪಿಗಳ ಪತ್ತೆಗೆ 10 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಕೊಂಧ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಅರಿಯದೆ ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲು…. ಎಲ್ಲಿ ಗೊತ್ತಾ ?

    Published

    on

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಮಮದ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿರುವುದು ತಿಳಿದು ಬಂದಿದೆ. ಜನರಿಗೆ ವಾಂತಿ, ಭೇಧಿ ಉಂಟಾಗಿದ್ದು ಇಡೀ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.


    ಕರ್ಕಿಹಳ್ಳಿ ಹಾಗೂ ಮೇಡಿಕಲ್ ಗ್ರಾಮಸ್ಥರು ಕಾಫಿನಾಡಿಯ ಟ್ಯಾಂಕಿನಿಂದ ಕಲುಷಿತ ನೀರನ್ನು ಕುಡಿದು, ಕರ್ಕಿಹಳ್ಳಿಯಲ್ಲಿ 500 ಹಾಗೂ ಮೇಡಿಕಲ್‌ನಲ್ಲಿ 600 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರೂ ವಾಂತಿ ಭೇದಿಯನ್ನು ಅನುಭವಿಸುತ್ತಿದ್ದು, 80 ವರ್ಷದ ವೃದ್ಧನ ಪರಿಸ್ಥಿತ ತೀರಾ ಹದಗೆಟ್ಟು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
    ಗ್ರಾಮ ಪಂಚಾಯತಿ ವ್ಯಾಪ್ತಿಯ 6 ಮತ್ತು 7 ನೇ ವಾರ್ಡ್‌ನಲ್ಲಿ ಬರುವ ನೀರು ಸಂಪೂರ್ಣವಾಗಿ ಅಶುದ್ಧಿಯಾದ ಹಿನ್ನಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    BIG BOSS

    BBK11: ದೊಡ್ಮನೆಗೆ ಬಂದ 4 ದಿನಕ್ಕೆ ಸ್ಪರ್ಧಿಗಳ ಕಣ್ಣೀರು; ಕಾರಣವೇನು?

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11 ಶುರುವಾಗಿ 4 ದಿನಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ ಸೀಸನ್ 11 ಬಹಳ ಅದ್ಧೂರಿಯಾಗಿ ಓಪನಿಂಗ್​ ಕಂಡಿದೆ. ಆದರೆ ಕಳೆದ 10 ಸೀಸನ್​ಗೂ ಈಗಿನ ಸೀಸನ್ 11ಗೂ ತುಂಬಾನೇ ವ್ಯತ್ಯಾಸವಿದೆ.

    ಕಳೆದ ಸೀಸನ್​ ಸ್ಪರ್ಧಿಗಳು ಬಿಗ್​ಬಾಸ್​ ಮನೆಯಲ್ಲಿ ಅಷ್ಟೂ ಜನ ಇದ್ದರು ನನಗೆ ಒಂಟಿತನ ಕಾಡುತ್ತಿದೆ ಬಿಗ್​ಬಾಸ್​. ನನಗೆ ಮನೆಗೆ ಕಳುಹಿಸಿ ಬಿಗ್​ಬಾಸ್​, ನನಗೆ ಕುಟುಂಬಸ್ಥರ ನೆನಪಾಗುತ್ತದೆ ಅಂತ ಹೇಳುತ್ತಿದ್ದರು. ಆದರೆ ಈ ಬಾರಿಯ ಬಿಗ್​ಬಾಸ್​ ಸೀಸನ್​ 11 ಶುರುವಾಗಿ ಎರಡೇ ದಿನಕ್ಕೆ ಸ್ಪರ್ಧಿಗಳು ಕಣ್ಣೀರು ಹಾಕುತ್ತಿದ್ದಾರೆ.

    ಅದರಲ್ಲೂ ಬಿಗ್​ಬಾಸ್​ಗೆ ಬಂದ ಮೊದಲ ದಿನವೇ ಧನರಾಜ್​ ಆಚಾರ್ಯ ಅವರು ಕಣ್ಣೀರು ಹಾಕಿದ್ದರು. ಇದಾದ ಬಳಿಕ ಅನುಷಾ ರೈ ಅವರು ಊಟಕ್ಕೆ ತೊಂದರೆ ಆಗ್ತಾ ಇದೆ ಅಂತ ಅತ್ತಿದ್ದರು. ಬಳಿಕ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಹಂಸ ನಾರಾಯಣ್ ಕೂಡ ಬಿಗ್​ಬಾಸ್​ಮನೆಯ ವಾತಾವರಣಕ್ಕೆ ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ರು. ಜೊತೆಗೆ ಮಾನಸಾ ಲಾಯರ್​ ಜಗದೀಶ್​ ಮಾತಿಗೆ ಬೇಸರದಿಂದ ಕಣ್ಣೀರು ಹಾಕಿದ್ದಾರೆ. ಇದೀಗ ಐಶ್ವರ್ಯ ಸಿಂಧೋಗಿ ಅವರು ಜೋರಾಗಿ ಅತ್ತುಕೊಂಡು ಆಚೆ ಬಂದಿದ್ದಾರೆ.

    ಕಲರ್ಸ್​ ಕನ್ನಡ ಶೇರ್ ಮಾಡಿಕೊಂಡ ಹೊಸ ಪ್ರೋಮೋದಲ್ಲಿ ಐಶ್ವರ್ಯ ಜೋರಾಗಿ ಅಳುತ್ತಾ ಬಂದಿದ್ದಾರೆ. ಐಶ್ವರ್ಯಾ ಅವರ ಕಣ್ಣೀರಿಗೆ ಕಾರಣ ಏನಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಇನ್ನೂ ಜೋರಾಗಿ ಅಳುತ್ತಾ ಕುಳಿತುಕೊಂಡಿದ್ದ ಐಶ್ವರ್ಯಾಗೆ ಗೌತಮಿ ಜಾಧವ್, ಭವ್ಯಾ ಗೌಡ ಅವರು ಸಮಾಧಾನ ಮಾಡಿದ್ದಾರೆ. ನಮ್ಮ ಮನೆಯ ಕೆಲಸದವರಿಗೂ ನಾನು ಈ ರೀತಿ ಮಾತುಗಳನ್ನು ಹೇಳಲ್ಲ ಅಂತ ಐಶ್ವರ್ಯಾ ಅವರು ಕಣ್ಣೀರು ಸುರಿಸಿದ್ದಾರೆ. ಸದ್ಯ ಇದಕ್ಕೆಲ್ಲ ವೀಕ್ಷಕರು ಕಿಚ್ಚನ ಪಂಚಾಯ್ತಿಗಾಗಿ ಕಾಯುತ್ತಿದ್ದಾರೆ.

    Continue Reading

    LATEST NEWS

    ತಿರುಪತಿ ಲಡ್ಡು ವಿವಾದ: ಹೊಸ ತನಿಖೆಗೆ ಸುಪ್ರೀಂಕೋರ್ಟ್​ ಆದೇಶ

    Published

    on

    ನವದೆಹಲಿ : ತಿರುಪತಿ ಲಡ್ಡು ವಿವಾದದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್ಎಸ್ಎಸ್ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದುಸದಸ್ಯರ ಸ್ವತಂತ್ರ ಎಸ್ಐಟಿಯನ್ನು ರಚಿಸಲು ಸೂಚಿಸಿದೆ.

    ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಸಂಬಂಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಶೇಷ ತನಿಖಾ ತಂಡದಲ್ಲಿ (ಎಸ್ಐಟಿ)ಆಂಧ್ರಪ್ರದೇಶ ಪೊಲೀಸ್ ಇಬ್ಬರು ಅಧಿಕಾರಿಗಳು, ಒಬ್ಬ ಎಫ್ಎಸ್ಎಸ್ಎಐನ ಹಿರಿಯ ಅಧಿಕಾರಿ ಇರಲಿದ್ದಾರೆಎಸ್ಐಟಿ ತನಿಖೆಯನ್ನು ಸಿಬಿಐ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಪೀಠ ಹೇಳಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ಅವರಿದ್ದ ಪೀಠವು, ‘ ವಿಚಾರಕ್ಕೆ ನ್ಯಾಯಾಲಯವನ್ನು ರಣರಂಗವಾಗಿ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ. ದೇವರಲ್ಲಿ ನಂಬಿಕೆ ಹೊಂದಿರುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಪ್ಪಿಸಲು ಎಸ್ಐಟಿ ರಚನೆ ಮಾಡಲಾಗಿದೆ ಎಂದಿದೆ.

    ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ಗೆ ಹೇಳಿಕೆ ನೀಡಿದ್ದು, ಎಸ್ಐಟಿಯ ಮೇಲೆ ಕೇಂದ್ರದ ಹಿರಿಯ ಅಧಿಕಾರಿ ನಿಗಾ ವಹಿಸಬೇಕು. ಇದರಿಂದ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು. ಇದು ಕೋಟ್ಯಂತರ ಜನರ ನಂಬಿಕೆಯ ಪ್ರಶ್ನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ ಇದೊಂದು ರಾಜಕೀಯ ನಾಟಕವಾಗಬಾರದು. ಸ್ವತಂತ್ರ ಸಂಸ್ಥೆ ಇದ್ದರೆ ಆತ್ಮವಿಶ್ವಾಸ ಮೂಡುತ್ತದೆ.

    ಇದನ್ನೂ ಓದಿ : ಬಿಗ್​ ಬಾಸ್​ನಿಂದ ಚೈತ್ರಾರನ್ನು ಹೊರಗೆ ಹಾಕಿ, ಇಲ್ಲದಿದ್ರೆ ಕಾರ್ಯಕ್ರಮ ಸ್ಥಗಿತ ಮಾಡಿಸುತ್ತೇನೆ ಎಂದ ವಕೀಲ!

    ಸೆಪ್ಟೆಂಬರ್ 30 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯವು ನೇಮಿಸಿದ ಎಸ್ಐಟಿ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂದು ನಿರ್ಧರಿಸಲು ಸಹಾಯ ಮಾಡುವಂತೆ ಪೀಠವು ಮೆಹ್ತಾ ಅವರನ್ನು ಕೇಳಿತ್ತು.

    Continue Reading

    LATEST NEWS

    Trending