Connect with us

    DAKSHINA KANNADA

    ಪುತ್ತೂರು: ಅತಿವೃಷ್ಠಿಯಿಂದ ಅಡಿಕೆ ಬೆಳೆಗಾರರಿಗೆ ನಷ್ಟ-ರೈತ ಸಂಘದಿಂದ ಪ್ರತಿಭಟನೆ

    Published

    on

    ಪುತ್ತೂರು: ಅತಿವೃಷ್ಠಿಯಿಂದ ಅಡಿಕೆ ಬೆಳೆಗೆ ಉಂಟಾದ ಹಾನಿಗೆ ಪರಿಹಾರ ಮತ್ತು ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾನೂನು ರಾಜ್ಯದಲ್ಲಿ ಇನ್ನೂ ಜಾರಿಯಲ್ಲಿದ್ದು, ಅವುಗಳನ್ನು ತಕ್ಷಣವೇ ರದ್ದುಗೊಳಿಬೇಕೆಂದು ಆಗ್ರಹಿಸಿ ರೈತಸಂಘ, ಹಸಿರು ಸೇನೆಯಿಂದ ಇಂದು ಪುತ್ತೂರು ಮಿನಿ ವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.


    ರೈತಸಂಘದ ಕಚೇರಿಯಿಂದ ಮೆರವಣಿಗೆ ಮೂಲಕ ಹೊರಟ ರೈತಸಂಘದ ಕಾರ್ಯಕರ್ತರು ಪುತ್ತೂರು ಮಿನಿ ವಿಧಾನಸೌಧದ ಮುಂದೆ ಸೇರಿ ಪ್ರತಿಭಟನೆ ನಡೆಸಿದರು.

    ಈ ಬಾರಿ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಸುಮಾರು 64 ಶೇಕಡಾ ಅಡಿಕೆ ಸಂಪೂರ್ಣ ನಾಶವಾಗಿದೆ. ಕೃಷಿ ಹಾನಿಗಾಗಿ ಈಗಾಗಲೇ ರಾಜ್ಯ ಸರಕಾರ 300 ಕೋಟಿ ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ ಅಡಿಕೆ ಬೆಳೆಗಾರರಿಗೆ ಸಂದ ಬೇಕಾದ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ರೈತಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಒತ್ತಾಯಿಸಿದರು.


    ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾನೂನನ್ನು ಈಗಾಗಲೇ ರದ್ದು ಪಡಿಸಲಾಗಿದ್ದರೂ, ರಾಜ್ಯ ಸರಕಾರ ಮಾತ್ರ ಈ ಕಾನೂನನ್ನು ಈವರೆಗೂ ರದ್ದುಗೊಳಿಸದೆ ಮೊಂಡುತನವನ್ನು ಪ್ರದರ್ಶಿಸುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.

    BELTHANGADY

    ಗುರುವಾಯನಕೆರೆ – ಹೊಂಡ ತಪ್ಪಿಸಲು ಹೋಗಿ ಕಾರುಗಳು ಜ*ಖಂ

    Published

    on

    ಗುರುವಾಯನಕೆರೆ: ಇಂದು (ಅ.12) ಮುಂಜಾನೆ ಎರಡು ಕಾರುಗಳ ನಡೆವೆ ಭೀಕರ ಅ*ಪಘಾತವು ಗುರುವಾಯನಕೆರೆ ಶಕ್ತಿನಗರದಲ್ಲಿ ಸಂಭವಿಸಿದೆ.


    ಗುರುವಾಯನಕೆರೆಯಿಂದ ಹೆಬ್ರಿ ಕಡೆಗೆ ಹೋಗುವ ಸ್ಕೋಡಾ ಕಾರು ಮತ್ತು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಐ20 ಕಾರಿನ ನಡೆವೆ ಅ*ಪಘಾತ ಸಂಭವಿಸಿದೆ.


    ಐ 20 ಕಾರು ಚಾಲಕ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ ಎಂಬುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

     

     

    ಇದನ್ನೂ ಓದಿ:  ಉಪ್ಪಿನಂಗಡಿ| ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್:‌ ಚಾಲಕ ಮೃ*ತ್ಯು

     

    ಎರಡೂ ಕಾರು ಉಲ್ಟಾ ಬಿದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿಲ್ಲ ಎಂಬುವುದು ತಿಳಿದು ಬಂದಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Continue Reading

    DAKSHINA KANNADA

    ಮಂಗಳೂರು – ಕಟೀಲಮ್ಮನ ಮಡಿಲಲ್ಲಿ ಹಲವಾರು ಬಣ್ಣದ ವೇಷಗಳ ವೈಭವ

    Published

    on

    ಮಂಗಳೂರು: ನಂದಿನಿ ನದಿಯ ಮಧ್ಯದಲ್ಲಿ ರಾರಾಜಿಸುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಯುವ ಶರನ್ನವರಾತ್ರಿ ಉತ್ಸವದ ವೈಭವ ಒಂದು ಕಡೆಯಾದರೆ ಹುಲಿ, ಸಿಂಹ ಸೇರಿದಂತೆ ಸಾವಿರಾರು ಬಣ್ಣದ ವೇಷಗಳು ಸೇವೆ ಸಲ್ಲಿಸುವ ಸೊಬಗು ಇನ್ನೊಂದು ಕಡೆ.


    ಹಲವಾರು ತಂಡಗಳು ಹುಲಿ ವೇಷ ಹಾಕಿ ತಿರುಗಾಟ ನಡೆಸಿ ಅಂತಿಮವಾಗಿ ಕಟೀಲಿಗೆ ಬಂದು ದೇವಾಲಯದ ಆವರಣದಲ್ಲಿ ನರ್ತಿಸಿ ವೇಷ ಕಳಚಿ ನಂದಿನಿ ನೀರಿನಲ್ಲಿ ಮಿಂದು ಹೋಗುವುದು ರೂಢಿ. ವೇಷ ಹಾಕುವಾಗಲೇ ಕಟೀಲಿನಲ್ಲಿ ವೇಷ ಬಿಚ್ಚುತ್ತೇವೆ ಎಂದು ಹರಕೆ ಹೊತ್ತವರು ಒಂದೆಡೆಯಾದರೆ, ಕಟೀಲು ಕ್ಷೇತ್ರದಲ್ಲೇ ಸೇವೆ ಸಲ್ಲಿಸಿ ಮರಳಿ ಅಲ್ಲೇ ವೇಷ ಬಿಚ್ಚುತ್ತೇವೆ ಎನ್ನುವವರು ಇನ್ನೊಂದೆಡೆ ಇದ್ದಾರೆ. ಇದು ತಲತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.


    ಶರನ್ನವರಾತ್ರಿ ಸಮಯದಲ್ಲಿ ಕಟೀಲು ದೇವಾಲಯದ ಆವರಣದಲ್ಲಿ ನಿತ್ಯವೂ ಹತ್ತಾರು ತಂಡಗಳ ಹುಲಿ ವೇಷ ನರ್ತನ ಇರುತ್ತದೆ. ಒಟ್ಟಾರೆಯಾಗಿ 2000 ಕ್ಕೂ ಅಧಿಕ ವೇಷಗಳು , 70 ರಿಂದ 80 ತಂಡಗಳು ಕಟೀಲು ಸನ್ನಿಧಿಗೆ ಬಂದು ಸೇವೆ ಸಲ್ಲಿಸುತ್ತವೆ ಎಂದು ಹೇಳಬಹುದು.

    Continue Reading

    DAKSHINA KANNADA

    ಮುಂದಿನ ಐದು ದಿನ ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    Published

    on

    ಬೆಂಗಳೂರು: ಈ ಬಾರಿಯ ದಸರಾ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳಲ್ಲಿ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.

    ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಯಲ್ಲಿ ನೀರು ರಭಸದಿಂದ ಹರಿದು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

    Continue Reading

    LATEST NEWS

    Trending