Sunday, June 4, 2023

ವಿಟ್ಲ: ಭಾರೀ ಗಾಳಿ ಮಳೆ-ಕಟ್ಟಡದಿಂದ ಕಲ್ಲುಗಳು ಬಿದ್ದು ವಾಹನಗಳು ಹಾನಿ

ವಿಟ್ಲ: ಸುರಿದ ಭಾರೀ ಗಾಳಿ ಮಳೆಯಿಂದಾಗಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಟ್ಟಡದಿಂದ ಕಲ್ಲುಗಳು ಬಿದ್ದು ಹಲವು ವಾಹನಗಳು ಹಾನಿಗೊಂಡ ಘಟನೆ ನಿನ್ನೆ ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್‌ನ ಬಳಿ ನಡೆದಿದೆ.


ನಿನ್ನೆ ಎಲ್ಲಾ ಕಡೆಯಲ್ಲೂ ರಭಸವಾಗಿ ಮಳೆ ಸುರಿದಿತ್ತು. ವಿ.ಎಚ್ ಕಾಂಪ್ಲೆಕ್ಸ್‌ನಲ್ಲಿ ಅಂಗಡಿ ಮಳಿಗೆಗಳ ಮುಂಭಾಗದ ಪಾರ್ಕಿಂಗ್‌ನಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು.

ಪಾರ್ಕಿಂಗ್ ನ ಮೇಲ್ಭಾಗಕ್ಕೆ ಬಿಸಿಲು ಬಾರದಂತೆ ಹಳದಿ ಬಟ್ಟೆಯ ಚಪ್ಪರಕ್ಕೆ ಅಳವಡಿಸಲಾಗಿದ್ದ ಹೋಲೊ ಬ್ಲಾಕ್ ಕಲ್ಲುಗಳ ರಾಶಿ ಗಾಳಿಗೆ ಕೆಳಗಡೆ ಕುಸಿದಿದೆ.


ಇದರಿಂದ ಸುಮಾರು ಐದು ದ್ವಿಚಕ್ರ ವಾಹನಗಳು ಹಾನಿಗೊಂಡಿದೆ. ಸ್ಥಳದಲ್ಲಿ ಜನರು ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

LEAVE A REPLY

Please enter your comment!
Please enter your name here

Hot Topics