Connect with us

    LATEST NEWS

    ಇಸ್ರೇಲ್ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ..! ವಿಶ್ವಯುದ್ಧದ ಆತಂಕ..!

    Published

    on

    ಅಕ್ಟೋಬರ್ 1 ರ ರಾತ್ರಿ ಸರಿಸುಮಾರು 10 ಗಂಟೆಗೆ ಇಸ್ರೇಲ್ ಮೇಲೆ 30 ನಿಮಿಷಗಳ ಕಾಲ ಮಿಸೈಲ್ ದಾಳಿ ನಡೆದಿದೆ. ಇರಾನ್‌ ಈ ದಾಳಿ ನಡೆಸಿದ್ದು ನಿರಂತರ 30 ನಿಮಿಷಗಳ ಕಾಲ 180 ಕ್ಕೂ ಹೆಚ್ಚು ಮಿಸೈಲ್‌ಗಳನ್ನು ತೇಲ್‌ ಅವೀವ್ ನಗರದ ಮೇಲೆ ಬೀಳಿಸಲಾಗಿದೆ.

     

    ಇಸ್ರೇಲ್‌ನ ಮೊಸಾದ್ ಹೆಡ್‌ಕ್ವಾರ್ಟರ್ಸ್‌ ಗುರಿಯಾಗಿಸಿ ಈ ಮಿಸೈಲ್ ದಾಳಿ ನಡೆದಿದ್ದು, ನೇವಾತಿಮ್‌ ಏರ್‌ಬೇಸ್‌, ತೇಲ್‌ ನೋಫ್‌ ಏರ್‌ಬೇಸ್‌ ಮೇಲೆ ಮಿಸೈಲ್‌ ದಾಳಿ ನಡೆದಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲವಾದ್ರೂ ಇಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ.

    ದಾಳಿಯ ಬಗ್ಗೆ ಮಾತನಾಡಿದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್‌ , ಇಸ್ರೇಲ್‌ ಪ್ರಧಾನ ಮಂತ್ರಿ ಬೆಂಜಮಿನ್ ನೆತಾನ್ಯೂಹುಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. “ಇಸ್ರೇಲ್‌ ಆಕ್ರಮಣಕ್ಕೆ ನಾವು ಉತ್ತರ ನೀಡಿದ್ದು, ಇದು ಇರಾನ್ ಹಾಗೂ ಇಲ್ಲಿನ ಜನರ ಹಿತಕ್ಕಾಗಿ ಅಗತ್ಯವಾದ ದಾಳಿ ಆಗಿದೆ” ಎಂದು ಹೇಳಿದ್ದಾರೆ. ದಾಳಿಯ ಪ್ರತಿಕ್ರಿಯೆ ನೀಡಿರುವ ಬೆಂಜಮಿನ್ ನೆತಾನ್ಯೂಹ್‌ “ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದೆ ಇದಕ್ಕಾಗಿ ಇರಾನ್ ಅನುಭವಿಸಲೇ ಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.

    ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯ ಬೆನ್ನಲ್ಲೇ ತುರ್ತ ಸಭೆ ಕರೆದ ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ , ಅಮೆರಿಕಾ ಸೇನೆ ತಕ್ಷಣ ಇಸ್ರೇಲ್ ನೆರವಿಗೆ ಧಾವಿಸುವಂತೆ ಸೂಚಿಸಿದ್ದಾರೆ. ಜೊತೆಗೆ ” ಇರಾನ್ ಈ ದಾಳಿಗೆ ತಕ್ಕ ಶಾಸ್ತಿ ಅನುಭವಿಸಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.

    ಎಪ್ರಿಲ್‌ 20 24 ರಲ್ಲೂ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಆದ್ರೆ ಆ ಸಮಯದಲ್ಲಿ ಅಮೆರಿಕಾ , ಜೋರ್ಡಾನ್‌, ಹಾಗೂ ಇತರ ದೇಶಗಳ ಸಹಾಯದಿಂದ ಆ ಕ್ಷಿಪಣಿ ದಾಳಿಯನ್ನು ಮಟ್ಟ ಹಾಕಲಾಗಿತ್ತು. ಆದ್ರೆ ಈ ಬಾರಿ ಇರಾನ್ ನಡೆಸಿದ ದಾಳಿಯು 90 % ಗುರಿ ಮುಟ್ಟಿದ್ದಾಗಿ ಇರಾನ್ ಹೇಳಿಕೊಂಡಿದೆ.

    LATEST NEWS

    ಹೆಲಿಕಾಪ್ಟರ್‌ ಪತನ; ಪೈಲಟ್ ಸಹಿತ ಮೂವರ ದುರ್ಮರಣ

    Published

    on

    ಪುಣೆ: ಪುಣೆ ಸಮೀಪದ ಬವ್ಧಾನ್‌ನ ಗುಡ್ಡೆಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡು ಮೂವರು ಇಂದು (ಅ.2) ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


    ಬೆಳಗ್ಗೆ 6.45ರ ಸುಮಾರಿಗೆ ಗುಡ್ಡೆಗಾಡು ಪ್ರದೇಶದಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು, ಇಬ್ಬರು ಪೈಲಟ್ ಮತ್ತು ಇಂಜಿನಿಯರ್ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


    ಇನ್ಸ್ಪೆಕ್ಟರ್ ಕನ್ಹಯ್ಯಾ ಥೋರಟ್ ಪ್ರಕರಣ ಕುರಿತು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಹೆಲಿಕಾಪ್ಟರ್ ಯಾರಿಗೆ ಸೇರಿದ್ದು ಎಂದು ಇನ್ನೂ ಖಚಿತವಾಗಿಲ್ಲ. ಸ್ಥಳದಲ್ಲಿ ರಕ್ಷಣಾ ಕಾರ್ಯಾ ನಡೆಯುತ್ತಿದೆ ಎಂದು ಹೇಳಿದ್ದಾರೆ.
    ದಟ್ಟವಾದ ಮಂಜಿನಿಂದಾಗಿ ಹೆಲಿಕಾಪ್ಟರ್ ಪತನವಾಗಿದೆ ಎಂಬ ವರದಿ ದಾಖಲಾಗಿದೆ.

    Continue Reading

    BIG BOSS

    ನಾಮಿನೇಶನ್​ನಿಂದ ಪಾರಾಗಲು ಟಾಸ್ಕ್​ ಕೊಟ್ಟ ಬಿಗ್​ ಬಾಸ್! ಕಿತ್ತಾಡಿಕೊಂಡ ಜಗದೀಶ್​​-ಧನ್​ರಾಜ್​

    Published

    on

    ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ ಬಾಸ್​ ಶುರುವಾಗಿ 4 ದಿನ ಕಳೆದಿದೆ. ಜೊತೆಗೆ ಮೊದಲ ವಾರದ ಅಂತ್ಯಕ್ಕೂ ಮುನ್ನವೇ ಬಿಗ್​ ಬಾಸ್​ನಲ್ಲಿ ನಾಮಿನೇಶನ್​ ಬಿಸಿ ಜೋರಾಗಿದೆ. ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಟಾರ್ಗೆಟ್​ ಮಾಡಲು ಶುರು ಮಾಡಿದ್ದಾರೆ. ಇದರ ನಡುವೆ ಜಗಳಗಳು ನಡೆಯುತ್ತಿವೆ.

    ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್​ ಆಗಿದ್ದಾರೆ. ಆದರೆ ನಾಮಿನೇಟ್​ ಆದ ಸ್ಪರ್ಧಿಗಳಿಗೆ ಬಿಗ್​ ಬಾಸ್​​ ಟಾಸ್ಕ್​ವೊಂದನ್ನು ಕೊಟ್ಟಿದ್ದು, ಪಾರಾಗಲು ಮೊದಲ ಅವಕಾಶ ನೀಡಿದ್ದಾರೆ.

    ಧನ್​ರಾಜ್ ಆಚಾರ್​ ಟಾಸ್ಕ್​ ರೆಫ್ರಿಯಾಗಿದ್ದು, ನಾಮಿನೇಟ್​​ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್​ ಸಂಯೋಜನೆ ಮಾಡಿದ್ದಾರೆ. ಆದರೆ ಈ ವೇಳೆ ಜಗದೀಶ್​ ಮತ್ತು ಯಮುನಾ ಟಾಸ್ಕ್​ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್​​ ರೆಫ್ರಿ ಮತ್ತು ಜಗದೀಶ್​ ನಡುವೆ ಜಗಳ ಶುರುವಾಗಿದೆ.

    ಧನ್​ರಾಜ್​ ಮತ್ತು ಜಗದೀಶ್​ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್​​ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್​ರಾಜ್​ಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಧನ್​ರಾಜ್​ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಮಜವಾಗಿದ್ದು, ನಾಮಿನೇಶನ್​ನಿಂದ ಪಾರಾಗಲು ಟಾಸ್ಕ್​ನಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲ ವೀಕ್ಷಕರನ್ನು ಕೆರಳಿಸಿದೆ. ಜೊತೆಗೆ ಮಾತು, ಜಗಳ, ಆಟ, ಬಿಗ್​ ಬಾಸ್​ ಮನೆಯಲ್ಲಿ ಏನೇನಾಯ್ತು ಎಂಬುದನ್ನು ಕಾಣುವ ತವಕ ಎಲ್ಲರಲ್ಲೂ ಹೆಚ್ಚಾಗಿದೆ.

    Continue Reading

    LATEST NEWS

    ಚಲಿಸುತ್ತಿದ್ದ ರೈಲಿನಿಂದ ಉರುಳಿ ಕೆಳಗೆ ಗದ್ದೆಗೆ ಬಿದ್ದ ವ್ಯಕ್ತಿ ಗಂಭೀರ !!

    Published

    on

    ಕೋಟ: ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೋರ್ವ ಆಯಾತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ (ಅ.1) ಮಧ್ಯಾಹ್ನ ಕುಂದಾಪುರ ತಾಲೂಕಿನ ಬೇಳೂರು ಕಂಬಳಗದ್ದೆ ಸಮೀಪ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆದಿದೆ.


    ಚಲಿಸುತ್ತಿರುವ ರೈಲಿನಿಂದ ಪ್ರಯಾಣಿಕನೊಬ್ಬ ಆಯಾತಪ್ಪಿ ಗದ್ದೆಗೆ ಉರುಳಿ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಪ್ರಕರಣ ದಾಖಲಾಗಿದೆ.
    ಆತನು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ನೋಡಿದ ಮಹಿಳೆಯು ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಧಾವಿಸಿ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
    ಗಂಭೀರ ಗಾಯಗೊಂಡ ವ್ಯಕ್ತಿ ಉತ್ತರ ಭಾರತ ಮೂಲದವರೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    Trending