Connect with us

    LATEST NEWS

    ಸೆ*ಕ್ಸ್ ಬಳಿಕ ತೀವ್ರ ರ*ಕ್ತಸ್ರಾವ; ಯುವತಿ ಸಾ*ವು !!!

    Published

    on

    ಮಂಗಳೂರು/ಅಹಮದಬಾದ್: ಗುಜರಾತ್‌ನ ಹೋಟೆಲ್ ಕೊಠಡಿಯಲ್ಲಿ 23 ವರ್ಷದ ನರ್ಸಿಂಗ್ ಪದವೀಧರೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೆ*ಕ್ಸ್‌ನಲ್ಲಿ ತೊಡಗಿದ್ದ ಸಮಯದಲ್ಲಿ ಗು*ಪ್ತಾಂಗದಿಂದ ತೀವ್ರ ರಕ್ತ*ಸ್ರಾವವಾಗಿ ಮೃ*ತಪಟ್ಟ ಘಟನೆ ನಡೆದಿದೆ.


    ಫೋರೆನ್ಸಿಕ್ ವರದಿ ಪ್ರಕಾರ, ಅತಿಯಾದ ರಕ್ತ*ಸ್ರಾವವೇ ಸಾವಿಗೆ ಮೂಲ ಕಾರಣವಾಗಿರುವುದು ತಿಳಿದು ಬಂದಿದೆ.
    ನವಸಾರಿ ಜಿಲ್ಲೆಯ ಹೋಟೆಲ್‌ಗೆ ಜೋಡಿ ಸೆ.23 ರಂದು ಚೆಕ್‌ಇನ್ ಮಾಡಿದ್ದರು. ಲೈಂ*ಗಿಕ ಕ್ರಿಯೆಯ ಸಮಯದಲ್ಲಿ ಯುವತಿಯ ಗು*ಪ್ತಾಂಗಕ್ಕೆ ಗಾಯವಾಗಿ ತೀರ್ವ ರಕ್ತ*ಸ್ರಾವದಿಂದ ಬಳಲಿದ್ದಳು.
    ಇದನ್ನು ಕಂಡು ಭಯಭೀತಗೊಂಡ ಗೆಳೆಯ, ಆಂಬ್ಯುಲೆನ್ಸ್‌ಗೆ ಕರೆ ಮಾಡದೆ, ಆಸ್ಪತ್ರೆಗೂ ಕರೆದೊಯ್ಯದೆ ಪರಿಹಾರಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕಿರುವುದು ತಿಳಿದು ಬಂದು, 26 ವರ್ಷದ ಯುವಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


    ರಕ್ತ*ಸ್ರಾವವನ್ನು ನಿಲ್ಲಿಸಲು ಬಟ್ಟೆ ಬಳಸಿದ್ದನು. ಅದು ನಿಲ್ಲದೆ ಮೂರ್ಛೆ ಹೋಗಿದ್ದು, ಬಳಿಕ ಸೂರತ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೋಷಕರು ಬರುವ ಮುಂಚೆಯೇ ಆಕೆ ಸಾ*ವನ್ನಪ್ಪಿದ್ದಳು.
    ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಯುವಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

    BIG BOSS

    ನಾಮಿನೇಶನ್​ನಿಂದ ಪಾರಾಗಲು ಟಾಸ್ಕ್​ ಕೊಟ್ಟ ಬಿಗ್​ ಬಾಸ್! ಕಿತ್ತಾಡಿಕೊಂಡ ಜಗದೀಶ್​​-ಧನ್​ರಾಜ್​

    Published

    on

    ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ ಬಾಸ್​ ಶುರುವಾಗಿ 4 ದಿನ ಕಳೆದಿದೆ. ಜೊತೆಗೆ ಮೊದಲ ವಾರದ ಅಂತ್ಯಕ್ಕೂ ಮುನ್ನವೇ ಬಿಗ್​ ಬಾಸ್​ನಲ್ಲಿ ನಾಮಿನೇಶನ್​ ಬಿಸಿ ಜೋರಾಗಿದೆ. ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಟಾರ್ಗೆಟ್​ ಮಾಡಲು ಶುರು ಮಾಡಿದ್ದಾರೆ. ಇದರ ನಡುವೆ ಜಗಳಗಳು ನಡೆಯುತ್ತಿವೆ.

    ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್​ ಆಗಿದ್ದಾರೆ. ಆದರೆ ನಾಮಿನೇಟ್​ ಆದ ಸ್ಪರ್ಧಿಗಳಿಗೆ ಬಿಗ್​ ಬಾಸ್​​ ಟಾಸ್ಕ್​ವೊಂದನ್ನು ಕೊಟ್ಟಿದ್ದು, ಪಾರಾಗಲು ಮೊದಲ ಅವಕಾಶ ನೀಡಿದ್ದಾರೆ.

    ಧನ್​ರಾಜ್ ಆಚಾರ್​ ಟಾಸ್ಕ್​ ರೆಫ್ರಿಯಾಗಿದ್ದು, ನಾಮಿನೇಟ್​​ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್​ ಸಂಯೋಜನೆ ಮಾಡಿದ್ದಾರೆ. ಆದರೆ ಈ ವೇಳೆ ಜಗದೀಶ್​ ಮತ್ತು ಯಮುನಾ ಟಾಸ್ಕ್​ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್​​ ರೆಫ್ರಿ ಮತ್ತು ಜಗದೀಶ್​ ನಡುವೆ ಜಗಳ ಶುರುವಾಗಿದೆ.

    ಧನ್​ರಾಜ್​ ಮತ್ತು ಜಗದೀಶ್​ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್​​ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್​ರಾಜ್​ಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಧನ್​ರಾಜ್​ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಮಜವಾಗಿದ್ದು, ನಾಮಿನೇಶನ್​ನಿಂದ ಪಾರಾಗಲು ಟಾಸ್ಕ್​ನಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲ ವೀಕ್ಷಕರನ್ನು ಕೆರಳಿಸಿದೆ. ಜೊತೆಗೆ ಮಾತು, ಜಗಳ, ಆಟ, ಬಿಗ್​ ಬಾಸ್​ ಮನೆಯಲ್ಲಿ ಏನೇನಾಯ್ತು ಎಂಬುದನ್ನು ಕಾಣುವ ತವಕ ಎಲ್ಲರಲ್ಲೂ ಹೆಚ್ಚಾಗಿದೆ.

    Continue Reading

    LATEST NEWS

    ಚಲಿಸುತ್ತಿದ್ದ ರೈಲಿನಿಂದ ಉರುಳಿ ಕೆಳಗೆ ಗದ್ದೆಗೆ ಬಿದ್ದ ವ್ಯಕ್ತಿ ಗಂಭೀರ !!

    Published

    on

    ಕೋಟ: ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೋರ್ವ ಆಯಾತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ (ಅ.1) ಮಧ್ಯಾಹ್ನ ಕುಂದಾಪುರ ತಾಲೂಕಿನ ಬೇಳೂರು ಕಂಬಳಗದ್ದೆ ಸಮೀಪ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆದಿದೆ.


    ಚಲಿಸುತ್ತಿರುವ ರೈಲಿನಿಂದ ಪ್ರಯಾಣಿಕನೊಬ್ಬ ಆಯಾತಪ್ಪಿ ಗದ್ದೆಗೆ ಉರುಳಿ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಪ್ರಕರಣ ದಾಖಲಾಗಿದೆ.
    ಆತನು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ನೋಡಿದ ಮಹಿಳೆಯು ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಧಾವಿಸಿ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
    ಗಂಭೀರ ಗಾಯಗೊಂಡ ವ್ಯಕ್ತಿ ಉತ್ತರ ಭಾರತ ಮೂಲದವರೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    ಗಾಂಧಿ ಜಯಂತಿ: ರಾಜ್ ಘಾಟ್ ನಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿ ಗಣ್ಯರಿಂದ ಪುಷ್ಪ ನಮನ

    Published

    on

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ರಾಜ್ ಘಾಟ್ ನಲ್ಲಿರುವ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ.

    ನವದೆಹಲಿಯ ರಾಜ್ ಘಾಟ್ ನಲ್ಲಿರುವ ಮಹತ್ಮಾ ಗಾಂಧಿ ಸಮಾಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ರಾಜ್ ಘಾಟ್ ನಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಇತರ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

    ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಮೋದಿಯವರು, ಪೂಜ್ಯ ಬಾಪು ಅವರ ಜನ್ಮದಿನದಂದು ಎಲ್ಲಾ ದೇಶವಾಸಿಗಳ ಪರವಾಗಿ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಸತ್ಯ, ಸಾಮರಸ್ಯ ಮತ್ತು ಸಮಾನತೆಯ ಆಧಾರದ ಮೇಲೆ ಅವರ ಜೀವನ ಮತ್ತು ಆದರ್ಶಗಳು ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿಯಾಗಿ ಉಳಿಯುತ್ತವೆ ಎಂದು ಹೇಳಿದ್ದರು.

    ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿ ಸಿಎಂ ಆತಿಶಿಸೇರಿದಂತೆ ಹಲವು ಗಣ್ಯರು ರಾಜ್ಘಾಟ್ನಲ್ಲಿರುವ ಗಾಂಧೀಜಿ ಅವರ ಸಮಾಧಿಗೆ ನಮನ ಸಲ್ಲಿಸಿದರು.

    Continue Reading

    LATEST NEWS

    Trending