Connect with us

    LATEST NEWS

    ನೃತ್ಯ ಮಾಡುತ್ತಿದ್ದ ವೇಳೆ ಹೃದಯಾಘಾತ.. ಕುಸಿದು ಬಿದ್ದು ಪುಣೆ ‘ಗರ್ಬಾ ಕಿಂಗ್’ ​ಸಾ*ವು

    Published

    on

    ಗರ್ಬಾ ಕಿಂಗ್​ ಎಂದೇ ಪ್ರಸಿದ್ಧರಾಗಿರುವ ನಟ ಅಶೋಕ್​ ಮಾಲಿ ಹೃದಯಾಘಾ*ತಕ್ಕೆ ನಿಧನರಾದ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ನೃತ್ಯ ಮಾಡುವ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾ*ವನ್ನಪ್ಪಿದ್ದಾರೆ.

    ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಹೃದಯಾಘಾ*ತಕ್ಕೆ ಅಶೋಕ್​ ಮಾಲಿ ಸಾ*ವನ್ನಪ್ಪಿದ್ದಾರೆ. ಅಶೋಕ್​ ಮಾಲಿ ಹೃದಯಾಘಾ*ತದಿಂದ ಕುಸಿದು ಬೀಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ದಸರಾ ಸಮಯದಲ್ಲಿ ಧುಲೆ ಜಿಲ್ಲೆಯ ಶಿಂಧಖೇಡಾ ತಾಲೂಕಿನ ಹೋಲ್​ ಗ್ರಾಮದಲ್ಲಿ ನವರಾತ್ರಿ ಉತ್ಸವ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಶೋಕ್​ ಮಾಲಿ ಭಾಗವಹಿಸಿದ್ದು, ಪ್ರದರ್ಶನ ನೀಡಲು ಆಗಮಿಸಿದ್ದರು. ಅಶೋಕ್​ ಅವರ ಗರ್ಬಾ ನೃತ್ಯ ಕಾಣಲು ಅನೇಕ ಜನರು ನೆರೆದಿದ್ದರು.

    ಪ್ರದರ್ಶನದ ವೇಳೆ ಅಶೋಕ್​ಗೆ ಹೃದಯಾಘಾ*ತವಾಗಿದೆ. ನೃತ್ಯ ಮಾಡುತ್ತಿರುವಾಗಲೇ ಅಶೋಕ್​​ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಅಶೋಕ್​ ಸಾ*ವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

    Click to comment

    Leave a Reply

    Your email address will not be published. Required fields are marked *

    BIG BOSS

    BBK 11: ಹಂಸಾಗೆ ಯಾವ ಸೀಮೆ ಕ್ಯಾಪ್ಟನ್​​ ಎಂದ ಚೈತ್ರಾ

    Published

    on

    ಬಿಗ್​ ಬಾಸ್​ ಮನೆ ಮಂದಿಗೆ ಒಂದಲ್ಲಾ ಒಂದು ಟಾಸ್ಕ್​ ನೀಡುತ್ತಿರುತ್ತಾರೆ. ಅದರಂತೆಯೇ ‘ಗೊಬ್ಬರದ ಅಬ್ಬರ’ ಎಂಬ ಟಾಸ್ಕ್​ ನೀಡಿದ್ದು, ಈ ಆಟದಲ್ಲಿ ಪ್ರತಿಸ್ಪರ್ಧಿಗಳು ಕ್ಯಾಪ್ಟನ್​ ಹಂಸಾ ಅವರ ನಡೆಯನ್ನು ಕಂಡು ಮೋಸ ಎಂದು ಹೇಳಿದ್ದಾರೆ.

    ಬಿಗ್​ ಬಾಸ್​ ಕೊಟ್ಟ ಗೊಬ್ಬರದ ಅಬ್ಬರ ಟಾಸ್ಕ್​ನಲ್ಲಿ ಸ್ಪರ್ಧಿಗಳ ಕೈ -ಕಾಲಿಗೆ ಬಿಗಿಯಾಗಿ ಕಟ್ಟಲಾಗಿರುತ್ತದೆ. ಸ್ಪರ್ಧಿಗಳು ಬಣ್ಣದ ಚೆಂಡನ್ನು ತಳ್ಳಿಕೊಂಡು ಮೀಸಲಿಡುವ ಸ್ಟ್ಯಾಂಡ್​ನಲ್ಲಿ ಇಡಬೇಕು. ಆದರೆ ಟಾಸ್ಕ್​ ವೇಳೆ ಕೆಲವರು ಕೈಯಲ್ಲಿ ಚೆಂಡನ್ನು ಎತ್ತಿಕೊಂಡು ಹೋದರೆ, ಇನ್ನು ಕೆಲವರು ಜಂಪ್​ ಮಾಡಿಕೊಂಡು ಹೋಗಿದ್ದಾರೆ. ಇದನ್ನು ಕಣ್ಣಾರೆ ಕಂಡರೂ ಸುಮ್ಮನಿದ್ದ ಕ್ಯಾಪ್ಟನ್​ ವಿರುದ್ಧ ಪ್ರತಿಸ್ಪರ್ಧಿಗಳು ಕಿಡಿಕಾರಿದ್ದಾರೆ. ಪಂದ್ಯದ ರೂಲ್ಸ್​ ವಿಚಾರವಾಗಿ ಮಾತಿನ ಚಕಮಕಿ ಕೂಡ ನಡೆದಿದೆ.

    ಈ ವೇಳೆ ಚೈತ್ರಾ ಕುಂದಾಪುರ ಯಾವ ಸೀಮೆ ಕ್ಯಾಪ್ಟನ್​ ನೀವು? ಎಂದು ಕಿಡಿಕಾರಿದರೆ, ಅತ್ತ ಜಗದೀಶ್​ ಕೂಡ ಹಂಸಾ ವಿರುದ್ಧ ತಿರುಗಿ ಬಿದ್ದಿದ್ದು, ಅವರ ಜೊತೆಗೆ ಊಟ ಮಾಡುವುದಾದರೆ ಮನೆಗೆ ಹೋಗಿ ಋಣ ತೀರಿಸಿ ಆಟದಲ್ಲಲ್ಲ ಎಂದು ಹೇಳಿದ್ದಾರೆ. ಅತ್ತ ಗೋಲ್ಡ್​​ ಸುರೇಶ್ ಕೂಡ ಬಿಗ್​ ಬಾಸ್​ ನಾವಿನ್ನು ಯಾವ ಆಟ ಕೂಡ ಆಡಲ್ಲ. ಮೋಸ, ಅನ್ಯಾಯ ಎಂದು ಹೇಳಿದ್ದಾರೆ. ​​

    Continue Reading

    LATEST NEWS

    ಯೋಧರನ್ನು ಅಪಹರಣ ಮಾಡಿದ ಭಯೋತ್ಫಾದಕರು..! ಓರ್ವ ಯೋಧ ಹುತಾತ್ಮ..!

    Published

    on

    ಭಾರತೀಯ ಸೇನೆಯು ಭಯೋತ್ಫಾದಕರ ವಿರುದ್ಧ ನಡೆಸಿದ್ದ ಕಾರ್ಯಾಚರಣೆಯ ವೇಳೆ ಇಬ್ಬರು ಯೋಧರ ಅಪಹರಣವಾಗಿದ್ದು, ಓರ್ವ ಯೋಧ ಹುತಾತ್ಮನಾಗಿದ್ದರೆ, ಮತ್ತೋರ್ವ ಯೋಧ ಗುಂಡಿನ ಗಾಯದೊಂದಿಗೆ ಪತ್ತೆಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಕ್ಟೋಬರ್ 8 ರಂದು ಈ ಕಾರ್ಯಾಚರಣೆ ನಡೆಸಲಾಗಿದ್ದು, ಅಕ್ಟೋಬರ್ 9 ರಂದು ಯೋಧರು ಪತ್ತೆಯಾಗಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜೊತೆ ಸೇರಿದ್ದ ಭಾರತೀಯ ಸೇನೆಯ ಯೋಧರ ತಂಡ ಖಚಿತ ಮಾಹಿತಿ ಮೆರೆಗೆ ಭಯೋತ್ಫಾದಕರ ತಂಡದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಇಬ್ಬರು ಯೋಧರನ್ನು ಭಯೋತ್ಫಾಧಕರು ಅಪಹರಣ ಮಾಡಿದ್ದರು. ನಾಪತ್ತೆಯಾದ ಯೋಧರಿಗಾಗಿ ರಾತ್ರಿ ಇಡಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಯ ಯೋಧರಿಗೆ ಓರ್ವ ಯೋಧ ಹುತಾತ್ಮನಾಗಿ ಪತ್ತೆಯಾಗಿದ್ದಾರೆ. ಯೋಧ ಹಿಲಾಲ್ ಅಹ್ಮದ್ ಭಟ್‌ ಅವರ ಮೇಲೆ ಅನೇಕ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮತ್ತೋರ್ವ ಯೋಧ ಭಯೋತ್ಫಾದಕರ ಗುಂಡೇಟು ತಗುಲಿದ್ರೂ ಅವರಿಂದ ತಪ್ಪಿಸಿಕೊಂಡಿದ್ದಾರೆ. ಗಾಯಾಳು ಯೋಧನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನದಂತೆ ಈ ಘಟನೆ ನಡೆದಿದ್ದು, ಒಂದು ದಿನದ ಬಳಿಕ ಯೋಧರು ಪತ್ತೆಯಾಗಿದ್ದಾರೆ. ಇದೀಗ ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.ಘಟನೆಯ ಕುರಿತಾಗಿ ಭಾರತೀಯ ಸೇನೆಯ ಶ್ರೀನಗರ ಮೂಲದ ಚಿನಾರ್ ಕೋರ್ ತನ್ನ ಅಧಿಕೃತ X ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್‌ ಮಾಡಿದೆ.

    ಈ ವರ್ಷದ ಆಗಸ್ಟ್‌ನಲ್ಲಿ ಅನಂತ್‌ನಾಗ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಎನ್‌ಕೌಂಟರ್‌ನಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು ಮತ್ತು ಮೂವರು ಗಾಯಗೊಂಡಿದ್ದರು.

    ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ನಾಲ್ವರು ಸೇನಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿ ಪ್ರಾಣ ಕಳೆದುಕೊಂಡಿದ್ದರು. ಪಾಕಿಸ್ತಾನ ಬೆಂಬಲಿತ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಪ್ರಾಕ್ಸಿ ಗ್ರೂಪ್ ‘ಕಾಶ್ಮೀರ ಟೈಗರ್ಸ್’ ಈ ದಾಳಿಯನ್ನು ಸಮರ್ಥಿಸಿಕೊಂಡಿದೆ.

    Continue Reading

    LATEST NEWS

    ಮಳಯಾಳಂ ನ ಖ್ಯಾತ ನಟ ವಿಧಿವಶ

    Published

    on

    ಮಂಗಳೂರು/ತಿರುವನಂತಪುರಂ: ಮಳಯಾಳಂ ಚಿತ್ರರಂಗದ ಹಿರಿಯ ನಟ ಟಿಪಿ ಮಾಧವನ್ (88) ಇಂದು (ಅ.90) ಕೊಲ್ಲಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಮೂಲಗಳು ತಿಳಿಸಿವೆ.


    ನಟ ಮಾಧವನ್ ಮರೆಗುಳಿ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಆರೋಗ್ಯ ಸ್ಥಿತಿ ತೀರ ಹದಗೆಟ್ಟೆದ್ದು, ಇಂದು ವಿಧಿವಶರಾದರೆಂದು ವರದಿ ತಿಳಿಸಿದೆ.


    ನಟ ಮಾಧವನ್ ಅವರು ತಮ್ಮ 40 ನೇ ವಯಸ್ಸಿನಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಳಿಕ ಚಿತ್ರರಂಗ ಪ್ರವೇಶಿಸಿದ್ದರು. 1975ರಲ್ಲಿ ಬಿಡಿಗಡೆಯಾಗಿದ್ದ ರಾಗಂ ಸಿನಿಮಾದಲ್ಲಿ ಮಾಧವನ್ ನಟಿಸುವ ಮೂಲಕ ಬೆಳ್ಳಿಪರದೆಯಲ್ಲಿ ಪಯಣ ಆರಂಭಿಸಿದ್ದರು.
    ಮೊದಲ ಸಿನಿಮಾದಲ್ಲೇ ನಟ ಮಾಧವನ್‌ಗೆ ಬಹು ಜನಪ್ರಿಯತೆ ಸಿಕ್ಕಿತ್ತು. ಹಾಸ್ಯ ಮತ್ತು ಗಂಭೀರ ಪಾತ್ರಗಳಲ್ಲಿ ನಟಿಸುವ ಮೂಲಕ ಮಾಧವನ್ ಮಳಯಾಳಂ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದರು. ಅನಾರೋಗ್ಯವಿದ್ದ ಕಾರಣ 2016ರಲ್ಲಿ ನಟನೆಯಿಂದ ದುರವಾದರು.
    ಮಾಧವನ್ ಹಲವಾರು ಟಿವಿ ಸೀರಿಯಲ್‌ಗಳಲ್ಲಿ ನಟಿಸಿದ್ದರು. ದಾಂಪತ್ಯ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ಪುತ್ರ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

    Continue Reading

    LATEST NEWS

    Trending