Sunday, November 27, 2022

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್‌ ಮಾಡಿದ ಉಗ್ರ ಇವನೇ…..!

ಮಂಗಳೂರು: ಮಂಗಳೂರಿನಲ್ಲಿ ನಿನ್ನೆ ನಡೆದ ಆಟೋ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಕ್ಷಣ ಕ್ಷಣವೂ ಕುತೂಹಲಕಾರಿ ಅಂಶಗಳು ಹೊರಬೀಳುತ್ತಿದ್ದು ಇದೀಗ ಶಿವಮೊಗ್ಗ ತುಂಗಾ ನದಿ ದಡದಲ್ಲಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ನಟೋರಿಯಸ್‌ ಕ್ರಿಮಿನಲ್‌ ಶಾರೀಕ್‌ ಎಂಬಾತನೇ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿರುವುದು ಎಂಬ ಅಚ್ಚರಿಯ ಸಂಗತಿ ಲಭ್ಯವಾಗಿದೆ.


ಮಂಗಳೂರಿನಲ್ಲಿ ಬಾಂಬ್‌ ಸ್ಫೋಟ ಮಾಡಿದ್ದ ವ್ಯಕ್ತಿ ನಕಲಿ ಆಧಾರ್‌ ವಿಳಾಸ ನೀಡಿದ್ದ ಬೆನ್ನಲ್ಲೇ ಆತ ಯಾರು? ಆತನ ಮೂಲ ಯಾವುದು ಎನ್ನುವುದರ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆತ ಯಾರು ಎಂಬುದನ್ನು ಪತ್ತೆ ಹಚ್ಚಿದ್ದಾರೆ.


ಇತ್ತೀಚೆಗೆ ತುಂಗಾ ನದಿಯ ತಟದಲ್ಲಿ ಬಾಂಬ್‌ ಸ್ಫೋಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್‌ 19 ರಂದು ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್‌(21) ಮತ್ತು ಮಂಗಳೂರಿನ ಮಾಜ್‌ ಮುನೀರ್‌ನನ್ನು(22) ಬಂಧಿಸಿದ್ದರು.

ಆದರೆ ಈ ಪ್ರಕರಣದ ಪ್ರಮುಖ ಎ1 ಆರೋಪಿಯಾಗಿದ್ದ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೂಲದ ಶಾರೀಕ್ ನಾಪತ್ತೆಯಾಗಿದ್ದ.

ನಾಪತ್ತೆಯಾಗಿದ್ದ ಈತನ ಬಂಧನಕ್ಕೆ ಪೊಲೀಸರು ಸಾಕಷ್ಟು ಬಲೆ ಬೀಸಿದ್ದರೂ, ತನಿಖೆ ನಡೆಸಿದ್ದರೂ ಸಿಕ್ಕಿ ಬಿದ್ದಿರಲಿಲ್ಲ. ಆದರೆ ಈಗ ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್‌ ಮಾಡಿ ಸಿಕ್ಕಿಬಿದ್ದು ಫಜೀತಿ ಮಾಡಿಕೊಂಡಿದ್ದಾನೆ.

ಆಟೋದಲ್ಲಿ ಕುಕ್ಕರ್‌ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಶಾರೀಕ್‌ಗೆ ಈಗ ಮಂಗಳೂರಿನ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತುಂಗಾ ನದಿಯ ತಟದಲ್ಲಿ ಬಾಂಬ್ ಸ್ಫೋಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇವರ ಜಾಡು ಹಿಡಿದು ಹೋಗಿದ್ದ ಪೊಲೀಸರಿಗೆ ಈ ಮೂವರೂ ಕೂಡಾ ಐಸಿಸ್‌ ವಿಡಿಯೋಗಳಿಂದ ಪ್ರೇರಿತರಾಗಿ ಭಾರತದಲ್ಲೂ ದಾಳಿ ನಡೆಸಲು ಸಿದ್ದತೆ ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.  ಮೊಬೈಲ್‌, ವಾಟ್ಸಪ್‌ ಮೂಲಕ ಸಂವಹನ ನಡೆಸದೇ ಟೆಲಿಗ್ರಾಮ್‌, ಸಿಗ್ನಲ್‌ ಇತ್ಯಾದಿ ಮೆಸೆಂಜರ್‌ ಆಪ್‌ ಇವರು ಬಳಸುತ್ತಿದ್ದರು.

ಅಲ್ಲದೆ ಯಾಸಿನ್‌ ಮತ್ತು ಮಾಜ್‌ ಮುನೀರ್‌ ಪಿಯುಸಿ ಸ್ನೇಹಿತರು. ಇವರ ಜೊತೆ ಶಾರೀಕ್ ಐಸಿಸ್‌ ಚಟುವಟಿಕೆಯ ಬಗ್ಗೆ ಮಾಹಿತಿ ಕಳುಹಿಸುತ್ತಿದ್ದ. ಆರೋಪಿಗಳ ಮೊಬೈಲ್‌ನಲ್ಲಿ ಬಾಂಬ್‌ ತಯಾರಿಸುವ ಪಿಡಿಎಫ್‌ ಫೈಲ್‌, ಐಸಿಸ್‌ ಉಗ್ರರು ತಲೆ ಕಡಿಯುವ ಮತ್ತು ಜೀವಂತವಾಗಿ ಸುಡುವ ವೀಡಿಯೋಗಳು ಲಭ್ಯವಾಗಿದೆ.

ಇವರು ಐಸಿಸ್‌ ಜೊತೆ ನೇರವಾಗಿ ಸಂವಹನ ನಡೆಸಿರಲಿಲ್ಲ. ಆದರೆ ಐಸಿಸ್‌ ಟೆಲಿಗ್ರಾಮ್‌ ಚಾನೆಲ್‌ನ ಸದಸ್ಯರಾಗಿದ್ದರು.

ಇದೀಗ ಅಮದು ನಡೆದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಾರಿಕ್ ಇದೀಗ ನಿನ್ನೆ ನಡೆದ ಆಟೋ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಾನಾಗಿಯೇ ಕೈ ಸುಟ್ಟುಕೊಂಡಿದ್ದಾನೆ, ಪ್ರಯಾಣಿಕನಾಗಿ ಬಂದಿದ್ದವನು ಇವನೇ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here

Hot Topics

ಸುಳ್ಯ: ಸಚಿವ ಅಂಗಾರ ಅವರಿಗೆ ಡೆಂಗ್ಯೂ ದೃಢ-ಆಸ್ಪತ್ರೆಗೆ ದಾಖಲು

ಸುಳ್ಯ: ಶಾಸಕ, ಬಂದರು, ಮೀನುಗಾರಿಕೆ ಹಾಗೂ ಒಳ ನಾಡು ಜಲ ಸಾರಿಗೆ ಸಚಿವ ಎಸ್‌. ಅಂಗಾರ ಅವರಿಗೆ ಡೆಂಗ್ಯೂ ದೃಢಪಟ್ಟ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.  ಈ ಹಿನ್ನೆಲೆ ಅವರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿರುವುದಾಗಿ...

ಬಂಟ್ವಾಳದಲ್ಲಿ ಪಿಕಪ್ ವಾಹನಕ್ಕೆ ಗುದ್ದಿದ ಕಾರು..

ಬಂಟ್ವಾಳ: ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿ ಬಳಿಕ ಪಿಕಪ್ ವಾಹನ ರಸ್ತೆಯ ಬದಿಯಲ್ಲಿರುವ ಮನೆಗೆ ನುಗ್ಗಿ ಗೋಡೆ ಜರಿದು ಬಿದ್ದಂತಹ ಘಟನೆ ದಕ್ಷಿಣ ಕನ್ನಡ...

ಕುಕ್ಕೆ ಕ್ಷೇತ್ರದಲ್ಲಿ 116 ಮಂದಿ ಭಕ್ತರಿಂದ ಎಡೆಮಡೆ ಸ್ನಾನ..

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವದ ಪ್ರಯುಕ್ತ 116 ಮಂದಿ ಭಕ್ತರಿಂದ ಇಂದು ಎಡೆಮಡೆ ಸ್ನಾನ ನಡೆಯಿತು.ದೇವರ ನೈವೇದ್ಯದ ಮೇಲೆ...