LATEST NEWS
ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ; ಸಂಭ್ರಮ ಹಂಚಿಕೊಂಡ ಭುವನ್ ಪೊನ್ನಣ್ಣ
ಮಂಗಳೂರು/ಬೆಂಗಳೂರು : ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಪತಿ ಭುವನ್ ಪೊನ್ನಣ್ಣ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಜೋಡಿ ಹೆಣ್ಣು ಮಗುವನ್ನು಼ ಸ್ವಾಗತಿಸಿದೆ. ಮಗಳ ಆಗಮನದಿಂದ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಸಂತಸಗೊಂಡಿದ್ದಾರೆ.
ಎಲ್ಲರಿಗೂ ಹಾಯ್, ನಮ್ಮ ‘ಚೈಕಾರ್ತಿ ಮೂಡಿ’ ಜನ್ಮ ತಾಳಿರುವುದನ್ನು ತಿಳಿಸಲು ಬಹಳ ಖುಷಿಯಾಗುತ್ತಿದೆ. ಹರ್ಷಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಭುವನ್ ಪೊನ್ನಣ್ಣ ಬರೆದುಕೊಂಡಿದ್ದಾರೆ.
ಹರ್ಷಿಕಾ ಹಾಗೂ ಭುವನ್ ಪರಸ್ಪರ ಪ್ರೀತಿಸಿ ಮದುವೆಯಾದವರು. ಹಲವು ವರ್ಷಗಳ ಕಾಲ ಪ್ರೀತಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಆಗಸ್ಟ್ 24ರಂದು ಹರ್ಷಿಕಾ ಹಾಗೂ ಭುವನ್ ಮದುವೆ ಕೊಡವ ಶೈಲಿಯಲ್ಲಿ ನಡೆದಿತ್ತು.
ಸದ್ಯ ಅಭಿಮಾನಿಗಳು ದಂಪತಿಗೆ ಶುಭ ಹಾರೈಸಿದ್ದು, ಮಗುವಿನ ಮುಖವನ್ನು ಬೇಗ ರಿವೀಲ್ ಮಾಡಲಿ ಎಂದು ಕಾಯುತ್ತಿದ್ದಾರೆ.
LATEST NEWS
ಅರಿಯದೆ ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲು…. ಎಲ್ಲಿ ಗೊತ್ತಾ ?
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಮಮದ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿರುವುದು ತಿಳಿದು ಬಂದಿದೆ. ಜನರಿಗೆ ವಾಂತಿ, ಭೇಧಿ ಉಂಟಾಗಿದ್ದು ಇಡೀ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಕರ್ಕಿಹಳ್ಳಿ ಹಾಗೂ ಮೇಡಿಕಲ್ ಗ್ರಾಮಸ್ಥರು ಕಾಫಿನಾಡಿಯ ಟ್ಯಾಂಕಿನಿಂದ ಕಲುಷಿತ ನೀರನ್ನು ಕುಡಿದು, ಕರ್ಕಿಹಳ್ಳಿಯಲ್ಲಿ 500 ಹಾಗೂ ಮೇಡಿಕಲ್ನಲ್ಲಿ 600 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರೂ ವಾಂತಿ ಭೇದಿಯನ್ನು ಅನುಭವಿಸುತ್ತಿದ್ದು, 80 ವರ್ಷದ ವೃದ್ಧನ ಪರಿಸ್ಥಿತ ತೀರಾ ಹದಗೆಟ್ಟು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ 6 ಮತ್ತು 7 ನೇ ವಾರ್ಡ್ನಲ್ಲಿ ಬರುವ ನೀರು ಸಂಪೂರ್ಣವಾಗಿ ಅಶುದ್ಧಿಯಾದ ಹಿನ್ನಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BIG BOSS
BBK11: ದೊಡ್ಮನೆಗೆ ಬಂದ 4 ದಿನಕ್ಕೆ ಸ್ಪರ್ಧಿಗಳ ಕಣ್ಣೀರು; ಕಾರಣವೇನು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ 4 ದಿನಕ್ಕೆ ಕಾಲಿಟ್ಟಿದೆ. ಬಿಗ್ಬಾಸ್ ಸೀಸನ್ 11 ಬಹಳ ಅದ್ಧೂರಿಯಾಗಿ ಓಪನಿಂಗ್ ಕಂಡಿದೆ. ಆದರೆ ಕಳೆದ 10 ಸೀಸನ್ಗೂ ಈಗಿನ ಸೀಸನ್ 11ಗೂ ತುಂಬಾನೇ ವ್ಯತ್ಯಾಸವಿದೆ.
ಕಳೆದ ಸೀಸನ್ ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿ ಅಷ್ಟೂ ಜನ ಇದ್ದರು ನನಗೆ ಒಂಟಿತನ ಕಾಡುತ್ತಿದೆ ಬಿಗ್ಬಾಸ್. ನನಗೆ ಮನೆಗೆ ಕಳುಹಿಸಿ ಬಿಗ್ಬಾಸ್, ನನಗೆ ಕುಟುಂಬಸ್ಥರ ನೆನಪಾಗುತ್ತದೆ ಅಂತ ಹೇಳುತ್ತಿದ್ದರು. ಆದರೆ ಈ ಬಾರಿಯ ಬಿಗ್ಬಾಸ್ ಸೀಸನ್ 11 ಶುರುವಾಗಿ ಎರಡೇ ದಿನಕ್ಕೆ ಸ್ಪರ್ಧಿಗಳು ಕಣ್ಣೀರು ಹಾಕುತ್ತಿದ್ದಾರೆ.
ಅದರಲ್ಲೂ ಬಿಗ್ಬಾಸ್ಗೆ ಬಂದ ಮೊದಲ ದಿನವೇ ಧನರಾಜ್ ಆಚಾರ್ಯ ಅವರು ಕಣ್ಣೀರು ಹಾಕಿದ್ದರು. ಇದಾದ ಬಳಿಕ ಅನುಷಾ ರೈ ಅವರು ಊಟಕ್ಕೆ ತೊಂದರೆ ಆಗ್ತಾ ಇದೆ ಅಂತ ಅತ್ತಿದ್ದರು. ಬಳಿಕ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಹಂಸ ನಾರಾಯಣ್ ಕೂಡ ಬಿಗ್ಬಾಸ್ಮನೆಯ ವಾತಾವರಣಕ್ಕೆ ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ರು. ಜೊತೆಗೆ ಮಾನಸಾ ಲಾಯರ್ ಜಗದೀಶ್ ಮಾತಿಗೆ ಬೇಸರದಿಂದ ಕಣ್ಣೀರು ಹಾಕಿದ್ದಾರೆ. ಇದೀಗ ಐಶ್ವರ್ಯ ಸಿಂಧೋಗಿ ಅವರು ಜೋರಾಗಿ ಅತ್ತುಕೊಂಡು ಆಚೆ ಬಂದಿದ್ದಾರೆ.
ಕಲರ್ಸ್ ಕನ್ನಡ ಶೇರ್ ಮಾಡಿಕೊಂಡ ಹೊಸ ಪ್ರೋಮೋದಲ್ಲಿ ಐಶ್ವರ್ಯ ಜೋರಾಗಿ ಅಳುತ್ತಾ ಬಂದಿದ್ದಾರೆ. ಐಶ್ವರ್ಯಾ ಅವರ ಕಣ್ಣೀರಿಗೆ ಕಾರಣ ಏನಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಇನ್ನೂ ಜೋರಾಗಿ ಅಳುತ್ತಾ ಕುಳಿತುಕೊಂಡಿದ್ದ ಐಶ್ವರ್ಯಾಗೆ ಗೌತಮಿ ಜಾಧವ್, ಭವ್ಯಾ ಗೌಡ ಅವರು ಸಮಾಧಾನ ಮಾಡಿದ್ದಾರೆ. ನಮ್ಮ ಮನೆಯ ಕೆಲಸದವರಿಗೂ ನಾನು ಈ ರೀತಿ ಮಾತುಗಳನ್ನು ಹೇಳಲ್ಲ ಅಂತ ಐಶ್ವರ್ಯಾ ಅವರು ಕಣ್ಣೀರು ಸುರಿಸಿದ್ದಾರೆ. ಸದ್ಯ ಇದಕ್ಕೆಲ್ಲ ವೀಕ್ಷಕರು ಕಿಚ್ಚನ ಪಂಚಾಯ್ತಿಗಾಗಿ ಕಾಯುತ್ತಿದ್ದಾರೆ.
LATEST NEWS
ತಿರುಪತಿ ಲಡ್ಡು ವಿವಾದ: ಹೊಸ ತನಿಖೆಗೆ ಸುಪ್ರೀಂಕೋರ್ಟ್ ಆದೇಶ
ನವದೆಹಲಿ : ತಿರುಪತಿ ಲಡ್ಡು ವಿವಾದದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್ಎಸ್ಎಸ್ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು–ಸದಸ್ಯರ ಸ್ವತಂತ್ರ ಎಸ್ಐಟಿಯನ್ನು ರಚಿಸಲು ಸೂಚಿಸಿದೆ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಸಂಬಂಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಶೇಷ ತನಿಖಾ ತಂಡದಲ್ಲಿ (ಎಸ್ಐಟಿ)ಆಂಧ್ರಪ್ರದೇಶ ಪೊಲೀಸ್ನ ಇಬ್ಬರು ಅಧಿಕಾರಿಗಳು, ಒಬ್ಬ ಎಫ್ಎಸ್ಎಸ್ಎಐನ ಹಿರಿಯ ಅಧಿಕಾರಿ ಇರಲಿದ್ದಾರೆ. ಎಸ್ಐಟಿ ತನಿಖೆಯನ್ನು ಸಿಬಿಐ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಪೀಠ ಹೇಳಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು, ‘ಈ ವಿಚಾರಕ್ಕೆ ನ್ಯಾಯಾಲಯವನ್ನು ರಣರಂಗವಾಗಿ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ. ದೇವರಲ್ಲಿ ನಂಬಿಕೆ ಹೊಂದಿರುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಪ್ಪಿಸಲು ಎಸ್ಐಟಿ ರಚನೆ ಮಾಡಲಾಗಿದೆ ಎಂದಿದೆ.
ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ಗೆ ಹೇಳಿಕೆ ನೀಡಿದ್ದು, ಎಸ್ಐಟಿಯ ಮೇಲೆ ಕೇಂದ್ರದ ಹಿರಿಯ ಅಧಿಕಾರಿ ನಿಗಾ ವಹಿಸಬೇಕು. ಇದರಿಂದ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು. ಇದು ಕೋಟ್ಯಂತರ ಜನರ ನಂಬಿಕೆಯ ಪ್ರಶ್ನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ ಇದೊಂದು ರಾಜಕೀಯ ನಾಟಕವಾಗಬಾರದು. ಸ್ವತಂತ್ರ ಸಂಸ್ಥೆ ಇದ್ದರೆ ಆತ್ಮವಿಶ್ವಾಸ ಮೂಡುತ್ತದೆ.
ಇದನ್ನೂ ಓದಿ : ಬಿಗ್ ಬಾಸ್ನಿಂದ ಚೈತ್ರಾರನ್ನು ಹೊರಗೆ ಹಾಕಿ, ಇಲ್ಲದಿದ್ರೆ ಕಾರ್ಯಕ್ರಮ ಸ್ಥಗಿತ ಮಾಡಿಸುತ್ತೇನೆ ಎಂದ ವಕೀಲ!
ಸೆಪ್ಟೆಂಬರ್ 30 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯವು ನೇಮಿಸಿದ ಎಸ್ಐಟಿ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂದು ನಿರ್ಧರಿಸಲು ಸಹಾಯ ಮಾಡುವಂತೆ ಪೀಠವು ಮೆಹ್ತಾ ಅವರನ್ನು ಕೇಳಿತ್ತು.
- BIG BOSS4 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- BIG BOSS4 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!
- BIG BOSS4 days ago
ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್
- LATEST NEWS3 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್