Connect with us

    DAKSHINA KANNADA

    ‘ಕೋರಿದ ಕಟ್ಟಕ್ಕೆ’ ಹೈಕೋರ್ಟ್ ಅನುಮತಿ: ಆದರೆ ಷರತ್ತು ಅನ್ವಯ

    Published

    on

    ಮಂಗಳೂರು: ತುಳುನಾಡಿನ ಮನೋರಂಜನಾ ಕ್ರೀಡೆಗಳಲ್ಲಿ ಒಂದಾದ ಕೋಳಿ ಅಂಕಕ್ಕೆ ನ್ಯಾಯಾಲಯ ಷರತ್ತು ಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳ ನಡೆಯುವ ಸಂಖ್ಯೆ ಹೆಚ್ಚಾಗಿದೆ.

    ಕೋಳಿ ಅಂಕ ಹೆಚ್ಚಾದಂತೆ ಫೈಟರ್ ಕೋಳಿಗಳಿಗೆ ಭರ್ಜರಿ ಬೇಡಿಕೆ ಬಂದಿದೆ. ಸ್ಥಳೀಯ ಹಾಗೂ ಸೇಲಂ ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದು, ಈ ಕೋಳಿಗಳಿಗೆ ಕಾಳಗಕ್ಕಾಗಿ ಸ್ಪೆಷಲ್ ತರಬೇತಿಯನ್ನೂ ನೀಡಲಾಗುತ್ತದೆ.


    ಕರಾವಳಿ ಭಾಗದ ಕೃಷಿಕರ ಪ್ರಮುಖ ಮನೋರಂಜನಾ ಕ್ರೀಡೆಗಳಲ್ಲಿ ಕಂಬಳ ಮತ್ತು ಕೋಳಿ ಅಂಕಕ್ಕೆ ತನ್ನದೇ ಆದ ಮಹತ್ವವಿದೆ.

    ಎರಡೂ ಕ್ರೀಡೆಗಳಲ್ಲಿ ಪ್ರಾಣಿಗಳಿಗೆ ಹಿಂಸೆ ಹಾಗೂ ಜೂಜಾಟವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಎರಡೂ ಕ್ರೀಡೆಗಳಿಗೂ ರಾಜ್ಯದಲ್ಲಿ ನಿಷೇಧವನ್ನೂ ಹೇರಲಾಗಿತ್ತು.

    ಬಳಿಕ ನಡೆದ ವಿದ್ಯಮಾನಗಳಲ್ಲಿ ಕಂಬಳ ಕ್ರೀಡೆಗೆ ಹಲವು ರೀತಿಯ ಷರತ್ತುಗಳನ್ನು ಹಾಕುವ ಮೂಲಕ ಅನುಮತಿಯನ್ನು ನ್ಯಾಯಾಲಯ ನೀಡಿದ್ದು,

    ಕೋಳಿ ಅಂಕಕ್ಕೂ ಇದೇ ರೀತಿಯ ಷರತ್ತುಗಳ ಮೂಲಕ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕೋಳಿ ಅಂಕಕ್ಕೆ ಅನುಮತಿ ದೊರೆತ ಬಳಿಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳ ಸಂಖ್ಯೆ ಹೆಚ್ಚಾಗುತ್ತಿದೆ.

    ಪ್ರಮುಖವಾಗಿ ಊರಿನ ಕೋಳಿ ಹಾಗೂ ಸೇಲಂ ಕೋಳಿಗಳನ್ನು ಕೋಳಿ ಅಂಕದಲ್ಲಿ ಕಾದಾಟಕ್ಕೆ ಬಳಸಲಾಗುತ್ತಿದ್ದು, ಕೋಳಿ ಅಂಕಕ್ಕೆ ಬರುವ ಮೊದಲು ಕೋಳಿಗಳಿಗೆ ಹಲವು ರೀತಿಯ ತರಬೇತಿಗಳನ್ನೂ ನೀಡಲಾಗುತ್ತದೆ.

    ಖರೀದಿ ಮಾಡಿದ ಕೋಳಿಗಳನ್ನು ವಾರಕ್ಕೆ ಮೂರು ಬಾರಿ ಈಜಾಡಿಸುವುದು, ಹಂದಿ ಮಾಂಸದ ಎಣ್ಣೆ ತಿನ್ನಲು ಕೊಡುವುದು, ಹಲ್ಲಿಗಳನ್ನು ತಿನ್ನಲು ಕೊಡುವುದು ಹೀಗೆ ಕೋಳಿಗಳನ್ನು ದಷ್ಟ-ಪುಷ್ಟವಾಗಿ ತಯಾರು ಮಾಡಿದ ಬಳಿಕವೇ ಕೋಳಿಗಳನ್ನು ಕಾದಾಟದ ಅಂಕಕ್ಕೆ ಕರೆ ತರಲಾಗುತ್ತದೆ.

    10 ರಿಂದ 30 ಸಾವಿರದ ವರೆಗಿನ ಫೈಟರ್ ಕೋಳಿಗಳೂ ಕೋಳಿ ಅಂಕದಲ್ಲಿ ಕಾದಾಟಕ್ಕೆ ಬರುತ್ತಿದ್ದು, ಇವುಗಳ ಮೇಲೆ ಲಕ್ಷಕ್ಕೂ ಮಿಕ್ಕಿದ ಜೂಜನ್ನೂ ಕಟ್ಟಲಾಗುತ್ತದೆ.

    ಕುಪ್ಪುಳ, ಮೈರ, ಕಾವ, ಕೆಮ್ಮರ, ಬಿಳಿ ಕೋಳಿ, ನೀಲ ಕೋಳಿ ಹೀಗೆ ಹಲವು ತರಹದ ಕೋಳಿಗಳನ್ನು ಕೋಳಿ ಅಂಕದಲ್ಲಿ ಕಾದಾಟಕ್ಕೆ ಬಿಡಲಾಗುತ್ತಿದ್ದು, ಕೋಳಿಗಳ ಕಾದಾಟವನ್ನು ವೀಕ್ಷಿಸಲು ನೂರಾರು ಮಂದಿ ಸೇರುತ್ತಾರೆ.
    ನ್ಯಾಯಾಲಯದ ಷರತ್ತಿನ ಪ್ರಕಾರ ಕೋಳಿ ಅಂಕದಲ್ಲಿ ಕಾದಾಟ ನಡೆಸುವ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟುವಂತಿಲ್ಲ, ಜೂಜಾಟ ನಡೆಸುವಂತಿಲ್ಲ ಎನ್ನುವ ಅಂಶಗಳ ಉಲ್ಲೇಖವಿದ್ದರೂ, ಬಹುತೇಕ ಕೋಳಿ ಅಂಕಗಳಲ್ಲಿ ಇವೆರಡು ಇಲ್ಲದೆ ಕೋಳಿ ಅಂಕಗಳು ನಡೆಯುವುದೇ ಇಲ್ಲ.

    ಹೆಚ್ಚಾಗಿ ದೈವಸ್ಥಾನಗಳ ಜಾತ್ರೆ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಕೋಳಿ ಅಂಕಗಳು ಆರಂಭವಾಗುತ್ತಿದ್ದು, ಹಿಂದೆ ಕೃಷಿಕರು ಮನೋರಂಜನಾ ಕ್ರೀಡೆಯಾಗಿ ಕೋಳಿ ಅಂಕವನ್ನು ನೋಡುತ್ತಿದ್ದರು.

    ಆದರೆ ಕಾಲ ಕ್ರಮೇಣ ಕೋಳಿ ಅಂಕಕ್ಕೂ ಜೂಜಿನ ಅಮಲು ಅಂಟಿಕೊಂಡ ಬಳಿಕ ಕೋಳಿ ಅಂಕ ಜನಾಕರ್ಷಣೆಯ ಪ್ರಮುಖ ಕ್ರೀಡೆಯಾಗಿಯೂ ಬದಲಾಗಿದೆ.

    ಜಿಲ್ಲೆಯಲ್ಲಿ ಹೆಚ್ಚಿನ ಕಡೆಗಳಲ್ಲಿ ದೈವಾರಾಧನೆ ಇರುವ ಕಡೆಗಳಲ್ಲಿ ಸ್ಥಳಿಯ ಆಡಳಿತವು ಈ ಕೋಳಿ ಅಂಕಕ್ಕೆ ಅನುಮತಿಯನ್ನೂ ನೀಡುತ್ತಿದ್ದು, ಉಳಿದ ಕಡೆಗಳಲ್ಲಿ ಇದಕ್ಕೆ ಅವಕಾಶವಿರಲಿಲ್ಲ.

    ಆದರೆ ನ್ಯಾಯಾಲಯದ ತೀರ್ಪಿನ ಬಳಿಕ ಕೋಳಿ ಅಂಕಗಳು ಪ್ರತಿದಿನ ಒಂದಲ್ಲ ಒಂದು ಕಡೆಗಳಲ್ಲಿ ನಡೆಯುತ್ತಿದ್ದು, ಇದನ್ನೇ ಒಂದು ಕಸುಬಾಗಿ ಆಯ್ದುಕೊಂಡವರೂ ನೂರಾರು ಜನರಿದ್ದಾರೆ.

    BIG BOSS

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಸಂಚು ರೂಪಿಸುತ್ತಿದ್ದಾಗಲೇ ಅರೆಸ್ಟ್‌

    Published

    on

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ (43) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನವೆಂಬರ್ 22ರ ಸಂಜೆ ಬಂಧಿಸಿದೆ.

    ಆರೋಪಿ ದಾವೂದ್ ಉಳ್ಳಾಲದ ಧರ್ಮನಗರ ನಿವಾಸಿ. ಅವನು ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದಾಗಲೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ರೌಡಿಶೀಟರ್‌ನನ್ನು ಬಂಧಿಸಲು ಮುಂದಾಗಿದೆ.

    ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪಿಎಸ್ ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ಹೊರತಾಗಿಯೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ದಾವುದ್‌ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

    ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ನರೇಂದ್ರ ಅವರ ದೂರಿನ ಮೇರೆಗೆ ಆರೋಪಿ ದಾವುದ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ದಾವೂದ್ ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿರುತ್ತಾನೆ. ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರ ಸ್ಥಳಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ವರದಿಯಾಗಿದೆ .

    Continue Reading

    BIG BOSS

    ಕೊಣಾಜೆ: 3 ವರ್ಷದ ಬಾಲೆಗೆ ಕಿ*ರುಕುಳ ನೀಡಿದ 70ರ ಅಜ್ಜ ಅರೆಸ್ಟ್

    Published

    on

    ಕೊಣಾಜೆ: ಬಾಲಕಿಗೆ ಕಿ*ರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ಪತ್ತರ ಹರೆಯದ ವೃದ್ಧನನ್ನು ಪೊಲೀಸರು ಬಂಧಿಸಿ,‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಆರೋಪಿಯನ್ನು ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.

    ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದಲ್ಲಿ ಘಟನೆ ನಡೆದಿದೆ. 3 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಆರೋಪಿ ಲೈಂ*ಗಿಕ ಕಿ*ರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯ ಅಸ್ವಸ್ಥತೆಯನ್ನು ಗಮನಿಸಿದ ತಾಯಿ ವೈದ್ಯಕೀಯ ತಪಾಸಣೆ ನಡೆಸಿದ್ದು ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಬಗ್ಗೆ ಕೊಣಾಜೆ ಪೊಲೀಸರು ಆರೋಪಿ ವಿರುದ್ಧ ಪೋ*ಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    Continue Reading

    BIG BOSS

    ಮಂಗಳೂರು: ಮುಂಜಾನೆಯೇ ಸರಣಿ ಅ*ಪಘಾತ; ವಿದ್ಯಾರ್ಥಿಗಳಿದ್ದ ಬಸ್ ಪ*ಲ್ಟಿ

    Published

    on

    ಮಂಗಳೂರು: ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅ*ಪಘಾತ ಸಂಭವಿಸಿದೆ. ಕುಂದಾಪುರ ಪ್ರವಾಸಕ್ಕೆ ತೆರಳಿ ಹಿಂದಿರುಗುತ್ತಿದ್ದ ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಟೂರಿಸ್ಟ್ ಬಸ್ ಉರುಳಿ ಬಿದ್ದಿದೆ.

    ಇಂದು (ನ.23) ಬೆಳಗಿನ ಜಾವ ಕಾರೊಂದು ಹಿಂದಿನಿಂದ ಬಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿ*ಕ್ಕಿ ಹೊಡೆದಿದೆ. ನಂತರ, ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಗು*ದ್ದಿದೆ.

    ಟೂರಿಸ್ಟ್ ಬಸ್ ರಸ್ತೆಗೆ ಉರುಳಿದ್ದು, ವಿದ್ಯಾರ್ಥಿಗಳು ಗಾ*ಯಗೊಂಡಿದ್ದಾರೆ. ಗಾ*ಯಾಳುಗಳನ್ನು ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಉಪ್ಪಿನಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending