Connect with us

    LATEST NEWS

    ಗೃಹಲಕ್ಷ್ಮೀ ಹಣದಿಂದ ವಿದ್ಯಾರ್ಥಿಗಳಿಗೆ `ಗ್ರಂಥಾಲಯ’ ಕಟ್ಟಿಸಿದ ಮಹಾ ತಾಯಿ!

    Published

    on

    ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ಮಕ್ಕಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

    ಹೌದು, ಬೆಳಗಾವಿಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ, ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

    ಈ ಬಗ್ಗೆ ಟ್ವಿಟರ್ ನಲ್ಲಿ ಮಲ್ಲವ್ವ ಮೇಟಿ ಮಾಹಿತಿ ಹಂಚಿಕೊಂಡಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಡೆವಲಪ್‌ಮೆಂಟ್‌ ಕಮೀಷನರ್‌ ಉಮಾ ಮಹದೇವನ್‌ ದಾಸ್‌ಗುಪ್ತ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್‌ ಮಾಡಿದ್ದಾರೆ. ಮಂಟೂರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ಮಲ್ಲವ್ವ ಭೀಮಪ್ಪ ಮೇಟಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    13 ತಿಂಗಳಿನಿಂದ ಗೃಹಲಕ್ಷ್ಮೀ ಹಣ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಮೆಂಬರ್‌ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ. ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನೆ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ತಿಳಿಸಿದ್ದಾರೆ.

    LATEST NEWS

    ಹಿರಿಯಡ್ಕ: ಉದ್ಯಮಿ ಪ್ರಸನ್ನ ಶೆಟ್ಟಿ ತೀರ್ಥಹಳ್ಳಿಯ ವಸತಿ ಗೃಹದಲ್ಲಿ ಆತ್ಮಹ*ತ್ಯೆ

    Published

    on

    ಹಿರಿಯಡ್ಕ: ಕೊಂಡಾಡಿ ಮೂಲದ ಪ್ರಸನ್ನ ಶೆಟ್ಟಿ (45) ತೀರ್ಥಹಳ್ಳಿಯ ವಸತಿ ಗೃಹದಲ್ಲಿ ಶುಕ್ರವಾರ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಅವರು 3 ದಿನಗಳ ಹಿಂದೆ ತೀರ್ಥಳ್ಳಿಗೆ ಆಗಮಿಸಿ ವಸತಿಗೃಹದಲ್ಲಿ ವಾಸ್ತವಾವಿದ್ದರು ಎಂದು ಹೇಳಲಾಗಿದ್ದು ನಿನ್ನೆ ಕೊಠಡಿಯಿಂದ ಯಾವುದೇ ಶಬ್ದ ಕೇಳಿಸದ ಕಾರಣ ಅನುಮಾನ ಗೊಂಡ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ಆತ್ಮಹ*ತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

    ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರಸನ್ನ ಬೆಂಗಳೂರಿನಿಂದ ಮಡದಿಯ ಸೀರೆಯೊಂದನ್ನು ತಂದಿದ್ದು ಹೊರಡುವ ಮೊದಲೇ ಆತ್ಮಹ*ತ್ಯೆಯ ಬಗ್ಗೆ ಯೋಚಿಸಿದ್ದರು ಎಂದು ತಿಳಿದು ಬಂದಿದೆ. ಅಂತ್ಯ*ಕ್ರಿಯೆಯನ್ನು ಇಂದು ಅವರ ಹಿರಿಯರ ಮನೆಯಾದ ಕೊಂಡಾಡಿಯಲ್ಲಿ ನೆರವೇರಿಸಲಾಗಿದೆ. ಮೃ*ತರು ಪತ್ನಿ, ಎರಡು ವರ್ಷದ ಪುತ್ರಿ, ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

    ಸುಮಾರು ಆರು ಪುಟಗಳ ಡೆತ್ ನೋಟ್ ಬರೆದಿಟ್ಟು ಸಾ*ವಿನ ಕಾರಣ ವಿವರಿಸಿದ್ದಾರೆ. ಕೆಲವೊಂದು ಹೆಸರುಗಳನ್ನು ಬರೆದಿದ್ದು ಮತ್ತೆ ಕೆಲವು ತನ್ನ ವ್ಯವಹಾರದ ವಿಷಯಗಳನ್ನು ಬರೆದಿಟ್ಟಿದ್ದರು ಎಂದು ಪೊಲೀಸ್ ಮೂಲದಿಂದ ಮಾಹಿತಿ ಲಭ್ಯವಾಗಿದೆ. ಪ್ರಸನ್ನ ಶೆಟ್ಟಿ, ಬೆಂಗಳೂರಿನಲ್ಲಿ ರೆಸ್ಟೋರೆಂಟ್, ಬೇಕರಿ ಮತ್ತು ಹಣದ ವ್ಯವಹಾರವನ್ನು ನಡೆಸುತ್ತಿದ್ದರು.

    Continue Reading

    LATEST NEWS

    ಈವೆಂಟ್ ಮ್ಯಾನೆಜ್‌ಮೆಂಟ್ ಹೆಸರಿಟ್ಟುಕೊಂಡು ವೇಶ್ಯವಾಟಿಕೆ.. !

    Published

    on

    ಮಂಗಳೂರು/ಬೆಂಗಳೂರು: ಈವೆಂಟ್ ಮ್ಯಾನೆಜ್‌ಮೆಂಟ್ ಹೆಸರಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು ಸಿಸಿಬಿಯ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ.


    ಪಟ್ಟೆಗರಪಾಳ್ಯದ ನಿವಾಸಿಗಳಾದ ಪ್ರಕಾಶ್ ಹಾಗೂ ಪಾರಿಜಾತ ಬಂಧಿತ ಆರೋಪಿ.
    ಆರೋಪಿಗಳು ತಮ್ಮ ನೈಜ್ಯ ಹೆಸರು ಬಾರದಂತೆ ರಾಕೇಶ್, ಪೂಜಾ ಎಂದು ಹೆಸರು ಬದಲಿಸಿಕೊಂಡಿದ್ದರು. ಬಡ ಹೆಣ್ಣು ಮಕ್ಕಳನ್ನು ಟಾರ್ಗೇಟ್ ಮಾಡಿ ಉತ್ತರ ಕರ್ನಾಟಕ ಭಾಗದ ಬಡ ಹೆಣ್ಣುಮಕ್ಕಳಿಗೆ ಕೆಲಸದ ಆಮೀಷವೊಡ್ಡಿ ಬೆಂಗಳೂರಿಗೆ ಕರೆತರುತ್ತಿದ್ದರು.
    ಕೆಲಸ ಮುಗಿಸಿದ ತಕ್ಷಣ ವೇಶ್ಯವಾಟಿಕೆ ದಂಧೆಗೆ ಹೆಣ್ಣು ಮಕ್ಕಳನ್ನು ದೂಡುತ್ತಿದ್ದರು. ಬಳಿಕ ಈವೆಂಟ್ ಮ್ಯಾನೇಜ್‌ಮೆಂಟ್ ಕೆಲಸದವೆಂದು ವಾರಕೊಮ್ಮೆ ತಮೀಳುನಾಡು, ಪುದುಚೇರಿ ರೆಸಾರ್ಟ್‌ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಕರೆದೊಯ್ದು ವೇಶ್ಯವಾಟಿಕೆಯಲ್ಲಿ ತೊಡಗುವಂತೆ ಆಮಿಷವೊಡ್ಡುತ್ತಿದ್ದರು.
    ಐಷರಾಮಿ ಪಾರ್ಟಿಗೆ ಈ ದಂಪತಿ ಮದ್ಯ ಪೂರೈಕೆ ಮಾಡುತ್ತಿದ್ದು, ಪಾರ್ಟಿಗೆ ಬರುವ ಒಬ್ಬರಿಗೆ ತಲಾ 25 ಸಾವಿರ ರೂ.ನಿಂದ 50 ಸಾ.ರೂ.ವರೆಗೆ ಶುಲ್ಕ ನಿಗದಿಪಡಿಸುತ್ತಿದ್ದರು.
    ಬೆಂಗಳೂರಿನಿಂದ ಯುತಿಯರನ್ನು ಕರೆದೊಯ್ಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಪ್ರಕಾರ ಸಿಸಿಬಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂದಿಸಿದ್ದಾರೆ. ನಾಲ್ವರು ಯುವತಿಯರ ರಕ್ಷಣೆ ಮಾಡಲಾಗಿದೆ.

    Continue Reading

    BIG BOSS

    ಬಿಗ್​ಬಾಸ್ ಮನೆಯಲ್ಲಿ ಜಗದೀಶ್- ಹಂಸಾ ಡುಯೇಟ್ ! ಶುರುವಾಯ್ತು ಪ್ರೇಮ್ ಕಹಾನಿ

    Published

    on

    ಬಿಗ್​ಬಾಸ್ ಗ್ರ್ಯಾಂಡ್ ಓಪನಿಂಗ್ ಪಡೆದು ಯಶಸ್ವಿಯಾಗಿ ಸಾಗುತ್ತಿದೆ. ಬಿಗ್ ಮನೆಯೊಳಗೆ ಸ್ಪರ್ಧಿಗಳು ಕೂಡ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಶನಿವಾರ-ಭಾನುವಾರ ಬಂದರೆ ಸಾಕು ಪ್ರೇಕ್ಷಕರೆಲ್ಲ ಕಿಚ್ಚನ ಪಂಚಾಯತಿಗಾಗಿ ಕಾಯುತ್ತಿರುತ್ತಾರೆ. ಶನಿವಾರದ ಪಂಚಾಯತಿಯಲ್ಲಿ ಸ್ಪರ್ಧಿಗಳಿಗೆ ಬಹುಮಾನ ನೀಡಲಾಗಿತ್ತು. ಇದರ ಜೊತೆಗೆ ಏನೇನು ಆಗಿದೆ ಎಂದು ನಿಮಗೆಲ್ಲ ಗೊತ್ತಿದೆ. ಸದ್ಯ ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನೆಲ್ಲ ನಡೆಯಲಿದೆ?

    ಇಂದಿನ ಕಿಚ್ಚನ ಪಂಚಾಯತಿ ಫುಲ್ ಜೋಶ್​ನಲ್ಲಿ ಇರಬಹುದೆಂದು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆದ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಹಂಸಾ ಅವರ ಕ್ಯಾಪ್ಟನ್ಸಿಯಲ್ಲಿ ಏನೇನು ಫೆಸಲಿಟಿ ಇತ್ತು ಎಂದು ಲಾಯರ್ ಜಗದೀಶ್​ಗೆ ಸುದೀಪ್ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಲಾಯರ್ ಜಗದೀಶ್ ಫುಲ್ ಕಾಮಿಡಿಯಾಗಿ ಉತ್ತರಿಸಿದ್ದು ಬೇಜಾರ ಎಂದರೆ ನನ್ನ ಜೊತೆ ಡುಯೇಟ್ ಮಾಡಿದ್ದು ಅಂತ ಹೇಳಿ ಎಲ್ಲ ಸ್ಪರ್ಧಿಗಳನ್ನ ನಕ್ಕು ನಲಿಸಿದ್ದಾರೆ.

    ಇನ್ನು ಹಂಸಾನೂ ಮಾತನಾಡಿ ಲಾಯರ್ ಬಳಿ ಮಾತಿನಿಂದ ಗೆಲ್ಲಲು ಆಗಲ್ಲ. ಮನಸಾದ್ರೂ ಗೆದ್ದರೇ ನನ್ನ ಕೆಲಸ ಮಾಡಿಕೊಳ್ಳಬಹುದು ಎಂದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಕಿಚ್ಚ ಏನ್​ ಗೆದ್ದರೇ ಎಂದು ಪ್ರಶ್ನಿಸುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಇನ್ನು ಧನ್​ರಾಜ್ ಕೂಡ ಪಂಚಾಯತಿಯಲ್ಲಿ ಲಾಯರ್​ ಬಗ್ಗೆ ಮಾತನಾಡಿ, ರಾತ್ರಿ ಮಲಗಿಕೊಳ್ಳಬೇಕಾದರೆ, ನನಗೆ ಫೀಲ್ ಆಗ್ತಿದೆ. ನನ್ನ ಹೆಂಡತಿ ಜೊತೆ ಒಂದು ಸಾರಿನೂ ಈ ತರ ಡುಯೇಟ್ ಮಾಡಿಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ. ಇನ್ನು ಜಗದೀಶ್ ಹಾಗೂ ಹಂಸಾ ಸಾಂಗ್​ಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದೆಲ್ಲ ನೋಡಲು ಇನ್ನು ಕೆಲ ಗಂಟೆ ಕಾಯಬೇಕಾಗಿದೆ.

    Continue Reading

    LATEST NEWS

    Trending