Connect with us

LATEST NEWS

ವರ್ಣರಂಜಿತ, ಜನಸಾಗರದ ನಡುವೆ ಅಭೂತಪೂರ್ವ ಜಿಪಿಎಲ್ ಸಂಪನ್ನ..

Published

on

ಮಂಗಳೂರು : ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವ ಫುಜ್ಲಾನಾ ಜಿಪಿಎಲ್ 2022 ನೇತ್ರಾವತಿ ನದಿ ತೀರದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ಸಿನಲ್ಲಿ ವರ್ಣರಂಜಿತವಾಗಿ ಕೊನೆಗೊಂಡಿದೆ.

ಒಟ್ಟು 3 ದಿನಗಳ ತನಕ ನಡೆದ, ರಾಷ್ಟ್ರದ ವಿವಿಧ ರಾಜ್ಯಗಳ 16 ತಂಡಗಳು ಭಾಗವಹಿಸಿದ ಕ್ರಿಕೆಟ್ ಪಂದ್ಯಾವಳಿಯನ್ನು ಶನಿವಾರ ದಕ್ಷಿಣ ಕನ್ನಡ ಸಂಸದರೂ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರೂ ಆದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು.

ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹಿತ ರಾಜ್ಯ, ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಉದ್ಘಾಟನೆಗೆ ಸಾಕ್ಷಿಯಾದರು.

ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಹೆಲಿಕಾಪ್ಟರ್ ರೇಡ್ ಮೂಲಕ ನೂರಾರು ಜನರು ಮಂಗಳೂರಿನ ಸೌಂದರ್ಯವನ್ನು ಬೆರಗುಗಣ್ಣಿನಲ್ಲಿ ನೋಡುವ ಅವಕಾಶವನ್ನು ಜಿಪಿಎಲ್ ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ ಹಾಗೂ ಅವರ ತಂಡ ಕಲ್ಪಿಸಿತ್ತು.

ಸಹ್ಯಾದ್ರಿ ಕಾಲೇಜಿನ ಹೊರಮೈದಾನದಲ್ಲಿ ವಿಶೇಷ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿತ್ತು.

ಅತಿಥಿಗಳು ಆಗಸದಲ್ಲಿ ಸಂಭ್ರಮಿಸುವುದು ಒಂದು ಕಡೆಯಾದರೆ ಇನ್ನೊಂದೆಡೆ ನದಿಯಲ್ಲಿ ಬೋಟಿಂಗ್ ಮಾಡುವ ಅನುಭವವೇ ಬೇರೆಯಾಗಿತ್ತು.

ಪ್ಲೈ ಬೋರ್ಡ್ ಎನ್ನುವ ವಿನೂತನ ರೀತಿಯ ಸಾಹಸಮಯ ಜಲಕ್ರೀಡೆಯನ್ನು ಜನರು ನೋಡಿ ಖುಷಿಪಟ್ಟರು.

ಅದಲ್ಲದೆ ಫ್ಯಾಮಿಲಿ ಬೋಟಿಂಗ್, ಸ್ಪೀಡ್ ಬೋಟ್ ಸಹಿತ ಇನ್ನಿತರ ಬೋಟ್ ಗಳಲ್ಲಿ ಕುಳಿತು ಜನರು ಆನಂದ ಅನುಭವಿಸಿದರು. ಮಕ್ಕಳಿಗಾಗಿ ವಿಶೇಷವಾಗಿ ನಿರ್ಮಿಸಿದ ಕಿಡ್ಸ್ ಝೋನ್ ನಲ್ಲಿ ವಿವಿಧ ಆಟಗಳಾದ ಸ್ಕೈ ಹೈ ಹಾಗೂ ಇನ್ನಿತರ ಆಟಗಳನ್ನು ಆಡಿ ಪುಟಾಣಿಗಳು ಸಂತೋಷದಲ್ಲಿ ತೇಲಾಡಿದರು.

ಮಹಿಳೆಯರಿಗಾಗಿ ಮೆಹಂದಿ, ರಂಗೋಲಿ, ಕೊಟ್ಟಿಗೆ ತಯಾರಿ, ಆಹಾರ ತಯಾರಿ ಸ್ಪರ್ಧೆ ಸಹಿತ ಅನೇಕ ಕ್ರಿಯಾತ್ಮಕ ಸ್ಪರ್ಧೆಗಳು ನಡೆದರೆ, ತಮ್ಮ ಕಲೆ, ಕೌಶಲ್ಯಗಳನ್ನು ನೆರೆದ ಸಾವಿರಾರು ಅತಿಥಿಗಳ ಮುಂದೆ ಪ್ರದರ್ಶಿಸಲು ಪ್ರತಿಭಾವಂತರಿಗೆ ಪ್ರತ್ಯೇಕ ವೇದಿಕೆ ನಿರ್ಮಾಣವಾಗಿತ್ತು.

ಜಿಪಿಎಲ್ ಪ್ರಮುಖ ಆಕರ್ಷಣೆಯಾದ ಫುಟ್ ಕೋರ್ಟ್ ಈ ಬಾರಿಯೂ ವೈವಿಧ್ಯಮಯ ಆಹಾರ ತಯಾರಿಕೆ ಮತ್ತು ಉಣಬಡಿಸುವಲ್ಲಿ ಸದಾ ಮುಂದೆ ಇತ್ತು. ಸುಮಾರು 50 ಸಾವಿರದಷ್ಟು ಜನರು ಮೂರು ದಿನಗಳ ಕಾಲ ಬೆಳಿಗ್ಗೆಯಿಂದ ಮಧ್ಯರಾತ್ರಿಯ ತನಕ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ಶುದ್ಧ ಸಸ್ಯಹಾರಿ ಆಹಾರಗಳನ್ನು ಸವಿದು ಉದರಕ್ಕೂ ಸಂತೃಪ್ತಿ ನೀಡಿದರು.

ಸಹ್ಯಾದ್ರಿ ಕಾಲೇಜಿನ ಐದು ಕಡೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ವಾಹನಗಳು ಅಚ್ಚುಕಟ್ಟಾಗಿ ಪಾರ್ಕ್ ಮಾಡಿ ಅತಿಥಿಗಳ ಆಗಮನ ಮತ್ತು ನಿರ್ಗಮನಕ್ಕೆ ಯಾವುದೇ ತೊಂದರೆ ಆಗದಂತೆ ಆಯೋಜಕರು ನೋಡಿಕೊಂಡರು.

ಗೃಹ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಅನೇಕ ಕಿರು ಉದ್ಯಮಿಗಳು ಉತ್ತಮ ವ್ಯಾಪಾರ ಮಾಡಿ ಆರ್ಥಿಕ ಚೈತನ್ಯವನ್ನು ಪಡೆದುಕೊಳ್ಳುವ ಸಂಪ್ರದಾಯ ಈ ಬಾರಿಯೂ ಮುಂದುವರೆದಿತ್ತು.

ಭಾನುವಾರ ರಾತ್ರಿ ಅಂತಿಮ ಪಂದ್ಯಾಟ ನಡೆದಿದ್ದು, ಪದ್ಮಶ್ರೀ ಮೋಹನದಾಸ್ ಪೈ ಅವರಿಗೆ ಈ ವರ್ಷದ ಜಿಎಸ್ ಬಿ ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಮೇ 19, 20ರಂದು ಆರೆಂಜ್ ಅಲರ್ಟ್‌

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 18 ರಿಂದ 21 ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 19 ಮತ್ತು 20 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆರೆಂಜ್ ಅಲರ್ಟ್‌ ಇರುವ ದಿನಗಳಲ್ಲಿ ಮಿಂಚು, ಗುಡುಗು, ಸಿಡಿಲುಗಳಿಂದ ಕೂಡಿದ ಭಾರಿ ಮಳೆಯಾಗಲಿದೆ. ಜಿಲ್ಲೆಯ ಕೆಲವೆಡೆ 11.55 ಸೆಂ.ಮೀ ನಿಂದ 20.44 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದೇ 18 ಮತ್ತು 21ರಂದು ಜಿಲ್ಲೆಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಕೆಲವೆಡೆ 6.45 ಸೆಂ.ಮೀ ನಿಂದ 11.55 ಸೆಂ.ಮೀವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

DAKSHINA KANNADA

ಕಾರಿನಲ್ಲಿ ಮಗುವನ್ನು ಮರೆತು ಹೋದ ತಾಯಿ..! ಕಾರಿನಲ್ಲೇ ಮಗುವಿನ ಅಂತ್ಯ…!

Published

on

ಮಂಗಳೂರು ( ರಾಜಸ್ಥಾನ ) :  ಮಕ್ಕಳ ಬಗ್ಗೆ ಪೋಷಕರು ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಆದ್ರೆ, ತಂದೆ ಮತ್ತು ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿ ಅಸುನೀಗಿದ್ದಾಳೆ. ಹೌದು, ಮಗು ಕಾರಿನಲ್ಲಿ ಉಸಿರುಗಟ್ಟಿ ಸಾ*ವನಪ್ಪಿದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮೃ*ತ ಮಗುವನ್ನು ಕೋಟಾದ ಇಂದ್ರ ಕಾಲೋನಿಯ ನಿವಾಸಿ ಪ್ರದೀಪ್ ಅವರ ಮಗಳು ಗರ್ವಿ (3) ಎಂದು ಗುರುತಿಸಲಾಗಿದೆ.

ಮದುವೆ ಸಂಭ್ರಮದಲ್ಲಿ ಕಳೆದುಹೋದ ದಂಪತಿ :

ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ತಾಯಿ ತನ್ನ ಇನ್ನೊಬ್ಬ ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಆದರೆ, ಬಾಲಕಿ ಗರ್ವಿ ಮಾತ್ರ ಕಾರಿನಲ್ಲೇ ಇದ್ದಳು. ಇತ್ತ ತಂದೆ ಕಾರನ್ನು ಪಾರ್ಕ್ ಮಾಡಿ, ಮಗು ಗರ್ವಿ ಕೂಡ ಅವಳ ತಾಯಿಯ ಜೊತೆಗಿದ್ದಾಳೆ ಎಂದು ಭಾವಿಸಿ, ಕಾರನ್ನು ಲಾಕ್ ಮಾಡಿ ತೆರಳಿದ್ದರು.

ಮದುವೆ ಸಮಾರಂಭದಲ್ಲಿ ಗಂಡ ಹೆಂಡತಿ ಇಬ್ಬರು ಮೈಮರೆತಿದ್ದರು. ಬ್ಯುಸಿಯಲ್ಲಿ ಯಾರೂ ತಮ್ಮ ಇನ್ನೊಂದು ಮಗುವಿನ ಬಗ್ಗೆ ಆಲೋಚಿಸಲೇ ಇದೆ. ಸುಮಾರು ಎರಡು ಗಂಟೆಗಳ ಬಳಿಕ ಪೋಷಕರಿಗೆ ಮಗು ಇಲ್ಲದ ಬಗ್ಗೆ ತಿಳಿದು ಬಂದಿದೆ. ಈ ವೇಳೆ ಇಡೀ ಮದುವೆ ಸಭಾಂಗಣ ಹುಡುಕಾಡಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗು ಅಷ್ಟರಲ್ಲೇ ಸಾ*ವನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಸಂಭ್ರಮದಲ್ಲಿ ಮೈಮರೆತ ತಂದೆ – ತಾಯಿಯಿಂದಾಗಿ ಪುಟ್ಟ ಜೀವವೊಂದು ಬ*ಲಿಯಾಗಿದೆ.

Continue Reading

DAKSHINA KANNADA

ಪುಷ್ಪ 2 ರಿಲೀಸ್ ಡೇಟ್ ಬದಲು…? ಸ್ಪಷ್ಟನೆ ನೀಡಿದ ಚಿತ್ರ ತಂಡ

Published

on

ಮಂಗಳೂರು  : ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಬಹು ನಿರೀಕ್ಷಿತ ಪುಷ್ಪ 2 ಚಿತ್ರ ಯಾವಾಗ ತೆರೆಗೆ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಸಿನೆಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಆಗಸ್ಟ್‌ 15 ರಂದು ನಿಗದಿಯಾಗಿದ್ದ ಬಿಡುಗಡೆಯ ದಿನವನ್ನು ಬದಲಾಯಿಸಲಾಗಿದೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಎಡಿಟಿಂಗ್ ಸಮಸ್ಯೆಯಿಂದ ಪುಷ್ಪ 2 ರಿಲೀಸ್ ವಿಳಂಬವಾಗಲಿದೆ ಎಂಬ ಊಹಾಪೋಹಗಳು ಹರಡಿದೆ. ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಆಂಟೋನಿ ರೂಬೆನ್‌ ಪುಷ್ಪ 2 ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಿತ್ತು.
ಆಂಟೋನಿ ರೂಬೆನ್‌ ಜಾಗಕ್ಕೆ ನವೀನ್ ನೂಲಿ ಬರಲಿದ್ದು, ಪುಷ್ಪ 2 ಬಿಡುಗಡೆ ವಿಳಂಬವಾಗಲಿದೆ ಎಂದು ಹೇಳಿತ್ತು. ಇದು ಎಲ್ಲೆಡೆ ಸುದ್ದಿಯಾಗಿದ್ದು, ಸಿನೆಮಾ ರಿಲೀಸ್‌ನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಆದ್ರೆ, ಇದೊಂದು ಸುಳ್ಳು ಸುದ್ದಿಯಾಗಿದ್ದು, ನಿಗದಿತ ದಿನಾಂಕ ಆಗಸ್ಟ್‌ 15 ರಂದೇ ಸಿನೆಮಾ ರಿಲೀಸ್ ಆಗಲಿದೆ ಎಂದು ಸಿನೆಮಾ ತಂಡ ಸ್ಪಷ್ಟನೆ ನೀಡಿದೆ. ಅಲ್ಲೂ ಅರ್ಜುನ್‌ ಅವರ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಈ ಜೂನ್ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಹೀಗಾಗಿ ಎಡಿಟಿಂಗ್ ಕೂಡಾ ನಿರಾಂತಕವಾಗಿ ನಡೆಯಲಿದ್ದು, ಈಗಾಗಲೇ ಟೀಸರ್‌ ಕೂಡಾ ಭಾರೀ ಸದ್ದು ಮಾಡಿದೆ. ರಿಲೀಸ್ ಜೊತೆಗೆ ಬಾಕ್ಸ್‌ ಆಫೀಸಿನಲ್ಲಿ ಚಿಂದಿ ಉಡಾಯಿಸಲಿರುವ ಪುಷ್ಪಾ 2 ನಿಗದಿಯಾದ ದಿನದಂತೆ ಬಿಡುಗಡೆ ಆಗಲಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.

Continue Reading

LATEST NEWS

Trending