Connect with us

LATEST NEWS

ಶಿವಮೊಗ್ಗ ಗಲಭೆ ಮೂಲಕ ಕರ್ನಾಟಕವನ್ನು ಹಿಂದಿನ ಕಾಶ್ಮೀರ ಮಾಡಲು ಹೊರಟ ಸರಕಾರ : ಕೋಟ ಆಕ್ರೋಶ

Published

on

ಉಡುಪಿ: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆದ ಸಂದರ್ಭದಲ್ಲಿ ಘರ್ಷಣೆ ನಡೆದಿರುವುದು ಹಾಗೂ ಅಲ್ಲಿನ ಮಹಿಳೆಯರು ಮಾತನಾಡಿದ್ದು ನೋಡಿ ಆತಂಕವಾಗಿದೆ.  ಹಿಂದೂಗಳ ಮನೆಗೆ ನುಗ್ಗಿ ಕಲ್ಲು ಹೊಡೆದು ಮಾನ, ಪ್ರಾಣಕ್ಕೆ ಬೆದರಿಕೆ ಹಾಕಿದ್ದಾರೆ. ಅಲ್ಲಿನ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಸರಕಾರ ಕರ್ನಾಟಕವನ್ನು ಹಿಂದಿನ ಕಾಶ್ಮೀರ ಮಾಡಲು ಹೊರಟಿದೆಯಾ ? ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾನೂನು ಉಲ್ಲಂಘನೆ ಮಾಡಿದವರ ವಿರುದ್ದ ಕ್ರಮ ಜರುಗಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಗಲಭೆ ಮಾಡಿದವರನ್ನು ಅಮಾಯಕರ ಪಟ್ಟಿಯಲ್ಲಿ ಸೇರಿಸಿ, ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ತಲ್ವಾರ್ ಪ್ರದರ್ಶಿಸಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೂ ಕಲ್ಲು ತೂರಲಾಗಿದೆ. ಗೃಹ ಸಚಿವರು ಮರದ ತಲ್ವಾರ್ ಬಣ್ಣ ಬಳಿಯಲಾಗಿದೆ ಅಂತಾರೆ. ತನಿಖೆಯ ದಿಕ್ಕು ತಪ್ಪಿಸಲು ಸರಕಾರವೇ ಪ್ರಯತ್ನ ನಡೆಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಮುಸಲ್ಮಾನರ ಓಲೈಕೆಗಾಗಿ ಇದನ್ನೆಲ್ಲಾ ಮಾಡಲಾಗುತ್ತಿದೆ. ಪೊಲೀಸರಿಗೆ ಇದುವರೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ತಂಡ ಶಿವಮೊಗ್ಗಕ್ಕೆ ಭೇಟಿಕೊಡಲಿದೆ. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸುತ್ತೇವೆ. ಸರಕಾರದ ವಿರುದ್ದ ಯಾವ ರೀತಿಯ ಹೋರಾಟವನ್ನು ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

FILM

ಕೊನೆಗೂ ಉರ್ಫಿ ಜಾವೇದ್ ಇನ್ಸ್ಟಾಗ್ರಾಮ್ ಅಕೌಂಟ್ ಡಿಲೀಟ್…

Published

on

Urfi javed: ಸೋಷಿಯಲ್ ಮೀಡಿಯಾದಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಉರ್ಫಿ ಜಾವೇದ್ ಆಕೆಯ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಆಗಿರುವುದು ಇದೀಗ ಆಕೆಗೆ ಸಂಕಷ್ಟ ಎದುರಾಗಿದೆ.

ಉರ್ಫಿ ಜಾವೇದ್ ಎಂದರೆ ಅವಳ ಡ್ರೇಸ್ ನೋಡಿ.. ಅದೇನು ಡ್ರೇಸ್ ಹಾಕಿದ್ದಾಳೆ ಅಂತಾರೆ ಜನ. ಅಂತೂ ಸಾಮಾಜಿಕ ಜಾಲತಾಣದಲ್ಲಿ ಆಕೆಯು ವಿಚಿತ್ರ ವಿಚಿತ್ರ ಪೋಟೋಗಳನ್ನು ಅಪ್ಲೋಡ್ ಮಾಡ್ತಾ ಇರುತ್ತಾಳೆ.

ಆಕೆ ಫಾಲೋವರ್ಸ್ ಹೆಚ್ಚಾಗಳು ಇಂತಹ ಡ್ರೇಸ್ ಹಾಕ್ತ ಇದ್ದಾಳ…ಎಸ್, ಈಕೆ ಅಂತಹ ವಿಚಿತ್ರವಾದ ಡ್ರೇಸ್ ಗಳನ್ನು ಹಾಕಿ ಫೋಟೊ ಶೂಟ್ ಮಾಡಿದ ಬಳಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾಳೆ. ಹಾಗೇ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಸುಮಾರು 4 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಳು.

ಅರೆಬರೆ ಡ್ರೇಸ್ ಹಾಕುತ್ತಾ ದಿನದಿಂದ ದಿನಕ್ಕೆ ಹೊಸ ಟ್ರೆಂಡ್ ಗಳನ್ನು ಸೃಷ್ಟಿಸುತ್ತಿದ್ದಳು. ಆದರೆ ಇದೀಗ ಆಕೆಯ ಖಾತೆಯನ್ನು ಇನ್​ಸ್ಟಾಗ್ರಾಂ ಅಮಾನತು ಮಾಡಿದೆ. ಡಿಲೀಟ್ ಆಗಿರುವ ಕುರಿತು ಆಕೆ ಮಾಡೆಲ್​ ಸ್ಕ್ರೀನ್​ ಶಾಟ್​ ತೆಗೆಯುವ ಮೂಲಕ ಹಂಚಿಕೊಂಡಿದ್ದಾಳೆ.

ಇನ್ನು ಇನ್​​ಸ್ಟಾ ಆಕೆಯ ಖಾತೆಯನ್ನು ಅಮಾನತುಗೊಳಿಸಿದ್ದಲ್ಲದೆ, ಈ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 180 ದಿನಗಳ ಕಾಲಾವಕಾಶ ನೀಡಿದೆ. ಆದ​ರೆ ಉರ್ಫಿ ಇವೆಲ್ಲದಕ್ಕೆ ಉತ್ತರ ನೀಡಿ ತನ್ನ ಖಾತೆಯನ್ನು ಮರಳಿ ಪಡೆಯುತ್ತಾಳಾ ಎಂಬ ಪ್ರಶ್ನೆ ಫ್ಯಾನ್ಸ್​ಗೆ ಕಾಡಿದೆ. ಇನ್ಸ್ಟಾಗ್ರಾಮ್ ಖಾತೆ ಮರಳಿ ಬಂದರೆ ಆಕೆ ಇನ್ನಾದರೂ ಸರಿಯಾದ ಡ್ರೇಸ್ ಹಾಕುತ್ತಾಳ ಎಂದು ಕಾದು ನೋಡಬೇಕಷ್ಟೇ.

ಆಕೆಯ ಅರೆಬರೆ ಡ್ರೇಸ್ ನೋಡಿ ಕೆಳವರು ಆಕೆಯ ಖಾತೆ ಡಿಲೀಟ್ ಆಗಿದ್ದು, ಒಳ್ಳೆಯದೇ ಎಂದು ಹೆಳುತ್ತಿದ್ದಾರೆ. ಆದರೆ ಆಕೆ ಮಾತ್ರ ನೊಂದುಕೊಂಡಿದ್ದಾಳೆ.

Continue Reading

FILM

ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ

Published

on

ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರವಾಹಿಯ ನಟ ಧಾರವಾಹಿಗೆ ಆಯ್ಕೆಯಾದ ತಮ್ಮ ಅಭಿಪ್ರಾಯವನ್ನು ಕೊನೆಗೂ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ವರುಣ್ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಜನಪ್ರಿಯತೆ ಪಡೆದುಕೊಂಡವರು. ಅಲ್ಲದೇ ಇತ್ತೀಚೆಗೆ ಗರ್ಲ್ ಫ್ರೆಡ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.

ಇದೀಗ ಸೀರಿಯಲ್ ಗೆ ಆಯ್ಕೆಯಾದ ಬಗ್ಗೆ ಮಾತನಾಡಿರುವ ನಟ ವರುಣ್ ಆರಾಧ್ಯ “ದೀಪಾವಳಿ ಹಬ್ಬದ ಊಟ ಮುಗಿಸಿಕೊಂಡು ಮಲಗಿಕೊಂಡಿದ್ದೆ. ರಾತ್ರಿ 12.30ಗೆ ಕರೆ ಮಾಡಿ ಸೀರಿಯಲ್‌ನಲ್ಲಿ ನಟಿಸುವ ಇಂಟ್ರೆಸ್ಟ್‌ ಇದ್ಯಾ. ಅವಕಾಶ ಇದೆ ಎಂದು ಫೋನ್ ಮಾಡಿದರು. ರಾತ್ರಿ ಆ ಸಮಯದಲ್ಲಿ ಮಾಡಿದಕ್ಕೆ ನಾನು ಗಾಬರಿ ಆಗಿದೆ ಆ ಸಮಯದಲ್ಲಿ ಆಡಿಷನ್‌ಗೆ ಬರೆಲು ಹೇಳಿದರು. ನನ್ನ ಸ್ನೇಹಿತರನ್ನು ಕರೆದುಕೊಂಡು ನಾಗರಭಾವಿಯಲ್ಲಿ ನಿರ್ದೇಶಕರಾದ ರಾಮ್‌ಜೀ ಹೇಳಿದ ಸ್ಥಳಕ್ಕೆ ಹೋದೆ. ಕೈಗೆ ಒಂದು ಸ್ಕ್ರಿಪ್ಟ್‌ ಕೊಟ್ಟರು ಆಡಿಷನ್ ಮಾಡಿದೆ.

ಮಧ್ಯರಾತ್ರಿ 2.30ಕ್ಕೆ ಸೆಲೆಕ್ಟ್‌ ಆಗಿರುವೆ ಎಂದು ಹೇಳಿದರು. ನಾನು ಫುಲ್ ಶಾಕ್ ಆಗಿಬಿಟ್ಟಿ..ಅಲ್ಲದೆ ಬೆಳಗ್ಗೆನಿಂದ ಶೂಟಿಂಗ್ ಎಂದು ಹೇಳಿದರು. ಅಷ್ಟೊತ್ತರಲ್ಲಿ ಮನೆಗೆ ಬಂದು ಅಕ್ಕ ಮತ್ತು ಅಮ್ಮ ಮಲಗಿದ್ದರು, ಅವರನ್ನು ಎಬ್ಬಿಸಿ ಸೆಲೆಕ್ಟ್‌ ಅನ್ನೋ ವಿಚಾರ ಹೇಳಿದೆ. ಬೆಳಗ್ಗೆ ಶೂಟಿಂಗ್ ಇತ್ತು…ಹೇರ್ ಕಟ್ ಮಾಡಿಸಬೇಕು ಮತ್ತು ಗಡ್ಡ ಟ್ರಿಮ್ ಮಾಡಬೇಕು ಎಂದು ಹೇಳಿದರು ಅದೂ ಮಾಡಿಸಿಕೊಂಡು ಬೆಳಗ್ಗೆ ಶೂಟಿಂಗ್ ಸ್ಥಳಕ್ಕೆ ಹೋದೆ ಮರು ದಿನವೇ ಪ್ರಸಾರ ಮಾಡಲು ಶುರು ಮಾಡಿದ್ದರು. ಮೊದಲ ದೃಶ್ಯವೇ ಮದುವೆ ಮನೆ ಸೀನ್ ಅಗಿತ್ತು ಎಂದಿದ್ದಾರೆ.

Continue Reading

bengaluru

ಹೈಕೋರ್ಟ್​ ಕಲಾಪವನ್ನೂ ಬಿಡದ ಸೈಬರ್​ ಹ್ಯಾಕರ್ಸ್​​-ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್

Published

on

ಬೆಂಗಳೂರು: ಸೈಬರ್‌ ಖದೀಮರ ಉಪಟಳ ಎಲ್ಲಿಯವರೆಗೆ ತಲುಪಿದೆ ಎಂದರೆ ಅದು ಇದೀಗ ಕರ್ನಾಟಕ ಹೈಕೋರ್ಟ್ ಕಲಾಪಕ್ಕೂ ತಟ್ಟಿದೆ.

ಮಂಗಳವಾರ ಸಂಜೆ ಹೈಕೋರ್ಟಿನ ಹಾಲ್‌ ನಂಬರ್‌ 6, 12, 18, 23, 24, 26 ಮತ್ತು ಇತರ ಹಾಲ್‌ ಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾಗಲೇ ಲಿಂಕ್‌ ಮೂಲಕ ಭಾಗವಹಿಸಿದ್ದ ಅಪರಿಚಿತ ಆರೋಪಿಗಳು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಬಗ್ಗೆ ಹೈಕೋರ್ಟಿನ ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಅವರು ಸೆಂಟ್ರಲ್‌ ಸೆನ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಲೈವ್‌ ಸ್ಟ್ರೀಮಿಂಗ್‌ ಮತ್ತು ವೀಡಿಯೋ ಕಾನ್ಫರೆನ್ಸ್‌ ಸೌಲಭ್ಯವನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಬುಧವಾರ ಸಂಜೆ ಹೈಕೋರ್ಟ್ ಕಲಾಪದ ವೇಳೆ ವೀಡಿಯೋ ಕಾನ್ಫರೆನ್ಸ್‌ ಆ್ಯಪ್‌ ಅನ್ನು ಹ್ಯಾಕ್‌ ಮಾಡಿ ಆಶ್ಲೀಲ ದೃಶ್ಯಾವಳಿಯನ್ನು ಅಪ್‌ ಲೋಡ್‌ ಮಾಡಲಾಗಿತ್ತು. ಅಶ್ಲೀಲ ವೀಡಿಯೋ ಪ್ರಸಾರವಾಗುತ್ತಿದ್ದಂತೆ ಅದನ್ನು ನಿರ್ವಹಣೆ ಮಾಡುತ್ತಿದ್ದ ಸಿಬಂದಿಯನ್ನು ಕರೆದು ವಿಚಾರಿಸಿದಾಗ ಸೈಬರ್‌ ಹ್ಯಾಕ್‌ ಆಗಿರುವ ವಿಷಯ ಗೊತ್ತಾಗಿದೆ. ಕೂಡಲೇ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

Continue Reading

LATEST NEWS

Trending