Connect with us

LATEST NEWS

ಹಳೆ ವಾಹನ ಗುಜರಿಗೆ ಹಾಕಿ- ಹೊಸ ವಾಹನ ಖರೀದಿ ವೇಳೆ ರಿಜಿಸ್ಟ್ರೇಷನ್‌, ರೋಡ್‌ ಟ್ಯಾಕ್ಸ್‌ ತೆರಿಗೆ ವಿನಾಯಿತಿ: ಪ್ರಧಾನಿ ಮೋದಿ

Published

on

ನವದೆಹಲಿ: ದೇಶದ ರಸ್ತೆಗಳಿಂದ ಹಳೆಯ ಅದಕ್ಕ ವಾಹನಗಳನ್ನು ತೆರವುಗೊಳಿಸುವ ಹಾಗೂ ಹಳೆಯ ವಾಹನಗಳಲ್ಲಿರುವ ಲೋಹವನ್ನು ಪುನರ್ಬಳಕೆ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಹಳೆ ವಾಹನ ಗುಜರಿ ನೀತಿ’ಗೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಗುಜರಾತ್‌ನಲ್ಲಿ ಚಾಲನೆ ನೀಡಿದರು.

ಇದರಿಂದ ಸ್ವಯಂಪ್ರೇರಿತವಾಗಿ ಹಳೆಯ ವಾಹನಗಳನ್ನು ಜನರಿಗೆ ಲಭಿಸಲಿದ್ದು, ಹೀಗೆ ಮಾಡಿದರೆ ಹೊಸ ವಾಹನ ಖರೀದಿ ವೇಳೆ ನೋಂದಣಿ ಶುಲ್ಕ ಕಟ್ಟಬೇಕಿಲ್ಲ.


ಹಳೆಯ ವಾಹನಗಳನ್ನು ರಸ್ತೆಗಳಿಂದ ತೆರವುಗೊಳಿಸಿ, ಆ ವಾಹನ ಗಳಲ್ಲಿರುವ ಲೋಹಗಳನ್ನು ಪುನರ್‌ಬಳಕೆ ಮಾಡುವುದು.

ಇದರಿಂದ ಹೊಸ ವಾಹನ ರಸ್ತೆಗಿಳಿಯಲಿವೆ. ಅಪಘಾತ, ಮಾಲಿನ್ಯ ತಗ್ಗಲಿದೆ. ಆಟೋ ಮೊಬೈಲ್‌ ಉದ್ಯಮಕ್ಕೂ ಚೈತನ ಸಿಗಲಿದೆ.

ಏನಿದರ ಲಾಭ
ಹಳೆಯ ವಾಹನ ಗುಜರಿಗೆ ಹಾಕಿದರೆ ಸರ್ಕಾರದಿಂದ ಪ್ರಮಾಣಪತ್ರ ದೊರೆಯುತ್ತದೆ.

ಹೊಸ ವಾಹನ ಖರೀದಿ ವೇಳೆ ಇದನ್ನು ತೋರಿಸಿದರೆ, ನೋಂದಣಿ ಶುಲ್ಕ, ರಸ್ತೆ ತೆರಿಗೆ ವಿನಾಯಿತಿ ಸಿಗಲಿದೆ. ಡಿಸ್ಕ್ವಂಟ್‌  ಸಹ ಸಿಗಲಿದೆ ಎಂದು ಸರ್ಕಾರದ ನೀತಿ ತಿಳಿಸಿದೆ.

FILM

ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!

Published

on

ಮಂಗಳೂರು/ ಮುಂಬೈ : ಸದ್ಯ ಡೀಪ್ ಫೇಕ್ ಹಾವಳಿ ಮುಗಿಯುವಂತೆ ಕಾಣುತ್ತಿಲ್ಲ. ಅನೇಕ ನಟ – ನಟಿಯರು ಡೀಪ್ ಫೇಕ್ ನಿಂದ ತೊಂದರೆ ಅನುಭವಿಸಿದ್ದಾರೆ. ಕತ್ರೀನಾ ಕೈಫ್, ರಶ್ಮಿಕಾ ಮಂದಣ್ಣ, ಕಾಜಲ್, ಅಲಿಯಾ ಭಟ್ ರ ಡೀಪ್ ಫೆಕ್ ವೀಡಿಯೋ ವೈರಲ್ ಆಗಿತ್ತು. ಕೇವಲ ನಟಿಯರದ್ದು ಮಾತ್ರವಲ್ಲ, ನಟರಾದ ಅಮೀರ್ ಖಾನ್, ಅಲ್ಲು ಅರ್ಜುನ್ ಚುನಾವಣಾ ಪ್ರಚಾರದ ಫೇಕ್ ವೀಡಿಯೋಗಳು ಸೃಷ್ಟಿಯಾಗಿದ್ದವು. ಈ ಬಗ್ಗೆ ಚಿತ್ರರಂಗದ ಅನೇಕರು ಧ್ವನಿ ಎತ್ತಿದ್ದರೂ ಕೂಡ. ಆದ್ರೆ, ಇಲ್ಲಿಗೆ ಮುಕ್ತಾಯವಾಗಿಲ್ಲ. ಇದೀಗ ಮತ್ತೆ ಡೀಪ್ ಫೇಕ್ ಹಾವಳಿ ಮುಂದುವರೆದಿದೆ.

 

ಮತ್ತೆ ಅಲಿಯಾ ಭಟ್ ಡೀಪ್ ಫೇಕ್ :

ಡೀಪ್ ಫೆಕ್ ಗೆ ಮತ್ತೆ ಅಲಿಯಾ ಭಟ್ ಬಲಿಯಾಗಿದ್ದಾರೆ. ಅಲಿಯಾ ಭಟ್ ಹೊಸ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಇದುವರೆಗೆ ಬೇರೆ ಯಾರು ಯಾರದೋ ವೀಡಿಯೋ ಗಳಿಗೆ ನಟಿಯರ ಮುಖವನ್ನು ಕೂರಿಸಿ ವೀಡಿಯೋ ಮಾಡಲಾಗುತ್ತಿತ್ತು. ಇದೀಗ ನಟಿಯೊಬ್ಬಳ ವೀಡಿಯೋಗೆ ನಟಿ ಮುಖವನ್ನು ಬಳಸಲಾಗಿದೆ. ಹೌದು, ನಟಿಯೊಬ್ಬಳ ಮುಖ ಎಡಿಟ್ ಮಾಡಿ ಅಲ್ಲಿ ಅಲಿಯಾ ಭಟ್ ಮುಖವನ್ನು ಬಳಸಲಾಗಿದೆ.

ಆ ನಟಿಯರು ಯಾರು?


ಇಷ್ಟರ ವರೆಗೆ ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಬೇರೆಯವರ ದೇಹಕ್ಕೆ ಸೆಲೆಬ್ರಿಟಿಗಳ ಮುಖ ಜೋಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಈಗ ಬೇರೊಬ್ಬ ನಟಿಯ ವೀಡಿಯೋ ಬಳಸಿಕೊಂಡಿದ್ದಾರೆ. ಈ ಡೀಪ್ ಫೇಕ್ ವೀಡಿಯೋದ ಅಸಲಿ ವೀಡಿಯೋ ನಟಿ ವಾಮಿಕಾ ಅವರದ್ದು. ವಾಮಿಕ ಬಾಲಿವುಡ್ ನಟಿ. 2007 ರಿಂದ ಅವರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ಯಾವುದೂ ಆಕೆಗೆ ಹೆಸರು ಕೊಟ್ಟಿಲ್ಲ. ಈಗ ಡೀಪ್ ಫೇಕ್ ಪ್ರಕರಣದಿಂದ ಅವರು ಮುನ್ನೆಲೆಗೆ ಬಂದಿದ್ದಾರೆ.

ಇದನ್ನೂ ಓದಿ : ಮಲಯಾಳಂ ನಟಿ ‘ಕನಕಲತಾ’ ಇನ್ನಿಲ್ಲ

ನಟಿ ವಾಮಿಕಾ ವೀಡಿಯೋಗೆ ಅಲಿಯಾ ಭಟ್ ಫೇಸ್ :

ನಟಿ ವಾಮಿಕ ಕೆಲವು ದಿನಗಳ ಹಿಂದೆಯಷ್ಟೇ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ಅವರು, ಕೆಂಪು ಸೀರೆಯುಟ್ಟು ಮಿಂಚಿದ್ದರು. ನೆಟ್ ಫ್ಲಿಕ್ಸ್ ಸರಣಿ ‘ಹೀರಾಮಂಡಿ’ ಸ್ಕ್ರೀನಿಂಗ್ ಗಾಗಿ ವಾಮಿಕಾ ಕೆಂಪು ಸೀರೆಯುಟ್ಟಿದ್ದರು.
ಇದೀಗ ಈ ವೀಡಿಯೋಗೆ ಅಲಿಯಾ ಭಟ್ ಮುಖ ಬಳಸಿ ವೈರಲ್ ಮಾಡಲಾಗಿದೆ.

ಆಲಿಯಾ ಅಭಿಮಾನಿಗಳು ಕಿಡಿ ಕಾರಿದ್ದಾರೆ. ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹೇಗೆ ಸಾಧ್ಯ? ಆಲಿಯಾ ಮುಖ ನೀವು ಬಳಸಿರುವುದು ಕಾನೂನುಬದ್ಧವೇ? ಎಂದು ಪ್ರಶ್ನಿಸಿದ್ದಾರೆ. ಕೆಲವರು ಕಮೆಂಟ್ಸ್ ಬಾಕ್ಸ್ ನಲ್ಲಿ ಆಲಿಯಾ ಭಟ್ ಅವರನ್ನು ಟ್ಯಾಗ್ ಮಾಡಿದ್ದಾರೆ.

 

Continue Reading

DAKSHINA KANNADA

ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..! ರಕ್ತಸಿಕ್ತ ಸ್ಥಿತಿಯಲ್ಲಿದ್ದ ಶವ.!!

Published

on

ಮಂಗಳೂರು: ಹೆಸರಾಂತ ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ತಲಪಾಡಿಯಲ್ಲಿರುವ ಬಂಟವಾಳದ ಭಂಟರ ಭವನದ ಆವರಣದ ಕಂಪೌಂಡ್‌ ಒಳಗಡೆ ವ್ಯಕ್ತಿಯೋರ್ವನ ಮೃತದೇಹ ರಕ್ತಸಿಕ್ತವಾಗಿ ಇದ್ದ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ನಿವಾಸಿ ಸಂತೋಷ್ ಅವರ ಮೃತದೇಹ ಎಂದು ಗುರುತಿಸಲಾಗಿದೆ.

bantwala death

ಬಂಟರ ಭವನದ ಹೊರಗಡೆ ಸಂತೋಷ್ ಗೆ ಸೇರಿದ್ದ ಬೈಕ್‌ ಪತ್ತೆಯಾಗಿದೆ. ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತು ಕೊಂಡಿದ್ದು ಈ ವೇಳೆ ಕುಸಿದು ಕೆಳಗೆ ಬಿದ್ದು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ.. ಧರ್ಮಸ್ಥಳ: ಸರಣಿ ಅಪ*ಘಾತ, 5 ವಾಹನಗಳಿಗೆ ಹಾನಿ

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Continue Reading

BELTHANGADY

ಧರ್ಮಸ್ಥಳ: ಸರಣಿ ಅಪ*ಘಾತ, 5 ವಾಹನಗಳಿಗೆ ಹಾನಿ

Published

on

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸರಣಿ ಅಪ*ಘಾತ ಸಂಭವಿಸಿದ್ದು ಹಲವು ವಾಹನಗಳು ಜಖಂಗೊಂಡಿವೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರ 4ರ ಸುಮಾರಿಗೆ ನೇತ್ರಾವತಿಯಿಂದ ಧರ್ಮಸ್ಥಳಕ್ಕೆ ಬರುವ ರಸ್ತೆಯಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತು. ಅದರ ಹಿಂದೆ ಇದ್ದ ರಿಕ್ಷಾವೊಂದು ಅಪ*ಘಾತ ಸಂಭವಿಸಿದ ರಿಕ್ಷಾಕ್ಕೆ ತಾಗಿ ಜಖಂಗೊಂಡಿತು.

ವೇಗವಾಗಿ ಬರುತ್ತಿದ್ದ ಕಾರು ಮಗುಚಿ ಬಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಅದರ ಹಿಂದಿನಿಂದ ಬರುತ್ತಿದ್ದ ಎರಡು ಕಾರುಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ. ಹೀಗೆ ಒಟ್ಟು 2 ರಿಕ್ಷಾಗಳು ಹಾಗೂ 3 ಕಾರುಗಳು ಜಖಂಗೊಂಡಿವೆ. ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಎಲ್ಲ ಕಾರುಗಳು ಜಖಂಗೊಂಡಿವೆ.

Continue Reading

LATEST NEWS

Trending