LATEST NEWS
ಒಂದು ಒಳ್ಳೇ ಸಿಹಿ ಸುದ್ದಿ..ಕ್ಯಾನ್ಸರ್ ಸೇರಿ ಇತರ ಕಾಯಿಲೆಗಳಿಗೆ ರೆಡಿಯಾಗ್ತಿದೆ ವ್ಯಾಕ್ಸಿನ್ ..!
Published
2 years agoon
By
Adminಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳಿಗೆ ಹೊಸ ಲಸಿಕೆಯ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎಂದು ತಜ್ಞರು ಹೇಳಿದ್ದಾರೆ. 2030ರ ವೇಳೆಗೆ ಕ್ಯಾನ್ಸರ್, ಹೃದಯ ರಕ್ತನಾಳದ, ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಇತರ ಕಾಯಿಲೆಗಳಿಗೆ ಲಸಿಕೆ ಸಿದ್ಧವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ವಾಷಿಂಗ್ಟನ್: ಜಗತ್ತಿನಲ್ಲಿ ಅತೀ ಹೆಚ್ಚು ಜನರು ಸಾವನ್ನಪ್ಪುತ್ತಿರುವುದು ಕಿಲ್ಲರ್ಸ್ ಕ್ಯಾನ್ಸರಿಗೆ ಮತ್ತೊಂದು ಹೃದಯಾಘಾತಕ್ಕೆ. ಇದೀಗ ಒಂದು ಸಿಹಿ ಸುದ್ದಿಯನ್ನು ಸಂಶೋಧಕರು ನೀಡಿದ್ದಾರೆ.
ಈ ರೋಗಗಳಿಗೆ ಶೀಘ್ರದಲ್ಲೇ ವ್ಯಾಕ್ಸಿನ್ ಬರುತ್ತೆ ಎಂದು ಅಮೆರಿಕನ್ ತಜ್ಞರು ಹೇಳಿಕೆ ನೀಡಿದ್ದಾರೆ.
ಈ ದಶಕದ ಕೊನೆಯಲ್ಲಿ ಪ್ರಪಂಚದಾದ್ಯಂತದ ಕ್ಯಾನ್ಸರ್ ಮತ್ತು ಹೃದ್ರೋಗಿಗಳನ್ನು ಈ ಲಸಿಕೆ ಮೂಲಕ ಗುಣಪಡಿಸಲು ಸಾಧ್ಯವಾಗುತ್ತದೆ ಎನ್ನುತ್ತಿದೆ ಈ ಮಹತ್ವದ ಸಂಶೋಧನೆ.
ಪ್ರಮುಖ ಕೊರೊನಾ ವೈರಸ್ ಲಸಿಕೆ ತಯಾರಿಸುವ ಸಂಸ್ಥೆಯು ವಿವಿಧ ರೀತಿಯ ಗೆಡ್ಡೆಗಳನ್ನು ಗುರಿಯಾಗಿಸುವ ಕ್ಯಾನ್ಸರ್ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಕೊರೊನೊವೈರಸ್ ಸಾಂಕ್ರಾಮಿಕ ರೋಗದಲ್ಲಿ ಲಸಿಕೆ ಸಂಶೋಧನೆಯು ಕ್ಯಾನ್ಸರ್ ಮತ್ತು ಹೃದ್ರೋಗಿಗಳಿಗೆ ಲಸಿಕೆಗಳನ್ನು ಕಂಡು ಹಿಡಿಯುವುದನ್ನು ವಿಜ್ಞಾನಿಗಳಿಗೆ ಸುಲಭಗೊಳಿಸಿದೆ.
ಕ್ಯಾನ್ಸರ್, ಹೃದಯರಕ್ತನಾಳದ ಮತ್ತು ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಇತರ ಪರಿಸ್ಥಿತಿಗಳನ್ನು ತಡೆಗಟ್ಟಲು ಜನರು ಶೀಘ್ರದಲ್ಲೇ ಲಸಿಕೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಔಷಧೀಯ ಸಂಸ್ಥೆ ಹೇಳಿದೆ.
ದಿ ಗಾರ್ಡಿಯನ್ ವರದಿಯ ಪ್ರಕಾರ, ಕೋವಿಡ್ ಲಸಿಕೆ ನಂತರ ಅಮೆರಿಕದ ತಜ್ಞರು ಈಗ ಅನೇಕ ರೀತಿಯ ಗೆಡ್ಡೆಗಳ ಕ್ಯಾನ್ಸರ್ ಅನ್ನು ತೊಡೆದುಹಾಕುವ ಲಸಿಕೆಯನ್ನು ತಯಾರಿಸುವಲ್ಲಿ ತೊಡಗಿದ್ದಾರೆ.
ಈ ಲಸಿಕೆಗಳು 2030 ರ ವೇಳೆಗೆ ಸಿದ್ಧವಾಗುತ್ತವೆ. ಲಸಿಕೆ ಸಿದ್ಧವಾದರೆ ಲಕ್ಷಾಂತರ ಜನರ ಜೀವ ಉಳಿಸಬಹುದು ಎಂದು ಅಧ್ಯಯನದಲ್ಲಿ ನಂಬಲಾಗಿದೆ.
ಔಷಧೀಯ ಕಂಪನಿ ಮಾಡರ್ನಾ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಪಾಲ್ ಬರ್ಟನ್ ಮಾತನಾಡಿ, ಸಂಸ್ಥೆಯು ಐದು ವರ್ಷಗಳಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ನಾವು ಹೊಂದಿರುವ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಇದು ಕನಿಷ್ಠ ನೂರಾರು ಜನರನ್ನಲ್ಲ ಲಕ್ಷಾಂತರ ಜೀವಗಳನ್ನು ಉಳಿಸುತ್ತದೆ.
ಪ್ರಪಂಚದಾದ್ಯಂತದ ಜನರಿಗೆ ವಿವಿಧ ರೀತಿಯ ಟ್ಯೂಮರ್ ಕ್ಯಾನ್ಸರ್‌ಗೆ ಲಸಿಕೆಗಳನ್ನು ಒದಗಿಸಲು ನಮಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಭರವಸೆಯ ನುಡಿಗಳನ್ನು ಹೇಳಿದ್ದಾರೆ.
ಒಂದೇ ಚುಚ್ಚುಮದ್ದಿನಿಂದ ಅನೇಕ ರೀತಿಯ ಸೋಂಕುಗಳನ್ನು ತೊಡೆದು ಹಾಕಬಹುದು.
ದುರ್ಬಲ ಜನರು ಸಹ ಕೋವಿಡ್, ಫ್ಲೂ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ನಿಂದ ರಕ್ಷಿಸಲ್ಪಡಬಹುದು ಎಂದು ನಾನು ಭಾವಿಸುತ್ತೇನೆ.
10 ವರ್ಷಗಳ ನಂತರ ನೀವು ನಿಜವಾಗಿಯೂ ಕಾಯಿಲೆಯ ಕಾರಣವನ್ನು ಗುರುತಿಸುವ ಮತ್ತು ಅದರ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುವಂತಹ ಜಗತ್ತನ್ನು ನಾವು ತಲುಪುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
You may like
ಮಂಗಳೂರು/ಕೇರಳ: ನರ್ಸಿಂಗ್ ವಿದ್ಯಾರ್ಥಿನಿಯೋಬ್ಬಳು ಹಾಸ್ಟೆಲ್‌ನ ಮೂರನೇ ಮಹಡಿಯಿಂದ ಬಿದ್ದು ಮೃ*ತಪಟ್ಟ ಘಟನೆ ಕೇರಳದ ಪತ್ತನಂತಟ್ಟದಲ್ಲಿ ನಡೆದಿದೆ. ಈ ಘಟನೆಗೆ ಸಹಪಾಠಿಗಳ ಪ್ರಚೋದನೆಯೇ ಕಾರಣವೆಂದು ಮೂವರು ಗೆಳತಿಯರನ್ನು ಬಂಧಿಸಲಾಗಿದೆ.
ಅಮ್ಮು ಸಜೀವ್ (21) ಮೃ*ತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪಠಾಣಪುರಂ ನಿವಾಸಿ ಅಲೀನಾ, ಚಂಗನಾಶ್ಶೇರಿ ನಿವಾಸಿ ಅಕ್ಷಿತಾ ಮತ್ತು ಕೊಟ್ಟಾಯಂ ನಿವಾಸಿ ಅಂಜನಾ ಬಂಧಿತ ಆರೋಪಿಗಳು ಎನ್ನಲಾಗಿದೆ. ಚುಟ್ಟಿಪಾರ ಎಸ್‌ಎಸ್‌ಇ ನರ್ಸಿಂಗ್ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಅಮ್ಮು ನವೆಂಬರ್ 15 ರಂದು ಹಾಸ್ಟೆಲ್ ಕಟ್ಟಡದ ಮೇಲಿನಿಂದ ಬಿದ್ದು ಸಾ*ವನ್ನಪ್ಪಿದ್ದರು. ಆದರೆ ಆಕೆ ಆ*ತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದು, ಸಹಪಾಠಿಗಳ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ
ಅಮ್ಮು ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಲು ಕೇವಲ ಒಂದೇ ಒಂದು ತಿಂಗಳು ಬಾಕಿ ಇದ್ದು, ಸಾವಿಗೆ ಶರಣಾಗುವ ಮೂಲಕ ತನ್ನ ಆಸೆ, ಕನಸ್ಸುಗಳನ್ನು ನುಚ್ಚನೂರು ಮಾಡಿಕೊಂಡಿದ್ದಾಳೆ. ಈ ಬಗ್ಗೆ ತನಿಖೆ ಆಗಬೇಕು. ಸಾ*ವಿನಲ್ಲಿ ನಿಗೂಢತೆ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳ ಕಿರುಕುಳವೇ ಮಗಳ ಸಾ*ವಿಗೆ ಕಾರಣ ಎಂದು ಕುಟುಂಬಸ್ಥರು ವಾದಿಸಿದ್ದಾರೆ. ಸದ್ಯ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್.
Baindooru
ಕಾಸರಗೋಡು: ಮಹಿಳಾ ಪೊಲೀಸ್‌ಗೆ ಚಾಕುವಿನಿಂದ ಇರಿದು ಕೊಲೆಗೈದ ಪತಿ
Published
7 minutes agoon
22/11/2024By
NEWS DESK2ಕಾಸರಗೋಡು: ಪೋಲೀಸ್ ಉದ್ಯೋಗದಲ್ಲಿರುವ ಪತ್ನಿಯನ್ನು ಸ್ವತಃ ಪತಿಯೇ ಅಟ್ಟಾಡಿಸಿ ಕೊಚ್ಚಿ ಕೊಲೆಗೈದು, ಪತ್ನಿಯ ಅಪ್ಪನಾದ ಮಾವನನ್ನೂ ಕೊಲೆಗೆಯತ್ನಿಸಿದ ಘಟನೆ ಕಾಸರಗೋಡು ಜಿಲ್ಲೆಯ ಗಡಿಯಲ್ಲೇ ನಡೆದಿದೆ.
ಕಾಸರಗೋಡು ಜಿಲ್ಲೆಯ ಚಂದೇರ ಪೋಲೀಸ್ ಠಾಣಾ ಸಿಪಿಒ ಉದ್ಯೋಗಿ ದಿವ್ಯಶ್ರೀ ಎಂಬಾಕೆ ತನ್ನ ಪತಿಯಿಂದಲೇ ಕೊಲೆಗೀಡಾದ ಮಹಿಳೆ. ಈಕೆ ಕೊಲೆ ನಡೆಯುವಾಗ ತಡೆಯಲು ಬಂದ ಆಕೆಯ ತಂದೆ ವಾಸು ಎಂಬವರ ಕೊರಳು, ಹೊಟ್ಟೆಗೆ ಕತ್ತಿ ಇರಿತ, ಕಡಿತಗಳ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗುರುವಾರ (ನ.21) ಮುಸ್ಸಂಜೆ ಈ ದುಷ್ಕೃತ್ಯ ನಡೆದಿದ್ದು, ಆರೋಪಿ ರಾಜೇಶ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಪತಿ-ಪತ್ನಿಯರಾದ ರಾಜೇಶ ಮತ್ತು ದಿವ್ಯಶ್ರೀ ಕಳೆದ ಕೆಲ ಸಮಯಗಳಿಂದ ಒಟ್ಟಿಗೆ ಬದುಕುತ್ತಿರಲಿಲ್ಲ. ಅವರ ದಾಂಪತ್ಯದಲ್ಲಿ ಸಮಸ್ಯೆಗಳಿದ್ದ ಕಾರಣ ಈರ್ವರೂ ಬೇರೆಯೇ ವಾಸಿಸುತ್ತಿದ್ದರು. ಗುರುವಾರ ಸಂಜೆ ಪತ್ನಿ ಮನೆಯಲ್ಲಿದ್ದಾಳೆಂದು ತಿಳಿದೇ ಬಂದ ಆರೋಪಿ ಆಕೆಯನ್ನು ಆಕ್ರಮಿಸಿ, ಓಡಿಸಿ ಕೊಲೆಗೈದನೆಂದೂ, ಈ ವೇಳೆ ತಡೆಯಲು ಬಂದ ಮಾವನನ್ನೂ ಆಕ್ರಮಿಸಿ ಕೊಲೆಗೆತ್ನಿಸಿದನೆಂದೂ ಮಾಹಿತಿ ಲಭಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೃತ ಪೋಲೀಸ್ ಉದ್ಯೋಗಿ ದಿವ್ಯಶ್ರೀಯ ಪತಿ ರಾಜೇಶನನ್ನು ಪೋಲೀಸರು ಬಂಧಿಸಿದ್ದಾರೆ.
Baindooru
ವಾಟ್ಸಾಪ್ ಗ್ರೂಪ್ ನೋಡಿ ಪತ್ನಿಗೆ ಮನೆಯಲ್ಲೇ ಹೆರಿಗೆ ಮಾಡಿಸಿದ ಪತಿ..!
Published
25 minutes agoon
22/11/2024By
NEWS DESK2ಚೆನ್ನೈ: ವಾಟ್ಸಪ್ ಗ್ರೂಪ್‌ನ ಸಹಾಯದಿಂದ ದಂಪತಿಗಳು ಮನೆಯಲ್ಲಿಯೇ ಹೆರಿಗೆ ನಡೆಸಿರುವಂತಹ ಘಟನೆ ತಮಿಳುನಾಡಿನ ಕುಂದ್ರತ್ತೂರಿನಲ್ಲಿ ನಡೆದಿದೆ.
ನವೆಂಬರ್ 17 ರಂದು ಸುಕನ್ಯಾಗೆ ಮನೆಯಲ್ಲಿ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣದ ವೈದ್ಯಕೀಯ ಸಹಾಯವನ್ನು ಪಡೆಯುವ ಬದಲು ಮನೋಹರನ್ ತಾನೇ ಹೆರಿಗೆ ನಡೆಸಲು ಮುಂದಾಗಿದ್ದಾರೆ. ಅವರು ವಾಟ್ಸಪ್ ಗ್ರೂಪ್‌ನಲ್ಲಿ ಬಂದ ಹಂತ-ಹಂತದ ಮಾರ್ಗದರ್ಶನವನ್ನು ಅನುಸರಿಸಿದ್ದಾರೆ. ಹೆರಿಗೆ ಪ್ರಕ್ರಿಯೆಯಲ್ಲಿ ಅವರ ಪತ್ನಿಗೆ ಸಹಾಯ ಮಾಡಲು ಗುಂಪಿನ ಸದಸ್ಯರು ಒದಗಿಸಿದ ಸೂಚನೆಗಳು ಮತ್ತು ವಿವರಣೆಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.
ದಂಪತಿ ವಾಟ್ಸಪ್‌ನ “ಹೋಮ್ ಬರ್ತ್ ಎಕ್ಸ್ ಪೀರಿಯನ್ಸ್” ಎಂಬ ಗುಂಪಿನಲ್ಲಿ ಹಂಚಿಕೊಂಡ ಸಲಹೆಯನ್ನು ಅವಲಂಬಿಸಿ ಹೆರಿಗೆಯನ್ನು ನಡೆಸಿದ್ದಾರೆ. ಯಾವುದೇ ವೈದ್ಯಕೀಯ ಪರಿಶೀಲನೆ ಇಲ್ಲದೇ ಅಪಾಯಕಾರಿಯಾಗಿ ಹೆರಿಗೆ ನಡೆಸಿರುವ ಬಗ್ಗೆ ಅಧಿಕಾರಿಗಳು ಈಗ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಹೆರಿಗೆ
ಯ ನಂತರ, ಸುರಕ್ಷತೆಯ ಉಲ್ಲಂಘನೆಯನ್ನು ಉಲ್ಲೇಖಿಸಿ ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಯಿಂದ ದೂರು ದಾಖಲಿಸಲಾಗಿದೆ.
ಮಗುವಿನ ಜನನದ ಬಳಿಕ ದಂಪತಿಗಳು ನವಜಾತ ಶಿಶುವಿನೊಂದಿಗೆ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ವಿಚಾರ ಬೆಳಕಿಗೆ ಬಂದಿದ್ದು, ಇದು ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನ ಸೆಳೆಯಿತು. ಇದೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
LATEST NEWS
ಎಚ್ಚರ!! ಪ್ರೀತಿ ಪಾತ್ರರ ಸಾವೇ ಟಾರ್ಗೆಟ್; ಸೈಬರ್ ಕ್ರೈಂನಲ್ಲಿ ಅಂತ್ಯಸಂಸ್ಕಾರ
ಮಾರ್ಚ್ 14 ರಿಂದ ಐಪಿಎಲ್ ಆರಂಭ
ಮಂಗಳೂರು: ಟ್ರಾಯ್ನಿಂದ ಕರೆ; 1.71 ಕೋ.ರೂ ವಂಚನೆ
ಭಜನಾ ಗುರು ಅಶೋಕ್ ನಾಯ್ಕ್ ಕಳಸಬೈಲ್ ಗೆ ‘ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ’
ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?
ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ