Connect with us

    LATEST NEWS

    ಗ್ರಾಹಕರಿಗೆ ಗುಡ್ ನ್ಯೂಸ್ : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್​ ಬೆಲೆ ಇಳಿಕೆ

    Published

    on

    ಮಂಗಳೂರು : ಎಲ್​ಪಿಜಿ ಸಿಲಿಂಡರ್ ಬಳಕೆದಾರರಿಗೆ ಜುಲೈ ತಿಂಗಳಾರಂಭದಲ್ಲೇ ಸಿಹಿ ಸುದ್ದಿ ಸಿಕ್ಕಿದೆ. 19 ಕೆಜಿಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್​ ಬೆಲೆಯಲ್ಲಿ 31ರೂ. ಇಳಿಕೆ ಆಗಿದೆ. ಈ ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಆದರೆ, ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಯಾವುದೆ ಬದಲಾವಣೆಯಾಗಿಲ್ಲ.


    ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಸಿದ್ದರಿಂದ ಹೋಟೆಲ್​, ರೆಸ್ಟೋರೆಂಟ್ ಉದ್ಯಮಿಗಳಿಗೆ ಅನುಕೂಲವಾಗಿದೆ. ಆದರೆ, ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್​​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

    ದರ ಹೀಗಿದೆ :

    ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್​ ಬೆಲೆ 1813 ರೂಪಾಯಿ ಆಗಿದೆ. . ದೆಹಲಿಯಲ್ಲಿ ಪ್ರತಿ ಸಿಲಿಂಡರ್​ ಬೆಲೆ 1,646 ರೂಪಾಯಿ ಇದೆ. ಮುಂಬೈ ಮತ್ತು ಚೆನ್ನೈನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್​ ಬೆಲೆ 1,598 ಮತ್ತು 1,809.5 ರೂ. ಗೆ ಇಳಿದಿದೆ. ಎರಡೂ ನಗರಗಳಲ್ಲಿ 31 ರೂ. ಇಳಿಕೆಯಾಗಿದೆ.

    ಇದನ್ನೂ ಓದಿ : WATCH : ಕೇದಾರನಾಥ ಬಳಿ ಭಾರಿ ಹಿಮಪಾತ; ವೀಡಿಯೋ ವೈರಲ್

    ಇಂಡಿಯನ್​ ಆಯಿಲ್​ ಪ್ರಕಾರ, 14.5 ಕೆಜಿಯ ಸಬ್ಸಿಡಿ ಅಡುಗೆ ಅನಿಲ ಬೆಲೆ ಕೋಲ್ಕತ್ತಾದಲ್ಲಿ 892 ರೂಪಾಯಿ ಇದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್​ ಬೆಲೆ ಕ್ರಮವಾಗಿ 803, 802.5, 818.5 ರೂ. ಆಗಿದೆ.

    LATEST NEWS

    ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್​ ಕೋಡ್​, ಮೊಬೈಲ್​ ಬಳಕೆ ನಿಷೇಧ

    Published

    on

    ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೊಂಡು ಸುಮಾರು 6 ತಿಂಗಳು ಕಳೆದಿವೆ, ಪ್ರತಿದಿನ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಈಗ ರಾಮಮಂದಿರ ಟ್ರಸ್ಟ್ ರಾಮನ ಗರ್ಭಗುಡಿಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇನ್ನು ರಾಮಮಂದಿರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿದೆ.

    ಈ ಡ್ರೆಸ್​ ಕೋಡ್ ಅರ್ಚಕರಿಗೆ ಅನ್ವಯವಾಗಲಿದೆ. ದೇವಸ್ಥಾನದ ಅರ್ಚಕರು ಇನ್ನುಮುಂದೆ ಒಂದೇ ಬಗೆಯ ಉಡುಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಚಕರು ಚೌಬಂದಿ ಪೇಟ ಹಾಗೂ ಹಳದಿ ಬಣ್ಣದ ಧೋತಿ, ಕುರ್ತಾವನ್ನು ಧರಿಸಲಿದ್ದಾರೆ.

    ರಾಮಲಲ್ಲಾ ಆವರಣದಲ್ಲಿ ಕೆಲಸ ಮಾಡುವವರಿಗೆ ಶೀಘ್ರ ಡ್ರೆಸ್​ ಕೋಡ್ ಶೀಘ್ರ ಜಾರಿಯಾಗಲಿದೆ. 26 ಮಂದಿ ಅರ್ಚಕರು ವಿವಿಧ ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅರ್ಚಕರು ತಮ್ಮ ಆ್ಯಂಡ್ರಾಯ್ಡ್​ ಮೊಬೈಲ್​ನೊಂದಿಗೆ ದೇವಸ್ಥಾನಕ್ಕೆ ಬರುವುದನ್ನು ಟ್ರಸ್ಟ್​ ನಿಷೇಧಿಸಿದೆ. ಅಗತ್ಯವಿದ್ದರೆ ಸಂವಹನಕ್ಕಾಗಿ ಕೀಪ್ಯಾಡ್​ ಫೋನ್​ಗಳನ್ನು ಮಾತ್ರ ಬಳಸಬಹುದು.

    ಈ ಕ್ರಮಗಳು ಅರ್ಚಕರ ನಡುವೆ ಏಕರೂಪತೆಯನ್ನು ಕಾಯ್ದುಕೊಳ್ಳುವ ಮತ್ತು ಆವರಣದಲ್ಲಿ ಇತರರಿಂದ ಭಿನ್ನವಾಗಿಸುವ ಪ್ರಯತ್ನದ ಭಾಗವಾಗಿದೆ. ಇದಕ್ಕೂ ಮುನ್ನ ದೇವಾಲಯದ ಬಹುತೇಕ ಅರ್ಚಕರು ಕೇಸರಿ ವಸ್ತ್ರ ಧರಿಸಿದ್ದರು. ಕೆಲವು ಪುರೋಹಿತರು ಹಳದಿ ಬಣ್ಣದ ಉಡುಪಿನಲ್ಲಿ ಬರುತ್ತಿದ್ದರು, ಆದರೆ ಇದು ಕಡ್ಡಾಯವಾಗಿರಲಿಲ್ಲ.

    Continue Reading

    DAKSHINA KANNADA

    ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ಯತೀಶ್ ಎನ್ ನೇಮಕ

    Published

    on

    ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಜುಲೈ 2 ಮಂಗಳವಾರ ತಡರಾತ್ರಿ ಈ ಆದೇಶವನ್ನು ಹೊರಡಿಸಿದ್ದಾರೆ. ಈ ವರ್ಗಾವಣೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿ ಬಿ ರಿಷ್ಯಂತ್ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವರು ಈಗ ವೈರ್‌ಲೆಸ್ ವಿಭಾಗಕ್ಕೆ ಎಸ್‌ಪಿಯಾಗಿ ಸೇವೆ ಸಲ್ಲಿಸಲಿದ್ದಾರೆ.

    ಮೇ 2023 ರಲ್ಲಿ ರಿಷ್ಯಂತ್ ಅವರು ದ.ಕ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ರಿಶ್ಯಾಂತ್‌ ಅವರಿಂದ ಅಧಿಕಾರ ವಹಿಸಿಕೊಂಡವರು ಈ ಹಿಂದೆ ಮಂಡ್ಯ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಯತೀಶ್ ಎನ್. ಇವರು 2016 ರ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದರು.

    Continue Reading

    LATEST NEWS

    ಉಡುಪಿ ಭುಜಂಗ ಪಾರ್ಕ್‌ನಲ್ಲಿ ಮರಗಳ ಮಾರಣಹೋಮ..! ಪೌರಾಯುಕ್ತರು ನೀಡಿದ ಶಿಕ್ಷೆ ಏನು ಗೊತ್ತಾ?

    Published

    on

    ಉಡುಪಿ: ಉಡುಪಿ ನಗರಸಭೆಯ ಅನುಮತಿ ಇಲ್ಲದೆ ನಗರದ ಭುಜಂಗ ಪಾರ್ಕ್‌ ನಲ್ಲಿದ್ದ ನಾಲ್ಕೈದು ಮರಗಳನ್ನು ಕಡಿದು ಹಾಕಿದ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಪೌರಾಯುಕ್ತರು, ಆತನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

    ಪಾರ್ಕ್ ನಲ್ಲಿ ಬೆಳೆದು ನಿಂತ ಮರಗಳನ್ನು ಅಪಾಯಕಾರಿ ಎಂಬ ನೆಲೆಯಲ್ಲಿ ಪಾರ್ಕ್ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಸುರೇಶ್ ಎಂಬವರ ಸೂಚನೆಯಂತೆ ಕಾರ್ಮಿಕರು ಕಡಿಯುತ್ತಿದ್ದರು. ಇದಕ್ಕೆ ಪಾರ್ಕ್ ನಲ್ಲಿ ವಿಹರಿಸುವ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಕಾರ್ಮಿಕರು ನಾಲ್ಕೈದು ಮರಗಳನ್ನು ಕಡಿದು ಧರೆಗೆ ಉರುಳಿಸಿದರು. ಉಳಿದ ಮರಗಳನ್ನು ಕಡಿಯಲು ಸಿದ್ಧತೆ ಮಾಡುತ್ತಿದ್ದಾಗ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಾಯಪ್ಪ ಮರ ಕಡಿಯುವುದನ್ನು ತಡೆದರು.

    ಅಕ್ಷರ ದಾಸೋಹದ ಅನ್ನ ಚರಂಡಿಗೆ ಎಸೆದು ಬೇಜವಾಬ್ದಾರಿ..! ಎಸ್‌ಡಿಎಂಸಿ, ಶಿಕ್ಷಕರ ವಿರುದ್ಧ ಪೋಷಕರ ಆಕ್ರೋಶ

    ಈ ವೇಳೆ ಗುತ್ತಿಗೆದಾರರನನ್ನು ಸ್ಥಳಕ್ಕೆ ಕರೆಸಿ, ಯಾವುದೇ ಅನುಮತಿ ಇಲ್ಲದೇ ಮರ ಕಡಿದಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ಈ ತಪ್ಪಿಗೆ 25 ಸಾವಿರ ರೂ. ದಂಡ ಪಾವತಿಸುವಂತೆ ಮತ್ತು ಒಂದು ಮರದ ಬದಲು 10 ಗಿಡಗಳನ್ನು ನೆಡುವಂತೆ ಗುತ್ತಿಗೆದಾರನಿಗೆ ಪೌರಾಯುಕ್ತರು ಸೂಚಿಸಿದರು. ಈ ಸಂದರ್ಭದಲ್ಲಿ ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್. ಹಾಜರಿದ್ದರು. ಮಾಹಿತಿ ತಿಳಿದು ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    Trending