Connect with us

    DAKSHINA KANNADA

    ನವ ಮಂಗಳೂರು ಬಂದರ್ ಗೆ ಸುವರ್ಣ ಮಹೋತ್ಸವದ ಸಂಭ್ರಮ

    Published

    on

    ಮಂಗಳೂರು: ನವ ಮಂಗಳೂರು ಬಂದರು ಇದೀಗ 50ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಜೂನ್ 10, 1974 ರಂದು ಮೊದಲ ಸರಕು ಹಡಗು ಆಗಮಿಸುವ ಮೂಲಕ ಬಂದರು ಕಾರ್ಯಾರಂಭ ಮಾಡಿತ್ತು. ಜೂನ್ 10 ರಂದು “MV ಸತ್ಸು ಮಾರು” ಎಂಬ ಹಡಗು ಮೊದಲ ಬಾರಿಗೆ ಆಗಮಿಸಿತ್ತು.

    ಇದೀಗ ನವ ಮಂಗಳೂರು ಬಂದರಿಗೆ 50 ವರ್ಷ ತುಂಬಿದ ಸುವರ್ಣಮಹೋತ್ಸವದ ಸಂಭ್ರಮದಲ್ಲಿದೆ. ಈ ಸುವರ್ಣಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರ ಬಂದರು ಕುರಿತಾದ ಸಣ್ಣ ಟೀಸರ್ ಬಿಡುಗಡೆ ಮಾಡಿದೆ. ಪ್ರಾಧಿಕಾರದ ಅಧ್ಯಕ್ಷರು ಈ ಟೀಸರ್ ರಿಲೀಸ್ ಮಾಡಿದ್ದಾರೆ.

    ಇದನ್ನು ಓದಿ:ಪ್ರತಿಯೊಬ್ಬ ಗಂಡನು ತನ್ನ ಮುದ್ದಿನ ಮಡದಿಯಿಂದ ಬಯಸೋದು ಇದನ್ನಂತೆ!


    ಕಳೆದ ಐದು ದಶಕಗಳಲ್ಲಿ, NMPA ಕರ್ನಾಟಕ ಮತ್ತು ಸುತ್ತಮುತ್ತಲಿನ ರಾಜ್ಯಗಳಿಗೆ ಪ್ರಮುಖ ಸಮುದ್ರ ಗೇಟ್‌ವೇ ಆಗಿದೆ. 2023-24 ರಲ್ಲಿ ಸಾರ್ವಕಾಲಿಕ 45.71 ಮಿಲಿಯನ್ ಟನ್‌ ಸರಕು ನಿರ್ವಹಣೆ ಮಾಡುವ
    ಮೂಲಕ ದಾಖಲೆ ನಿರ್ಮಿಸಿದೆ. ಬಂದರು ಆರಂಭವಾದಾಗಿನಿಂದ ಕನಿಷ್ಟ 1 ಮಿಲಿಯನ್ ಟನ್ ಸರಕಿಗಿಂತ ಕಡಿಮೆ ಸಾಗಟ ಮಾಡಿದ್ದಿಲ್ಲ. ,NMPA ಯ ಸರಕು ನಿರ್ವಹಣೆ ವಿಚಾರವಾಗಿ ಸಾಕಷ್ಟು ಪ್ರಶಸ್ತಿಗಳು ಲಭಿಸಿದೆ. ಇದರೊಂದಿಗೆ ಪ್ರಾಧಿಕಾರವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ. NMPA, ಪರಿಸರ ರಕ್ಷಣೆ ಮತ್ತು ಸಮುದಾಯ-ಕೇಂದ್ರಿತ ಯೋಜನೆಗಳ ಮೇಲೆ ಹೆಚ್ಚಿನ ಗಮನಹರಿಸಿದೆ. ಈ ಮೂಲಕ ನವ ಮಂಗಳೂರು ಬಂದರು ದೇಶದಲ್ಲಿ ಸಮುದ್ರ ಮೂಲಕ ಸರಕು ನಿರ್ವಹಣೆಯಲ್ಲಿ ದೇಶದಲ್ಲೇ ಗಮನಾರ್ಹ ಸಾಧನೆ ಮಾಡುತ್ತಿದೆ

    DAKSHINA KANNADA

    ಮಂಗಳೂರು : ಸಂಪೂರ್ಣ ಕುಸಿತಗೊಂಡ ರಾಜಕಾಲುವೆ ಪಕ್ಕದ ಸಂಪರ್ಕ ರಸ್ತೆ

    Published

    on

    ಮಂಗಳೂರು : ಕಳೆದ ವಾರ ಮಳೆಯಿಂದ ಕುಸಿಯುವ ಭೀತಿಯಲ್ಲಿದ್ದ ರಸ್ತೆಯೊಂದು ಇಂದು(ಜು.2) ಸಂಪೂರ್ಣ ಕುಸಿದು ಹೋಗಿದೆ. ಬಂಗ್ರ ಕೂಳೂರು ವಾರ್ಡ್‌ನ ಎ.ಜೆ. ಇಂಜಿನೀಯರಿಂಗ್ ಕಾಲೇಜಿನ ರಾಜಕಾಲುವೇ ಪಕ್ಕದ ರಸ್ತೆ ಈಗ ಸಂಪೂರ್ಣ ಕುಸಿದು ಹೋಗಿದೆ.


    ಸುಮಾರು ಹತ್ತು ಮನೆಗಳು ಈ ರಸ್ತೆಯನ್ನು ಅವಲಂಭಿಸಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸುತ್ತಿದ್ದ ವಿದ್ಯುತ್ ಕಂಬಗಳನ್ನು ಶಿಫ್ಟ್‌ ಮಾಡಲಾಗಿತ್ತು. ಬಳಿಕ ಸ್ಯಾಂಡ್ ಬ್ಯಾಗ್ ಇರಿಸಿ ರಸ್ತೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿತ್ತು.

    ರಾಜಕಾಲುವೆಗೆ ಕಟ್ಟಿದ್ದ ತಡೆಗೋಡಿ ಹಳೆಯದಾಗಿದ್ದ ಕಾರಣ, ಈ ರಸ್ತೆ ಕುಸಿಯಲು ಕಾರಣವಾಗಿದೆ ಎನ್ನಲಾಗಿದೆ. ಸದ್ಯ ಇಲ್ಲಿನ ನಿವಾಸಿಗಳಿಗೆ ಸಂಚರಿಸಲು ಪರ್ಯಾಯ ರಸ್ತೆ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಮಳೆ ಜೋರಾಗಿ ಬಂದಲ್ಲಿ ಸಂಪೂರ್ಣ ರಸ್ತೆ ರಾಜಕಾಲುವೆ ಸೇರಿ ಕಾಲುವೆ ಬಂದ್ ಆಗಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಕೂಡಾ ಇದೆ.

    Continue Reading

    DAKSHINA KANNADA

    ಸೂರಜ್ ಪದವಿ ಪೂರ್ವ ಕಾಲೇಜು ಹಾಗೂ ಜ್ಞಾನದೀಪ ಶಾಲೆ ಮುಡಿಪು : ಶಿಕ್ಷಕ – ರಕ್ಷಕರ ಸಭೆ

    Published

    on

    ಮಂಗಳೂರು : ಸೂರಜ್ ಪದವಿ ಪೂರ್ವ ಕಾಲೇಜು ಹಾಗೂ ಜ್ಞಾನದೀಪ ಶಾಲೆ ಮುಡಿಪುವಿನಲ್ಲಿ ಸೋಮವಾರ(ಜು.1) ಶಿಕ್ಷಕ – ರಕ್ಷಕರ ಸಭೆ ನಡೆಯಿತು.
    ಈ ಸಂದರ್ಭ ಶಾಲಾ ಶಿಕ್ಷಕ – ರಕ್ಷಕರ ಸದಸ್ಯರನ್ನು ನೇಮಕ ಮಾಡಲಾಯಿತು. ಪ್ರತಿ ತರಗತಿಯಿಂದ ಪೋಷಕರನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಯಾದ ಸದಸ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾಗಿ ಶರೀಫ್ ಹರ್ಷದ್, ಉಪಾಧ್ಯಕ್ಷರಾಗಿ ಅಶ್ರಫ್ ಡಿ.ಎಂ, ಕಾರ್ಯದರ್ಶಿಯಾಗಿ ಜುಬೈರ್ ತಲೆಮೊಗರು, ಕೋಶಾಧಿಕಾರಿಯಾಗಿ ಹೇಮಂತ್ ಕರ್ಕೇರ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಚಂಪಾ, ಭಾರತಿ, ಅಬ್ದುಲ್ ರೆಹಮಾನ್, ಶಾಹುಲ್ ಹಮೀದ್ ಆಯ್ಕೆಯಾದರು.

    ಇದನ್ನೂ ಓದಿ : WATCH VIDEO : ಮದುವೆ ಮನೆಗೆ ಎಂಟ್ರಿ ಕೊಟ್ಟ ಕಪಿರಾಯ; ಮಾಡಿದ್ದೇನು ನೋಡಿ

    ಶಾಲೆಯ ಅಧ್ಯಕ್ಷ ಮಂಜುನಾಥ್ ಎಸ್ ರೇವಣ್ ಕರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರಕ್ಷಿತ್ ಕುಲಾಲ್, ಪಿ .ಟಿ .ಎ ಸದಸ್ಯೆ ನಸೀಮ ಉಪಸ್ಥಿತರಿದ್ದರು.

    ಉಪನ್ಯಾಸಕಿ ಆಶಾಲತಾ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾಭಿರ ಸ್ವಾಗತಿಸಿ, ಪ್ರತೀಕ್ಷಾ ವಂದಿಸಿದರು.

    Continue Reading

    DAKSHINA KANNADA

    ಪರಿಸರ, ವೃಕ್ಷ, ವನ ಸಂರಕ್ಷಣೆ ಸಮೃದ್ಧ ಬದುಕಿಗೆ ಸೋಪಾನ: ಈಶ್ವರ ಖಂಡ್ರೆ

    Published

    on

    ಬಂಟ್ವಾಳ : ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಈ ಕಾಲಘಟ್ಟದಲ್ಲಿ ಪರಿಸರ, ಪ್ರಕೃತಿ, ವೃಕ್ಷ ಮತ್ತು ವನ ಸಂರಕ್ಷಣೆ ಸಮೃದ್ಧ ಬದುಕಿಗೆ ಸೋಪಾನವಾಗುತ್ತದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಆಲಂಪುರಿಯ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ದಶಲಕ್ಷ ಗಿಡಗಳ ನಾಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪರಿಸರ ದಿನ, ವನಮಹೋತ್ಸವದ ದಿನದಂದು ಮಾತ್ರವಲ್ಲದೆ, ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು. ಇದೇ ವೇಳೆ ಬಿಸಿಲಿನ ತಾಪಕ್ಕೆ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿ ಜನರು ಅನುಭವಿಸಿದ ಸಂಕಷ್ಟಗಳ ಬಗ್ಗೆ ಗಮನ ಸೆಳೆದರು.

    ಭಾರತದಲ್ಲಿ ಈ ಬಾರಿ 40 ಸಾವಿರಕ್ಕೂ ಹೆಚ್ಚು ಜನರು ಸೌರಾಘಾ*ತಕ್ಕೆ ಈಡಾಗಿದ್ದು, 100ಕ್ಕೂ ಹೆಚ್ಚು ಸಾ*ವು ಸಂಭವಿಸಿವೆ. ಹಜ್ ಯಾತ್ರೆಗೆ ಹೋದ ಸಾವಿರಕ್ಕೂ ಹೆಚ್ಚು ಜನರು ಸೌರಶಾಖ ತಾಳಲಾರದೆ ನರಳಿ ಮೃ*ತಪಟ್ಟಿದ್ದನ್ನು ನೆನಪಿಸಿದ್ರು.

    ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲವನ್ನು ಹಿತಮಿತವಾಗಿ ಬಳಸುತ್ತಿದ್ದರು, ಬೆಟ್ಟ, ಗುಡ್ಡ, ನದಿ ಪೂಜಿಸುತ್ತಿದ್ದರು. ಅವರಿಗೆ ಪರಿಸರದ ಕಾಳಜಿ ಇತ್ತು. ನಾವು ಕೂಡ ಪರಿಸರ ಸಂರಕ್ಷಣೆ ಮಾಡಿ, ಇರುವುದೊಂದೇ ಭೂಮಿಯನ್ನು ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು. ನಂತರ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ವೀಕ್ಷಿಸಿ, ಅಲ್ಲಿರುವ ವೃಕ್ಷಗಳ ಮಾಹಿತಿ ಪಡೆದರು. ಸಸ್ಯೋದ್ಯಾನಗಳಿಗೆ ಬರುವ ಮಕ್ಕಳಿಗೆ, ಜನರಿಗೆ ಕನಿಷ್ಠ 10 ಗಿಡ ಮರಗಳನ್ನು ಗುರುತಿಸುವಂತೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.

    ಇದನ್ನೂ ಓದಿ : WATCH VIDEO : ಮದುವೆ ಮನೆಗೆ ಎಂಟ್ರಿ ಕೊಟ್ಟ ಕಪಿರಾಯ; ಮಾಡಿದ್ದೇನು ನೋಡಿ

    ಶಾಸಕ ರಾಜೇಶ್ ನಾಯಕ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್ ಮತ್ತಿತರರು ಉಪಸ್ಥಿತರಿದ್ದರು.

    Continue Reading

    LATEST NEWS

    Trending