BIG BOSS
BBK11: ಗೋಲ್ಡ್ ಸುರೇಶ್‌ಗೆ ಶಾಪ ಹಾಕಿದ ಅನುಷಾ..ಕಾರಣವೇನು ಗೊತ್ತಾ..?
ಕನ್ನಡದ ಬಿಗ್ ಶೋನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಬಿಗ್ಬಾಸ್ ಕೊಟ್ಟ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್ನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ರಕ್ಷಕರು ತಮ್ಮ ತಂಡದ ಡ್ರಮ್‍ನಿಂದ ನೀರು ಹೊರಗಡೆ ಹರಿಯದಂತೆ ಕಾಪಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಮಹಿಳಾ ಸ್ಪರ್ಧಿಗಳು ಬೇರೆ ತಂಡಕ್ಕೆ ಹೋಗಿ ತೊಂದರೆ ಕೊಟ್ಟು ನೀರು ಡ್ರಮ್‍ನಿಂದ ಹೋಗುವಂತೆ ಮಾಡುತ್ತಿದ್ದರು.
ಆಗ ಗೋಲ್ಡ್ ಸುರೇಶ್ ತಮ್ಮ ಡ್ರಮ್ ಬಳಿ ಬಂದ ಸ್ಪರ್ಧಿಗಳಿಗೆ ಗುದ್ದಿ ತಳ್ಳಿದ್ದಾರೆ. ಅದೇ ಜಾಗದಲ್ಲಿದ್ದ ಅನುಷಾ ಅವರಿಗೆ ಪೆಟ್ಟಾಗಿದೆ. ಆಗ ಕೋಪಗೊಂಡ ಅನುಷಾ, ಒಂದು ಕಾಮನ್ಸೆನ್ಸ್ ಇಲ್ಲೂ ಹೇಗೆ ವರ್ತನೆ ಮಾಡಬೇಕು ಅಂತ, ಹೀಗೆಂನಾ ನಿಮ್ಮ ಮನೆಯಲ್ಲಿ ಬೇಳ್ಸಿದ್ದು ಅಂತ ಹೇಳಿದ್ದಾರೆ. ಇದಾದ ಬಳಿಕ ಕೈಯಲ್ಲಿ ಎಳೆಯೋದಕ್ಕೆ ಬಂದರೆ ಕಾಲಲ್ಲಿ ಒದೆಯುತ್ತಾರೆ. ನನ್ನನ್ನೂ ಅವರ ಅಪ್ಪ ಸಾಕ್ತಾನಾ ಅಂತ ಕೂಗಾಡಿದ್ದಾರೆ. ಮತ್ತೆ ಇದೇ ವಿಚಾರಕ್ಕೆ ಟಾಸ್ಕ್ ಮುಗಿದ ಬಳಿಕ ಗಲಾಟೆಯಾಗಿದೆ.
ಇನ್ನೂ, ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೆ ದೊಡ್ಡ ಅವಕಾಶವೊಂದನ್ನು ಕೊಟ್ಟಿದ್ದಾರೆ. ಹೀಗಾಗಿ ನಾಲ್ಕು ತಂಡವನ್ನು ರಚಿಸಿದ ಬಿಗ್ಬಾಸ್ ಈ ಟಾಸ್ಕ್ಗಳನ್ನು ನೋಡಿದ್ದಾರೆ. ಟಾಸ್ಕ್ ಗೆದ್ದ ತಂಡಕ್ಕೆ ಬಿಗ್ಬಾಸ್ ಮನೆಯಲ್ಲಿರೋ ಅಧಿಕಾರವನ್ನು ಏಕಾಕಾಲದಲ್ಲಿ ಪಡೆಯಲು, ಅನುಭವಿಸಲು ಹಾಗೂ ಈ ಮನೆಯ ಮೇಲಿನ ಅಧಿಕಾರವನ್ನು ಸಾಧಿಸಲು ಒಂದೇ ವಾರದಲ್ಲಿ ಅನುಭವಿಸಬಹುದಾಗಿದೆ.
BIG BOSS
BBK11: ಅಸಹ್ಯವಾಗಿ ಟ್ರೋಲ್ ಮಾಡಿದವರಿಗೆ ಬಿಗ್ಬಾಸ್ ಮಾನಸ ಸಖತ್ ಟಾಂಗ್; ಹೇಳಿದ್ದೇನು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಐದನೇ ವಾರಕ್ಕೆ ಕಾಲಿಟ್ಟು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ವೀಕ್ಷಕರು ಅತಿ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.
ಹೌದು, ಬಿಗ್ಬಾಸ್ ಮನೆಯಿಂದ ಹಾಸ್ಯ ನಟ ತುಕಾಲಿ ಸಂತೋಷ್ ಪತ್ನಿ ಮಾನಸ 4ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ತಮಾಷೆ ಮಾಡುತ್ತಲೇ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಮಾನಸ 4ನೇ ಸ್ಪರ್ಧಿಯಾಗಿ ಆಚೆ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಹಾಸ್ಯ ನಟ ತುಕಾಲಿ ಸಂತೋಷ್ ಪತ್ನಿ ಪಕ್ಕಾ ಹಳ್ಳಿ ಹುಡುಗಿ. ಬಿಗ್ಬಾಸ್ ಮನೆಯಲ್ಲೂ ಹಳ್ಳಿ ಭಾಷೆಯಲ್ಲೇ ಮಾತಾಡು ತ್ತಿದ್ದರು. ಹೀಗಾಗಿ ಸಾಕಷ್ಟು ವೀಕ್ಷಕರಲ್ಲಿ ಕೆಲವರಿಗೆ ಮಾನಸ ಮಾತನಾಡುವ ಶೈಲಿ ಮತ್ತು ಡ್ರೆಸ್ಸಿಂಗ್ ಬಗ್ಗೆ ಕೊಂಕು ಮಾತಾಡಿದ್ದರು. ಅಲ್ಲದೇ ನನ್ನ ಮಾತಿನಿಂದ ಬೇಸರ ಆಗಿದ್ದರೇ ಕ್ಷಮಿಸಿ ಎಂದು ಪದೇ ಪದೇ ಕೇಳುತ್ತಿದ್ದರು. ಆದರೆ ಹೊರಗಡೆ ಟ್ರೋಲಿಗರು ಅದನ್ನು ಫೋಕಸ್ ಮಾಡಿ ಅವರನ್ನು ಕೇಳ ಮಟ್ಟದಲ್ಲಿ ಟ್ರೋಲ್ ಮಾಡಿದ್ದರು.
ಬೇರೆ ಬೇರೆ ಪ್ರಾಣಿಗಳ ಪಕ್ಕ ಮಾನಸ ಅವರ ಫೋಟೋವನ್ನು ಹಾಕಿ ಟ್ರೋಲ್ ಮಾಡಿದ್ದರು. ಆ ಟ್ರೋಲ್ ಮಾಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದ್ದವು. ಇದೇ ವಿಚಾರವಾಗಿ ಬಿಗ್ಬಾಸ್ ಮನೆಯಿಂದ ಆಚೆ ಬಂದ ಮೇಲೆ ಬೇಸರ ಹೊರ ಹಾಕಿದ್ದಾರೆ.
ಇನ್ನೂ ಈ ಬಗ್ಗೆ ಸಂದರ್ಶನದಲ್ಲಿ ಮಾತಾಡಿದ ಅವರು, ಒಂದು ಕಡೆ ಹಂದಿ ಫೋಟೋ ಹಾಕಿ, ಮತ್ತೊಂದು ಕಡೆ ನನ್ನ ಫೋಟೋ ಹಾಕಿದ್ದರು. ನನಗೆ ಬೇಸರ ಆಗಿಲ್ಲ. ಆದ್ರೆ ನನಗಾಗಿ ಟೈಮ್ ಕೊಟ್ಟು ಫೋಟೋ ಹಾಕಿದ್ದಾರೆ. ಮೊದ ಮೊದಲು ನನಗೆ ಫೋಟೋ ನೋಡಿ ಜಿಗುಪ್ಸೆ ಬಂತು. ಅದನ್ನೂ ನೋಡಿ ಅಳ್ತಾ ಇದ್ದೆ. ಆಮೇಲೆ ಸಂತು ನನಗೆ ಸಮಾಧಾನ ಮಾಡಿದ್ದರು. ಆದರೆ ಕೆಲವರು ತುಂಬಾ ಅಸಹ್ಯವಾಗಿ ಟ್ರೋಲ್ ಮಾಡಿದವರ ಮನೆಯವರು ಸುಂದರವಾಗಿ ಇದ್ದಾರಾ? ಪ್ರಪಂಚದಲ್ಲಿ ಚೆನ್ನಾಗಿ ಇಲ್ಲದೇ ಇರೋರು ಕೂಡ ಇರ್ತಾರೆ ಅಲ್ವಾ ಅದಕ್ಕಾಗಿ ನಾನು ಅತ್ತಿದ್ದೆ.
ಇದೇ ವಿಚಾರದ ಬಗ್ಗೆ ಮಾನಸ ಪತಿ, ನನ್ನ ಹೆಂಡತಿ ಸೋಷಿಯಲ್ ಮೀಡಿಯಾದಲ್ಲಿ ಇಷ್ಟೊಂದು ಫೇಮಸ್ ಆಗೋದಕ್ಕೆ ಟ್ರೋಲರ್ಸ್ಗಳೇ ಕಾರಣ. ಅವರು ಆತರ ಮಾಡಿದ್ದರಿಂದ ನಾವು ಎಚ್ಚರವಾಗಿ ಇರಲು ಸಾಧ್ಯ. ನಮಗೆ ಯಾರಾದರೂ ದೇವರು ಅಂತ ಇದ್ರೆ ಅದು ಟ್ರೋಲರ್ಸ್ ಹಾಗೂ ಸೋಷಿಯಲ್ ಮೀಡಿಯಾ ಅಂತ ಹೇಳಿಕೊಂಡಿದ್ದಾರೆ.
BIG BOSS
BBK11: ಅಬ್ಬಾ.. ಇದೇ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಅತಿ ದೊಡ್ಡ 6 ಆಫರ್ ಕೊಟ್ಟ ಬಿಗ್ಬಾಸ್; ಏನದು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಐದನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಬಿಗ್ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮನೆಯಲ್ಲಿರೋ ಸ್ಪರ್ಧಿಗಳಿಗೆ ಅತಿ ದೊಡ್ಡ 6 ಆಫರ್ ನೀಡಿದ್ದಾರೆ.
ಹೌದು, 13 ಮಂದಿ ಇರುವ ಬಿಗ್ಬಾಸ್ ಸೀಸನ್ 11ರಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಆಫರ್ ನೀಡಲಾಗಿದೆ. ಬಿಗ್ಬಾಸ್ ಕೊಟ್ಟ ಟಾಸ್ಕ್ನಲ್ಲಿ ಯಾವ ಟೀಮ್ ಗೆಲ್ಲುತ್ತದೆಯೋ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಹೀಗಾಗಿ ನಾಲ್ಕು ತಂಡವನ್ನು ರಚಿಸಿದ ಬಿಗ್ಬಾಸ್ ಈ ಟಾಸ್ಕ್ಗಳನ್ನು ನೋಡಿದ್ದಾರೆ. ಟಾಸ್ಕ್ ಗೆದ್ದ ತಂಡಕ್ಕೆ ಬಿಗ್ಬಾಸ್ ಮನೆಯಲ್ಲಿರೋ ಅಧಿಕಾರವನ್ನು ಏಕಾಕಾಲದಲ್ಲಿ ಪಡೆಯಲು, ಅನುಭವಿಸಲು ಹಾಗೂ ಈ ಮನೆಯ ಮೇಲಿನ ಅಧಿಕಾರವನ್ನು ಸಾಧಿಸಲು ಒಂದೇ ವಾರದಲ್ಲಿ ಅನುಭವಿಸಬಹುದಾಗಿದೆ.
ಟಾಸ್ಕ್ ಗೆದ್ದ ತಂಡಕ್ಕೆ ಬಿಗ್ಬಾಸ್ ಕೊಟ್ಟ ಆಫರ್ ಏನು?
1. ಇಮ್ಯೂನಿಟಿ ಕಾರ್ಡ್: ಈ ವಾರದ ನಾಮಿನೇಷನ್ನಿಂದ ಇಮ್ಯೂನಿಟಿ.
2. ಕ್ಯಾಪ್ಟನ್ಸಿ ಕಂಟೆಂಡರ್ ಕಾರ್ಡ್: ಗೆದ್ದವರಿಗೆ ಕ್ಯಾಪ್ಟನ್ಸಿ ಓಟಕ್ಕೆ ನೇರ ಪ್ರವೇಶ.
3. ಲಕ್ಷುರಿ ಕಾರ್ಡ್: ಗೆದ್ದವರಿಗೆ ಬಾಯಿ ಚಪ್ಪರಿಸುವ ಆನಂದ.
4. ಗುಡ್ನೈಟ್ ಕಾರ್ಡ್: ಗೆದ್ದವರಿಗೆ ಈ ಮನೆಯಲ್ಲಿನ ನಿದ್ದೆ ಹಾಗೂ ಮಂಚಗಳ ಮೇಲಿನ ಅಧಿಕಾರದ ಸುಖ.
5. ಕಿಕ್ ಔಟ್ ಕಾರ್ಡ್: ಗೆದ್ದವರಿಗೆ ಮುಂದಿನ ಟಾಸ್ಕ್ನಿಂದ ಒಂದು ತಂಡವನ್ನು ಹೊರಗೆ ಇಡುವ ಅಧಿಕಾರ.
6. ಪನಿಶ್ಮೆಂಟ್ ಕಾರ್ಡ್: ಗೆದ್ದವರಿಗೆ ಮನೆ ಕೆಲಸದಿಂದ ಸಂಪೂರ್ಣ ಮುಕ್ತಿ. ಸೋತವರಿಗೆ ಹೆಚ್ಚುವ ಮನೆಕೆಲಸ ಹಾಗೂ ಒಂದು ತಂಡಕ್ಕೆ ಗೆದ್ದ ತಂಡದಿಂದ ಸೇವಾ ಭಾಗ್ಯಾ.
ಪ್ರತಿ ತಂಡ ತಮ್ಮ ಎದುರಾಳಿ ತಂಡಗಳ ವಿರುದ್ಧ ಮುನ್ನಡೆ ಸಾಧಸುವುದು ತುಂಬಾ ಮುಖ್ಯ ಅಂತ ಬಿಗ್ಬಾಸ್ ಅನೌನ್ಸ್ ಮಾಡಿದ್ದಾರೆ. ಇನ್ನೂ ಬಿಗ್ಬಾಸ್ ಕೊಟ್ಟ ತವರಿನ ಸಿರಿ ಟಾಸ್ಕ್ನಲ್ಲಿ ಗೌತಮಿ ಅವರ ಟೀಮ್ ಗೆದ್ದಿದೆ. ಹೀಗಾಗಿ ಅವರು ಇಮ್ಯೂನಿಟಿ ಕಾರ್ಡ್ ಆನ್ನು ಆಯ್ಕೆ ಮಾಡಿ ಅನುಷಾ ಅವರನ್ನು ನಾಮಿನೇಷ್ನಿಂದ ಸೇಫ್ ಮಾಡಿದ್ದಾರೆ. ಅಲ್ಲದೇ ಮನೆಯ ಕ್ಯಾಪ್ಟನ್ ಹನುಮಂತ ಅವರ ಆಯ್ಕೆ ಅನುಸಾರ ಧನರಾಜ್, ಗೋಲ್ಡ್ ಸುರೇಶ್ ಹಾಗೂ ಮೋಕ್ಷಿತಾ ಪೈ ಈ ವಾರ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್ ಆಗಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಯಾರ ತಂಡ ಯಾವ ಅಧಿಕಾರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಅಂತ ಕಾದು ನೋಡಬೇಕಾಗಿದೆ.
BIG BOSS
ಬಿಗ್ಬಾಸ್ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಂತೆ ಪುಟ್ಟಕ್ಕನ ಮಗಳು ಸ್ನೇಹಾ
ಪುಟ್ಟಕ್ಕ ನೋವಿನಲ್ಲಿದ್ದಾಳೆ. ಮೊದಲ ಮಗಳನ್ನ ಕಳೆದುಕೊಂಡ ದುಃಖ ಇರುವಾಗಲೇ ಎರಡನೇ ಮಗಳು ಸ್ನೇಹಾಳನ್ನ ಆಕ್ಸಿಡೆಂಟ್ನಲ್ಲಿ ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾಳೆ. ಇದೇ ದೃಶ್ಯಗಳನ್ನು ನೋಡಿದ ವೀಕ್ಷಕರ ಕರುಳು ಚುರುಕ್ ಅನ್ನುವಂತಿದೆ.
ಸ್ನೇಹಾ ಇನ್ನಿಲ್ಲ ಎಂಬ ಸುದ್ದಿ ಕಾಳಿಗೆ ಗೊತ್ತಾಗಿದ್ದು, ಸಹನಾಳನ್ನ ಕರೆದುಕೊಂಡು ಊರಿಗೆ ಬಂದಿದ್ದಾನೆ. ಸ್ನೇಹಾ ಸಾವಿನ ವಿಚಾರ ಗೊತ್ತಿಲ್ಲದೇ ತಂಗಿ, ಅಮ್ಮನ ಮಡಿಲು ಸೇರಲು ಸಹನಾ ಸಂಭ್ರಮಿಸುತ್ತಿದ್ದಾಳೆ. ಒಬ್ಬಳು ಮಗಳನ್ನ ಕಳೆದುಕೊಂಡ ಪುಟ್ಟಕ್ಕನಿಗೆ ಇನ್ನೊಬ್ಬ ಮಗಳು ಬದುಕಿರೋ ವಿಚಾರ ಗೊತ್ತಾಗಿದೆ. ನೊಂದ ಜೀವಕ್ಕೆ ಆಸರೆ ಸಿಕ್ಕಂತಾಗಿದೆ.
ಒಂದೊಂದು ದೃಶ್ಯ ಕಲ್ಲು ಹೃದಯಬನ್ನೂ ಕರಗಿಸುವಂತಿವೆ. ಪ್ರತಿಯೊಬ್ಬರ ಅಭಿನಯ ಮನ ಮುಟ್ಟುವಂತಿದೆ. ಅಂದ ಹಾಗೆ, ಸ್ನೇಹಾಳಿಗೆ ಸಕಲ ಸರ್ಕಾರಿ ಗೌರವಗಳನ್ನ ನೀಡಲಾಯ್ತು. ಈ ದೃಶ್ಯದ ಸಿದ್ಧತೆಗೆ ರಿಯಲ್ ಪೊಲೀಸ್ ಬಂದು ಎಲ್ಲಾ ಕಲಾವಿದರಿಗೆ ಟ್ರೈನಿಂಗ್ ಮಾಡಿದ್ದರಂತೆ. ಇನ್ನೂ ಸ್ನೇಹಾ ಪಾತ್ರ ಮುಕ್ತಾಯವಾಗಿದೆ. ಆದರೆ ವೀಕ್ಷಕರ ಮನಸ್ಸಲ್ಲಿ ಸ್ನೇಹಾ ಸದಾ ಹಸಿರಾಗಿರೋದಂತೂ ಸತ್ಯ.
ಸೀರಿಯಲ್ನಿಂದ ಆಚೆ ಬಂದಿದ್ದ ಸ್ನೇಹ ಅಂದ್ರೆ ಸಂಜನಾ ಬುರ್ಲಿ ಅವರಿಗೆ ಬಿಗ್ಬಾಸ್ನಿಂದ ಆಫರ್ ಬಂದಿದೆ. ಹೀಗಾಗಿ ಅವರನ್ನು ಸೀರಿಯಲ್ನಲ್ಲಿ ಅಪಘಾತ ಮಾಡಿಸಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಾಮೆಂಟ್ಸ್ಗಳನ್ನು ಹಾಕುತ್ತಿದ್ದಾರೆ.
ಈ ಬಗ್ಗೆ ಮಾತಾಡಿದ ಸಂಜನಾ ಬುರ್ಲಿ, ನಾನು ಸೀರಿಯಲ್ಗೆ 3 ತಿಂಗಳು ನೋಟೀಸ್ ಪಿರಿಯಡ್ ಕೊಟ್ಟಿದೆ. ಆಗ ನಮ್ಮ ಡೈರೆಕ್ಟರ್ ಆರೂರ್ ಜಗದೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಪ್ರಮುಖ ಪಾತ್ರಕ್ಕೆ ನಟಿ ಬೇಕಾಗಿದ್ದಾರೆ ಅಂತ. ಸ್ನೇಹಾಳ ಕ್ಯಾರೆಕ್ಟರ್ಗೆ ರಿಪ್ಲೇಸ್ ಮಾಡೋದಕ್ಕೆ ಅಲ್ಲ. ಆಗ ಸಾಕಷ್ಟು ಮಂದಿ ಇದನ್ನು ಗೇಸ್ ಮಾಡಿದ್ದರು. ಸಂಜನಾ ಅವರು ಬಿಗ್ಬಾಸ್ಗೆ ಹೋಗುತ್ತಾರೆ ಅಂತ ಮುಂಚೆಯೇ ಗೇಸ್ ಮಾಡಿದ್ದರು. ಆದರೆ ಈಗ ಸ್ನೇಹಾ ಕ್ಯಾರೆಕ್ಟರ್ ಎಂಡ್ ಆದ ಮೇಲೆ ಬಿಗ್ಬಾಸ್ಗೆ ವೈಲ್ಡ್ಕಾರ್ಡ್ ಎಂಟ್ರಿ ಕೊಡುತ್ತಾರೆ ಅಂತ ಜನ ಅಂದುಕೊಳ್ಳುತ್ತಿದ್ದಾರೆ. ನಾನು ಯಾವ ರಿಯಾಲಿಟಿ ಶೋಗೂ ಹೋಗುತ್ತಿಲ್ಲ ಅಂತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
- DAKSHINA KANNADA4 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS2 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್
- DAKSHINA KANNADA2 days ago
ದಕ್ಷಿಣ ಕನ್ನಡ : ಹೆಬ್ಬಾವಿನ ಬಾಯಿಂದ ಬೆಕ್ಕಿನ ರಕ್ಷಣೆಗಾಗಿ ಶೋಭಕ್ಕನ ಹರಸಾಹಸ; ವೀಡಿಯೋ ವೈರಲ್
- LATEST NEWS4 days ago
ಬಲಗೈ ಬಿಟ್ಟು ಎಡಕೈಗೆಯೇ ಯಾಕೆ ವಾಚ್ ಕಟ್ಟುವುದು ಗೊತ್ತಾ ?