Connect with us

  MANGALORE

  ರಾಷ್ಟ್ರೀಯ ಮಟ್ಟದ ವೈಟ್‌ ಲಿಫ್ಟಿಂಗ್‌ನಲ್ಲಿ ಕಿನ್ನಿಗೋಳಿಯ ಕುವರಿಗೆ ಸ್ವರ್ಣ ಪದಕ

  Published

  on

  ಮಂಗಳೂರು: ಗೋವಾದಲ್ಲಿ ನಿನ್ನೆ ನಡೆದ ರಾಷ್ಟ್ರೀಯ ಮಟ್ಟದ ಬೆಂಚ್‌ ಪ್ರೆಸ್‌ ವೈಟ್‌ ಲಿಫ್ಟಿಂಗ್‌ನಲ್ಲಿ ಕಿನ್ನಿಗೋಳಿ ವೀರ ಮಾರುತಿ ವ್ಯಾಯಾಮ ಶಾಲೆಯ ದಿಶಾ ಕುಕ್ಯಾನ್‌ ಬಂಗಾರದ ಪದಕ ಪಡೆದಿದ್ದಾಳೆ.

  LATEST NEWS

  ಭೂ ಕುಸಿತದಿಂದ ತಬ್ಬಲಿಯಾದ ಬಾಲಕಿ..! ಡಾಕ್ಟರೇಟ್ ಮಾಡಿ ತಾಯಿ ಆಸೆ ಈಡೇರಿಕೆ..!

  Published

  on

  ಮಂಗಳೂರು ( ಮಡಿಕೇರಿ ) : ಭೂಕುಸಿತದಿಂದ ಹೆತ್ತವರು ಹಾಗೂ ಒಡಹುಟ್ಟಿದವರನ್ನು ಕಳೆದುಕೊಂಡು ಏಕಾಂಗಿಯಾಗಿದ್ದ 16 ಬಾಲಕಿ, ಇಂದು ತನ್ನ ದೃಢ ನಿರ್ಧಾರ ಮತ್ತು ಹೋರಾಟದ ಮೂಲಕ ಉನ್ನತ ಶಿಕ್ಷಣ ಪಡೆದು ಉಪನ್ಯಾಸಕಿ ಆಗಿದ್ದೂ ಅಲ್ಲದೆ ಮಂಗಳೂರು ವಿವಿಯ ಡಾಕ್ಟರೇಟ್ ಪದವಿ ಕೂಡಾ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಪಲ್ಲವಿ ಭಟ್‌ ಈಗ ಜೈನ್ ವಿವಿಯ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.


  ಅದು ಹದಿನೆಂಟು ವರ್ಷಗಳ ಹಿಂದೆ (2006)ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ನಡೆದಿದ್ದ ಘೋರ ದುರ್ಘಟನೆ. ಮನೆಯವರೆಲ್ಲರೂ ನಿದ್ರೆಗೆ ಜಾರಿದ್ದ ಸಮಯದಲ್ಲಿ ಸಂಭವಿಸಿದ ಭೂ ಕುಸಿತದಿಂದ ಆರು ಜನ ಚಿರ ನಿದ್ರೆಗೆ ಜಾರಿದ್ದ ಘಟನೆ ಅದು. ಅದರಲ್ಲಿ ರಾಧಾ ಭಟ್‌,ಮತ್ತು ಅವರ ಇಬ್ಬರು ಮಕ್ಕಳಾದ 14 ವರ್ಷದ ಜ್ಯೋತಿ, 12 ವರ್ಷದ ಅಭಿಶೇಖ್‌ ಒಂದೇ ಮನೆಯವರು ಅಸುನೀಗಿದ್ದರು. ಆಗ 16 ವರ್ಷ ಪ್ರಾಯದ ಪಲ್ಲವಿ ಎಂಬ ಬಾಲಕಿ ಮಾತ್ರ ಬದುಕಿ ಉಳಿದಿದ್ದರು. ಆಸ್ಪತ್ರೆಯಲ್ಲಿದ್ದ ಪಲ್ಲವಿಗೆ ತನ್ನ ಮನೆಯವರು ಯಾರೂ ಇಲ್ಲಾ ಎಂಬ ಸತ್ಯ ಗೊತ್ತಾಗಿದ್ದು ಒಂದು ತಿಂಗಳ ಬಳಿಕ ಅಂದ್ರೆ ಆ ಕ್ಷಣ ಹೇಗಿದ್ದಿರಬೇಡ ?

  ಆತ್ಮಹತ್ಯೆಯ ಯೋಚನೆಯಿದ್ರೂ ತಾಯಿಯ ಆಸೆ ಪೂರೈಸಿದ ಛಲಗಾತಿ..!

  ‘ಈ ದುರಂತವು ನನ್ನ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿತು. ಪದೇ ಪದೇ ಆತ್ಮಹತ್ಯೆಯ ಆಲೋಚನೆಗಳು ಬಂದಿದ್ದವು. ಆದರೆ ತನ್ನ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಬೇಕು ಮತ್ತು ಇಂಗ್ಲಿಷ್ ಮಾತನಾಡ ಬೇಕು ಎಂಬುದು ನನ್ನ ತಾಯಿ ರಾಧಾ ಭಟ್ ಅವರ ಮಹತ್ವಾಕಾಂಕ್ಷೆಯಾಗಿತ್ತು. ಇದು ನನಗೆ ಜೀವನದಲ್ಲಿ ಮೇಲೆ ಬರಲು ಪ್ರೇರೇಪಿಸಿತು’ ಇದು ಪಲ್ಲವಿ ಅವರು ಎಲ್ಲರನ್ನೂ ಕಳೆದುಕೊಂಡರೂ ಬದುಕಿನಲ್ಲಿ ಬದಲಾವಣೆ ಹೇಗೆ ಸಾಧ್ಯವಾಯ್ತು ಅಂತ ತಿಳಿಸಿದ ಕಾರಣ.

  ಚಿಕ್ಕಪ್ಪ ಸುಂದರ್, ಚಿಕ್ಕಮ್ಮ ರುಕ್ಮಿಣಿ ಅವರ ಬೆಂಬಲ, ಸ್ನೇಹಿತರು ಹಾಗೂ ಹಿತೈಶಿಗಳು ನೀಡಿದ ನೈತಿಕ ಸ್ಥೈರ್ಯ, ಹಾಗೂ ತನ್ನಲ್ಲಿದ್ದ ಪುಸ್ತಕ ಓದುವ ಹವ್ಯಾಸ ಸವಾಲುಗಳನ್ನು ಜಯಿಸಲು ನನಗೆ ನೆರವಾಯ್ತು ಅನ್ನೋದು ಪಲ್ಲವಿ ಅವರ ಮನದಾಳದ ಮಾತು. ಮಡಿಕೇರಿಯ ಮ್ಯಾಥ್ಯೂ, ಶಾಲೆಯ ಶಿಕ್ಷಕರಾದ ಸಿಸ್ಟರ್‌ ಸಿಸಿಲಿ , ನಾರಾಯಣ ಗೌಡ ಇವರೆಲ್ಲರ ಕಾರಣದಿಂದ ಇಂದು ಡಾಕ್ಟರೇಟ್‌ ಪಡೆಯಲು ಸಾಧ್ಯವಾಗಿದೆ ಅಂತಾರೆ ಡಾ.ಪಲ್ಲವಿ.

  ದುರಂತದ ಬಳಿಕ ಜಿಲ್ಲಾಡಳಿತ ನೀಡಿದ್ದ 3 ಲಕ್ಷ ಪರಿಹಾರ ಬಳಿಸಿಕೊಂಡು ಶಿಕ್ಷಣ ಮುಂದುವರೆಸಿದ್ದ ಪಲ್ಲವಿ, ಮಂಗಳೂರು ವಿವಿಯಲ್ಲಿ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬ್ಯಾಂಕ್ ಸಾಲ ಪಡೆದುಕೊಂಡಿದ್ದರು. ಡಾ.ಅನಸೂಯಾ ರೈ ಅವರ ಮಾರ್ಗದರ್ಶನದಲ್ಲಿ ‘ಭಾರತೀಯ ದೃಷ್ಟಿಕೋನದಿಂದ ಬ್ಯಾಂಕಶ್ಯೂರೆನ್ಸ್ – ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಬ್ಯಾಂಕುಗಳ ನಡುವಿನ ತುಲನಾತ್ಮಕ ಅಧ್ಯಯನ” ಎಂಬ ಪ್ರಬಂಧಕ್ಕಾಗಿ ಅವರು ಈಗ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

  Continue Reading

  LATEST NEWS

  ಕಿತ್ತೋದ ಕಾಮಾಗಾರಿ..! ಸ್ಮಾರ್ಟ್‌ ಸಿಟಿಗೆ ಎಷ್ಟು ವರ್ಷ ಗ್ಯಾರೆಂಟಿ..?

  Published

  on

  ಮಂಗಳೂರು : ಮಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಾಗಾರಿಯ ಒಂದೊಂದೆ ಕರ್ಮಾಕಾಂಡ ಈಗ ಹೊರ ಬರುತ್ತಿದೆ. ಹಂಪನಕಟ್ಟೆಯ ಕಾರ್ ಪಾರ್ಕಿಂಗ್ ಕಟ್ಟಡ ಕಾಮಾಗಾರಿ ನೆನೆಗುದಿಗೆ ಬಿದ್ದಿದ್ರೆ, ಮುಳಿಹಿತ್ಲಿನ ರಿವರ್ ಫ್ರಂಟ್‌ ತಡೆಗೋಡೆ ಕುಸಿತವಾಗಿದೆ. ಇದೀಗ ನೆಲ್ಲಿಕಾಯಿ ರಸ್ತೆಯಲ್ಲಿ ಪಾದಾಚಾರಿ ರಸ್ತೆಯಲ್ಲಿ ಚರಂಡಿಯ ಮುಚ್ಚಳವೊಂದು ಜನರನ್ನು ಬಲಿ ಪಡೆಯಲು ಕಾದು ನಿಂತಿದೆ.

  ಕುಟುಂತ್ತಾ ಸಾಗಿದ್ದ ಸ್ಮಾರ್ಟ್‌ ಸಿಟಿ ಕಾಮಾಗಾರಿಯಿಂದ ಮಂಗಳೂರು ಅಂದವಾಗುವುದು ಬಿಟ್ಟು ಅಂದಗೆಟ್ಟು ಹೋಗಿದೆ ಎನ್ನಬಹುದು. ಕೇವಲ ನಾಲ್ಕೈದು ಸರ್ಕಲ್‌, ಮೂರ್ನಾಲ್ಕು ಕೆರೆ ಹಾಗೂ ಒಂದೆರಡು ಪಾರ್ಕ್‌ಗಳನ್ನು ಅಭಿವೃದ್ದಿ ಮಾಡಿ ಇದೇ ಸ್ಮಾರ್ಟ್‌ ಸಿಟಿ ಅಂತ ಜನರನ್ನು ನಂಬಿಸುವ ಕೆಲಸ ಆಗಿದೆ. ಆದ್ರೆ ಅಸಲಿಗೆ ಆಗಬೇಕಾದ ಅಗತ್ಯ ಕೆಲಸಗಳು ಹಳ್ಳ ಹಿಡಿದಿದೆ ಅನ್ನೋದು ಸುಳ್ಳಲ್ಲ. ಇನ್ನು ಪೂರ್ಣಗೊಂಡಿರುವ ಕದ್ರಿ ಪಾರ್ಕ್‌ ಅಂಗಡಿ ಮಳಿಗೆಗಳು ಪಾಳು ಬೀಳುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.
  ಇದರ ನಡುವೆ ಅಲ್ಲಲ್ಲಿ ಅಗೆದು ಹಾಕಲಾದ ಜಲ ಸಿರಿ ಯೋಜನೆಯ ಕಾಮಾಗಾರಿಗಳು ದ್ವಿಚಕ್ರವಾಹನ ಸವಾರರನ್ನು ಯಾವಾಗ ಬಲಿ ಪಡೆಯಲಿದೆಯೋ ಗೊತ್ತಿಲ್ಲ. ಇದೆಲ್ಲದರ ನಡುವೆ ಪಾದಾಚಾರಿಗಳು ನಡೆದಾಡುವ ಫುಟ್‌ಪಾತ್‌ ಕೂಡಾ ಕಳಪೆ ದರ್ಜೆಯಲ್ಲಿ ಮಾಡಿದ್ದಾರೆ ಅನ್ನೋದು ನೆಲ್ಲಿಕಾಯಿ ರಸ್ತೆಯಲ್ಲಿ ಸಂಚರಿಸಿದ್ರೆ ಗೊತ್ತಾಗುತ್ತದೆ. ಇಲ್ಲಿನ ಇಂಟರ್‌ ಲಾಕ್ ಕಿತ್ತು ಹೋಗುತ್ತಿರುವುದು ಮಾತ್ರವಲ್ಲದೆ ದುಬಾರಿ ಬೆಲೆಯ ಚರಂಡಿ ಮುಚ್ಚಳ ತುಂಡಾಗಿ ಜನರ ಜೀವ ಬಲಿಗೆ ಕಾದು ನಿಂತಿದೆ.

  ಇದು ಯಾವ ರೀತಿಯ ಸ್ಮಾರ್ಟ್‌ ಸಿಟಿ ಕಾಮಾಗಾರಿ ಅನ್ನೋದನ್ನು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಹೇಳಬೇಕಾಗಿದೆ. ಕೋಟ್ಯಾಂತರ ರೂಪಾಯಿ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಕೆಲಸದ ಮೂಲಕ ಪೂಲು ಮಾಡುವ ಈ ಸ್ಮಾರ್ಟ್‌ ಸಿಟಿ ಬೇಕಿತ್ತಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ. ತಕ್ಷಣ ನೆಲ್ಲಿಕಾಯಿ ರಸ್ತೆಯ ಫುಟ್‌ ಪಾತ್ ದುರಸ್ಥಿ ಮಾಡದೇ ಇದ್ರೆ ಕತ್ತಲಿನಲ್ಲಿ ಯಾರಾದ್ರೂ ಬಿದ್ದು ಅಪಾಯ ಸಂಭವಿಸುವುದು ಗ್ಯಾರೆಂಟಿ ಅಂತ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  Continue Reading

  LATEST NEWS

  ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ : ಉಳ್ಳಾಲ ಪೊಲೀಸ್

  Published

  on

  ಉಳ್ಳಾಲ: ಕೆಲವು ದಿನಗಳಿಂದ ಅಪರಿಚಿತ ಏಳೆಂಟು ಜನರು ಠಾಣಾ ವ್ಯಾಪ್ತಿಯ ಕೆಲವು ಒಂಟಿ ಮನೆ ಹಾಗೂ ಬೀಗ ಜಡಿದಿರುವ ಮನೆಗಳಿಗೆ ತೆರಳುತ್ತಿರುವ ಬಗ್ಗೆ ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಈ ಠಾಣಾ ವ್ಯಾಪ್ತಿಯ ಜನರು ಈ ವಿಚಾರದಲ್ಲಿ ಸದಾ ಎಚ್ಚರದಿಂದ ಇರಬೇಕು ಎಂದು ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಬಾಲಕೃಷ್ಣ ತಿಳಿಸಿದ್ದಾರೆ.

  ಈ ಪ್ರದೇಶದಲ್ಲಿ ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ. ಮನೆ ಬಳಿ ಯಾರಾದರೂ ಬಂದರೆ ಪರಿಶೀಲಿಸಿ ಬಾಗಿಲು ತೆಗೆಯಬೇಕು. ಅಪರಿಚಿತರು ಎಂದು ಕಂಡು ಬಂದಲ್ಲಿ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ 9480802315 ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Continue Reading

  LATEST NEWS

  Trending