ಕಾರ್ಕಳ: ಎಪ್ರಿಲ್ 21 ರಂದು ನಡೆದ ಮದುವೆ ಸಮಾರಂಭದಲ್ಲಿ ಚಿನ್ನದ ಸರ ಎಗರಿಸಿದ ಆರೋಪಿಯನ್ನು ನಿನ್ನೆ ಕಾರ್ಕಳ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಳ್ಳಿ ಗ್ರಾಮದ ದಿಡಿಂಬೊಟ್ಟು ನಿವಾಸಿ ಸುರೇಶ್ ಪೂಜಾರಿ ಬಂಧಿತ ಆರೋಪಿ.
ಬೆಳ್ತಂಗಡಿ ತಾಲ್ಲೂಕಿನ ಅಚ್ಚಿನಡ್ಕ ಭವಾನಿ ಅವರ ಮದುಮಗನ ಡ್ರೆಸ್ಸಿಂಗ್ ರೂಮಿನಲ್ಲಿ ಇಟ್ಟಿದ್ದ ವ್ಯಾನಿಟಿ ಬ್ಯಾಗ್ ಕಾಣೆಯಾಗಿತ್ತು. ಆ ಬ್ಯಾಗ್‌ನಲ್ಲಿ 6ಸಾವಿರ ರೂ. ಮೌಲ್ಯದ ವಿಮೋ ಕಂಪೆನಿಯ ಮೊಬೈಲ್ ಫೋನ್, 52 ಸಾವಿರ ರೂ. ಮೌಲ್ಯದ ಚಿನ್ನದ ಸರವಿತ್ತು.
ಈ ಬಗ್ಗೆ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು ಪೊಲೀಸರು ಹಾಲ್‌ನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಅನುಮಾನದ ಮೇರೆಗೆ ಸುರೇಶ್ ಪೂಜಾರಿಯನ್ನು ವಿಚಾರಣೆಗೊಳಪಡಿಸಿದರು.
ಈ ವೇಳೆ ಕೃತ್ಯವೆಸಗಿರುವ ಬಗ್ಗೆ ಆತ ಬಾಯಿ ಬಿಟ್ಟಿದ್ದಾನೆ.
ಚಿನ್ನವನ್ನು ಕಾರ್ಕಳ ಮುತ್ತೂಟ್ ಫೈನಾನ್ಸ್‌ನಲ್ಲಿ ಅಡವಿಟ್ಟು ಹಣ ಸಾಲ ಪಡೆದಿರುವುದಾಗಿ ಮಾಹಿತಿ ನೀಡಿದ್ದಾನೆ.