Connect with us

    LATEST NEWS

    ರೈಲ್ವೇ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆ – ಹಳಿ ತಪ್ಪಿಸಲು ಸಂಚು

    Published

    on

    ಉತ್ತರಾಖಂಡ: ರೂರ್ಕಿಯ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಪತ್ತೆಯಾಗಿದೆ. ಗೂಡ್ಸ್ ರೈಲನ್ನು ಹಳಿತಪ್ಪಿಸಲು ಸಂಚು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಧಂಧೇರಾ ರೈಲು ನಿಲ್ದಾಣದ ಬಳಿಯ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ.

    ಮಾಹಿತಿಯ ಪ್ರಕಾರ, ಭಾನುವಾರ ಬೆಳಿಗ್ಗೆ 06:35 ಕ್ಕೆ, ಗೂಡ್ಸ್ ರೈಲಿನ ಲೊಕೊ ಪೈಲಟ್ ರೂರ್ಕಿಯ ಸ್ಟೇಷನ್ ಮಾಸ್ಟರ್‌ಗೆ ಲಾಂಧೌರಾ ನಡುವಿನ ಕಿಮೀ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಕಂಡುಬಂದಿದೆ ಎಂದು ತಿಳಿಸಲಾಗಿದೆ.

    ಮಾಹಿತಿ ಪಡೆದ ತಕ್ಷಣ ಪಾಯಿಂಟ್ಸ್‌ಮನ್ ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಸಿಲಿಂಡರ್ ಸಂಪೂರ್ಣವಾಗಿ ಖಾಲಿಯಾಗಿರುವುದು ಕಂಡುಬಂದಿದೆ. ಈ ಸಮಯದಲ್ಲಿ, ರೈಲ್ವೆ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಅನ್ನು ಯಾರು ಇರಿಸಿದರು ಎಂಬುದು ಸ್ಪಷ್ಟವಾಗಿಲ್ಲ. ತನಿಖೆ ನಡೆಯುತ್ತಿದೆ.

    BIG BOSS

    ಬಿಗ್‌ಬಾಸ್‌ಗೆ ಪೊಲೀಸ್ ನೋಟಿಸ್; ವಿಚಾರಣೆಗೆ ಹಾಜರಾಗಲು ಸೂಚನೆ

    Published

    on

    ಬೆಂಗಳೂರು: ‘ಬಿಗ್ ಬಾಸ್’ ಆಯೋಜಕರಿಗೆ ಕುಂಬಳಗೋಡು ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಬರುವಂತೆ ‘ಬಿಗ್ ಬಾಸ್’ ಆಯೋಜಕರಿಗೆ ನೋಟಿಸ್ ನೀಡಲಾಗಿದೆ.

    ಸ್ವರ್ಗ, ನರಕ ವಿಚಾರವಾಗಿ ಮಹಿಳೆಯರ ಕುರಿತಾದ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

    ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದಿಂದ ದೂರು ದಾಖಲಿಸಿದ್ದು, ಮಹಿಳಾ ಆಯೋಗದ ದೂರು ಆಧರಿಸಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

    ‘ಬಿಗ್ ಬಾಸ್’ ಸೆಟ್ ಗೆ ತೆರಳಿ ಇನ್ ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಸ್ವರ್ಗ ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ಅಸಡ್ಡೆ ತೋರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

    Continue Reading

    LATEST NEWS

    ಪೊದೆಯಲ್ಲಿ ಸಿಕ್ಕ ನವಜಾತ ಶಿಶುವನ್ನು ರಕ್ಷಿಸಿದ ಇನ್ಸ್ಪೆಕ್ಟರ್; ಮುಂದೇನಾಯ್ತು ಗೊತ್ತಾ ??

    Published

    on

    ಮಂಗಳೂರು/ಗಾಜಿಯಾಬಾದ್: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ಇನ್ಸ್ಪೆಕ್ಟರ್ ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಬಳಿಕ ಈಗ ಅವರೇ ಆ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ.


    ಪೊದೆಯಲ್ಲಿ ಶಿಶು ಅಳುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ದುಢಿಯಾ ಪೀಪಲ್ ಪುಷ್ಪೇಂದ್ರ ಸಿಂಗ್ ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಹೆತ್ತವರು ಪತ್ತೆಯಾಗದ ಕಾರಣ ಸಿಂಗ್ ತಮ್ಮ ಪತ್ನಿ ಬಳಿ ಚರ್ಚಿಸಿ ತಾವೇ ದತ್ತು ಪಡೆಯಲು ಮುಂದಾಗಿದ್ದಾರೆ.

     

    ಇದನ್ನೂ ಓದಿ: 16ನೇ ವಯಸ್ಸಿನಲ್ಲೇ ದ್ವಿಚಕ್ರ ವಾಹನ ಲೈಸೆನ್ಸ್; ಸರ್ಕಾರದ ಹೊಸ ಕಾನೂನು ಯಾವುದು ಗೊತ್ತಾ ??

     

    ಪುಷ್ಪೇಂದ್ರ ಸಿಂಗ್ ದಂಪತಿಗೆ 2018 ರಲ್ಲಿ ವಿವಾಹವಾಗಿದ್ದು, ಇನ್ನೂ ಮಕ್ಕಳಾಗಿರಲಿಲ್ಲ. ಅದಲ್ಲದೇ, ನವರಾತ್ರಿ ವೇಳೆ ಈ ಮಗು ಸಿಕ್ಕಿದ್ದು, ದೇವಿಯ ಆಶಿರ್ವಾದ ಎಂದಿದ್ದಾರೆ. ದತ್ತು ಪಡೆವ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Continue Reading

    LATEST NEWS

    ಗೃಹಲಕ್ಷ್ಮೀ ಹಣದಿಂದ ವಿದ್ಯಾರ್ಥಿಗಳಿಗೆ `ಗ್ರಂಥಾಲಯ’ ಕಟ್ಟಿಸಿದ ಮಹಾ ತಾಯಿ!

    Published

    on

    ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ಮಕ್ಕಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

    ಹೌದು, ಬೆಳಗಾವಿಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ, ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

    ಈ ಬಗ್ಗೆ ಟ್ವಿಟರ್ ನಲ್ಲಿ ಮಲ್ಲವ್ವ ಮೇಟಿ ಮಾಹಿತಿ ಹಂಚಿಕೊಂಡಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಡೆವಲಪ್‌ಮೆಂಟ್‌ ಕಮೀಷನರ್‌ ಉಮಾ ಮಹದೇವನ್‌ ದಾಸ್‌ಗುಪ್ತ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್‌ ಮಾಡಿದ್ದಾರೆ. ಮಂಟೂರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ಮಲ್ಲವ್ವ ಭೀಮಪ್ಪ ಮೇಟಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    13 ತಿಂಗಳಿನಿಂದ ಗೃಹಲಕ್ಷ್ಮೀ ಹಣ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಮೆಂಬರ್‌ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ. ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನೆ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ತಿಳಿಸಿದ್ದಾರೆ.

    Continue Reading

    LATEST NEWS

    Trending