Monday, May 17, 2021

ತುಳು ನಾಡಿನಲ್ಲಿ ಹೊಸ ಭಾಷ್ಯ ಬರೆಯಲು ಸಿದ್ದಗೊಂಡಿದೆ ‘ಗಮ್ಜಾಲ್’..! ಫೆ.8 ರಂದು ಸೈಹ್ಯಾದ್ರಿ ಕಾಲೇಜಿನಲ್ಲಿ ಬಿಡುಗಡೆಯಾಗಲಿದೆ ಟ್ರೈಲರ್..  

ತುಳು ನಾಡಿನಲ್ಲಿ ಹೊಸ ಭಾಷ್ಯ ಬರೆಯಲು ಸಿದ್ದಗೊಂಡಿದೆ ‘ಗಮ್ಜಾಲ್’..! ಫೆ.8 ರಂದು ಸೈಹ್ಯಾದ್ರಿ ಕಾಲೇಜಿನಲ್ಲಿ ಬಿಡುಗಡೆಯಾಗಲಿದೆ ಟ್ರೈಲರ್..  

ಮಂಗಳೂರು: ತುಳು ಚಿತ್ರರಂಗಕ್ಕೆ ಹೊಸ ಕಳೆ ತಂದುಕೊಟ್ಟ ಮತ್ತು ಕೋಸ್ಟಲ್ ವುಡ್‌ ನಲ್ಲಿ ದಾಖಲೆ ನಿರ್ಮಿಸಿದ ‘ಗಿರಿಗಿಟ್‌’ ಖ್ಯಾತಿಯ ರೂಪೇಶ್‌ ಶೆಟ್ಟಿ ತಂಡದ ಮತ್ತೊಂದು ಬಹುನಿರೀಕ್ಷಿತ ‘ಗಮ್ಜಾಲ್‌’ ತುಳು ಚಿತ್ರ ಇದೇ ಫೆ. 19ರಂದು ಕರಾವಳಿಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಒಂದು ವರ್ಷದ ಸುಧೀರ್ಘ ವಿರಾಮದ ಬಳಿಕ ಬಿಡುಗಡೆಯಾಗಲಿರುವ ಮೊದಲ ತುಳು ಸಿನಿಮಾ ಗಮ್ಜಾಲ್ ಆಗಿದೆ.

ಈ ಕಾರಣಕ್ಕೆ ಕರಾವಳಿಯ ಬಹು ನಿರೀಕ್ಷಿತ ತುಳು ಸಿನಿಮಾವನ್ನು ಅದ್ದೂರಿಯಾಗಿ ತೆರೆಗೆ ತರಲು ಚಿತ್ರ ತಂಡ ಸಿದ್ದತೆಗಳನ್ನು ಮಾಡಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭ ಮಂಗಳೂರಿನ ಅಡ್ಯಾರ್ ನ ಸೈಹ್ಯಾದ್ರಿ ಕಾಲೇಜಿನಲ್ಲಿ ಫೆಬ್ರವರಿ 8 ರಂದು ನಡೆಯಲಿದೆ.

ಗಮ್ಜಾಲ್‌ ಸಿನಿಮಾದ ಮೂಲಕ ತುಳು ನಾಡಿನ ಮತ್ತೆ ಒಂಟಿ ಪರದೆಯ ಥಿಯೇಟರ್‌ಗಳಲ್ಲಿ ಚಟುವಟಿಕೆಗಳು ಗರಿಗೆದರಲಿವೆ. ತುಳು ಚಿತ್ರ ರಂಗದಲ್ಲಿ ಹೊಸ ಭಾಷ್ಯ ಬರೆದ ಗಿರಿಗಿಟ್ ಸಿನೆಮಾದ ಹೀರೋ ರೂಪೇಶ್‌ ಶೆಟ್ಟಿ ಅವರ ಈ ಚಿತ್ರಕಥೆಗೆ ಪ್ರಸನ್ನ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ.

ಗಮ್ಜಾಲ್‌’ ಚಿತ್ರದಲ್ಲೂ ರೂಪೇಶ್‌ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ಕೋಸ್ಟಲ್‌ವುಡ್‌ನ ಮನೆಮಾತಾದ ಹಿರಿಯ ಕಲಾವಿದರಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ಉಮೇಶ್‌ ಮಿಜಾರ್‌, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ ಸೇರಿದಂತೆ ಹಲವು ಖ್ಯಾತ ಕಲಾವಿದರು ಗಮ್ಜಾಲ್ ಗಾಗಿ ಬಣ್ಣ ಹಚ್ಚಿದ್ದಾರೆ. ಶೂಲಿನ್‌ ಫಿಲ್ಮ್ಸ್‌ ಮತ್ತು ಮೊಗರೋಡಿ ಕನ್‌ಸ್ಟ್ರಕ್ಷನ್ ಚಿತ್ರಕ್ಕೆ ಬಂಡವಾಳ ಹಾಕಿದೆ.

ಅದೇನೆ ಇದ್ರೂ ಸುಧೀರ್ಘ ಲಾಕ್‌ಡೌನ್‌ ನಿಂದ ಮಂಕಾಗಿದ್ದ ತುಳುನಾಡಿನಲ್ಲಿ ಬಿಡುಗಡೆಯಾಗಲಿರುವ ‘ಗಮ್ಜಾಲ್‌’ ಸಿನಿಮಾ ತುಳುಚಿತ್ರ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿರುವುದು ಮಾತ್ರ ಅಷ್ಟೇ ಸತ್ಯ…

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...