Connect with us

  MANGALORE

  ಜಿ. ಎಸ್ . ಬಿ . ಸಮಾಜ ಹಿತರಕ್ಷಣಾ ವೇದಿಕೆ (ರಿ) ವಿದ್ಯಾ ಪೋಷಕ ನಿಧಿ : ಆಮಂತ್ರಣ ಪತ್ರಿಕೆ ಬಿಡುಗಡೆ  

  Published

  on

  ಮಂಗಳೂರು : ಜಿ. ಎಸ್. ಬಿ. ಸಮಾಜ ಹಿತರಕ್ಷಣಾ ವೇದಿಕೆ (ರಿ) ಪ್ರಾಯೋಜಕತ್ವದಲ್ಲಿ 6ನೇ  ವರ್ಷದ ವಿದ್ಯಾಪೋಷಕ ನಿಧಿ 2021-22 ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜುಲೈ 21, ಬುಧವಾರ , ಮಂಗಳೂರಿನ ಕೋಡಿಯಾಲಬೈಲಿನಲ್ಲಿರುವ ವೇದಿಕೆಯ ಕಛೇರಿಯಲ್ಲಿ ಜರುಗಿತು.

  ವಿದ್ಯಾಪೋಷಕ ನಿಧಿ ವಿದ್ಯಾರ್ಥಿವೇತನ ನಿಧಿಯ ಅಧ್ಯಕ್ಷರಾದ ಸಿ ಎ ಎಸ್. ಎಸ್ . ನಾಯಕ್ ರವರು, ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಮಾತನಾಡುತ್ತಾ, ಕಳೆದ 10 ವರ್ಷಗಳಿಂದ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ವೇದಿಕೆಯ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ನಿಧಿಯ ಜಿ. ಎಸ್. ಬಿ. ಸಮಾಜದ ಅರ್ಹ , ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿ ಮೂಡಿಬಂದಿದೆ. ಈವರೆಗೆ 935 ವಿದ್ಯಾರ್ಥಿಗಳಿಗೆ 1.5 ಕೋಟಿ ರೂಪಾಯಿ ವಿದ್ಯಾರ್ಥಿವೇತನದ ಪ್ರಯೋಜನವನ್ನು ವಿದ್ಯಾರ್ಥಿ ಸಮುದಾಯ ಪಡೆದುಕೊಂಡಿದೆ ಎಂದು ವಿವರಿಸಿದರು .

  ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಸಂಚಾಲಕರಾದ ಶ್ರೀ . ಆರ್ . ವಿವೇಕಾನಂದ ಶೆಣೈ ಅವರು ಸಮಾಜದ ಸಹೃದಯ ದಾನಿಗಳ ಸಹಕಾರದಿಂದ ವೇದಿಕೆಯ ಸಮಾಜಮುಖಿ ಯೋಜನೆಗಳನ್ನು ಕುಟುಂಬ ಚೈತನ್ಯ ಯೋಜನೆಯ ಜೊತೆಗೆ ವಿದ್ಯಾಪೋಷಕ ನಿಧಿ ವಿತರಣಾ ಕಾರ್ಯಕ್ರಮವು, ಕೋವಿಡ್ ನಿರ್ಬಂಧದ ನಡುವೆಯೂ ಸರಳವಾಗಿ ಜುಲೈ 25, ಆದಿತ್ಯವಾರದಂದು , ಅಪರಾಹ್ನ 12:00 ರಿಂದ 01:30 ಗಂಟೆಯ ವರೆಗೆ ಮಂಗಳೂರಿನ ನಮ್ಮ ಕುಡ್ಲ ಸ್ಟುಡಿಯೋದಲ್ಲಿ ನಡೆಯಲಿರುವುದು. ಆ ದಿನ ಸಾಂಕೇತಿಕವಾಗಿ 10 ಮಂದಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿದ್ಯಾರ್ಥಿ ವೇತನಾ ವಿತರಣೆ ನಡೆಯಲಿರುವುದು. ಉಳಿದ ೧೨೦ಮಂದಿ ವಿದ್ಯಾರ್ಥಿಗಳಿಗೆ ನೇರ ಖಾತೆ ವರ್ಗಾವಣೆ ಮಾಡಲಾಗುವುದು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀ. ಬಿ . ಯೋಗೀಶ್ ಆಚಾರ್ಯ ರವರು ವಹಿಸಲಿದ್ದು ಅಮೆರಿಕಾದ ವಾಷಿಂಗ್ಟನ್ ಡಿ .ಸಿ ಯ, ಐಸಿಎಐ ಚ್ಯಾಪ್ಟರಿನ ಅಧ್ಯಕ್ಷರರಾದ ಸಿ ಎ ಗೋಕುಲದಾಸ್ ಪೈ ಯವರು ಉದ್ಘಾಟನೆಯನ್ನು  ನೆರವೇರಿಸಲಿರುವರು.

  ಸುಬ್ರಹ್ಮಣ್ಯ ಪ್ರಭು ರವರು ಸ್ವಾಗತಿಸಿದರು. ಪಿ ಸುರೇಶ ಶೆಣೈ ಯವರು ಧನ್ಯವಾದ ಸಮರ್ಪಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿದರು.

  DAKSHINA KANNADA

  ವಿಟ್ಲ : ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ : 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ

  Published

  on

  ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ಈ ಚುನಾವಣೆಯ ಪೂರ್ವಭಾವಿಯಾಗಿ ಜೂನ್ 3 ರಂದು ಶಾಲಾ ಸಂಸತ್ತಿನ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಯಿತು. ಜೂನ್ 6 ರಂದು ಶಾಲೆಯ ಚುನಾವಣಾ ಅಭ್ಯರ್ಥಿಗಳು ಶಾಲಾ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರಗಳನ್ನು ಸಲ್ಲಿಸಿದರು.


  ಜೂನ್ 11 ರಿಂದ ಜೂನ್ 13 ರ ವರೆಗೆ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ 5 ರಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕೆಲವು ಆಶ್ವಾಸನೆಗಳನ್ನು ನೀಡಿ ಮತ ಯಾಚಿಸಿದರು. ಜೂನ್ 15 ರಂದು ಡಿಜಿಟಲ್ ತಂತ್ರಜ್ಞಾನದ ಮುಖೇನ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು.

  ಚುನಾಯಿತರಾದವರು :

  ಶಾಲಾ ಸಂಸತ್ತಿನ ಪ್ರಧಾನ ಮಂತ್ರಿಯಾಗಿ ಹತ್ತನೇ ತರಗತಿಯ ಸಾಕ್ಷಿ, ಗೃಹ ಮಂತ್ರಿಯಾಗಿ ಅಬೂಬಕರ್ ನವವಿ (10ನೇ ತರಗತಿ), ಸಂವಹನ ಮಂತ್ರಿಯಾಗಿ ಖತಿಜಾ ಇಫ್ಹಾ (10ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಶುಭಂ ಶೆಟ್ಟಿ (10ನೇ ತರಗತಿ ), ಶಿಕ್ಷಣ ಮಂತ್ರಿಯಾಗಿ ನಿಧಿಶಾ (9ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಪ್ರಗತಿ (9ನೇ ತರಗತಿ), ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಲಿಖಿತ್ ಕುಮಾರ್ ಎಲ್ (9ನೇ ತರಗತಿ) ಹಾಗೂ ನೀರಾವರಿ ಮತ್ತು ವಿದ್ಯುತ್ ಮಂತ್ರಿಯಾಗಿ ದೀಪಿತ್ (8ನೇ ತರಗತಿ) ಚುನಾಯಿತರಾದರು.

  ಸಹಾಯಕ ಮಂತ್ರಿಗಳಾಗಿ ಪ್ರಾಥಮಿಕ ವಿಭಾಗದಿಂದ ಯಶಸ್ವಿ ಟಿ ಎಮ್ (7ನೇ ತರಗತಿ), ದಿಯಾ ವೈ ಶೆಟ್ಟಿ (7ನೇ ತರಗತಿ), ಸನ್ನಿಧಿ ಎಲ್ ಎಸ್ (5ನೇ ತರಗತಿ), ಮುಹಮ್ಮದ್ ಫಹ್ಮಾನ್ (7ನೇ ತರಗತಿ), ಸಾತ್ವಿಕ್ ಕೆ (6ನೇ ತರಗತಿ), ಕೌಶಲ್ ಬಿ (5ನೇ ತರಗತಿ), ಸುಶಾನ್ (6ನೇ ತರಗತಿ) ಹಾಗೂ ಜಿ ಎಸ್ ರಿಷಿಕ್ ಅಂಚನ್ (5ನೇ ತರಗತಿ ಚುನಾಯಿತರಾದರು.

  ಇದನ್ನೂ ಓದಿ : ಹಕ್ಕಿ ಜ್ವರ ಬಂದಿದೆ, ಮೊಟ್ಟೆ, ಕೋಳಿ ತಿನ್ನುವುದು ಸುರಕ್ಷಿತವೇ?

  ಚುನಾವಣಾ ಫಲಿತಾಂಶ ಘೋಷಣೆಯ ನಂತರ ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ ಹಾಗೂ ಸಂಸ್ಥೆಯ ಪ್ರಾಚಾರ್ಯರಾದ ರವೀಂದ್ರ ದರ್ಬೆ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕಿಯರಾದ ಲೀಲಾ ಮುಖ್ಯ ಚುನಾವಣಾ ಅಧಿಕಾರಿಯಾಗಿ ಹಾಗೂ ಶೋಭಾ ಎಂ ಶೆಟ್ಟಿ ಉಪ ಚುನಾವಣಾ ಅಧಿಕಾರಿಯಾಗಿ ಜವಾಬ್ದಾರಿಯನ್ನು ನಿರ್ವಹಸಿದರು.

  ಶಿಕ್ಷಕಿ ರಶ್ಮಿ ಕೆ ಫೆರ್ನಾಂಡೀಸ್ ಚುನಾವಣಾ ಫಲಿತಾ0ಶ ಘೋಷಿಸಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಸಹಕರಿಸಿದರು.

  Continue Reading

  LATEST NEWS

  ಪ್ರಕಾಶ್ ಶೆಟ್ಟಿ, ರೊನಾಲ್ಡ್‌ ಕೊಲಾಸೋರಿಗೆ ಗೌರವ ಡಾಕ್ಟರೇಟ್ ಪ್ರದಾನ

  Published

  on

  ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವ ಶನಿವಾರ ವಿ.ವಿ.ಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ಶನಿವಾರ ಜರಗಿತು.

  ಮಂಗಳೂರು ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ಡಾ। ರೊನಾಲ್ಡ್‌ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಿದರು. ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ। ತುಂಬೆ ಮೊಯ್ದೀನ್ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

  155 ಮಂದಿಗೆ ಪಿಎಚ್‌ಡಿ, 58 ಚಿನ್ನದ ಪದಕ ಮತ್ತು 57 ನಗದು ಬಹುಮಾನ ಪ್ರದಾನ ಮಾಡಿದರು.

  ಉನ್ನತ ಶಿಕ್ಷಣ ಸಚಿವ, ಸಹಕುಲಾಧಿಪತಿ ಡಾ। ಎಂ.ಸಿ.ಸುಧಾಕರ್ ಉಪಸ್ಥಿತರಿದ್ದರು. ನವದೆಹಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ ಮಹಾನಿರ್ದೇಶಕ ಪ್ರೊ। ಸಚಿನ್ ಚತುರ್ವೇದಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

  ವಿ.ವಿ. ಕುಲಪತಿ ಪ್ರೊ। ಪಿ.ಎಲ್. ಧರ್ಮ ಪ್ರಸ್ತಾವಿಸಿದರು. ಕುಲಸಚಿವ (ಆಡಳಿತ) ರಾಜು ಮೊಗವೀರ, ಕುಲಸಚಿವ (ಪರೀಕ್ಷಾಂಗ) ಡಾ। ದೇವೇಂದ್ರಪ್ಪ, ವಿ.ವಿ.ಯ, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

  Continue Reading

  DAKSHINA KANNADA

  ಅಳಕೆ ರಾಜಕಾಲುವೆ ತಡೆಗೋಡೆ ಕುಸಿತ..ಕಳಪೆ ಕಾಮಗಾರಿಗೆ ಡಿವೈಎಫ್ಐ ಆಕ್ರೋಶ..!

  Published

  on

  ಮಂಗಳೂರು: ಪ್ರತೀ ವರುಷ ಮಂಗಳೂರಿನಲ್ಲಿ ಸುರಿಯುವ ಮಳೆಯಿಂದ ರಾಜಕಾಲುವೆಗಳು ತುಂಬಿ ಹರಿದು ಸುತ್ತಮುತ್ತಲ ತಗ್ಗು ಪ್ರದೇಶದ ಮನೆಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ನೀರು ತುಂಬಿ ಉಂಟಾಗುವ ಕೃತಕ ನೆರೆಯಿಂದ ರಕ್ಷಿಸಿಕೊಳ್ಳಲು ಸಣ್ಣ ನೀರಾವರಿ ಯೋಜನೆಯಡಿ ಅಳಕೆ ಪ್ರದೇಶದಲ್ಲಿರುವ ರಾಜಕಾಲುವೆಗೆ ಇತ್ತೀಚೆಗೆ ನಿರ್ಮಿಸಿರುವ ತಡೆಗೋಡೆ ಒಂದೆರಡು ಮಳೆಗೆ ಕುಸಿತಗೊಂಡಿದೆ.  ಇದು ಮೇಲ್ನೋಟಕ್ಕೆ ಕಳಪೆ ಗುಣಮಟ್ಟದ ಕಾಮಗಾರಿಯಂತೆ ಕಂಡಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒತ್ತಾಯಿಸಿದೆ. ಈ ರೀತಿಯ ಕಳಪೆ ಗುಣಮಟ್ಟದ ತಡೆಗೋಡೆ ಕುಸಿಯಲು ಶಾಸಕ ವೇದವ್ಯಾಸ ಕಾಮತರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.

   

  ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುದ್ರೋಳಿ ಸಮೀಪದ ಅಳಕೆ ರಾಜಕಾಲುವೆಯಲ್ಲಿ ಪ್ರತೀ ವರ್ಷ ಮಳೆಗಾಲದ ವೇಳೆ ನೀರು ತುಂಬಿ ಸೃಷ್ಟಿಯಾಗುವ ಕೃತಕ ನೆರೆಯಿಂದ ಹತ್ತಿರದ ತಗ್ಗು ಪ್ರದೇಶದ ಮನೆಗಳಿಗೆ ಅಂಗಡಿ ಮುಂಗಟ್ಟುಗಳಿಗೆ ನೀರು ಹರಿದ ಪರಿಣಾಮ ಈ ಭಾಗದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಈ ಬಗ್ಗೆ ರಾಜಕಾಲುವೆಗಳಲ್ಲಿ ಹೂಳೆತ್ತುವ ಮತ್ತು ತಡೆಗೋಡೆ ನಿರ್ಮಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯು ತನ್ನ 2.5 ಕೋಟಿ ರೂ. ಮೌಲ್ಯದ ಯೋಜನೆಯಡಿ ಅಂದಾಜು 20 ಲಕ್ಷ ರೂ. ಮೊತ್ತದ ತಡೆಗೋಡೆಯನ್ನು ನಿರ್ಮಿಸಲು ಒಪ್ಪಿಗೆ ಸೂಚಿಸಿದೆ. ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರನೊಬ್ಬ ಸರಿಯಾದ ಯೋಜನೆಗಳನ್ನು ರೂಪಿಸದೆ ತರಾತುರಿಯಲ್ಲಿ ತಡೆಗೋಡೆ ಕಾಮಗಾರಿ ನಡೆಸಿ ಮುಗಿಸಿದೆ.

  Read More..;  ಡಿವೈಡರ್ ಕಲ್ಲುಗಳಿಗೆ  ಡಿಕ್ಕಿಯಾಗಿ ಕಾರು  ಪಲ್ಟಿ; ನಾಲ್ವರು ಗಂಭೀರ

  ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಗುತ್ತಿಗೆದಾರರ ಕೈಯಲ್ಲಿರುವ ಇತರೆ ಕಾಮಗಾರಿ ಕೆಲಸಗಳನ್ನು ತಡೆಯೊಡ್ಡಿ ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಸಣ್ಣ ನೀರಾವರಿ ಯೋಜನೆಯಡಿಯಲ್ಲಿ ಕಳೆದ 5 ವರುಷಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಎಲ್ಲಾ ಪ್ರಗತಿ ಕಾಮಗಾರಿಗಳನ್ನು ಪುನರ್ ತನಿಖೆಗೊಳಪಡಿಬೇಕೆಂದು ಡಿವೈಎಫ್ಐ ಮತ್ತು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಡಿವೈಎಫ್ಐ ದ.ಕ ಜಿಲ್ಲಾ ಅಧ್ಯಕ್ಷ ಬಿಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Continue Reading

  LATEST NEWS

  Trending