Connect with us

    STATE

    ಮಾಜಿ ಸಂಸದ ಜಿ.ಮಾದೇಗೌಡ ನಿಧನ: ಇಂದು ಹುಟ್ಟೂರಲ್ಲಿ ಅಂತ್ಯಕ್ರಿಯೆ

    Published

    on

    ಮಂಡ್ಯ: ಮಾಜಿ ಸಂಸದ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನವಾಗಿದ್ದಾರೆ. ಮಂಡ್ಯದ ಕೆ.ಎಂ ದೊಡ್ಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾದೇಗೌಡ ಅವ್ರು ಚಿಕಿತ್ಸೆಗೆ ಸ್ಪಂದಿಸದೇ ಕೊನೆ ಉಸಿರು ಎಳೆದಿದ್ದಾರೆ. ಇವತ್ತು ಮದ್ದೂರು ತಾಲೂಕಿನ ಹನುಮಂತನಗರದಲ್ಲಿ ಇವರ ಅಂತ್ಯಕ್ರಿಯೆ ನೆರವೇರಿಲಿದೆ.


    ಮದ್ದೂರು ತಾಲೂಕಿನ ಹನುಮಂತನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು ಇದಕ್ಕಿಂತ ಮುಂಚಿತವಾಗಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಹುಟ್ಟುರಾದ ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಮತ್ತು ಭಾರತೀ ಕಾಲೇಜಿನಲ್ಲಿ ಸಾರ್ವಜಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2.30 ರ ಸುಮಾರಿಗೆ ಹನುಮಂತನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಅಂತಾ ಜಿ‌ ಮಾದೇಗೌಡ ಪುತ್ರ ಮಧು ಜಿ ಮಾದೇಗೌಡ ಮಾಹಿತಿ ನೀಡಿದ್ದಾರೆ.

    LATEST NEWS

    ಉತ್ತರಪ್ರದೇಶ: ಪೊಲೀಸ್ ಠಾಣಾ ಎಲ್ಲಾ ಸಿಬಂದಿಗಳು ಅಮಾನತು..!

    Published

    on

    ಉತ್ತರ ಪ್ರದೇಶ/ಮಂಗಳೂರು: ಪೂರ್ತಿ ಠಾಣೆಯ ಪೊಲೀಸ್ ಸಿಬಂಧಿಗಳು ಅಮಾನತುಗೊಂಡಿರುವ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಂಚ ಸ್ವೀಕರಿಸುವುದು, ಸುಲಿಗೆ ಪ್ರಕರಣಗಳಲ್ಲಿ ಸಿಲುಕುವುದು ಮತ್ತು ಅಮಾನತುಗೊಳ್ಳುವುದು ಹೊಸತಲ್ಲ. ಆದರೆ, ಇಡೀ ಪೊಲೀಸ್ ಠಾಣೆಯೊಂದರ ಸಿಬಂದಿಗಳೆಲ್ಲಾ ಅಮಾನತು ಆಗಿದ್ದಾರೆ ಅನ್ನೋದು ಆಶ್ಚರ್ಯವೆನಿಸಿದೆ. ಉತ್ತರ ಪ್ರದೇಶ-ಬಿಹಾರ ಗಡಿ ಭಾಗದ ಬಲ್ಲಿಯಾದಲ್ಲಿ ಟ್ರಕ್ ಚಾಲಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಕಾನ್‌ಸ್ಟೇಬಲ್‌ಗಳು ಸೇರಿದಂತೆ ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ.

    ಈ ಬಗ್ಗೆ ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ವಾರಾಣಾಸಿ ವಲಯದ ಎಡಿಜಿ ಪಿಯೂಷ್ ಮೊರ್ದಿಯಾ ನೇತೃತ್ವದಲ್ಲಿ ಗುರುವಾರ(ಜು.25) ನಸುಕಿನ ವೇಳೆ ದಾಳಿ ನಡೆಸಲಾಗಿತ್ತು. ವಸೂಲಿ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಬಳಿಕ ಎಡಿಜಿ ಮೊರ್ದಿಯಾ ಅವರು ನರಾಹಿ ಪೊಲೀಸ್ ಠಾಣೆಯ ಎಲ್ಲಾ 19 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಏಳು ಮಂದಿ ಪೊಲೀಸರು ಸೇರಿದಂತೆ ಒಟ್ಟು 23 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

    ಪತಿಗೆ ಮೆಸೇಜ್ ಕಳುಹಿಸಿ ಬೇರೆ ಯುವಕನ ಜೊತೆ ಪತ್ನಿ ನಾಪತ್ತೆ..!

    ಬಿಹಾರದಿಂದ ಉತ್ತರ ಪ್ರದೇಶಕ್ಕೆ ಬರುವ ಪ್ರತಿ ಟ್ರಕ್‌ನಿಂದ ಕನಿಷ್ಠ 500 ರೂ ವಸೂಲಿ ಮಾಡಲಾಗುತ್ತಿದ್ದು, ಪ್ರತಿ ರಾತ್ರಿ ಸುಮಾರು 1 ಸಾವಿರ ಟ್ರಕ್‌ಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಈ ಹಣವನ್ನು ಪೊಲೀಸರು ಹಾಗೂ ಮಧ್ಯವರ್ತಿಗಳ ನಡುವೆ ಹಂಚಲಾಗುತ್ತದೆ ಎಂದು ಒಬ್ಬ ಕಾನ್‌ಸ್ಟೇಬಲ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

    Continue Reading

    LATEST NEWS

    ರೇಣುಕಾಸ್ವಾಮಿ ಕುಟುಂಬವನ್ನು ಸಂತೈಸಿದ ವಿನೋದ್ ರಾಜ್..! 1 ಲಕ್ಷ ರೂ. ಧನಸಹಾಯ ನೀಡಿ ನೆರವು

    Published

    on

    ಚಿತ್ರದುರ್ಗ/ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್‌ನ್ನು ನೋಡಲು ಪ್ರತಿದಿನ ಸೆಲೆಬ್ರೆಟಿಗಳು ಜೈಲಿನತ್ತ ಧಾವಿಸುತಿದ್ದಾರೆ. ಜು.23ರಂದು ವಿನೋದ್ ರಾಜ್‌ಕುಮಾರ್‌ರವರು ದರ್ಶನ್‌ನನ್ನು ಭೇಟಿ ಮಾಡಿದ್ದಾರೆ. ಜೈಲಿಗೆ ಹೋಗವಾಗ ದರ್ಶನ್‌ಗೆ ಇಷ್ಟವಾದ ಊಟವನ್ನು ತೆಗೆದುಕೊಂಡು ಹೋಗಿದ್ದರು. ದಾಸನನ್ನು ಭೇಟಿ ಮಾಡಿದ ಬಳಿಕ ವಿನೋದ್ ರಾಜ್ ಹತ್ಯೆಗೀಡಾದ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದ್ದಾರೆ. ಬಳಿಕ ವೈಯಕ್ತಿಕವಾಗಿ ಕುಟುಂಬದವರಿಗೆ 1 ಲಕ್ಷ ರೂ ಧನಸಹಾಯ ನೀಡಿದ್ದಾರೆ.

    ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವಿನೋದ್ ರಾಜ್, ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಹೆತ್ತವರ ಸಂಕಟ ನೋಡಲು ಸಾಧ್ಯವಾಗುತ್ತಿಲ್ಲ. ಕುಟುಂಬದ ಪರಿಸ್ಥಿತಿ ನೋಡಿದರೆ ಕರುಳು ಕಿತ್ತು ಬರುತ್ತಿದೆ. ಪ್ರತೀ ಜೀವಿಗೂ ಜೀವವಿದೆ. ಯಾರನ್ನೂ ಯಾರಿಗೂ ಕೊಲ್ಲುವ ಹಕ್ಕಿಲ್ಲ. ಕೆಟ್ಟದ್ದು ಜಾಸ್ತಿಯಾದಂತೆ ಇಂತಹ ಘಟನೆಗಳು ಹೆಚ್ಚುತ್ತದೆ. ಇನ್ನು ಇಂತಹ ಘಟನೆಗಳು ಹೆಚ್ಚಾಗದಂತೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ಕಲಾವಿದರನ್ನು ನೋಡಿ ಜನರು ಅನುಕರಣೆ ಮಾಡುತ್ತಾರೆ. ಹಾಗಾಗಿ ನಾವು ಜಾಗೃತರಾಗಿರಬೇಕು. ಉನ್ನತ ಸ್ಥಾನಕ್ಕೆ ಹೋದವರು ವಿವೇಕವನ್ನು ಮರೆಯಬಾರದು ಎಂದು ಹೇಳಿದ್ದಾರೆ.

    ಕೊಲ್ಲೂರು ದೇವಾಲಯದಲ್ಲಿ ನಟ ದರ್ಶನ್ ಪತ್ನಿ..! ಸಂಕಷ್ಟ ನಿವಾರಣೆಗೆ ತಾಯಿಯ ಮೊರೆ

    ದರ್ಶನ್ ಭೇಟಿ ಕುರಿತು ಮಾತನಾಡಿರುವ ವಿನೋದ್ ರಾಜ್ ದರ್ಶನನ್ನು ಜೈಲಲ್ಲಿ ಭೇಟಿ ಮಾಡಿದ್ದೇನೆ. ನನ್ನನ್ನು ನೋಡಿದ ಕೂಡಲೇ ಭಾವುಕರಾಗಿ ತಬ್ಬಿಕೊಂಡರು. ರೇಣುಕಾಸ್ವಾಮಿ ಕುಟುಂಬದವರ ಬಗ್ಗೆ ಮಾತನಾಡಲು ಸಾಧ್ಯವಾಗಲಿಲ್ಲ. ಸಿಕ್ಕ ಸಮಯಾವಕಾಶದಲ್ಲಿ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

    Continue Reading

    DAKSHINA KANNADA

    ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ; ಎಲ್ಲೆಲ್ಲಿ?

    Published

    on

    ಮಂಗಳೂರು : ಈಗಾಗಲೇ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ಅಲ್ಲದೇ ಕೆಲವು ಜಿಲ್ಲೆಗಳು ಮಳೆಯ ಆರ್ಭಟದಿಂದ ನಲುಗಿ ಹೋಗಿವೆ. ಇದೀಗ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹೇಳಲಾಗಿದೆ.


    ಎಲ್ಲೆಲ್ಲಿ ಮಳೆ?

    ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಚಾಮರಾಜನಗರ, ಮಂಡ್ಯ, ಮೈಸೂರು, ದಾವಣಗೆರೆ, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೀದರ್‌ ಸೇರಿದಂತೆ ಕೆಲವೆಡೆ ಸಾಧಾರಣ ಮಳೆಯಾಗುತ್ತಿದೆ.

    ಇದನ್ನೂ ಓದಿ : ಸಮುದಾಯ ಪ್ರಾಣಿಗಳಿಗೆ ಆಹಾರ ನೀಡಲು ಮಾರ್ಗಸೂಚಿ ಬಿಡುಗಡೆ; ಇಲ್ಲಿವೆ ಹೊಸ ನಿಯಮಗಳು
    ರಾಜ್ಯದ ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಜುಲೈ 27ರ ವರೆಗೂ ಮಳೆ ಮತ್ತಷ್ಟು ಚುರುಕು ಪಡೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
    ಹವಾಮಾನ ಇಲಾಖೆ ಪ್ರಕಾರ, ಜುಲೈ 27ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ. ಹಾಗಾಗಿ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಈ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ.

    Continue Reading

    LATEST NEWS

    Trending