Connect with us

  LATEST NEWS

  ಇಲ್ಲಿ ಕಂಠಪೂರ್ತಿ ವೈನ್‌‌ ಕುಡಿದ್ರೂ ಫ್ರೀ! ಆದ್ರೆ ಒಂದು ಕಂಡೀಷನ್‌!

  Published

  on

  ಫ್ರೀ ಎಂದರೆ ಯಾರು ತಾನೇ ಬಿಡ್ತಾರೆ ಹೇಳಿ. ಫ್ರೀ ಅನ್ನುವ ಪದ ಕೇಳಿದ ಕೂಡಲೇ ಜನ ನಾ ಮುಂದು ತಾ ಮುಂದು ಅಂತ ನುಗ್ಗುತ್ತಾ ಇರುತ್ತಾರೆ. ಇನ್ನು ವೈನ್ ಫ್ರೀ ಅಂದರೆ ಬಾಯಿ ಬಿಡೋದು ಗ್ಯಾರಂಟಿನೇ. ಆದರೆ ವೈನ್ ಫ್ರೀ ಆಫರ್ ನಮ್ಮ ಭಾರತದಲ್ಲಿ ಅಲ್ವೇ ಅಲ್ಲ. ಈ ರೀತಿಯ ಆಫರ್ ಇರೋದು ಇಟಲಿ ದೇಶದಲ್ಲಿ. ಇಟಲಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಎಷ್ಟೇ ವೈನ್ ಕುಡಿದರೂ ಹಣ ಕೇಳಲ್ಲ. ಆದರೆ ರೆಸ್ಟೋರೆಂಟ್ ಮಾಲೀಕರ ಒಂದು ಕಂಡೀಷನ್ ಮಾತ್ರ ಫಾಲೋ ಮಾಡಲೇಬೇಕು. ವೈನ್ ಫ್ರೀ ಆಫರ್, ಮಾಲೀಕರ ಕಂಡೀಷನ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈ ಸುದ್ದಿ ನೋಡಿದವರೆಲ್ಲಾ ವ್ಹಾವ್ ಎನ್ನುತ್ತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಈ ರೆಸ್ಟೋರೆಂಟ್‌ನಲ್ಲಿ ಎಷ್ಟಾದರೂ ವೈನ್ ಕುಡಿಯಬಹುದು!

  ಇಟಲಿಯಲ್ಲಿನ ವೆರೋನಾದಲ್ಲಿರುವ ಅಲ್ ಕಾಂಡೋಮಿನಿಯೊ ಹೆಸರಿನ ಇಟಾಲಿಯನ್ ರೆಸ್ಟೋರೆಂಟ್ ಗೆ ಭೇಟಿ ಕೊಡುವ ಗ್ರಾಹಕರಿಗೆ ಉಚಿತವಾಗಿ ವೈನ್ ದೊರೆಯುತ್ತದೆ. ಆದರೆ ಊಟಕ್ಕೆ ಕುಳಿತುಕೊಳ್ಳುವಾಗ ಗ್ರಾಹಕರ ಬಳಿ ಮೊಬೈಲ್ ಫೋನ್ ಗಳು ಇರಬಾರದು. ರೆಸ್ಟೋರೆಂಟ್ ಗೆ ಪ್ರವೇಶಿಸಿದ ಕೂಡಲೇ ಮೊಬೈಲ್ ಫೋನ್ ಅನ್ನು ಸಿಬ್ಬಂದಿ ಬಳಿ ಒಪ್ಪಿಸಿಬಿಡಬೇಕು.

  ಮೊಬೈಲ್‌ ಸೈಡಿಗಿಟ್ಟು ವೈನ್‌ ಕುಡಿಯಿರಿ!

  ಇದೇ ಉದ್ದೇಶಕ್ಕಾಗಿ ಒಂದು ಬಾಟಲ್ ವೈನ್ ಅನ್ನು ಫ್ರೀ ಆಗಿ ಕೊಟ್ಟಿರಬಹುದು ಎಂದು ಅನ್ನಿಸುತ್ತದೆ. ಆದರೆ ಕಾರಣವೇನೆಂದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವೇ ಸಮಸ್ಯೆ ಆಗೋಗಿದೆ. ಪ್ರತಿ 5 ಸೆಕೆಂಡ್‌ಗೆ ಜನರು ತಮ್ಮ ಫೋನ್ ನೋಡುತ್ತಾ ಇರುತ್ತಾರೆ. ಆದರೆ ಆಗಾಗ ಫೋನ್ ನೋಡುವ ಅವಶ್ಯಕತೆ ಜನರಿಗೆ ಇಲ್ಲ ಕಾಣಿಸುತ್ತದೆ. ಈ ರೆಸ್ಟೊರೆಂಟ್‌ನಲ್ಲಿ ಜನರು ಸ್ವಲ್ಪ ಕಾಲ ಮೊಬೈಲ್ ಪಕ್ಕಕ್ಕೆ ಇಟ್ಟು ವೈನ್ ಕುಡಿಯಬೇಕು. ವೈನ್ ಕುಡಿದು ಮುಗಿಸುವವರೆಗೆ ಜನರು ಮೋನ್ ಮುಟ್ಟುವಂತಿಲ್ಲ.

  ಇನ್ ಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ನ ಆಫರ್, ಕಂಡೀಷನ್ ಬಗ್ಗೆ ಪೋಸ್ಟ್ ವೈರಲ್ ಆಗುತ್ತಿದೆ. ಪೋಸ್ಟ್ ಗೆ ಸುಮಾರು 68000 ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ತಮಾಷೆ ಸಹ ಮಾಡಿದ್ದಾರೆ.

  ರೆಸ್ಟೋರೆಂಟ್ ಮಾಲೀಕರ ಈ ಕಾರ್ಯಕ್ಕೆ ಮೆಚ್ಚುಗೆ ತಿಳಿಸಿದ ನೆಟ್ಟಿಗರೊಬ್ಬರು, ಗ್ರಾಹಕರು ತಮ್ಮ ಸಮಯವನ್ನು ಆನಂದಿಸಲು ಈ ಮಾಲೀಕರು ತಮ್ಮ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ನಿಜಕ್ಕೂ ಮಾಲೀಕರು ಒಳ್ಳೆಯ ಮನುಷ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

  DAKSHINA KANNADA

  ಹರೇಕಳ ಹಾಜಬ್ಬ ಶಾಲೆಯ ಕಂಪೌಂಡ್ ಕುಸಿತ..! ವಿದ್ಯಾರ್ಥಿನಿ ಸಾ*ವು..!

  Published

  on

  ಮಂಗಳೂರು : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್‌ ವಾಲ್ ಕುಸಿತಗೊಂಡಿದೆ. ಕುಸಿತಗೊಂಡ ವಾಲ್‌ ಅಡಿಗೆ ಸಿಲುಕಿದ 3 ನೇ ತರಗತಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ. ಹರೇಕಳ ಗ್ರಾ.ಪಂ ವ್ಯಾಪ್ತಿಯ ನ್ಯೂಪಡ್ಪುವಿನಲ್ಲಿ ಮೇ 20ರ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂಜೆ ವೇಳೆ ಸುರಿದ ಧಾರಕಾರ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ.


  ನ್ಯೂಪಡ್ಪು ನಿವಾಸಿ ಸಿದ್ದೀಖ್ – ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತ ಬಾಲಕಿ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು.

  ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಕುಸಿದುಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಿಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  Continue Reading

  LATEST NEWS

  ಗುಜರಾತ್‌ ಎಟಿಎಸ್‌ನಿಂದ ನಾಲ್ವರು ಐಸಿಸ್ ಉಗ್ರರ ಸೆರೆ..!

  Published

  on

  ಮಂಗಳೂರು ( ಗುಜರಾತ್) :   ಗುಜಾರಾತ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು ಗುಜರಾತ್ ಎಟಿಸಿ ಅಧಿಕಾರಿಗಳು ಬಂಧಿಸಿದ್ದಾರೆ.  ಅಹಮ್ಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಈ ನಾಲ್ವರು ಉಗ್ರರನ್ನು ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಚೆನೈ ಮೂಲಕ ಅಹಮ್ಮದಾಬಾದ್ ತಲುಪಿದ್ದ ಈ ನಾಲ್ವರೂ ಮೂಲತಃ ಶ್ರೀಲಂಕದವರು ಎಂದು ಮಾಹಿತಿ ಲಭ್ಯವಾಗಿದೆ.

  ಎರಡು ವಾರಗಳ ಹಿಂದೆ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್‌ ಸ್ಫೋಟದ ಈ ಮೇಲ್‌ ಸಂದೇಶ ಬಂದಿತ್ತು. ಈ ವಿಚಾರವಾಗಿ ಎಟಿಎಸ್ ಅದಿಕಾರಿಗಳು ಹಲವು ಆಯಾಮಗಳಲ್ಲಿ ತನಿಕೆಯನ್ನು ನಡೆಸಿದ್ದರು. ಈ ತನಿಕೆಯ ಮುಂದುವರೆದ ಭಾಗವಾಗಿ ಈ ನಾಲ್ವರು ಐಸಿಸ್ ಉಗ್ರರರನ್ನು ಬಂಧಿಸಲಾಗಿದೆ. ಬಂದಿತರು ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಎಟಿಎಸ್‌ಗೆ ಲಭ್ಯವಾಗಿದೆ. ಅಲ್ಲದೆ ಇವರಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಂಟು ಇದೆ ಅನ್ನೋ ಅಂಶ ಕೂಡಾ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ನಡೆಸಿದ ವೇಳೆ ಈ ವಿಚಾರ ಗೊತ್ತಾಗಿದೆ ಎಂದು ಎಟಿಎಸ್ ಮೂಲಗಳು ಬಹಿರಂಗಪಡಿಸಿದೆ.

  Continue Reading

  FILM

  ಐಶ್ವರ್ಯಾ ರೈ ಜೊತೆಗೂಡಿ ಬಿಗ್‌ ಬಿ ಫ್ಯಾಮಿಲಿ ಮತದಾನ…!

  Published

  on

  ಮಂಗಳೂರು ( ಮಹಾರಾಷ್ಟ್ರ ) : ಚುನಾವಣೆಯಲ್ಲಿ ಮತ ಚಲಾಯಿಸಿರುವ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಜೊತೆ ಮತಕೇಂದ್ರಕ್ಕೆ ಆಗಮಿಸಿದ್ದಾರೆ. ಅಮಿತಾಬಚ್ಚನ್‌, ಜಯಾಬಚ್ಚನ್ ಜೊತೆಯಲ್ಲಿ ಒಂದೇ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಈ ಮೂಲಕ ಹಲವು ಸಮಯದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಶೇಕ್‌ ಬಚ್ಚನ್‌ ದಾಂಪತ್ಯ ವಿಚಾರವಾಗಿ ಇದ್ದ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.


  ಐದನೇ ಹಂತದ ಮತದಾನದಲ್ಲಿ ಅನೇಖ ಸೆಲಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮತದಾನವಾಗಿದ್ದು, ಬಾಲಿವುಡ್ ನಟ ನಟಿಯರು ಮತದನಾ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಹಾಜರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

  ಪಿಂಕ್ ಡ್ರೆಸ್ನಲ್ಲಿ ಆಗಮಿಸಿದ ಜಾನ್ವಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಮತದಾನ ಕೇಂದ್ರದಲ್ಲಿ ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಶೇಷ ಮಹಿಳಾ ಪೊಲೀಸರು ನಟಿ ಜಾನ್ವಿಗೆ ಭದ್ರತೆ ಒದಗಿಸಿದರು.

  ಅದೇ ರೀತಿ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಹೀಗೆ ಹೃತಿಕ್ ರೋಷನ್, ರಾಕೇಶ್ ರೋಷನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತದಾನ ಮಾಡಿದರು. ಇನ್ನು ವರುಣ್ ಧವನ್ ಜೊತೆಗೆ ತಂದೆ ಡೇವಿಡ್ ಧವನ್, ಧರ್ಮೇಂದ್ರ, ಆಶಾ ಭೋಂಸ್ಲೆ ಮತ್ತು ಇತರರು ಬೂತ್‌ನಲ್ಲಿ ಮತದಾನ ಮಾಡಿದರು.

  Continue Reading

  LATEST NEWS

  Trending