Monday, August 15, 2022

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಆಮ್ಲಜನಕ ಸಾಂಧ್ರಕ ಸೇವೆಗೆ ಚಾಲನೆ

ಮಂಗಳೂರು : ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷರಾಗಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೋರೋನಾ ಸಂದರ್ಭದಲ್ಲಿ ಅವಶ್ಯಕತೆ ಇರುವವರಿಗೆ ಉಚಿತ ಆಕ್ಸಿಜನ್ ಕಾನ್ಸನ್ಟ್ರೇಟರ್ (ಆಮ್ಲಜನಕ ಸಾಂಧ್ರಕ) ಗಳನ್ನು ನೀಡುವ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಪ್ರತಿಷ್ಠಿತ ಸೇವಾ ಸಂಸ್ಥೆಯಾಗಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಾಮಾಜಿಕ ಕಳಕಳಿಯಿಂದ ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಹಾಯವಾಗುವ ಅನೇಕ ಕಾರ್ಯಗಳನ್ನು ಹಮ್ಮಿಕೊಂಡಿದೆ.

ಪ್ರತಿನಿತ್ಯ ಸಾವಿರಾರು ಜನರಿಗೆ ಊಟ ತಿಂಡಿ ವ್ಯವಸ್ಥೆ, ಪೋಲೀಸ್ ಸಿಬ್ಬಂದಿಗಳಿಗೆ ಊಟ ನೀಡುವ ಕೆಲಸ ಮಾತ್ರವಲ್ಲದೆ ಇನ್ನಿತರ ಸೇವಾ ಕಾರ್ಯಗಳನ್ನು ಕಳೆದ ವರ್ಷವೂ ಕೂಡ ಮಾಡಿತ್ತು.

ಈ ಬಾರಿಯೂ ಕೂಡ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಸೇವಾ ಕಾರ್ಯ ಮಾದರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಅವಶ್ಯಕತೆ ಉಳ್ಳವರಿಗೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಉಚಿತ ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡಲಾಗುತ್ತದೆ.

ಇದು ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ ವೈದ್ಯರ ಸಲಹೆಯ ಮೇರೆಗೆ ಇದನ್ನು ಬಳಸಬೇಕು. ಇದನ್ನು ಅವಶ್ಯಕತೆ ಉಳ್ಳವರಿಗೆ ತಲುಪಿಸುವ ಕಾರ್ಯ ನಮ್ಮ ಸಂಸ್ಥೆಯ ಸದಸ್ಯರು ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ್ ಶೆಟ್ಟಿ,‌ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಪ್ರಮುಖರಾದ ಹನುಮಂತ ಕಾಮತ್, ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ವಾಮನ್ ಶೆಣೈ ಪಾಂಡುರಂಗ ನಾಯಕ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಕೆಂಪು ಕೋಟೆಯಲ್ಲಿ ಹಾರಾಡಿದ ತಿರಂಗಾ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ಮಾಡಿದರು. ಪ್ರಧಾನಿಯಾದ ಬಳಿಕ ಅವರು ಇಂದು 9ನೆ ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದರು.ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ...

ಮೂಡುಬಿದಿರೆ: ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟುವಿನಲ್ಲಿ ಫ್ರೀಡಂ ಸಂಗಮ, ಸನ್ಮಾನ

ಮೂಡುಬಿದಿರೆ: ಇಲ್ಲಿನ ವೇಣೂರಿನ ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟು ಹಾಗೂ ಎಸ್.ಬಿ.ಎಸ್ ದಾರುಸ್ಸಲಾಂ ಮದ್ರಸ ಕುಂಡದಬೆಟ್ಟು ಇದರ ವತಿಯಿಂದ ಫ್ರೀಡಂ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕುಂಡದಬೆಟ್ಟುವಿನಲ್ಲಿ ನಡೆಯಿತು.ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡಬಿದಿರೆಯ...

ಮಂಗಳೂರು ಏರ್‌ಪೋರ್ಟ್‌ನ ವಿಮಾನದಲ್ಲಿ ಬಾಂಬೆ “ಬಾಂಬ್‌”….!

ಮಂಗಳೂರು: ಮಂಗಳೂರಿನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಬಂದು ಕುಳಿತಿದ್ದರು. ಇನ್ನೇನು ಟೇಕ್‌ಆಫ್‌ ಆಗಲು ರನ್‌ವೇ ಕಡೆ ವಿಮಾನ ಹೊರಡುತ್ತಿದ್ದಂತೆ ವಿಮಾನದ ಸಿಬ್ಬಂದಿಯನ್ನು ಕರೆದು "ವಿಮಾನದಲ್ಲಿ ಬಾಂಬ್‌ ಇಡಲಾಗಿದೆ" ಎಂಬ ಮಾಹಿತಿಯನ್ನು...