Connect with us

    DAKSHINA KANNADA

    ಬೆಂಕಿ ಆಕಸ್ಮಿಕಕ್ಕೆಹೊತ್ತಿ ಉರಿದ ನಾಲ್ಕು ಅಂಗಡಿ ಮಳಿಗೆ…!

    Published

    on

    ಮಂಗಳೂರು : ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ನಾಲ್ಕು ಅಂಗಡಿಗಳು ಹೊತ್ತಿ ಉರಿದು ಬಸ್ಮವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ. ಜೂನ್ 21 ರ ರಾತ್ರಿ ವ್ಯಾಪಾರಿಗಳು ಅಂಗಡಿ ಬಂದ್ ಮಾಡಿ ಮನೆಗೆ ಹೋಗಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಉಪ್ಪಿನಂಗಡಿಯ ಪೃಥ್ವಿ ಶಾಪಿಂಗ್ ಮಾಲ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

    ಬೆಂಕಿ ಅವಘಡದಿಂದಾಗಿ ಅಂಗಡಿಯೊಳಗಿದ್ದ ಸಾಮಾಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದರಾದರೂ ಯಶಸ್ವಿಯಾಗಿಲ್ಲ. ಬಳಿಕ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ ಬಳಿಕ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಆ ವೇಳೆಗಾಗಲೆ ನಾಲ್ಕು ಅಂಗಡಿಗಳು ಸಂಪೂರ್ಣ ಬಸ್ಮವಾಗಿ ಹೋಗಿದೆ. ರಾತ್ರಿ ಸಮಯವಾಗಿದ್ದ ಕಾರಣ ಎಲ್ಲಾ ಅಂಗಡಿಗಳು ಮುಚ್ಚಿದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಕಿ ಅವಘಡದಿಂದ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

    DAKSHINA KANNADA

    ಮಂಗಳೂರು : ಅರ್ಚನಾ ಕಾಮತ್ ತ್ಯಾಗ ಸಂಸ್ಮರಣಾ ರಕ್ತದಾನ ಶಿಬಿರ

    Published

    on

    ಮಂಗಳೂರು : ಬದುಕಿರುವಾಗಲೇ ದೇಹದ ಅಂಗವೊಂದನ್ನು ಆಪ್ತ ಸಂಬಂಧಿಗೆ ದಾನ ಮಾಡಿ ವಿಧಿಲೀಲೆಗೆ ಬಲಿಯಾದ ಉಪನ್ಯಾಸಕಿ ಅರ್ಚನಾ ಕಾಮತ್ ಅವರ ದಿವ್ಯಾತ್ಮಕ್ಕೆ ನುಡಿ ನಮನ ಕಾರ್ಯಕ್ರಮ ಮತ್ತು ರಕ್ತದಾ ನ ಶಿಬಿರ ಮಂಗಳೂರಿನ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ನಡೆಯಿತು.

    ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ಈ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು,  ಶಾಸಕ ಕಾಮತ್ ಬಾಲ್ಯದಿಂದಲೇ ಪರಿಚಯರಾಗಿದ್ದ ಅರ್ಚನಾ ಕಾಮತ್ ಅವರು ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನವರಾಗಿದ್ದರು. ಅವರ ಬದುಕು ನಮಗೆ ಆದರ್ಶವಾಗಿದೆ. ಅವರ ಇಡೀ ಕುಟುಂಬ ನಮಗೆ ಆತ್ಮೀಯವಾಗಿದೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ರಕ್ತದಾನ ಶಿಬಿರ ಆಯೋಜಿಸಿ ಅರ್ಚನಾ ಅವರ ಆತ್ಮೀಯರನ್ನು ಒಂದುಗೂಡಿಸಿ ಮಾದರಿ ಕಾರ್ಯ ಮಾಡಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ ಅರ್ಚನಾ ‌ಕಾಮತ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಬಗ್ಗೆ ಮಾತನಾಡುವುದು ತುಂಬಾ ನೋವಿನ ಸಂಗತಿ ಎಂದು ಭಾವುಕರಾದರು.

    ಈ ಸಂದರ್ಭ ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಬೆಸೆಂಟ್ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಮಣೇಲ್ ಅಣ್ಣಪ್ಪ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಬಿಎನ್ ಐ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಕೆಎಂಸಿ ಆಸ್ಪತ್ರೆ, ಬೆಸೆಂಟ್ ಶಿಕ್ಷಣ ಸಂಸ್ಥೆ, ಯೂತ್ ಆಫ್ ಜಿಎಸ್ ಬಿ, ಸಿಎ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ರಕ್ತದಾನ ಶಿಬಿರದಲ್ಲಿ 98ಕ್ಕೂ ಅಧಿಕ ನಾಗರಿಕರು ರಕ್ತದಾನ ಮಾಡಿದರು.

    ಇದನ್ನೂ ಓದಿ : ಮುದ್ದಾದ ಮಗಳ ಮುಖ ರಿವೀಲ್ ಮಾಡಿದ ಮಿಲನಾ ದಂಪತಿ

    ಅರ್ಚನಾ ಕಾಮತ್ ಅವರ ಪತಿ, ಸಹೋದರಿ ಹಾಗೂ ಸಂಬಂಧಿಕರು ರಕ್ತದಾನ ಮಾಡಿ ನೋವಿನಲ್ಲಿಯೂ ಹೃದಯ ವೈಶಾಲ್ಯತೆ ಮೆರೆದು ಮಾದರಿಯಾದರು.

    Continue Reading

    DAKSHINA KANNADA

    ಮಂಗಳೂರು : ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು

    Published

    on

    ಮಂಗಳೂರು : ಮಂಗಳೂರಿನ ಹೊರವಲಯದ ಅಡ್ಯಾರ್ ಗಾರ್ಡನ್ ಬಳಿ ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದಿದೆ. ಕಾರಿನಲ್ಲಿ ಬೆಂ*ಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತ್ತು.

    ಏಕಾಏಕಿ ಕಾರಿಗೆ ಬೆಂ*ಕಿ ಹೊತ್ತಿಕೊಂಡಿದ್ದು ಸ್ಥಳೀಯರು ಬೆಂ*ಕಿಯನ್ನು ನಂದಿಸಲು ಯತ್ನಿಸುವ ಮೊದಲೇ ಕಾರು ಸುಟ್ಟು ಸಂಪೂರ್ಣ ಕರಕಲಾಗಿತ್ತು. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು ಅಗ್ನಿಶಾಮಕ ದಳ ತಲುಪುವಷ್ಟರಲ್ಲಿ ಕಾರು ಸಂಪೂರ್ಣ ಭಸ್ಮವಾಗಿದೆ.

    ಈ ಕಾರು ಮಾಲಕ ಬಿಸಿ ರೋಡಿನ ಗುರುದೀಪ್ ಎಂದು ತಿಳಿದು ಬಂದಿದ್ದು, ಕಾರು ಬಿ ಎಂ ಡಬ್ಲ್ಯೂ ಕಂಪೆನಿಗೆ ಸೇರಿದ 2011-12 ಮಾಡೆಲ್‌ನದ್ದಾಗಿದೆ.

     

    Continue Reading

    DAKSHINA KANNADA

    ಕೆಮ್ಮಾರ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

    Published

    on

    ಪುತ್ತೂರು :  ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಗುಚಿ ಬಿದ್ದ ಘಟನೆ ಇಂದು(ಸೆ.28) ಕೆಮ್ಮಾರದಲ್ಲಿ ನಡೆದಿದೆ. ಕಡಬ ಕಡೆಯಿಂದ ಕೆಮ್ಮಾರ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಕೂಡಲೇ ಸ್ಥಳೀಯರು ಕೂಡಿಕೊಂಡು ಕಾರನ್ನು ಮೇಲೆಕ್ಕೆತ್ತಿದ್ದಾರೆ.

    ಬಸ್‌ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದ್ದು, ಅಷ್ಟರಲ್ಲಾಗಲೇ ಬಸ್ ಬಂದು ಹೋಗಿದ್ದರಿಂದ ಅಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಇದರಿಂದ ಸಂಭವನೀಯ ಅವಘ*ಡವೊಂದು ತಪ್ಪಿದಂತಾಗಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

    ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ಧಾಣದ ಭದ್ರತೆಯಿಂದ ಜೂಲಿ ನಿವೃತ್ತಿ

    ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯು ಹಳೆಗೇಟು- ಕೊಯಿಲದವರೆಗೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ-ಗುಂಡಿಗಳಿಂದ ಕೂಡಿದೆ. ಹಲವು ಬಾರಿ ಈ ಬಗ್ಗೆ ಮನವಿ ಮಾಡಿದರೂ ಲೋಕೋಪಯೋಗಿ ಇಲಾಖೆ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ವ್ಯಕ್ತವಾಗಿದೆ.

     

    Continue Reading

    LATEST NEWS

    Trending