Connect with us

  LATEST NEWS

  ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಗೆ ನಾಲ್ಕು ಕಾರಣಗಳು..!

  Published

  on

  ಉತ್ತರಪ್ರದೇಶ/ಮಂಗಳೂರು: ಉತ್ತರ ಪ್ರದೇಶದ ಫೈಜಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಗೆ ಸಂಸದರಾಗಿದ್ದ ಲುಲ್ಲು ಸಿಂಗ್ ಅವರನ್ನು ಈ ಬಾರಿ ಜನರು ತಿರಸ್ಕರಿಸಿದ್ದಾರೆ. ಇದು ದೇಶದ ರಾಮ ಭಕ್ತರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಶಾಕ್ ನೀಡಿದೆ ಅನ್ನೋದು ಸತ್ಯ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿರುವ ಕ್ಷೇತ್ರದಲ್ಲೇ ಈ ಸೋಲನ್ನು ರಾಮ ಭಕ್ತರಿಗೆ ಅರಗಿಸಿಕೊಳ್ಳಲು ಆಗ್ತಾ ಇಲ್ಲ. ಮಂದಿರ ಉದ್ಘಾಟನೆಯಾಗಿ ಕೇವಲ ಐದೇ ತಿಂಗಳಲ್ಲಿ ಆಗಿರುವ ಈ ಬೆಳವಣಿಗೆಗೆ ಅಸಲಿ ಕಾರಣಗಳು ಇಲ್ಲಿದೆ.

  ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದ ಲುಲ್ಲು ಸಿಂಗ್
  ಬಿಜೆಪಿ ಅಭ್ಯರ್ಥಿ ಲುಲ್ಲು ಸಿಂಗ್ ಅವರು ನೀಡಿದ್ದ ಸಂವಿಧಾನ ಬದಲಾವಣೆಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿತ್ತು. 272 ಸೀಟ್‌ನ ಬಹುಮತ ಸರ್ಕಾರದಿಂದ ಸಂವಿಧಾನ ತಿದ್ದುಪಡಿ ಸಾಧ್ಯವಿಲ್ಲ. ಹೊಸ ಸಂವಿಂಧಾನ ರಚಿಸಬೇಕು ಅಂದ್ರೆ ಮೂರನೇ ಎರಡರಷ್ಟು ಬಹುಮತ ಬೇಕಿದೆ. ಈ ಬಾರಿ ನಾವು ಅದನ್ನು ಪಡೆದು ಸಂವಿಧಾನ ಬದಲಾಯಿಸೋದು ಗ್ಯಾರೆಂಟಿ ಅನ್ನೋ ಹೇಳಿಕೆ ನೀಡಿದ್ದರು. ಇಲ್ಲಿಂದಲೇ ಅವರ ಸೋಲಿನ ಮೊದಲ ಮೆಟ್ಟಿಲು ಆರಂಭವಾಯಿತು ಅಂತ ರಾಜಕೀಯ ವಿಶ್ಲೇಷಕ ನರೇಶ್‌ ತಿವಾರಿ ಅಭಿಪ್ರಾಯ ಪಟ್ಟಿದ್ದಾರೆ. ಈ ಹೇಳಿಕೆಯನ್ನು ಇಂಡಿ ಒಕ್ಕೂಟ ಟ್ರಂಪ್‌ ಕಾರ್ಡ್‌ ಮಾಡಿಕೊಂಡು ಉತ್ತರ ಪ್ರದೇಶದಲ್ಲಿ ಪ್ರಚಾರ ಮಾಡಿತ್ತು. ಇದೇ ಕಾರಣದಿಂದ ಉತ್ತರ ಭಾರತದಲ್ಲಿ ಬಿಜೆಪಿಗೆ ದೊಡ್ಡ ಹೊಡೆತಕ್ಕೂ ಕಾರಣವಾಯ್ತು ಅಂತ ಅವರು ಹೇಳಿದ್ದಾರೆ.

  ಭೂ ಸ್ವಾಧೀನದ ಬಗ್ಗೆ ಜನರ ಅಸಮಾಧಾನ..!
  ರಾಮ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ನಡೆದ ಅಭಿವೃದ್ದಿ ಕಾರ್ಯಗಳು ಬಿಜೆಪಿಯ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಮತ್ತೊಂದು. ರಸ್ತೆ ಅಗಲೀಕರಣ ಹಾಗೂ ರಾಮ ಮಂದಿರ ಸಂಬಂಧಿತ ಯೋಜನೆಗಳಿಗಾಗಿ ನೂರಾರು ವರ್ಷಗಳಿಂದ ವಾಸವಾಗಿದ್ದ ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದರು. ಅಂಗಡಿ ಮುಂಗಟ್ಟುಗಳನ್ನು ಜಿಲ್ಲಾಡಳಿತ ಒತ್ತಾಯ ಪೂರ್ವಕವಾಗಿ ಸ್ವಾಧೀನ ಪಡಿಸಿಕೊಂಡಿತ್ತು. ಇದನ್ನು ಪ್ರತಿಪಕ್ಷಗಳ ಅಸ್ತ್ರವಾಗಿಸಿಕೊಂಡು ಅಲ್ಲಿನ ಜನರ ಕಣ್ಣೋರೆಸುವ ಪ್ರಯತ್ನ ಮಾಡಿತ್ತು. ಆದ್ರೆ ಬಿಜೆಪಿ ಅಂತಹ ಪ್ರಯತ್ನಕ್ಕೆ ಕೈ ಹಾಕದೆ ಜನರನ್ನು ಎಬ್ಬಿಸುವಲ್ಲಿ ಉತ್ಸಾಹ ತೋರಿಸಿದ್ದೇ ಪಕ್ಷದ ಸೋಲಿಗೆ ಎರಡನೇ ಪ್ರಮುಖ ಕಾರಣ.

  ಸ್ಥಳೀಯ ಸಮಸ್ಯೆಗಳನ್ನು ನಿರ್ಲಕ್ಷಿಸಿದ ಲುಲ್ಲು ಸಿಂಗ್‌…!
  ರಾಮ ಮಂದಿರ ನಿರ್ಮಾಣದ ಬಳಿಕ ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ದಿಗೆ ನೀಡಿದ ಆದ್ಯತೆಯನ್ನು ಲುಲ್ಲು ಸಿಂಗ್ ಕ್ಷೇತ್ರದ ಇತರ ಪ್ರದೇಶಗಳಿಗೆ ನೀಡಿರಲಿಲ್ಲ. ಅಯೋಧ್ಯೆ ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದು , ಗುಂಡಿ ಬಿದ್ದ ರಸ್ತೆಗಳು , ಕಳಪೆ ವಿದ್ಯುತ್ ಸರಬರಾಜು, ಶುಚಿತ್ವದ ಕೊರತೆ ಅಗಲ ಕಿರಿದಾದ ರಸ್ತೆಗಳಿಂದ ಟ್ರಾಫಿಕ್ ಜಾಮ್‌ ಇದೆಲ್ಲವೂ ಇಲ್ಲಿ ಚುನಾವಣಾ ವಿಚಾರವಾಗಿತ್ತು. ಹತ್ತು ವರ್ಷದಲ್ಲಿ ಸಂಸದರಾಗಿದ್ದ ಲುಲ್ಲು ಸಿಂಗ್ ಎರಡೂ ಅವಧಿಯಲ್ಲಿ ಕೇವಲ ಮೋದಿ ಹೆಸರಿನಲ್ಲೇ ಅಧಿಕಾರ ಹಿಡಿದಿದ್ದರು. ಅಭಿವೃದ್ದಿ ಆದ್ಯತೆ ನೀಡದೆ ಕೇವಲ ಮೋದಿ ಹೆಸರನ್ನಷ್ಟೇ ನೆಚ್ಚಿಕೊಂಡಿದ್ದರು. ಆದ್ರೆ ಇಲ್ಲಿ ಪ್ರಚಾರ ನಡೆಸಿದ ಅಖಿಲೇಶ್ ಯಾದವ್‌ ಜನರ ಸಮಸ್ಯೆ, ಭೂಸ್ವಾಧೀನ ಪರಿಹಾರ, ಉದ್ಯೋಗ ಸಮಸ್ಯೆ ನಿವಾರಣೆ ವಿಚಾರಕ್ಕೆ ಒತ್ತು ನೀಡಿದ್ದರು. ಇದು ಜನರು ಬಿಜೆಪಿಯಿಂದ ದೂರವಾಗಲು ಕಾರಣವಾಗಿತ್ತು.

  ಇದನ್ನೂ ಓದಿ..;  ಸರ್ಕಾರ ರಚಿಸಲು ಕಸರತ್ತು..! ಇಂಡಿ ಒಕ್ಕೂಟ ಸೇರಲು ಟಿಡಿಪಿ, ಜೆಡಿಯು ನಾಯಕರಿಗೆ ಆಫರ್‌..!! 

  ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಅಖೀಲೇಶ್ ಯಾದವ್‌..!
  ಅಭ್ಯರ್ಥಿಯ ಆಯ್ಕೆ ಮಾಡುವಲ್ಲಿಯೂ ಸಮಾಜವಾದಿ ಪಕ್ಷದ ನಿರ್ಧಾರ ಇಲ್ಲಿ ವರ್ಕೌಟ್ ಆಗಿದೆ. ಮಿಲ್ಕಿಪುರ್ ಹಾಗೂ ಸೋಹಾವಾಲ್ ಕ್ಷೇತ್ರಗಳಿಂದ ಒಂಭತ್ತು ಬಾರಿ ಶಾಸಕರಾಗಿದ್ದ ಅವಧೇಶ್ ಪ್ರಸಾದ್ ದಲಿತ ಮತಗಳನ್ನು ತಮ್ಮತ್ತ ಸೆಳೆದಿದ್ದಾರೆ. ಫೈಜಾಬಾದ್‌ನಲ್ಲಿ ಅತ್ಯಂತ ಹೆಚ್ಚಿನ ದಲಿತ ಮತಗಳಿದ್ದು, ಜೊತೆಗೆ ಮುಸ್ಲಿಂ ಹಾಗೂ ಯಾದವ ಸಮೂದಾಯದ ಮತಗಳು ಹೆಚ್ಚಾಗಿದೆ. ಈ ನಡುವೆ ಬಿಎಸ್‌ಪಿ ಬ್ರಾಹ್ಮಣ ಅಭ್ಯರ್ಥಿ ಸಚ್ಚಿದಾನಂದ್ ಪಾಂಡೆ ಅವರನ್ನು ಕಣಕ್ಕೆ ಇಳಿಸಿತ್ತು. ಬಿಎಸ್‌ಪಿ 46 ಸಾವಿರ ಮತಗಳನ್ನು ಪಡೆದು ಬಿಜೆಪಿ ಸೋಲಿಗೆ ತನ್ನ ಪಾಲು ನೀಡಿತ್ತು.

  2014 ರಲ್ಲಿ ಲುಲ್ಲು ಸಿಂಗ್ 2.82 ಲಕ್ಷ ಮತಗಳ ಅಂತರದ ಜಯಗಳಿಸಿದ್ದರು, ಆದರೆ 2019 ರಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ಮೈತ್ರಿಯಿಂದ ಅಂತರ ಕಡಿಮೆ ಆಗಿದ್ರೂ ಗೆಲುವು ಸಾಧಿಸಿದ್ದರು. ಆದ್ರೆ ಈ ಬಾರಿ, ಒಬಿಸಿ, ಮುಸ್ಲಿಂ ಮತಗಳು ಎಸ್‌ಪಿ ಯತ್ತ ಹರಿದಿವೆ. ಮುಸ್ಲಿಂ ಮತಗಳು ಇಂಡಿ ಒಕ್ಕೂಟದ ಹಿಂದೆ  ಕ್ರೂಢೀಕರಿಸಲ್ಪಟ್ಟವು ಮತ್ತು ಒಬಿಸಿಗಳು, ಬ್ರಾಹ್ಮಣರು ಮತ್ತು ಠಾಕೂರ್‌ಗಳಲ್ಲಿ ಬಿಜೆಪಿಯ ಬಗ್ಗೆ ಅಸಮಾಧಾನವನ್ನು ಸಹ ಲಾಭ ಮಾಡಿಕೊಂಡಿತು.

  ಇದನ್ನು ಓದಿ..; ಇನ್ನು ಮುಂದೆ ಅಯೋಧ್ಯೆಯಲ್ಲಿ ಮೊಬೈಲ್ ಬಳಕೆ ನಿಷೇಧ..!

  ಒಟ್ಟಾರೆ ತಾನು ಮಾಡಿದ ತಪ್ಪಿನಿಂದಲೇ ಬಿಜೆಪಿ ಅಯೋಧ್ಯೆ ಶ್ರೀರಾಮನ ನಗರಿ ಇರುವ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ರಾಮ ಭಕ್ತರು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಇದು ನಂಬಲು ಸಾಧ್ಯವಾಗ್ತಾ ಇಲ್ಲವಾದ್ರೂ, ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಜನರು ಸಮಸ್ಯೆ ಹಾಗೂ ಅಭಿವೃದ್ದಿಗೆ ಒತ್ತು ನೀಡಿ ಮತ ಚಲಾಯಿಸಿದ್ದಾರೆ ಅನ್ನೋದು ಸ್ಪಷ್ಟವಾಗಿದೆ.

  LATEST NEWS

  WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

  Published

  on

  ಮಂಗಳೂರು/ ಮಹಾರಾಷ್ಟ್ರ : ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಎಲ್ಲವನ್ನೂ ಪ್ರದರ್ಶನಕ್ಕಾಗಿ, ಶೋಕಿಗಾಗಿ ಹಂಚಿಕೊಳ್ಳುವ ಪರಿಪಾಠ ಹೆಚ್ಚಾಗಿದೆ. ರೀಲ್ಸ್ ಮಾಡೋದು ಕಾಮನ್ ಆಗೋಗಿದೆ. ವೀವ್ಸ್ ಗಿಟ್ಟಿಸಿಕೊಳ್ಳಲು ಸರ್ಕಸ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಈ ರೀಲ್ಸ್ ಹುಚ್ಚು ಪ್ರಾಣಕ್ಕೆ ಕುತ್ತಾಗಿರೋ ಉದಾಹರಣೆಗಳಿಗೇನೂ ಕಮ್ಮಿಯಿಲ್ಲ ಬಿಡಿ. ಇದೀಗ ಯುವತಿಯೊಬ್ಬಳು ಕಾರು ಚಲಾಯಿಸುವ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಘಟನೆ ನಡೆದಿದೆ.


  ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದ ಸುಲಿಭಂಜನ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಯುವತಿ ರಿವರ್ಸ್​ ಗೇರ್ ​ನಲ್ಲಿದ್ದಾಗ ಏಕಾಏಕಿ ಎಕ್ಸಲೇಟರ್​​ ಒತ್ತಿದ್ದಾಳೆ. ಪರಿಣಾಮ ಕಾರು ಕಂದಕಕ್ಕೆ ಬಿದ್ದಿದೆ. ಪರಿಣಾಮ ಗಂಭೀ*ರವಾಗಿ ಗಾಯಗೊಂಡ ಯುವತಿ ಇಹಲೋಕ ತ್ಯಜಿಸಿದ್ದಾಳೆ.

  ಶ್ವೇತಾ ಸುರ್ವಾಸೆ(23) ಮೃತ ಯುವತಿ. ಯುವತಿ ಆಕಸ್ಮಿಕವಾಗಿ ರಿವರ್ಸ್​ ಗೇರ್​ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರು ಹಿಂಬದಿಯ ಕ್ರ್ಯಾಶ್​ ಬ್ಯಾರಿಯರ್​ ಅನ್ನು ಮುರಿದು ಕಂದಕಕ್ಕೆ ಬಿದ್ದ ಪರಿಣಾಮ ಸಾ*ವನ್ನಪ್ಪಿದ್ದಾಳೆ. ಕಾರು ರಿವರ್ಸ್ ಗೇರ್ ನಲ್ಲಿದ್ದಾಗ ಯುವತಿ ಕ್ಲಚ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ನೇರವಾಗಿ ಕಂದಕಕ್ಕೆ ಬಿದ್ದಿದೆ.

  ಸ್ನೇಹಿತ ಶಿವರಾಜ್ ಮುಳೆ ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರು ಓಡಿಸಲು ಕಲಿಸಿದ್ದ. ಶ್ವೇತಾಗೆ ಕಾರು ಓಡಿಸುವಾಗ ರೀಲ್ಸ್ ತಯಾರಿಸುವ ಆಸೆ ಇತ್ತು. ಮೊಬೈಲನ್ನು ಶಿವರಾಜ್ ಗೆ ಕೊಟ್ಟು ತನ್ನ ರೀಲ್ಸ್​ ಮಾಡುವಂತೆ ಹೇಳಿದ್ದಳು. ಇದ್ದಕ್ಕಿದ್ದಂತೆ ಕಾರು ರಿವರ್ಸ್ ಗೇರ್‌ನಲ್ಲಿ ಚಲಿಸಲು ಪ್ರಾರಂಭಿಸಿತು. ಈ ವೇಳೆ ಶ್ವೇತಾ ಎಕ್ಸಲೇಟರ್ ಒತ್ತಿದ್ದಾಳೆ. ಥಟ್ಟನೆ ಶ್ವೇತಾಳ ಕಾರು ವೇಗವಾಗಿ ಹಿಂದಕ್ಕೆ ಚಲಿಸತೊಡಗಿತು.

  ಇದನ್ನೂ ಓದಿ : ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಆತ್ಮಹ*ತ್ಯೆ ಮಾಡಿಕೊಂಡ ಪತಿ!

  ಶಿವರಾಜ್​ ಕ್ಲಚ್ ಕ್ಲಚ್​ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸಲೇ ಇಲ್ಲ, ಅಷ್ಟರಲ್ಲಾಗಲೇ ಕಾರು ಕೆಳಗೆ ಬಿದ್ದಿದೆ. ಕಾರು ರಿವರ್ಸ್​ ಗೇರ್​ನಲ್ಲಿದ್ದಾಗ ಅಕಸ್ಮಾತ್​ ಆಗಿ ಎಕ್ಸಲರೇಟರ್ ಒತ್ತಿದ್ದರಿಂದ ಈ ಅವಘ*ಡ ಸಂಭವಿಸಿದೆ.

  ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ತಲುಪಲು ಗಂಟೆಗಳ ಸಮಯವನ್ನು ತೆಗೆದುಕೊಂಡಿತು, ತಕ್ಷಣ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗದೆ, ಯುವತಿ ಜೀವಾಂತ್ಯವಾಗಿದೆ. ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸದ್ಯ ವೀಡಿಯೋ ವೈರಲ್ ಆಗಿದೆ.

  Continue Reading

  LATEST NEWS

  ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಆತ್ಮಹ*ತ್ಯೆ ಮಾಡಿಕೊಂಡ ಪತಿ!

  Published

  on

  ಮಂಗಳೂರು/ಹಾಸನ : ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಬಳಿಕ ಪತಿ ನೇ*ಣಿಗೆ ಶರಣಾಗಿರುವ ಘಟನೆ ಬೇಲೂರು ತಾಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ. ಪತಿ ಹರೀಶ್ (50,) ಪತ್ನಿ ಜಾಜಿ (45) ಮೃ*ತಪಟ್ಟವರು.
  ದಂಪತಿ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಸೋಮವಾರ (ಜೂ.17) ರಾತ್ರಿಯೂ ಮನೆಯಲ್ಲಿ ದಂಪತಿ ನಡುವೆ ಕಲಹವಾಗಿದೆ.

  ಈ ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಹರೀಶ್​​ ಪತ್ನಿ ಜಾಜಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹ*ತ್ಯೆ ಮಾಡಿದ್ದಾನೆ. ಬಳಿಕ ಹರೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.

  ಇದನ್ನೂ ಓದಿ : ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್..!

  ಈ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  Continue Reading

  LATEST NEWS

  ಸಂತ್ರಸ್ತೆ ಅಪಹರಣ ಪ್ರಕರಣ : ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು

  Published

  on

  ಬೆಂಗಳೂರು : ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಹೈಕೋರ್ಟ್ ಭವಾನಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಅಲ್ಲದೇ, ಅವರಿಗೆ ಮೈಸೂರು, ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.


  ಪೊಲೀಸರ 85 ಪ್ರಶ್ನೆಗಳಿಗೆ ಭವಾನಿ ರೇವಣ್ಣ ಅವರು ಉತ್ತರಿಸಿದ್ದಾರೆ. ಹೀಗಾಗಿ ತನಿಖೆಗೆ ಸಹಕರಿಸಿಲ್ಲ ಎಂಬ ವಾದ ಒಪ್ಪಲಾಗುವುದಿಲ್ಲ. ಪೊಲೀಸರಿಗೆ ಬೇಕಾದಂತಹ ಉತ್ತರ ಕೊಡಬೇಕೆಂದಿಲ್ಲ. ಸಂತ್ರಸ್ತೆಗೆ ಊಟ ಬಟ್ಟೆ ಕೊಟ್ಟಿಲ್ಲವೆಂಬ ವಾದವನ್ನು ಒಪ್ಪಲಾಗುವುದಿಲ್ಲ. ಭವಾನಿ ರೇವಣ್ಣ ಊಟ, ಬಟ್ಟೆ ಕಳುಹಿಸಿದ್ದರೆಂದು ಸಂತ್ರಸ್ತೆ ಹೇಳಿಕೆಯಿದೆ ಎಂದು ನ್ಯಾ. ಕೃಷ್ಣ ಎಸ್​ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

  ಪ್ರಕರಣದ ವಿವರ :

  ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಅಶ್ಲೀ*ಲ ವಿಡಿಯೋದಲ್ಲಿ ನನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್​​ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು.

  ಈ ಬಗ್ಗೆ ಹೆಚ್.​ಡಿ.ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ಅಧಿಕಾರಿಗಳು ಈಗಾಗಲೇ ಆರೋಪಿ ಬಾಬು ಅನ್ನು ಬಂಧಿಸಿದ್ದಾರೆ. ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದ್ದರು. ಈಗಾಗಲೇ ಹೆಚ್​ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸದ್ಯ ಹೆಚ್​ಡಿ ರೇವಣ್ಣ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

  ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರನ್ನೂ ಕೂಡ ಎಸ್​ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಬೇಕೆಂದು ಎರಡೆರಡು ನೋಟೀಸ್​ ಕೊಡಲಾಗಿತ್ತು. ನೋಟೀಸ್​ ನೀಡುತ್ತಿದ್ದಂತೆ ಭವಾನಿ ರೇವಣ್ಣ ಅವರು ವಿಚಾರಣಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ನೀರಿಕ್ಷಣಾ ಜಾಮೀನು ಅರ್ಜಿ ತಿರಸ್ಕತಿಸಿತ್ತು.

  ಹೀಗಾಗಿ ಭವಾನಿ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್​​ನ ಏಕ ಸದಸ್ಯ ಪೀಠ ಈ ಹಿಂದೆ ಭವಾನಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಆದೇಶ ಕಾಯ್ದಿರಿಸಿತ್ತು. ಇದೀಗ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.

  Continue Reading

  LATEST NEWS

  Trending