ಮಂಗಳೂರು: ಮಾಜಿ ಶಾಸಕ ಡಾ. ಬಿ.ಎ.ಮೊಹಿದೀನ್ ಬಾವ ಅವರ ವತಿಯಿಂದ ಪಣಂಬೂರು ಮುಸ್ಲಿಂ ಜಮಾಅತ್ ಮತ್ತು ಕಾಟಿಪಳ್ಳ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕಆರಂಭಿಸಿದ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಖ್ಯಾತ ವೈದ್ಯ ಡಾ.ಬಿ.ವಿ.ಮಂಜುನಾಥ್ ಕಾಟಿಪಳ್ಳ ದಲ್ಲಿ ಉದ್ಘಾಟಿಸಿದರು.
ಜನಪರ ಚಿಂತನೆಯ ಜನಾನುರಾಗಿ ನಾಯಕ ಮಾಜಿ ಶಾಸಕ ಮೊಯಿದಿನ್ ಬಾವ ರವರ ನೇತೃತ್ವದಲ್ಲಿ ಇಂದು ಆರಂಭವಾದ ಸುರತ್ಕಲ್, ಕೃಷ್ಣಾಪುರ, ವಾಮಂಜೂರು,ಕೈಕಂಬ,ಗುರುಪುರ ಸಹಿತ ಹತ್ತು ಕಡೆಗಳಲ್ಲಿ ಆರಂಭವಾಗುತ್ತಿರುವ ಹತ್ತು ಬೆಡ್ ವ್ಯವಸ್ಥೆಯ ಕೋವಿಡ್ ತುರ್ತು ಚಿಕಿತ್ಸಾ ಘಟಕ ಮತ್ತು ಆಕ್ಸಿಜನ್ ಚಿಕಿತ್ಸಾ ಕೇಂದ್ರಗಳಲ್ಲಿ ನುರಿತ ವೈದ್ಯರು, ನರ್ಸ್ ಗಳು,ಆಂಬುಲೆನ್ಸ್ ಸೇವೆ ದಿನದ ಇಪ್ಪತ್ತನಾಲ್ಕು ಗಂಟೆ ಕೂಡ ಲಭ್ಯವಿದೆ ಎಂದು ರಶೀದ್ ಕುಂಡಡ್ಕ ತಿಳಿಸಿದ್ದಾರೆ.
ಮಾಜಿ ಶಾಸಕ ಡಾ.ಬಿ.ಎ.ಮೊಹಿದೀನ್ ಬಾವ,ಪಣಂಬೂರು ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಹ್ಮದ್ ಬಾವ ಅಯ್ಯೂಬ್,ಕಾಟಿಪಳ್ಳ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.