Sunday, May 16, 2021

ಬಲವಂತವಾಗಿ ಮದ್ಯ ಕುಡಿಸಿ,ಅತ್ಯಾಚಾರಗೈದು ತನ್ನ ಪ್ರಿಯತಮೆಯನ್ನೇ ಕೊಂದು ರಸ್ತೆಗೆಸೆದನಾ ಪಾಪಿ..!

ಭುವನೇಶ್ವರ್ : ಯುವತಿಯ ಮೃತದೇಹವೊಂದು ಕೊಲೆಗೈದ ಸ್ಥಿತಿಯಲ್ಲಿ ಒಡಿಸ್ಸಾದ ಜಾಜ್ ಪುರ ಜಿಲ್ಲೆಯಲ್ಲಿ ಕಳೆದ ಜನವರಿ ತಿಂಗಳ ಕೊನೆ ವಾರದಲ್ಲಿ ದೊರೆತಿತ್ತು. ಮೃತ ದುರ್ದೈವಿಯ ಕುರಿತು ಕೂಲಂಕುಶ ತನಿಖೆ ನಡೆಸಿದ ಪೊಲೀಸರಿಗೆ ಅಸಲಿ ಆರೋಪಿಯ ಕುಕೃತ್ಯ ಬೆಳಕಿಗೆ ಬಂದಿದೆ.ಜರಾಪುಲ್ಲಾ ನಾಯಕ್ ಎಂಬ ಯುವತಿಯನ್ನು ಆಕೆಯ ಪ್ರಿಯಕರ ರಾಕೇಶ್ ಎಂಬಾತ ತನ್ನ ಶೋಕಿಗಾಗಿ ಬೈಕ್ ಖರೀದಿಸಲು ಯುವತಿಯಲ್ಲಿ 30ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ.

ಕೆಲ ಸಮಯದ ಬಳಿಕ ಸಾಲವನ್ನು ವಾಪಸ್ ಕೇಳಿದ್ದಳು ಕೊಡದಿದ್ದರೆ ಮನೆಯವರಿಗೆ ಹೇಳುವುದಾಗಿ ಎಚ್ಚರಿಸಿದ್ದಳು

ಇದರಿಂದ ಕುಪಿತಗೊಂಡ ಆಕೆಯ ಪ್ರಿಯಕರ ರಾಕೇಶ್ ಜನವರಿ 26ರಂದು ಹಣ ವಾಪಸ್ ಮರಳಿಸುವುದಾಗಿ ಹೇಳಿ ಆ ದಿನ ಆಕೆಯನ್ನು ಕರೆದುಕೊಂಡು ಹೊಟೇಲ್ ಗೆ ಹೋಗಿ ಅಲ್ಲೇ ತಂಗಿದ್ದರು. ಅಲ್ಲಿ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಪ್ರಜ್ಞೆ ತಪ್ಪಿಸಿ ಬಳಿಕ ಆಕೆಯನ್ನು ಅತ್ಯಾಚಾರಗೈದು ನಂತರ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.

ಆ ದಿನ ಅಲ್ಲೇ ಉಳಿದಿದ್ದು ಬಳಿಕ ಮಾರನೇ ದಿನ ಬೆಳ್ಳಂಬೆಳಗ್ಗೆ ಆಕೆಯ ಮೃತದೇಹವನ್ನು ಸ್ನೇಹಿತರ ಸಹಾಯದಿಂದ ಬೈಕಿನಲ್ಲಿ ಕೊಂಡೊಯ್ದು ಜಾಜ್ಪುರದ ಕೌಖಿಯಾ ಎಂಬಲ್ಲಿ ರಸ್ತೆ ಬದಿ ಎಸೆದು ಹೋಗಿದ್ದಾನೆ.

ಪೊಲೀಸರು ಆರೋಪಿ ರಾಕೇಶ್ ನನ್ನು ಬಂಧಿಸಿದ್ದಾರೆ. ಆತನೊಂದಿಗೆ ಆತನಿಗೆ ಸಾಕ್ಷ್ಯ ನಾಶ ಮಾಡಲು ನೆರವಾಗಿದ್ದ ಆತನ ಸ್ನೇಹಿತರಾದ ಶಕ್ರಿ ಶೇಖರ್ ಮತ್ತು ಅಮರೇಶ್ ರೌತ್ ರನ್ನೂ ಬಂಧಿಸಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...