Connect with us

    LATEST NEWS

    ರಾಜ್ಯದಲ್ಲಿ ಮೊದಲ ಬಿಎನ್ಎಸ್ ಪ್ರಕರಣ ದಾಖಲು; ಎಲ್ಲಿ ಗೊತ್ತಾ!?

    Published

    on

    ಮಂಗಳೂರು/ ಹಾಸನ : ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಇಂದಿನಿಂದ(ಜು.1) ದೇಶಾದ್ಯಂತ ನೂತನ ಅಪರಾಧ ಕಾಯಿದೆ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬಂದಿದೆ. ಈ ಬೆನ್ನಲ್ಲೇ ಇಂದು ಕರ್ನಾಟಕದಲ್ಲಿ ಮೊದಲ ಬಿಎನ್ಎಸ್ ಪ್ರಕರಣ ದಾಖಲಾಗಿದೆ. ಹಾಸನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೊದಲ ಬಿಎನ್ಎಸ್ ಪ್ರಕರಣ ದಾಖಲಾಗಿದೆ.

    ನೂರಕ್ಕೂ ಹೆಚ್ಚು ವರ್ಷಗಳಿಂದ ಜಾರಿಯಲ್ಲಿದ್ದ ಹಳೆಯ ಕ್ರಿಮಿನಲ್ ಕಾನೂನುಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದ್ದು, ಐಪಿಸಿ, ಸಿಆರ್​ಪಿಸಿ, ಎವಿಡೆನ್ಸ್ ಆ್ಯಕ್ಟ್ ಬದಲು ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ. ಸಾಕ್ಷ್ಯ ಅಧಿನಿಯಮ ಇಂದಿನಿಂದ(ಜುಲೈ 1) ಜಾರಿಗೆ ಬಂದಿದೆ.

    ವೈದ್ಯ ಶಂಕರೇಗೌಡ ಎಂಬವರು ನೀಡಿದ ದೂರಿನ ಮೇಲೆ ಪೊಲೀಸರು, ಇದನ್ನು ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್​) ಸೆಕ್ಷನ್ 281, 106 ಅಡಿ ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?

    ಕಾಶಿ ಯಾತ್ರೆ ಮುಗಿಸಿ ವಾಪಾಸ್ ಆಗಿದ್ದ ದೂರುದಾರ ಶಂಕರೇಗೌಡ ಅವರ ಅತ್ತೆ ಇಂದುಮತಿ(67) ಮತ್ತು ಮಾವ ಯೋಗೇಶ್ ಅವರನ್ನು 01/07/2024 ರಂದು ಕಾರು ಚಾಲಕ ಸಾಗರ್ ಎಂಬಾತ ಬೆಂಗಳೂರು ಕೆಐಎಎಲ್ ಏರ್ಪೋರ್ಟ್ ನಿಂದ ಪಿಕಪ್ ಮಾಡಿದ್ದ. ಆದ್ರೆ, ಕಾರು ಹಾಸನದ ಹಳೆಬೀಡು ರಸ್ತೆ ಸೀಗೆಗೇಟ್ ಸಮೀಪದ ಸೇತುವೆಯಿಂದ ಪಲ್ಟಿಯಾಗಿತ್ತು. ಈ ಘಟನೆಯಲ್ಲಿ ಇಂದುಮತಿ ಇಹಲೋಕ ತ್ಯಜಿಸಿದ್ದರು. ಇನ್ನು ಇಂದುಮತಿ ಪತಿ ಯೋಗೇಶ್​ ಪಾರಾಗಿದ್ದರು.

    ಇದನ್ನೂ ಓದಿ : WATCH VIDEO : ಅಂ*ತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪತ್ತೆ!

    ಈ ಹಿನ್ನೆಲೆಯಲ್ಲಿ ಇದೀಗ ಇಂದು (ಜುಲೈ 1) ಮೃ*ತ ಇಂದುಮತಿ ಅವರ ಅಳಿಯ ಶಂಕರೇಗೌಡ ಅವರು ಕಾರು ಚಾಲಕ ಸಾಗರ್​ ವಿರುದ್ಧ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಈ ದೂರಿ ಮೇರೆಗೆ ಹಾಸನ ಗ್ರಾಮೀಣ ಪೊಲೀಸರು, BNS 281,106 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಬಿಎನ್ಎಸ್ ಅಡಿ ಮೊದಲ ಪ್ರಕರಣ ಹಾಸನದಲ್ಲಿ ದಾಖಲಾದಂತಾಗಿದೆ.

    Click to comment

    Leave a Reply

    Your email address will not be published. Required fields are marked *

    FILM

    ‘ಪೆಂಡ್ರೈವ್‌’ನಲ್ಲಿ ಬಿಗ್‌ಬಾಸ್‌ ತನಿಷಾ ಕುಪ್ಪಂಡ..!

    Published

    on

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮತ್ತೆ ಸೌಂಡ್ ಮಾಡಲಿದೆ ‘ಪೆಂಡ್ರೈವ್’. ಹೌದು, ಈಗಾಗಲೇ ರಾಜ್ಯದಲ್ಲಿ ಎರಡು ಪ್ರಕರಣಗಳು ಭಾರೀ ಸದ್ದು ಮಾಡುತ್ತಿದ್ದೆ. ನಟ ದರ್ಶನ್ ಕೊಲೆ ಕೇಸ್‌ ನಲ್ಲಿ ಜೈಲು ಸೇರಿದ್ದರೆ, ಪ್ರಜ್ವಲ್ ರೇವಣ ಪೆಂಡ್ರೈವ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.

    ಈ ಮಧ್ಯೆ ಕನ್ನಡ ಚಿತ್ರರಂಗದಲ್ಲಿ ಪೆಂಡ್ರೈವ್‌ ಸದ್ದು ಮಾಡಲು ತಯಾರಾಗುತ್ತಿದೆ. ಹೌದು, ವಿಶೇಷ ಅಂದ್ರೆ ತನಿಷಾ ಕುಪ್ಪಂಡ ಈ ಸಿನೆಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್‌ ಬಾಸ್ ಸೀಸನ್ 10 ರ ಬಳಿಕ ತನಿಷಾ ಕುಪ್ಪಂಡ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿದ್ದಾರೆ. ಹೊಸದಾಗಿ ಬಿಸ್‌ನೆಸ್‌ ಕೂಡಾ ಶುರು ಮಾಡಿದ್ದಾರೆ. ಇದೀಗ ಪೆಂಡ್ರೈವ್‌ ಶೀರ್ಷೆಕೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಸರ್ಕಾರಕ್ಕೆ ತುಳು ಚಿತ್ರ ನಿರ್ಮಾಪಕರ ಮನವಿ: ಸಿಎಂ ಸ್ಪಂದನೆ…!

    ‘ಪೆಂಡ್ರೈವ್’ ಟೈಟಲ್ ಯಾಕೆ?

    ಹಾಗಂತ ಈ ‘ಪೆನ್‌ಡ್ರೈವ್’ ಸಿನಿಮಾಗೂ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಹೇಳಿದೆ. ಹಾಗಾದ್ರೆ ಸಿನೆಮಾಗೆ ಈ ಟೈಟಲ್ ಇಟ್ಟಿರುವುದಾದರೂ ಯಾಕೆ? ಈ ಸಿನಿಮಾವನ್ನು ಸೆಬಾಸ್ಟಿನ್ ಡೇವಿಡ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಟ್ರೆಂಡಿಂಗ್‌ನಲ್ಲಿರುವ ವಿಷಯಗಳನ್ನು, ವ್ಯಕ್ತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಇವರಿಗೆ ಅನುಭವಿದೆ. ಈ ಕಾರಣಕ್ಕೆ ‘ಪೆನ್‌ಡ್ರೈವ್’ ಟೈಟಲ್ ಇಟ್ಟು ಸಿನಿಮಾ ಮಾಡುವುದಕ್ಕೆ ಹೊರಟಾಗ ಸಿನಿಪ್ರಿಯರಲ್ಲಿ ಗುಮಾನಿ ಮೂಡಿತ್ತು. ಆದರೆ, ಸ್ವತ: ಸಿನೆಮಾ ನಿರ್ದೇಶಕರೇ ಮಾಧ್ಯಮಗಳಿಗೆ ತಮ್ಮ ಸಿನಿಮಾ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಪಟ್ಟಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾ ಆಗಿದೆ ಎಂದು ಹೇಳಿದ್ದಾರೆ.

    ಪೆನ್‌ಡ್ರೈವ್ ಸಿನೆಮಾವನ್ನು ಲಯನ್ ಆರ್ ವೆಂಕಟೇಶ್ ಮತ್ತು ಲಯನ್ ಎಸ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಸಿನೆಮಾದಲ್ಲಿ ರಾಧಿಕಾ, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಭಾಗ್ಯ, ಗೀತಪ್ರಿಯಾ, ಗೀತಾ ಮೊದಲಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಜು.4 ರಂದು  ಸಿನೆಮಾ ಶೀರ್ಷಿಕೆ ಅನಾವರಣ ಆಗಲಿದ್ದು, ವರ್ತೂರು ಸಂತೋಷ್ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ.

    Continue Reading

    DAKSHINA KANNADA

    ಸರ್ಕಾರಕ್ಕೆ ತುಳು ಚಿತ್ರ ನಿರ್ಮಾಪಕರ ಮನವಿ: ಸಿಎಂ ಸ್ಪಂದನೆ…!

    Published

    on

    ಮಂಗಳೂರು : ತುಳು ಚಿತ್ರ ನಿರ್ಮಾಪಕರು ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಪ್ರಾದೇಶಿಕ ಚಲನಚಿತ್ರಗಳಿಗೆ ಸಬ್ಸಿಡಿ ಹಾಗೂ ನಿರ್ಮಾಕರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಮನವಿ ಸಲ್ಲಿಸಿದ್ದಾರೆ. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್ ಅವರು ಸಂಘದ ಪರವಾಗಿ ಮನವಿ ಸಲ್ಲಿಸಿದ್ದಾರೆ.

    ಪ್ರಾದೇಶಿಕ ಚಲನಚಿತ್ರವಾಗಿ ತುಳು ಭಾಷೆಯಲ್ಲಿ ವಾರ್ಷಿಕ 15 ರಿಂದ 20 ಸಿನೆಮಾಗಳು ನಿರ್ಮಾಣವಾಗುತ್ತಿದೆ. ಭಾಷೆಯ ಮೇಲಿನ ಅಭಿಮಾನದಿಂದ ನಿರ್ಮಾಪಕರು ಚಿತ್ರ ನಿರ್ಮಾಣಕ್ಕೆ ಕೈ ಹಾಕುತ್ತಿದ್ದಾರೆ. ಯಾವುದೇ ಪರಭಾಷೆಗೆ ಕಡಿಮೆ ಇಲ್ಲದಂತೆ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರ ಮೂರು ನಾಲ್ಕು ಸಿನೆಮಾಗಳಿಗೆ ಮಾತ್ರ ಸಬ್ಸಿಡಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಕನಿಷ್ಟ ಹದಿನೈದು ಸಿನೆಮಾಗಳಿಗೆ ಸಬ್ಸಿಡಿ ನೀಡುವಂತೆ ಮನವಿ ಸಲ್ಲಿಸಲಾಗಿದೆ.

    ಇನ್ಮುಂದೆ ಹಳದಿ ಹಕ್ಕಿಯ ಚಿಲಿಪಿಲಿ ಕೇಳಲ್ಲ – ಬಾಗಿಲು ಹಾಕಿತು ಕೂ ಆ್ಯಪ್

    ಇದೇ ವೇಳೆ ಮಂಗಳೂರಿನ ಕೊಡಿಯಾಲ್ ಬೈಲ್ ಎ ಗ್ರಾಮದ ಸರ್ವೆ ನಂಬ್ರ 1554 – 2 ಬಿ ಯಲ್ಲಿ ಸರ್ಕಾರದ ಖಾಲಿ ಜಮೀನಿನಲ್ಲಿ ಐದು ಸೆಂಟ್ಸ್ ಜಾಗವನ್ನು ತುಳು ಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡುವಂತೆಯೂ ಮನವಿಯಲ್ಲಿ ಕೊರಲಾಗಿದೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ ಸೂಕ್ತ ಭರವಸೆಯನ್ನು ನೀಡಿದ್ದಾರೆ.

    Continue Reading

    LATEST NEWS

    ಇನ್ಮುಂದೆ ಹಳದಿ ಹಕ್ಕಿಯ ಚಿಲಿಪಿಲಿ ಕೇಳಲ್ಲ – ಬಾಗಿಲು ಹಾಕಿತು ಕೂ ಆ್ಯಪ್

    Published

    on

    ಬೆಂಗಳೂರು: ಟ್ವಿಟ್ಟರ್‌ಗೆ ಪರ್ಯಾಯವಾಗಿ ಆರಂಭಗೊಂಡಿದ್ದ ಕೂ ಆ್ಯಪ್ ಇದೀಗ ಬಾಗಿಲು ಹಾಕಿದೆ. ದೇಶೀಯ ಸಾಮಾಜಿಕ ಜಾಲತಾಣ ವೇದಿಕೆ ಕೂ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

    ಸ್ವಾಧೀನ ಮಾತುಕತೆ ವಿಫಲ ಮತ್ತು ಹೆಚ್ಚಿನ ತಂತ್ರಜ್ಞಾನದ ವೆಚ್ಚಗಳಿಂದ ಕೂ ವೇದಿಕೆಯನ್ನು ಮುಚ್ಚುವುದಾಗಿ ಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಕೂ ಉತ್ತುಂಗದಲ್ಲಿದ್ದಾಗ ಸುಮಾರು 20 ಲಕ್ಷ ದೈನಂದಿನ ಸಕ್ರಿಯ ಬಳಕೆದಾರರನ್ನು ಮತ್ತು 9,000 ವಿಐಪಿಗಳನ್ನು ಒಳಗೊಂಡಂತೆ 1 ಕೋಟಿ ಮಾಸಿಕ ಬಳಕೆದಾರರನ್ನು ಹೊಂದಿತ್ತು. ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಬಳಕೆದಾರರರನ್ನು ಪ್ರೋತ್ಸಾಹಿಸಲು ಮುಂದಾಗಿದ್ದರೂ ಕೂ ಬಳಕೆದಾರರನ್ನು ತಲುಪಲು ವಿಫಲವಾಗಿತ್ತು.

    ಭವಿಷ್ಯದ ಉದ್ಯಮಗಳ ಬಗ್ಗೆ ನಾವು ಆಶಾವಾದಿಯಾಗಿದ್ದೇವೆ. ಇಲ್ಲಿಯವರೆಗೆ ಸಹಕಾರ ನೀಡಿದ ಬೆಂಬಲಿಗರು, ಹೂಡಿಕೆದಾರರು ಮತ್ತು ಬಳಕೆದಾರರಿಗೆ ಸಂಸ್ಥಾಪಕರು ಕೃತಜ್ಞತೆ ಸಲ್ಲಿಸಿದ್ದಾರೆ.

    Continue Reading

    LATEST NEWS

    Trending